ಆವೃತ್ತಿಗಳು
Kannada

ಅಮ್ಮನದ್ದೇ ಕೈರುಚಿ- ಅನಾರೋಗ್ಯದ ಬಗ್ಗೆಯೂ ಬೇಡ ಭೀತಿ

ಟೀಮ್​ ವೈ.ಎಸ್​. ಕನ್ನಡ

14th Oct 2016
Add to
Shares
11
Comments
Share This
Add to
Shares
11
Comments
Share

ಮಲ್ನಾಡ್ ಉಪ್ಪಿನ ಕಾಯಿ ನೆನಪಾಗ್ತಿದೆಯಾ? ಬಾಯಲ್ಲಿ ನೀರೂರಿಸೊ ಅಮ್ಮ ಮಾಡಿದ ಚಕ್ಕುಲಿ ತಿನ್ನಬೇಕಾ..? ಇಷ್ಟೆಲ್ಲದರ ಮಧ್ಯೆ ಹೆಲ್ತ್ ಕೂಡ ಚೆನ್ನಾಗಿರಬೇಕು ಅನ್ನೊ ಹಂಬಲ ನಿಮಗಿದೆಯಾ..? ಆದ್ರೆ ಈಗ ಎಲ್ಲಿ ನೋಡಿದ್ರೂ ಅನ್​ಹೆಲ್ದಿ ಫುಡ್​ಗಳದ್ದೆ ಹವಾ. ನಿಮ್ಮ ಆರೋಗ್ಯದ ಬಗ್ಗೆ ನೀವು ಇಷ್ಟೆಲ್ಲ ಚಿಂತೆ ಮಾಡ್ಬೇಕಿಲ್ಲ. ಇನ್ಮುಂದೆ ನೀವು ಹೊಮ್ ನಲ್ಲಿಯೆ ಕುಳಿತು ಹೋಮ್ ಮೇಡ್ ಆನ್ಲೈನ್ .ಇನ್ ಕ್ಲಿಕ್ ಮಾಡಿದ್ರೆ ಸಾಕು. ನಿಮಗಿಷ್ಟವಾದ ತಿಂಡಿ ತಿನಿಸನ್ನು ಮನೆಯಲ್ಲಿಯೆ ಎಂಜಾಯ್ ಮಾಡಹುದು.

ಹೌದು, ಇಂತಹದ್ದೊಂದು ವಿನೂತನ ಕಾನ್ಸೆಪ್ಟ್ ಇಟ್ಟುಕೊಂಡು ಮಹಿಳೆಯೊಬ್ಬರು, ಮಹಿಳೆಯರನ್ನೆಲ್ಲ ಸಬಲರನ್ನಾಗಿ ಮಾಡ್ತಿದ್ದಾರೆ ಅಜಂತಾ ಚಂದನ್. ಮೂಲತಃ ಇಟಾಲಿಯನ್ ಫಾಸ್ಟ್​ಫುಡ್​ ಔಟ್​ಲೆಟ್​ಗಳಲ್ಲಿ ತಮ್ಮ ಕರಿಯರ್ ಶುರು ಮಾಡಿದ್ದ ಅಜಂತಾ ಚಂದನ್ ಅವರಿಗೆ ಮಧ್ಯಮ ವರ್ಗದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೆಕು ಅನ್ನೋ ಕನಸಿತ್ತು. ಅನ್​ಲೈನ್ ಮಾರ್ಕೆಟಿಂಗ್ ಏರುಗತಿ ಪಡೆದುಕೊಳ್ಳುತ್ತಿದ್ದ ಸಮಯ ಅದು. ಇದೇ ಆನ್​ಲೈನ್ ಮಾರ್ಕೆಟಿಂಗ್ ಬಳಸಿಕೊಂಡು ಗೃಹ ಉದ್ಯೋಗಿ ಮಹಿಳೆಯರಿಗೆ ಯಾಕೆ ಹೊಸ ವೇದಿಕೆ ಸೃಷ್ಟಿಸಬಾರದು ಅಂತ ಅನಿಸಿದ್ದೆ ತಡ, ಅಜಂತಾ ಒಂದೇ ಒಂದು ಕ್ಷಣ ಕೂಡ ತಡ ಮಾಡಲಿಲ್ಲ. ತಮ್ಮ ಪತಿಯೊಂದಿಗೆ ಚರ್ಚಿಸಿದ ಅಜಂತಾ ಗೃಹೋದ್ಯಮದಲ್ಲಿ ತೊಡಗಿದ್ದ ಮಹಿಳೆಯರನ್ನೆಲ್ಲ ಭೇಟಿ ಮಾಡಿ ಮಾತುಕತೆ ನಡೆಸಿದರು. ಆನ್​ಲೈನ್ ಮಾರ್ಕೆಟಿಂಗ್ ಸಾಕಷ್ಟು ಹೊಡೆತ ಕೊಟ್ಟಿದ್ದ ಟೈಮ್​ನಲ್ಲಿ ಇದೇ ಅನ್​ಲೈನ್ ಚಿಕ್ಕಪುಟ್ಟ ಮಹಿಳಾ ಗೃಹೋದ್ಯೋಗಿಗಳಿಗೆ ಹೊಸ ಆಶಾಕಿರಣ ಮೂಡಿಸಿತ್ತು. ಹಾಗೆ ರೂಪುಗೊಂಡಿದ್ದೇ ithiha.com

image


ಏನಿದೆ ಇದರಲ್ಲಿ..?

ithiha.com ನಿಮ್ಮ ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಬೇರೆ ಬೇರೆ ಪ್ರದೇಶದ ಅಹಾರ ಪದಾರ್ಥಗಳು ಒಂದೇ ಕ್ಲಿಕ್ ನಲ್ಲಿ ಸಿಗೊದು ಹೋಮ್ ಮೇಡ್ ಅನ್​ಲೈನ್ ವಿಶೇಷತೆ. 60 ಬಗೆಯ ಚಟ್ನಿ ಪೌಡರ್​ಗಳು, ಅಗಸಿ ಪೌಡರ್, ಕರಿಬೆವು ಚಟ್ನಿಪುಡಿ, ಆರ್ಗನಿಕ್ ಚಟ್ನಿಪುಡಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಬೆಳ್ಳುಳ್ಳಿ ಚಟ್ನಿ....ಪಟ್ಟಿ ಉದ್ದವಾಗಿ ಬೆಳೆಯುತ್ತದೆ. ಇದರ ಜೊತೆಗೆ 140 ಬಗೆಯೆ ಮಸಾಲಾ ಪೌಡರ್ ಗಳು ಘಮ ಘಮಿಸುತ್ತವೆ. ಮೈಸುರು ಪುಳಿಯೋಗರೆಯಂತಹ ರೆಡಿಮಿಕ್ಸ್ ಪ್ರೊಡಕ್ಟ್ ಗಳೂ ithiha.com ನಲ್ಲಿ ಲಭ್ಯ. ಸ್ಪೆಷಲ್ ಮಸಾಲಾ ಪುಡಿಗಳನ್ನೂ ಕೂಡ ಆನ್​ಲೈನ್​ನಲ್ಲಿಯೇ ಬುಕ್ ಮಾಡಬಹುದು. ಇನ್ನೂ 140 ವೆರೈಟಿಯ ಉಪ್ಪಿನಕಾಯಿ, ಗೊಜ್ಜು, ತೊಕ್ಕು, ಚಟ್ನಿಗಳು ಆನ್​ಲೈನ್​ನಲ್ಲಿ ಸಿಗುವಂತೆ ಮಾಡಿದ ಕೀರ್ತಿ ಅಜಂತಾ ಅವರದ್ದು.

ಇದನ್ನು ಓದಿ: "ಗ್ರೀನ್ ಬಯೋಟೆಕ್" ಚಿಕ್ಕಮಗಳೂರಿನ ಪಿಎಚ್​ಡಿ ಪದವೀಧರನ ಸಾಹಸ

ಪಾನಿಪುರಿ ಮಸಾಲಾ, ಮಿಕ್ಸ್ಚರ್, ಕರುಂ ಕುರುಂ ಚಕ್ಕುಲಿಗೆ ಮನೆಯಲ್ಲಿ ಮಾಡಿದ ಟೇಸ್ಟ್ ಇರತ್ತೆ. ಮನೆಯ ತಿನಿಸುಗಳಿಗೆ ವಾಣಿಜ್ಯೀಕರಣದ ಟಚ್ ಕೊಡಬೆಕು ಅಂದುಕೊಂಡು ಶುರುಮಾಡಿದ ಹೋಮ್​ಮೇಡ್ ಆನ್​ಲೈನ್​ನಲ್ಲಿ ಇಂದು ಬರೊಬ್ಬರೀ 1500 ಕ್ಕೂ ಹೆಚ್ಚು ಉತ್ಪನ್ನಗಳು ಸೇರಿವೆ. ಅವೆಲ್ಲ ಉತ್ಪನ್ನಗಳೂ ಕೂಡ ಆಯಾಯ ಪ್ರಾದೇಶಿಕ ಮಹತ್ವವನ್ನು ಹೊಂದಿದ ತಿಂಡಿ ತಿನಿಸುಗಳು ಎನ್ನೋದೆ ಸ್ಪೆಷಲ್.

image


ತಿನಿಸುಗಳು ತಯಾರಾಗೋದು ಅಮ್ಮಂದಿರ ಕೈಯಲ್ಲಿ..!

ithiha.comನಲ್ಲಿ ರಿಜಿಸ್ಟರ್ ಮಾಡಿಕೊಂಡವರು ಶೇ.90 ರಷ್ಟು ಮಹಿಳೆಯರು. ಚಿಕ್ಕಪುಟ್ಟ ಮನೆಗಳಲ್ಲಿ ಚಕ್ಕುಲಿ, ಸಿಹಿತಿಂಡಿ, ಚಟ್ನಿಪುಡಿ, ಮಸಾಲೆ ಸಾಂಬಾರ್ ಪುಡಿಗಳನ್ನು ತಯಾರಿಸೋ ಸಾವಿರಾರು ಮಹಿಲೆಯರಿದ್ದಾರೆ. ಗೃಹ ಉತ್ಪನ್ನಗಳಿಂದಲೇ, ಚಿಕ್ಕ ಪುಟ್ಟ ಸ್ನ್ಯಾಕ್ಸ್ ತಯಾರಿಸಿಯೇ ಜೀವನೋಪಾಯ ನಡೆಸುವ ವಿಧವೆಯರಿದ್ದಾರೆ. ಗಂಡಂದಿರನ್ನು ಕಳೆದುಕೊಂಡಿರುವ ನೂರಾರು ಮಹಿಳೆಯರಿಗೆ ಚಕ್ಕುಲಿ, ಉಂಡೆ, ಮಸಾಲೆ ಉತ್ಪನ್ನಗಳೇ ಬದುಕಿನ ದಾರಿ. ಆದರೆ ಅವುಗಳಿಗೆ ದೊಡ್ಡ ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಕಷ್ಟದ ಮಾತು. ಇಂಥ ಸಾವಿರಾರು ಮಹಿಳೆಯರಿಗೆ ಮಾರುಕಟ್ಟೆಯ ಹೊಸ ದಾರಿಯನ್ನು ತೆರೆದಿಟ್ಟು ಬದುಕು ರೂಪಿಸಿಕೊಡುವುದೇ ithiha.com ಉದ್ದೇಶ. ಇಲ್ಲಿನ ಉತ್ಪನ್ನಗಳನ್ನು ಅತ್ಯಂತ ಶುದ್ದವಾದ ಸ್ಥಳದಲ್ಲಿ ಸ್ವಚ್ಚ ರಿತಿಯಲ್ಲಿ ಆರೋಗ್ಯಕ್ಕೆ ಅತ್ಯುತ್ತಮ ಎನಿಸುವಂತೆ ತಯಾರಿಸಿ ಗ್ರಾಹಕರಿಗೆ ನೀಡಲಾಗ್ತಿದ್ದು ಇದುವರೆಗೆ ಒಟ್ಟೂ 250ಕ್ಕೂ ಹೆಚ್ಚುಗೃಹೋದ್ಯೊಗಿಗಳು ನೋಂದಾಯಿಸಿಕೊಂಡಿದ್ದಾರೆ.

ithiha.com​ನಲ್ಲಿ ಲಾಗಿನ್ ಆಗಿ ನಿಮ್ಮ ಇಷ್ಟದ ತಿಂಡಿ, ತಿನಿಸು, ಮಸಾಲೆ ಪೌಡರ್ ಗಳು, ಪ್ರಾದೇಶಿಕ ಆಹಾರಗಳ ದೊಡ್ಡ ಪಟ್ಟಿಯೇ ಇದೆ. ಜಸ್ಟ್ ಕ್ಲಿಕ್ ಮಾಡಿ ಆಯ್ಕೆ ಮಾಡಿದರೆ ಸಾಕು ನಿಮಗಿಷ್ಟವಾದ ತಿಂಡಿ ತಿನಿಸು ತಿನ್ನೋದಕ್ಕೆ ರೆಡಿ. ನಿಮ್ಮದೆ ಊರಿನ ರೆಡಿ ಮಿಕ್ಸ್ ಗಳು ನಿಮ್ಮ ಮನೆಗೆ ಬಂದು ಕೂರುತ್ತವೆ.

ಇದನ್ನು ಓದಿ:

1. 76ರ ಅಜ್ಜಿಯ ಕೈ ರುಚಿ- ಮೈ ಅಮ್ಮಾಸ್ ಹೋಮ್​ ಮೇಡ್ ಮ್ಯಾಜಿಕ್​..!

2. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

3. ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್​ವುಡ್​ಗಿಂತಲೂ ಬಾಲಿವುಡ್​ನಲ್ಲಿ ಡಿಮ್ಯಾಂಡ್

Add to
Shares
11
Comments
Share This
Add to
Shares
11
Comments
Share
Report an issue
Authors

Related Tags