ಆವೃತ್ತಿಗಳು
Kannada

ಕ್ಯಾಮರಾ ಕಣ್ಣಲ್ಲಿ ಮಹಿಳೆಯ ಬವಣೆಗಳ ಮಿಡಿತ : ಇದು ಸೊನಾಲಿ ಗುಲಾಟಿ ಕೈಚಳಕ

ಟೀಮ್​ ವೈ.ಎಸ್​.ಕನ್ನಡ

13th Apr 2016
Add to
Shares
4
Comments
Share This
Add to
Shares
4
Comments
Share

ಹೆಣ್ಣಾಗಿ ಹುಟ್ಟಿ ಸ್ಪರ್ಧೆಯ ಜಗತ್ತಿನಲ್ಲಿ ಬದುಕುವುದು ಅಷ್ಟು ಸುಲಭವಲ್ಲ.. ಹೆಣ್ಣು ನಮ್ಮ ಜೀವನದಲ್ಲಿ ತಾಯಿ,ಅಕ್ಕ ತಂಗಿ, ಹೆಂಡತಿ ಮಗಳು ಎನ್ನುವ ಮಹತ್ತರವಾದ ಪಾತ್ರಗಳನ್ನು ನಿರ್ವಹಿಸುತ್ತಾಳೆ. ತಾಯಿ ಇಲ್ಲದೆ ಜನ್ಮವಿಲ್ಲಾ. ಹೆಣ್ಣಿಲ್ಲದ ಮನೆ ಅದು ಮನೆಯೇ ಅಲ್ಲಾ ಅನ್ನೋ ಮಾತು ಆಕೆಯ ಮಹತ್ವವನ್ನ ಸಾರುತ್ತದೆ. ಇನ್ನು ಹೆಣ್ಣು ಹುಟ್ಟುತ್ತಲೇ ಆಕೆಗೆ ಪ್ರೀತಿ ಮಮತೆ ಮಮಕಾರ ಕರುಣೆ ಸಹನೆ ಎನ್ನುವ ತಾಯ್ತನದ ಗುಣಗಳು ಬಂದಿರುತ್ತವೆ. ಆದ್ರೆ ರೆಕ್ಕೆ ಕಟ್ಟಿಕೊಂಡು ಕನಸುಗಳನ್ನ ಬೆನ್ನತ್ತಿ ಹೋಗುವಾಕೆಗೆ ಕಾಡುವುದು ಬರಿಯ ನಿರಾಸೆ. ತನ್ನ ಅಸ್ಥಿತ್ವವನ್ನ ಕಾಪಾಡಿಕೊಳ್ಳಲು ಸದಾ ಹೋರಾಟ ಅದಕ್ಕಾಗಿ ಒಂದಿಷ್ಟು ಪಾಡು. ಲಿಂಗ ತಾರತಮ್ಯ, ಸ್ಪರ್ಧೆ, ವೃತ್ತಿ ಬದುಕಿನ ಆಯ್ಕೆ ಹೀಗೆ ಒಂದಿಲ್ಲೊಂದು ಜಂಜಾಟಗಳಲ್ಲೇ ಆಕೆಯ ಬದುಕು ಕಳೆದು ಹೋಗುತ್ತದೆ. ಹೀಗಿರುವಾಗ ಕೆಲವರು ಕೆಲವೊಂದು ದಾರಿ. ಮೂಲಕ ಹೆಣ್ಣಿನ ಬವಣೆ, ಆಕೆಯ ಸಂಕಷ್ಟಗಳು ಹಾಗೂ ಆಕೆಯ ನಿಜವಾದ ಬದುಕಿನ ಚಿತ್ರಣಗಳನ್ನ ತೆಗೆದಿಡುವ ಪ್ರಯತ್ನ ನಡೆಸುತ್ತಾರೆ. ಅಂತಹ ಸಾಲಿನಲ್ಲಿ ಗುರುತಿಸಿಕೊಳ್ಳುವಾಕೆ ದೆಹಲಿಯ ಸೊನಾಲಿ ಗುಲಾಟಿ. ಮಹಿಳಾವಾದಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಸೊನಾಲಿ ಗುಲಾಟಿ, ತಮ್ಮ ಅಪೂರ್ವವಾದ ಡಾಕ್ಯುಮೆಂಟರಿಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ವರ್ಜಿನಿಯಾದ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಸೊನಾಲಿ ಪಾತ್ರವಾಗಿದ್ದಾರೆ. ಅವರ ಕ್ಯಾಮರಾದಲ್ಲಿ ಒಂದು ಹೆಣ್ಣಿನ ಬಾಲ್ಯ, ಆಕೆಯ ಹೆತ್ತವರು ಹಾಗೂ ಆಕೆ ಎದುರಿಸಬೇಕಾದ ಎಲ್ಲಾ ಸವಾಲುಗಳನ್ನ ಎಳೆಎಳೆಯಾಗಿ ವಿವರಿಸಿದ್ದಾರೆ.

image


ಡೆಲ್ಲಿ ಮತ್ತು ದಿಸ್ ಪುರ..

ದೆಹಲಿಯಲ್ಲಿ ಬೆಳೆದ ಸೊನಾಲಿ ಗುಲಾಟಿಯವರಿಗೆ ಮಹಿಳೆಯಾಗಿ ತಾವು ಎದುರಿಸಬೇಕಾದ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಸ್ಪಷ್ಟತೆ ಇತ್ತು. ನಿತ್ಯ ಬದುಕಿನ ಸಾರ್ವಜನಿಕ ಬದುಕಿನಲ್ಲಿ ತಮ್ಮ ತನವನ್ನ ಕಾಪಾಡಿಕೊಳ್ಳಲು ಹೆಣಗಬೇಕಾಯ್ತು. “ ಜೀವನ ಪರ್ಯಂತ ಒತ್ತಡವನ್ನಷ್ಟೇ ಹೇರುವ ಪುರುಷರನ್ನ ದೂರವಿಟ್ಟು ಬದುಕುವುದು ಹೇಗೆ ಅನ್ನೋದನ್ನ ಅರ್ಥ ಮಾಡಿಕೊಂಡೆ ” ಅಂತ ಸೊನಾಲಿ ತಮ್ಮ ಬದುಕಿನ ಸ್ವಂತ ಅನುಭವವನ್ನೇ ತೆರೆದಿಡುತ್ತಾರೆ. ಕ್ರಮೇಣ ಹೊಸ ಸಾಹಸಗಳಿಗೆ ಮುಂದಾದ ಸೊನಾಲಿ ಗುಲಾಟಿ ಯುಎಸ್ ಗೂ ತೆರಳಿದ್ರು. ಅಲ್ಲಿ ಅವರು ಎದುರಿಸಿದ ಸಮಸ್ಯೆ ಹಾಗೂ ಸವಾಲುಗಳು ಅವರನ್ನು ಬದುಕಿನಲ್ಲಿ ಮತ್ತಷ್ಟು ಗಟ್ಟಿಗರನ್ನಾಗಿಸಿದ್ದು ವಿಶೇಷ. ಅವರಿಗೆ ಫಿಲ್ಮ್ ಮೇಕಿಂಗ್ ನಲ್ಲಿದ್ದ ಅಪರಿಮಿತ ಆಸಕ್ತಿ ಇದ್ದಿದ್ರಿಂದ ವಿಜ್ಯುವಲ್ ಫೋಟೋಗ್ರಫಿ ಕೋರ್ಸ್ ಆಯ್ಕೆ ಮಾಡಿಕೊಂಡ್ರು. ಯುಎಸ್ ನಲ್ಲಿ ಕ್ರಮೇಣ ಡಾಕ್ಯುಮೆಂಟರಿಗಳ ಕಡೆ ಗಮನ ನೀಡಿದ ಅವರು ಅಲ್ಲಿನ ಜನರ ಮನಸ್ಥಿಗೆ ಅಚ್ಚರಿ ವ್ಯಕ್ತಪಡಿಸಿದ್ರು. ಅಲ್ಲೂ ಕೂಡ ಪುರುಷ ಸಮಾಜ ಪ್ರತೀ ಹಂತದಲ್ಲಿ ಮಹಿಳೆಯರನ್ನ ಹಿಮ್ಮೆಟ್ಟಿಸಲು ಇನ್ನಿಲ್ಲದ ಪ್ರಯತ್ನಗಳನ್ನ ನಡೆಸುತ್ತಿದ್ರು. ಹೀಗಾಗಿ ಅವರನ್ನ ಸ್ವತಃ ಅವರೇ ಬಿಂಬಿಸಿಕೊಳ್ಳಲು ಸೊನಾಲಿ ಗುಲಾಟಿ ನಿರ್ಧರಿಸಿದ್ರು. ಇನ್ನು ಮಹಿಳೆಯರಿಗೆ ಸಂಬಂಧಿಸಿದ ಚಲನಚಟಿತ್ರಗಳನ್ನೂ ಸೋನಾಲಿ ವೀಕ್ಷಿಸಿದ್ರು. ಅಲ್ಲಿ ಕಂಡ ಕೆಲವು ಕಥೆಗಳು ಹಾಗೂ ತಮ್ಮ ಅನುಭಗಳನ್ನ ತೆರೆ ಮೇಲೆ ಹೊಸ ರೀತಿಯಲ್ಲಿ ತರಲು ಮನಸ್ಸು ಮಾಡಿದ್ರು. ತಕ್ಷಣವೇ ಕ್ಯಾಮರಾ ಹೊತ್ತುಕೊಂಡು ಕಾರ್ಯ ಪ್ರವೃತ್ತರಾದ ಸೊನಾಲಿ ಗುಲಾಟಿ ಒಂದು ಉತ್ತಮ ಕಥೆ ಹೆಣೆಯೋದಿಕ್ಕೆ ಶುರು ಮಾಡಿದ್ರು.

image


ನಳಿನಿ ಬೈ ಡೇ .. ನ್ಯಾನ್ಸಿ ಬೈ ನೈಟ್..!

ತನ್ನ ಕನಸುಗಳನ್ನ ಹೆಣೆಯುತ್ತಾ ಹೊಸ ಕಥೆಗಳಿಗೆ ಹುಡುಕಾಡ ತೊಡಗಿದ ಸೊನಾಲಿ ಗುಲಾಟಿ ಕೊನೆಗೂ ಒಂದು ಪ್ರಾಜೆಕ್ಟ್ ಗೆ ಜೋತು ಬಿದ್ರು.. ನಳಿನಿ ಬೈ ಡೇ .. ನ್ಯಾನ್ಸಿ ಬೈ ನೈಟ್. ಈ ಕಿರು ಚಿತ್ರದ ಕಥೆಯನ್ನ ಕೇಳಿದ ಕೆಲವರು ಮೆಚ್ಚಿಕೊಂಡ್ರೂ, ಇದ್ರ ಕೆಲಸಗಳನ್ನ ಹೊರಗುತ್ತಿಗೆಗ ವಹಿಸುವುದೇ ಕ್ಷೇಮ ಅಂತ ಸಲಗೆ ಕೊಟ್ರು. ಹಾಗಂತ ಸೊನಾಲಿ ಅದನ್ನ ಸುಲಭವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅದನ್ನ ತಾವೇ ನಿಭಾಯಿಸು ನಿರ್ಧರಿಸಿದ್ರು. ಹೀಗಾಗಿ ಅವರಿಗೆ ಭಾರತದ ವಿವಿಧ ಹಳ್ಳಿಗಳಲ್ಲಿ ತಿರುಗಾಡಲೇ ಬೇಕಾದ ಅನಿವಾರ್ಯತೆ ಕಾಡಿತ್ತು. ಆದ್ರೆ ಭಾರತೀಯರು ಆಕೆಯನ್ನ ಸುಲಭವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಹಲವೆಡೆ ಆಕೆಯ ಪ್ರಾಜೆಕ್ಟ್ ಗೆ ಬೆಂಬಲಕ್ಕಿಂತ ವಿರೋಧಗಳೇ ಹೆಚ್ಚಾಗಿ ಸಿಕ್ಕವು. ಹೀಗಿರುವಾಗ ದೆಹಲಿಯ ಒಬ್ರು ಕರೆ ಮಾತು ತಾವು ಬೆಂಬಲ ನೀಡೋದಾಗಿ ಮತ್ತು ಎಲ್ಲಾ ಸಹಕಾರ ನೀಡೋದಾಗಿ ಸೊನಾಲಿಗೆ ಆಶ್ವಾಸನೆ ನೀಡಿದ್ರು. ಹೀಗೆ ಶುರುವಾದ ಅವರ ಚಿತ್ರೀಕರಣ ಹಲವು ಅದ್ಭುತಗಳಿಗೆ ಸಾಕ್ಷಿಯಾಯ್ತು. ದೆಹಲಿ ಹಾಗೂ ದಿಸ್ ಪುರದಲ್ಲಿ ಬೀಡು ಬಿಟ್ಟ ಇವರ ತಂಡ ಶೂಟಿಂಗ್ ರೂಪುರೇಷೆ ನಿರ್ಮಿಸಿ ಕಾರ್ಯಚಟುವಚಿಕೆ ಶುರುಮಾಡಿಯೇ ಬಿಟ್ಟಿತು. ಹೀಗೆ ಹಲವು ಸವಾಲುಗಳನ್ನ ಮೆಟ್ಟಿ ನಿಂತ ಸೋನಯಾ ಅಂತಿಮವಾಗಿ ತಮ್ಮ ಸಾಹಸಕ್ಕೆ 2006ರಲ್ಲಿ ಡೈರಕ್ಟರ್ ಚಾಯ್ಸ್ ಬ್ಲ್ಯಾಕ್ ಮರಿಯಾ ಫಿಲ್ಮ್ ಅವಾರ್ಡ್ ಹಾಗೂ 2006ರ ವಿಡಿಯೋ ಫೆಸ್ಟಿವಲ್ ಅವರಾಡ್ ಗಳನ್ನ ಗೆದ್ದು ಬೀಗಿದ್ರು. ಅಲ್ಲದೆ ಇವರ ಚಿತ್ರ ಹಂಬೋಲ್ಟ್ ನಲ್ಲಿ ನಡೆದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಸೇರಿದಂತೆ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು ಇವರ ಶ್ರೇಷ್ಠ ಕ್ಷಣಗಳಲ್ಲಿ ಒಂದು.

ಇದನ್ನು ಓದಿ: ಗಾಳಿಪಟದಿಂದ ವಿದ್ಯುತ್ ಉತ್ಪಾದನೆ: ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸಂಶೋಧನೆ

ಹೀಗೆ ಶುರುವಾದ ಸೋನಾಲಿಯವರ ಯಶಸ್ಸಿನ ಯಾನ ಇನ್ನಷ್ಟು ಅಪರೂದ ಸಾಧನೆಗಳಿಗೆ ಮೂಲವಾಯ್ತು. ಅವರ ನಂತ್ರದ ಚಿತ್ರ ಐ ಆಮ್ ಕೆಲಸಕ್ಕೆ ಹಲವು ಪ್ರೇರಣೆಗಳು ಸಿಕ್ಕವು. ಇದು ತೃತೀಯ ಲಿಂಗದ ಕುರಿತಾದ ಚಿತ್ರ. ಅವರ ಬದುಕು ಹಾಗೂ ಭಾವನೆಗಳನ್ನ ತಮ್ಮ ಕ್ಯಾಮರಾದಲ್ಲಿ ಸುಂದವಾಗಿ ಹಿಡಿದಿಟ್ಟ ಸೋನಾಲಿ ಅವರ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟರು. ಪರಿಣಾಮ ಅವರ ಈ ಚಿತ್ರಕ್ಕೆ 14 ಪ್ರಶಸ್ತಿಗಳು, 400ಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನಗಳು ಕಂಡವು. ಅಲ್ಲದೆ ಆಸ್ಟ್ರೇಲಿಯಾ, ಕೆನಡಾ, ಯುರೋಪ್ , ನ್ಯೂಜಿಲೆಂಡ್ ಸೇರಿದಂತೆ ಇತರೆ ರಾಷ್ಟ್ರಗಳಲ್ಲೂ ಇವರ ಚಿತ್ರ ಅದ್ಭುತ ಪ್ರಚಾರ ಪಡೆಯಿತು. ಹೀಗೆ ಮಹಿಳೆಯರು ಹಾಗೂ ಹಿಂದುಳಿದ ವರ್ಗದವರ ಬಗ್ಗೆ ಅಪಾರ ಕಾಳಜಿ ತೋರಿ ಅದನ್ನ ಕ್ಯಾಮರಾ ಕಣ್ಣಲ್ಲಿ ಅಪೂರ್ವವಾಗಿ ತೆರೆದಿಟ್ಟಿರುವ ಸೊನಾಲಿ ಸಾಧನೆ ನಿಜಕ್ಕೂ ಅದ್ಭುತ .

ಲೇಖಕರು – ಬಿಂಜಾಲ್ ಷಾ

ಅನುವಾದ - ಸ್ವಾತಿ

ಇದನ್ನು ಓದಿ:

1. ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

2. ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

3. ಸಿನಿಮಾದಲ್ಲಿ ಮಹಿಳಾ, ಸಾಮಾಜಿಕ ಕಳಕಳಿ : ಭಾರತದ ಚಿತ್ರೋದ್ಯಮಿಗಳಿಗೊಂದು ಸಲಾಂ..

Add to
Shares
4
Comments
Share This
Add to
Shares
4
Comments
Share
Report an issue
Authors

Related Tags