ಆವೃತ್ತಿಗಳು
Kannada

ಅಂದು ಸೆಕ್ಸ್ ವರ್ಕರ್​, ಇಂದು ಸೆಕ್ಸ್ ವರ್ಕ್​ರ್​ಗಳಿಗೆ ಹೆಚ್​ಐವಿ ಬಗ್ಗೆ ಮಾಹಿತಿ

ಟೀಮ್​ ವೈ.ಎಸ್​. ಕನ್ನಡ

YourStory Kannada
6th Jan 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on


ಸೆಕ್ಸ್ ವರ್ಕರ್​ಗಳನ್ನು ಸಾಕ್ಷರಗೊಳಿಸುತ್ತಿದ್ದಾರೆ..

ಎಚ್ಐವಿ ಸೋಂಕಿನ ಬಗ್ಗೆ ಮಾಹಿತಿ ನೀಡುತ್ತಾರೆ...

ರೆಡ್​ ಲೈಟ್​ ಬೀದಿಯಲ್ಲಿ ಸ್ವಚ್ಛತಾ ಅಭಿಯಾನ...

image


ಒಂದಾನೊಂದು ಕಾಲದಲ್ಲಿ ಆಕೆ ಸೆಕ್ಸ್ ವರ್ಕರ್ ಆಗಿದ್ರು. ಆದರೆ ಇಂದು ಬೇರೆ ಸೆಕ್ಸ್ ವರ್ಕರ್​​ಗಳನ್ನು ಸಶಕ್ತಗೊಳಿಸುವುದರಲ್ಲಿ ಅವರು ಬ್ಯೂಸಿಯಾಗಿದ್ದಾರೆ. ಆಕೆ ಎಂದಿಗೂ ಶಾಲೆಗೆ ಹೋಗಲು ಆಗಲಿಲ್ಲ. ಆದರು ಬೇರೆ ಸೆಕ್ಸ್ ವರ್ಕರ್​​ಗಳನ್ನು ಸಾಕ್ಷರನ್ನಾಗಿಸುತ್ತಿದ್ದಾರೆ. ಸಾಂಗಲಿ ಬಳಿಯ ಸ್ವರೂಪ ಥಿಯೇಟರ್ ಬಳಿ ಒಂದು ಬೀದಿಯಿದೆ. ಅದು ಭಾರತದ ಅತ್ಯಂತ ಸ್ವಚ್ಚ ಸುಂದರವಾದ ರೆಡ್ಲೈಟ್ ಏರಿಯಾ. ಅಮೀರಾಬಾಯಿ ತಮ್ಮ ವೃತ್ತಿಯನ್ನು ಬಿಟ್ಟು ಹಲವು ವರ್ಷಗಳಾಗಿರಬಹುದು. ಆದರೆ ಸೆಕ್ಸ್ ವರ್ಕರ್​ಗಳ ಅಭಿವೃದ್ದಿಗಾಗಿ ‘ವೇಶ್ಯಾ ಮಹಿಳಾ ಏಡ್ಸ್ ನಿರ್ಮೂಲನ ಕೇಂದ್ರ’ದ ಸಹಾಯದಿಂದ ವೇಶ್ಯೆಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಸೆಕ್ಸ್ ವರ್ಕರ್​ಗಳಿಗೆ ಇವರು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಜೊತೆಗೆ ಅವರಿಗೆ ಕೌನ್ಸಿಲಿಂಗ್​ ಕೂಡ ಮಾಡುತ್ತಾರೆ. ಎಚ್ಐವಿ ಪೀಡಿತರ ಆರೈಕೆಯ ಬಗ್ಗೆಯೂ ಗಮನ ಹರಿಸುತ್ತಾರೆ. ಅಮೀರಾಬಾಯಿ ಜೊತೆ ದೀಪಕ್ ಚೌಹಾಣ್​ ಎಂಬ ಯುವ ಸದಸ್ಯ ಕೈಜೋಡಿಸಿದ್ದಾರೆ..

image


ತುಂಬಾ ವರ್ಷಗಳ ಹಿಂದೆ ಅಮೀರಾಬಾಯಿ ಮೋಸದಿಂದ ವೇಶ್ಯಾವೃತ್ತಿಗೆ ಬರಬೇಕಾಯ್ತು. ಆದರೆ ಕಳೆದ 10 ವರ್ಷದಿಂದ ಅವರು ಈ ವೃತ್ತಿಯನ್ನು ಬಿಟ್ಟಿದ್ದಾರೆ. ಆದರೆ ಅವರು ಈ ವೃತ್ತಿ ಬಿಟ್ಟ ಕೂಡಲೇ ಸುಮ್ಮನಿರಲಿಲ್ಲ. ತಮ್ಮಂತೆ ಆ ರೆಡ್ಲೈಟ್ ಏರಿಯಾದಲ್ಲಿ ನರಕಯಾತನೆ ಅನುಭವಿಸುತ್ತಿರುವ ಅನೇಕ ಸೆಕ್ಸ್ ವರ್ಕರ್​​ಗಳಿಗೆ ಒಳಿತಾಗಲಿ, ಅವರ ಸಮಸ್ಯೆಯನ್ನು ಅರಿತಿದ್ದ ಅವರು, ಅವರಿಗಾಗಿ ಏನಾದ್ರು ಮಾಡಬೇಕೆಂದು ಈ ಸಂಸ್ಥೆಯನ್ನು ನಿರ್ಮಾಣ ಮಾಡಿದ್ರು. ಆಗ ಮೊದಲು ಅಮೀರಾಬಾಯಿ ಒಂದು ಶಾಲೆಯನ್ನು ಇಲ್ಲಿ ಆರಂಭಿಸಿದ್ರು. ಎಲ್ಲ ಸೆಕ್ಸ್ ವರ್ಕರ್​ಗಳನ್ನು ಒಂದೆಡೆ ಕೂರಿಸಿ ಅವರಿಗೆ ಶಿಕ್ಷಣ ಕೊಡಿಸುವುದು ಅವರ ಉದ್ದೇಶವಾಗಿತ್ತು. ಈ ವೃತ್ತಿಯಲ್ಲಿರುವ ಅನೇಕ ಮಹಿಳೆಯರಿಗೆ ಅವರ ಹೆಸರು ಕೂಡ ಬರೆಯಲು ಬರುವುದಿಲ್ಲ. ಹಾಗಾಗಿ ಅವರಿಗೆ ಶಿಕ್ಷಣ ಕೂಡುವುದು ಅವಶ್ಯಕವಾಗಿತ್ತು. ಇದರಿಂದ ಅವರಿಗಾಗುವ ಲಾಭದ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆಯಿತ್ತು. ಜೊತೆಗೆ ಏಡ್ಸ್​​ನಂತಹ ಮಹಾಮಾರಿಯ ವಿರುದ್ಧ ಹೇಗೆ ಎಚ್ಚರವಾಗಿರಬೇಕು ಏಡ್ಸ್ ಬರದಂತೆ ತಡೆಗಟ್ಟಲು ಕೈಗೊಳ್ಳುವ ಕ್ರಮದ ಬಗ್ಗೆ ಅವರಿಗೆ ಜಾಗೃತರನ್ನಾಗಿಸುವುದು, ಒಂದೆಡೆ ಕೌನ್ಸಲಿಂಗ್ ಮಾಡುವುದು ಇದರ ಉದ್ದೇಶವಾಗಿತ್ತು..

image


ಅಮೀರಾಬಾಯಿ ಮತ್ತು ದೀಪಕ್ ಚೌಹಾಣ್​ ಅವರ ಪ್ರಕಾರ ಮಹಾರಾಷ್ಟ್ರ ರಾಜ್ಯದಲ್ಲಿಯೇ ಸಾಂಗಲಿ ಜಿಲ್ಲೆ ಅತಿ ಹೆಚ್ಚು ಎಚ್ಐಇ ಪೀಡಿತರನ್ನು ಹೊಂದಿದ ಎರಡನೇ ಜಿಲ್ಲೆಯಾಗಿತ್ತು. ಅದರಲ್ಲಿ ಹೆಚ್ಚಿನವರು ಈ ರೆಡ್ಲೈಡ್ ಏರಿಯಾದವರು ಎಂಬುದು ಸರ್ಕಾರಿ ಅಂಕಿ ಅಂಶಗಳಿಂದ ಅಮೀರಾಬಾಯಿಗೆ ತಿಳಿಯಿತು. ಸುಮಾರು 200 ವೇಶ್ಯೆಯರು ಈ ಏರಿಯಾದಲ್ಲಿದ್ರು. ಅದರಲ್ಲಿ 10 ಪ್ರತಿಶತ ಮಹಿಳೆಯರು ಎಚ್ಐವಿ ಪೀಡಿತರಾಗಿದ್ರು. ಆ ಹಿನ್ನೆಲೆ ಇವರಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂಬುದರ ಕಾರಣ ಅಮೀರಾಬಾಯಿ 2005ರಲ್ಲಿ ಇವರ ಕಲ್ಯಾಣಕ್ಕಾಗಿ ಈ ಸಂಸ್ಥೆಯನ್ನು ಆರಂಭಿಸಿದ್ರು.. ಆರಂಭದಲ್ಲಿ ಇವರಿಗೆ ಕೌನ್ಸಿಲಿಂಗ್ ಮಾಡಲಾಯ್ತು. ಅನಂತರ ಎಚ್ಐವಿ ಪೀಡಿತ ಸೆಕ್ಸ್ ವರ್ಕರ್​ಗಳನ್ನು ಈ ಕೆಲಸದಿಂದ ಹೊರಗೆ ತರಲಾಯ್ತು. ನಂತರ ಅವರಿಗೆ ಜೀವನ ಸಾಗಿಸಲು, ತರಕಾರಿ ಅಂಗಡಿ, ಚಹಾದ ಅಂಗಡಿಯಂತಹ ಇತರ ಕೆಲಸಗಳನ್ನು ಮಾಡಲು ವ್ಯವಸ್ಥೆ ಮಾಡಿ ಕೊಡಲಾಯ್ತು.

image


ಯುವರ್ ಸ್ಟೋರಿ ಜೊತೆ ದೀಪಕ್ ಮಾತು

" ಎಚ್ಐವಿ ಪೀಡಿತ ಸೆಕ್ಸ್ ವರ್ಕರ್​ಗಳಿಗೆ ನಾವು ಪ್ರತಿ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸುತ್ತೇವೆ. ಅವಶ್ಯಕತೆ ಬಿದ್ದರೆ ಅವರಿಗೆ ಚಿಕಿತ್ಸೆ ಕೂಡ ಕೊಡಿಸುತ್ತೇವೆ. ಅವರಿಗೆ ಔಷಧಿಗಳನ್ನು ಕೊಡಿಸುತ್ತೇವೆ. ಸೂಕ್ತ ಸಮಯಕ್ಕೆ ಇಲ್ಲಿ ಡಾಕ್ಟರ್​ಗಳೇ ಬಂದು ಸೆಕ್ಸ್ ವರ್ಕರ್​​ಗಳ ಚೆಕ್ಅಪ್ ಮಾಡಿ ಹೋಗ್ತಾರೆ".

‘ಸೆಕ್ಸ್ ವರ್ಕರ್​​ಗಳಿಗಾಗಿ ಆರಂಭಿಸಿರುವ ಈ ಶಾಲೆ ಕೇವಲ ಅವರನ್ನು ಅಕ್ಷರಸ್ಥರನ್ನಾಗಿಸುತ್ತಿಲ್ಲ. ಏಡ್ಸ್​ನಿಂದಾಗುವ ತೊಂದರೆಗಳ ಬಗ್ಗೆ ಅವರಿಗೆ ತಿಳುವಳಿಕೆ ನೀಡಲಾಗಿದೆ. ಯಾವ-ಯಾವ ನಗರದಲ್ಲಿ ಏಡ್ಸ್​ನಿಂದ ಎಷ್ಟು ಜನರು ಸಾವನಪ್ಪಿದ್ದಾರೆ? ಈ ಮಹಾಮಾರಿಯನ್ನು ತಡೆಯುವುದು ಹೇಗೆ? ಏಡ್ಸ್ ತಡೆಗಟ್ಟುವಲ್ಲಿ ನಿಮ್ಮ ಪಾತ್ರವೇನು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತೆ. ಜೊತೆಗೆ ಸೆಕ್ಸ್ ವರ್ಕರ್​​ಗಳ ಮಕ್ಕಳನ್ನು ಈ ವೃತ್ತಿಗೆ ಬರದಂತೆ ನೋಡಿಕೊಳ್ಳುವಂತೆ ಅವರಿಗೆ ಕೌನ್ಸಿಲಿಂಗ್ ಮಾಡಲಾಗಿದೆ. ಸೆಕ್ಸ್ ವರ್ಕರ್​​ಗಳ ಮಕ್ಕಳು ಸುಮ್ಮನೆ ಬೀದಿಯಲ್ಲಿ ಸುತ್ತುತ್ತಿದ್ರು. ಇದನ್ನು ಗಮನಿಸಿದ ಅಮೀರಾಬಾಯಿ ಸರ್ಕಾರದ ಮೇಲೆ ಒತ್ತಡ ಹೇರಿ ಈಗ ಇಲ್ಲಿ ಮಕ್ಕಳಿಗಾಗಿ ಪ್ರೈಮರಿ ಶಾಲೆ ಬರುವಂತೆ ಮಾಡಿದ್ರು. ಈಗ ಸೆಕ್ಸ್ ವರ್ಕರ್​​ಗಳ ಎಲ್ಲ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಎನ್ನುತ್ತಾರೆ’ ದೀಪಕ್ ಚೌಹಾಣ್​ .

"ಇಲ್ಲಿಯ ಮಕ್ಕಳು ಸ್ವಲ್ಪ ದೊಡ್ಡವರಾದ್ರೆ ಸಾಕೂ ಅವರನ್ನು ಅವರ ತಾಯಿಯ ತವರೂರಿಗೆ ಕಳುಹಿಸಲಾಗುತ್ತದೆ. ವಿಶೇಷವಾಗಿ ಹುಡುಗಿಯರನ್ನು ಯಾವುದೇ ಕಾರಣಕ್ಕೆ ದೊಡ್ಡವರಾದ ನಂತರ ಇಲ್ಲಿ ಇಟ್ಟುಕೊಳ್ಳುವುದಿಲ್ಲ. ಅವರ ಜೀವನವನ್ನು ಈ ಕತ್ತಲ ಲೋಕದಲ್ಲಿ ಕಳೆಯುವುದು ಬೇಡ, ಯಾವುದೇ ಕಾರಣಕ್ಕೂ ಅವರ ತಾಯಿಯಂತೆ ಅವರ ಜೀವನ ಹಾಳಾಗುವುದು ಬೇಡ ಅವರ ಭವಿಷ್ಯ ಉಜ್ವಲವಾಗಿರಲಿ ಎಂಬುದು ಇದರ ಉದ್ದೇಶವಾಗಿದೆ"..

ಭಾರತದಲ್ಲಿಯೇ ಅತ್ಯಂತ ಸುಂದರವಾದ ರೆಡ್ಲೈಟ್ ಏರಿಯಾ ಇದು ಎಂದು ಅಮೀರಾಬಾಯಿ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಇಲ್ಲಿಯ ಎಲ್ಲ ಮನೆಗಳು ಗುಲಾಬಿ ಬಣ್ಣದ್ದಾಗಿವೆ. ರಸ್ತೆಯ ಯಾವ ಭಾಗದಲ್ಲು ನಿಮಗೆ ಉಗಳಬೇಕೆನಿಸುವುದಿಲ್ಲ. ಯಾರಾದ್ರು ಕಸ ಹಾಕಿದ್ರು.. ಥಟ್ ಅಂತ ಯಾರಾದ್ರು ಬಂದು ಅದನ್ನು ತೆಗೆದು ಹಾಕುತ್ತಾರೆ. ಎಲ್ಲರ ಮನೆ ಮುಂದೆ ಕಸದ ಬುಟ್ಟಿ ಇಡಲಾಗಿದೆ. ಬೇಕಾಬಿಟ್ಟಿ ಎಲ್ಲಿ ಬೇಕಾದಲ್ಲಿ ಕಸ ಹಾಕುವುದು ಇಲ್ಲಿ ನಿಷಿದ್ಧ. ಉಗಳಲು ಸಹ ರಸ್ತೆಯ ಬದಿ ವ್ಯವಸ್ಥೆ ಕಲ್ಪಿಸಲಾಗಿದೆ. ತಮ್ಮ ಸಂಸ್ಥೆಯಿಂದ ಅಮೀರಾಬಾಯಿ ಕಳೆದ 10 ವರ್ಷದಿಂದ ಈ ಸೆಕ್ಸ್ ವರ್ಕರ್​​ಗಳ ಜೊತೆಗೂಡಿ ಎಲ್ಲ ಹಬ್ಬಗಳನ್ನು ಆಚರಿಸುತ್ತಾರೆ. ಏಡ್ಸ್ ಬಗ್ಗೆ ಮಾಹಿತಿ ನೀಡುವ ಜೊತೆ-ಜೊತೆಗೆ ಅಮೀರಾಬಾಯಿ ಈ ಸೆಕ್ಸ್ ವರ್ಕರ್​​ಗಳಿಗೆ ಉದ್ಯೋಗ ಕಲ್ಪಿಸುತ್ತಿದ್ದಾರೆ. ಮಹಿಳೆಯರಿಗೆ ಶಿಕ್ಷಣ, ಬೇರೆ-ಬೇರೆ ವೃತ್ತಿಗಳನ್ನು ಕಲಿಸುವುದು ಅವರಿಗೆ ಸಹಾಯ ಮಾಡುವ ಮೂಲಕ, ಈ ಕೆಟ್ಟ ವೃತ್ತಿಯಿಂದ ಅವರನ್ನು ಹೊರತರುವ ಕಾರ್ಯವನ್ನು ಅಮೀರಾಬಾಯಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.


ಲೇಖಕರು: ಹರೀಶ್ ಬಿಶ್ತ್

ಅನುವಾದಕರು: ಎನ್.ಎಸ್.ರವಿ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags