ಆವೃತ್ತಿಗಳು
Kannada

ನನ್ನ ಅಂಕಣದಲ್ಲಿ ಗಾಂಧೀಜಿ ಚಿತ್ರಣ..

ಟೀಮ್.ವೈ.ಎಸ್.ಕನ್ನಡ 

16th Sep 2016
Add to
Shares
1
Comments
Share This
Add to
Shares
1
Comments
Share

ಕಳೆದ ವಾರ ನಾನು ಬರೆದಿದ್ದ ಅಂಕಣವೊಂದು ದೇಶಾದ್ಯಂತ ಭಾರೀ ಕುತೂಹಲ ಹುಟ್ಟುಹಾಕಿತ್ತು. ಭಾರೀ ಚರ್ಚೆಗೂ ಗ್ರಾಸವಾಯ್ತು. ಪ್ರತಿಯೊಬ್ಬರದೂ ಒಂದೊಂದು ಅಭಿಪ್ರಾಯ. ಕೆಲವರು ತುಂಬಾ ನೇರ ಮಾತು ಅಂದ್ರೆ ಇನ್ನು ಕೆಲವರು ನನ್ನನ್ನು ಸ್ಟುಪಿಡ್ ಎಂದ್ರು. ಇದು ನನ್ನ ರಾಜಕೀಯ ಬದುಕಿನ ಅಂತ್ಯ ಅಂತಾನೂ ಹಲವರು ವ್ಯಾಖ್ಯಾನಿಸಿದ್ರು. ಈ ಬಗ್ಗೆ ನನಗೆ ಹತ್ತಾರು ಇಮೇಲ್​ಗಳು ಬಂದಿವೆ. ವಾಟ್ಸ್ ಆ್ಯಪ್​ನಲ್ಲಿ ಕೂಡ ಬಯ್ಗುಳ ಹಾಗೂ ಹೊಗಳಿಕೆಯ ಸಂದೇಶಗಳು ತುಂಬಿಕೊಂಡಿದ್ದವು. ಟಿವಿ ಚಾನೆಲ್​ಗಳಲ್ಲಿ ಚರ್ಚೆಯಾಯ್ತು, ದಿನಪತ್ರಿಕೆಗಳಲ್ಲಿ ಸಂಪಾದಕೀಯ ಬರೆದ್ರು. ಹಿರಿಯ ಪತ್ರಕರ್ತರು ಲೇಖನ ಬರೆದ್ರು, ಆದ್ರೆ ನಾನು ಮಾತ್ರ ಸುಮ್ಮನಿದ್ದೆ.

image


ನಾನು ಬರೆದ ಅಂಕಣ ರಾಷ್ಟ್ರಪಿತನ ಕುರಿತಾಗಿರಲಿಲ್ಲ. ನಮಗೆ ಸ್ವಚ್ಛಂದ ಗಾಳಿಯಲ್ಲಿ ಉಸಿರಾಡುವ ಶಕ್ತಿ ನೀಡದ ಮಹಾನ್ ಚೇತನದ ಕುರಿತಾಗಿತ್ತು, ಅವರೇ ಮಹಾತ್ಮಾ ಗಾಂಧಿ. ಕೆಲವು ವಿಮರ್ಷಕರು ನನ್ನ ಅಂಕಣ ನೋಡಿ ನಾನು ಮಹಾನ್ ವ್ಯಕ್ತಿಯನ್ನು ಅವಮಾನಿಸುತ್ತಿದ್ದೇನೆಂದು ಭಾವಿಸಿದ್ರು. ಅವರ ಬಗ್ಗೆ ಮಾತನಾಡುವ ಮುನ್ನ ಭಾರತದ ಹೆಮ್ಮೆಯ ಪುತ್ರನ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ''ಮಹಾತ್ಮಾ ಗಾಂಧಿ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೊತ್ತು ಅನ್ನೋದೆ ಹೆಮ್ಮೆ. ಅವರಷ್ಟು ಶುದ್ಧ, ಸಾಹಸಿ, ಉದಾತ್ತ ಚಿಂತನೆಯುಳ್ಳ ವ್ಯಕ್ತಿ ಈ ಭೂಮಿ ಮೇಲೆ ಇನ್ಯಾರೂ ಇಲ್ಲ. ಅವರು ಪುರುಷರಲ್ಲೊಬ್ಬ ಮಹಾಪುರುಷ, ದೇಶಪ್ರೇಮಿಗಳಲ್ಲೊಬ್ಬ ದೇಶಭಕ್ತ, ನಾಯಕರ ನಾಯಕ. ಭಾರತೀಯ ಮಾನವೀಯತೆ ಉಚ್ಛಸ್ಥರದಲ್ಲಿದೆ ಅನ್ನೋದನ್ನು ಅವರನ್ನು ನೋಡಿ ಹೇಳಬಹುದು'' ಅಂತಾ ಬಣ್ಣಿಸಿದವರು ಬೇರೆ ಯಾರೂ ಅಲ್ಲ ಗೋಪಾಲಕೃಷ್ಣ ಗೋಖಲೆ.

ಕೆಲವರಿಗೆ ನನ್ನ ಅಂಕಣ ಧರ್ಮವಿರೋಧಿ ಎನಿಸಿರಬಹುದು. ನಿಜವಾಗಿಯೂ ಹೌದಾ? ಆ ಬಗ್ಗೆ ಇನ್ನೊಂದು ದಿನ ಚರ್ಚಿಸೋಣ. ನಾನು ಸದಾ ಗೌರವಿಸಿದ, ಮೆಚ್ಚಿಕೊಂಡ ವ್ಯಕ್ತಿ ಎಂ.ಕೆ.ಗಾಂಧಿ. ಹಾಗಂತ ನಾನು ಆರಾಧನಾ ಅನುಯಾಯಿಯಲ್ಲ. ಬೆಂಬಲಿಗನೂ ಅಲ್ಲ. ಆದ್ರೆ ಬ್ರಿಟಿಷ್ ಆಳ್ವಿಕೆಯನ್ನು ಹತ್ತಿಕ್ಕಿದ ಸಂಪೂರ್ಣ ಶ್ರೇಯ ಬಾಪುಗೆ ಸಲ್ಲಬೇಕು. ಭಾರತದ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದವರು ಮಹಾತ್ಮಾ ಗಾಂಧಿ. ಹಿಂಸೆಯ ಜೊತೆ ಸಂಸ್ಕೃತಿ ಮತ್ತು ಇತಿಹಾಸ ಪ್ರಯೋಗಕ್ಕೆ ಮುಂದಾದಾಗ ಬಾಪು ಬೇರೆ ಮಾರ್ಗ ಹಿಡಿದ್ರು. ಜೀವನದುದ್ದಕ್ಕೂ ಅಹಿಂಸೆಯ ತತ್ವವನ್ನು ಸಾರುತ್ತ, ಅದನ್ನು ಪಾಲಿಸಿದ್ರು.

ಅವರು ಕೂಡ ಹಿಂದೊಮ್ಮೆ ಹಿಂಸೆಯನ್ನು ಬೆಂಬಲಿಸುತ್ತಿದ್ರು ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಆದ್ರೆ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ''ನಾನು ಇಂಗ್ಲೆಂಡ್​ಗೆ ಹೋಗಿದ್ದಾಗ ಹಿಂಸೆಯನ್ನು ಬೆಂಬಲಿಸುತ್ತಿದ್ದೆ. ಅದರಲ್ಲಿ ನನಗೆ ನಂಬಿಕೆಯಿತ್ತು, ಅಹಿಂಸಾ ತತ್ವದಲ್ಲಿ ವಿಶ್ವಾಸವಿರಲಿಲ್ಲ''. ಆದ್ರೆ ಗಾಂಧಿ ಬದಲಾಗಿದ್ದು ರಷ್ಯಾ ಲೇಖಕ ಲಿಯೋ ಟಾಲ್ ಸ್ಟಾಯ್ ಅವರ ಪುಸ್ತಕಗಳನ್ನು ಓದಿದ ಮೇಲೆ.

image


ಹಿಂಸೆ ಆಕರ್ಷಕವಾಗಿರುತ್ತದೆ. ಸಂವೇದನೆಯನ್ನು ಹೊಂದಿದೆ, ಸಮ್ಮೋಹನಗೊಳಿಸುವ ಶಕ್ತಿ ಅದಕ್ಕಿದೆ. ಹಿಂಸೆ ಇತಿಹಾಸವನ್ನೇ ಬದಲಾಯಿಸಿದೆ. 1917ರಲ್ಲಿ ರಷ್ಯಾ ಕ್ರಾಂತಿ ಹೊಸ ಬೆಳವಣಿಗೆಯಾಗಿತ್ತು.ಮಾರ್ಕ್ಸ್​ವಾದ , ಕಮ್ಯೂನಿಸಂ ಜಗತ್ತಿನಾದ್ಯಂತ ಸದ್ದು ಮಾಡಿದ್ದು ಆಗಲೇ. ಹತ್ತಾರು ಬುದ್ಧಿವಂತ ನಾಯಕರನ್ನು ಅದು ಹುಟ್ಟುಹಾಕಿದೆ. ಕೆಳವರ್ಗ, ಕಾರ್ಮಿಕ ವರ್ಗ, ವರ್ಗರಹಿತ ಸಮಾಜ ಸೃಷ್ಟಿ, ಬಂಡವಾಳ ಶಾಹಿಯ ಗುಲಾಮಗಿರಿಯಿಂದ ಜನರನ್ನು ಮುಕ್ತಗೊಳಿಸುವ ಹೆಸರಲ್ಲಿ ಮಾರ್ಕ್ಸ್​​ವಾದ ಹಿಂಸೆಯನ್ನು ಪ್ರತಿಪಾದಿಸುತ್ತದೆ. ಲೆನಿನ್​ನ ನಿರಂಕುಶ ಆಡಳಿತ ಅದಕ್ಕೊಂದು ಉದಾಹರಣೆ. ಆದ್ರೆ ಗಾಂಧೀಜಿ ಅದರಿಂದ ಆಕರ್ಷಿತರಾಗುವಂತಹ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ.

ಗ್ರೇಟ್ ಬ್ರಿಟನ್ ವಿರುದ್ಧ ಭಾರತದ ಹೋರಾಟಕ್ಕಿರುವ ಅಸ್ತ್ರ ಅಹಿಂಸೆ ಮತ್ತು ಸತ್ಯಾಗ್ರಹ ಅನ್ನೋದನ್ನು ಅವರು ಅರಿತಿದ್ದರು. ಇಡೀ ದೇಶವೇ ಮದನ್ ಲಾಲ್ ದಿಂಗ್ರಾ ನಡೆಸಿದ ಸರ್ ಕರ್ಜನ್ ವಿಲ್ಲೆ ಹತ್ಯೆಯನ್ನು ಸಮರ್ಥಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ರೂ, ಗಾಂಧೀಜಿ ಮರುಕಪಡುವ ಮನಸ್ಥಿತಿಯಲ್ಲಿರಲಿಲ್ಲ. ನಿರ್ದಾಕ್ಷಿಣ್ಯವಾಗಿ ಅವರು ಹೇಳಿದ್ದರು ''ಭಾರತ ಕೊಲೆಗಾರರ ನಿಯಮಾವಳಿಯಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ, ಅವರು ಕರಿಯರಾಗಿರಲಿ ಅಥವಾ ಬಿಳಿಯರಾಗಿರಲಿ. ಇಂತಹ ಆಡಳಿತದಡಿಯಲ್ಲಿ ಭಾರತ ಸಂಪೂರ್ಣ ನಾಶವಾದೀತು''. ಬಾಪು ಅವರ ಮೊಮ್ಮಗ ರಾಜ್ಮೋಹನ್ ಗಾಂಧಿ ತಮ್ಮ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾರೆ, ``ಸಾವರ್ಕರ್ ಅವರನ್ನು ಬಂಧಿಸಿ ಗಾಂಧೀಜಿ ಹತ್ಯೆಗೆ ಪ್ರಯತ್ನಿಸಲಾಯ್ತು, ಆದ್ರೆ ಬಳಿಕ ಸಾಕ್ಷ್ಯದ ಕೊರತೆಯಿಂದ ಬಿಡುಗಡೆ ಕೂಡ ಮಾಡಲಾಯ್ತು''.

ಗಾಂಧೀಜಿ ಅವರ ಹಿರಿಮೆ ಉಪದೇಶಗಳಲ್ಲಿಲ್ಲ, ಅವರು ಬೋಧಿಸುತ್ತಿದ್ದ ತತ್ವ, ನಿಷ್ಠೆ ಮತ್ತು ಸತ್ಯಸಂಧತೆಯಲ್ಲಿ ಅಡಗಿದೆ. ತಾವು ನಿಜ ಜೀವನದಲ್ಲಿ ಅಳವಡಿಸಿಕೊಳ್ಳದ್ಯಾವುದನ್ನೂ ಅವರು ಬೋಧಿಸಲಿಲ್ಲ. ಈ ಕಾರಣಕ್ಕಾಗಿಯೇ ಅವರ ಕುಟುಂಬ ತೊಂದರೆಗೀಡಾಗಿತ್ತು. ಅತಿ ಹೆಚ್ಚು ಸಂಕಷ್ಟಗಳನ್ನು ಅನುಭವಿಸಿದವರು ಪತ್ನಿ ಕಸ್ತೂರಬಾ. ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಗಾಂಧೀಜಿ ಅವರನ್ನು ಬಂಧಿಸಲಾಗಿತ್ತು, ಆಗ ಕಸ್ತೂರಬಾ ಅನಾರೋಗ್ಯಕ್ಕೆ ತುತ್ತಾದ್ರು. ಅವರ ಸ್ಥಿತಿ ಗಂಭೀರವಾಗಿತ್ತು. ಪೆರೋಲ್ ಪಡೆದು ಪತ್ನಿ ಜೊತೆಗಿರುವಂತೆ ಎಲ್ಲರೂ ಸಲಹೆ ನೀಡಿದ್ರು, ಆದ್ರೆ ಗಾಂಧೀಜಿ ಅದನ್ನು ನಿರಾಕರಿಸಿದ್ರು. ಈ ಆಧುನಿಕ ಯುಗದಲ್ಲಿ ಯಾವ ಪತಿಯೂ ಬರೆಯಲಾಗದಂತಹ ಪತ್ರವೊಂದನ್ನು ಕಸ್ತೂರಬಾ ಅವರಿಗೆ ಬರೆದ್ರು. ''ನನ್ನ ಹೃದಯ ತುಂಡಾಗಿದೆ, ಸತ್ಯಾಗ್ರಹ ನಿನ್ನನ್ನು ಸೇರಲು ಬಿಡುತ್ತಿಲ್ಲ. ನೀನು ಧೈರ್ಯ ತಂದುಕೊಂಡು ಸೂಕ್ತ ಚಿಕಿತ್ಸೆ ಪಡೆದ್ರೆ ಗುಣಮುಖಳಾಗುತ್ತೀಯ. ಆದ್ರೆ ದುರದೃಷ್ಟವಶಾತ್ ಕೆಟ್ಟದ್ದೇನಾದ್ರೂ ಸಂಭವಿಸಿದ್ರೆ ನಾನು ಜೊತೆಗಿಲ್ಲದೇ ಸಾಯುತ್ತಿರುವ ಬಗ್ಗೆ ನೀನು ಯೋಚಿಸಬಾರದು.''

ಗಾಂಧೀಜಿ ಅವರ ಪುತ್ರ ಹರಿಲಾಲ್ ಕೂಡ ಕಹಿಯಾದ ನಡವಳಿಕೆ ಹೊಂದಿದ್ದರು. ಕೊನೆಕೊನೆಗೆ ಗಾಂಧೀಜಿ ಅವರ ಮೇಲೆ ಅಸಮಾಧಾನ ಬೆಳೆಸಿಕೊಂಡ ಹರಿಲಾಲ್ ಅವರಿಂದ ದೂರವೇ ಉಳಿದ್ರು. ತಂದೆ ತನ್ನ ಶಿಕ್ಷಣವನ್ನು ನಿರ್ಲಕ್ಷಿಸಿದ್ದಾರೆ, ಕಾನೂನು ಪದವಿ ಪಡೆಯಲು ತನ್ನನ್ನು ಇಂಗ್ಲೆಂಡ್​ಗೆ ಕಳುಹಿಸಿಲ್ಲ ಎಂಬ ಬೇಸರ ಹರಿಲಾಲ್​ಗಿತ್ತು. ನೀವು ನಮ್ಮನ್ನು ನಿರ್ಲಕ್ಷಿಸಿದ್ದೀರಾ ಅಂತಾ ಆತ ಗಾಂಧೀಜಿಗೆ ಪತ್ರವನ್ನೂ ಬರೆದಿದ್ದ. ಗಾಂಧಿ ತಂದೆಯಾಗಿ ಸೋತಿರಬಹುದು ಆದ್ರೆ ತಮ್ಮ ಮಗನಿಗಾಗಿಯೂ ರಾಜಿ ಮಾಡಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಸಮಕಾಲೀನ ಭಾರತದಲ್ಲಿ ಪ್ರತಿಯೊಬ್ಬ ರಾಜಕಾರಣಿಗಳೂ ತಮ್ಮ ಮಕ್ಕಳನ್ನು ಉತ್ತೇಜಿಸುತ್ತಿದ್ದಾರೆ, ಅವರಿಗೆಲ್ಲ ಗಾಂಧೀಜಿ ಉತ್ತಮ ಉದಾಹರಣೆ. ಅವರ ಚಿಂತನೆ ಮತ್ತು ಮಹತ್ವಾಕಾಂಕ್ಷೆಯಲ್ಲಿ ಎಲ್ಲರೂ ಸರಿಸಮಾನರು. ಅವರ ಪ್ರಕಾರ ಹರಿಲಾಲ್​ಗಿಂತ ಹೆಚ್ಚಾಗಿ ಇಂಗ್ಲೆಂಡ್ ನಲ್ಲಿ ಕಾನೂನು ಶಿಕ್ಷಣ ಪಡೆಯಲು ಛಗನ್ಲಾಲ್ ವಿದ್ಯಾರ್ಥಿ ವೇತನಕ್ಕೆ ಅರ್ಹರು. ಹಾಗಾಗಿಯೇ ಅವರು ಛಗನ್ಲಾಲ್ಗೆ ಆದ್ಯತೆ ನೀಡಿದ್ರು, ಇದೇ ಕಾರಣಕ್ಕೆ ತಂದೆ ಮಗ ಬೇರೆಯಾದ್ರು.

ಗಾಂಧೀಜಿ ತುಂಬಾ ಸರಳ ಜೀವಿ. ಕಠಿಣ ವ್ಯಕ್ತಿಯಲ್ಲ. ಕಪ್ಪು ಅಥವಾ ಬಿಳಿಯಲ್ಲಿ ಅವರ ವಾಸ್ತವತೆ ಇತ್ತು. ಅವರ ಪ್ರಕಾರ ಸತ್ಯಸಂಧತೆ ಸಮಾಜದ ಮತ್ತು ವ್ಯಕ್ತಿಯ ನಿಜವಾದ ಪರೀಕ್ಷೆ. ಗಾಂಧಿ ಮಹಾನ್ ಪುರುಷ, ಅವರು ಮಹಾನ್ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಒಂದು ಅಂಕಣ ಇತಿಹಾಸದಲ್ಲಿ ಅವರಿಗಿರುವ ಸ್ಥಾನವನ್ನು ತಗ್ಗಿಸಲಾರದು. ಅವರ ಬದುಕಿನ ಬಗ್ಗೆ ಇತಿಹಾಸದುದ್ದಕ್ಕೂ ಹುಡುಕಾಟ ನಡೆಯುತ್ತಲೇ ಇರುತ್ತದೆ. ಚರ್ಚೆಗೂ ಕೊನೆಯಿಲ್ಲ.

ಇದನ್ನೂ ಓದಿ..

"ಚಪಾತಿ ಮನೆ"ಯ ಆದರ್ಶ ದಂಪತಿ

ಇವರೇ ಗುಜರಾತ್​ನ ಪ್ರಾಮಾಣಿಕ ಪೊಲೀಸ್...


Add to
Shares
1
Comments
Share This
Add to
Shares
1
Comments
Share
Report an issue
Authors

Related Tags