ಆವೃತ್ತಿಗಳು
Kannada

ಶ್ವೇತ ಭವನದಲ್ಲಿ ಮಿಂಚಿದ ಶ್ವೇತಾ

ಉಷಾ ಹರೀಶ್​​

usha harish
18th Nov 2015
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಲಾಭ ರಹಿತ ಶಿಕ್ಷಣ ಸಂಸ್ಥೆಯೊಂದನ್ನು ದೂರದ ಅಮೆರಿಕಾದಲ್ಲಿ ಕಟ್ಟಿ ಅದರ ಮೂಲಕ ಸಾಧನೆ ಮಾಡಿರುವ ಭಾರತೀಯ ಮೂಲದ 15 ವರ್ಷದ ಬಾಲಕಿಯೊಬ್ಬಳು, ಅಮೆರಿಕಾ ಸರಕಾರ ಕೊಡುವ ವೈಟ್ ಹೌಸ್ ಚಾಲೆಂಜ್ ಪ್ರಶಸ್ತಿ ಪಡೆದಿದ್ದಾಳೆ.

image


ಅಮೇರಿಕಾ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವವರಿಗೆ ಈ ಪ್ರಶಸ್ತಿ ನೀಡುತ್ತದೆ. 15 ವರ್ಷದ ಭಾರತೀಯ ಬಾಲಕಿ ಶ್ವೇತಾ ಪ್ರಭಾಕರನ್ ಪ್ರಶಸ್ತಿಯನ್ನು ಪಡೆದು ಭಾರತೀಯರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕೇವಲ 15 ವರ್ಷಕ್ಕೆ Everybody code now’ ಎಂಬ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಶ್ವೇತಾ, ಇದರ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ದಾರಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾಳೆಂದರೆ ತಪ್ಪಾಗಲಾರದು.

ಯಾವುದೇ ಲಾಭದ ಉದ್ದೇಶವಿಟ್ಟುಕೊಳ್ಳದೆ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ ಶ್ವೇತಾ ಇದರ ಮೂಲಕ ಇಂದಿನ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಎಂಜಿನಿಯರ್, ವಿಜ್ಞಾನಿ ಅಥವಾ ಉದ್ಯಮಿಗಳನ್ನಾಗಿಸಲು ತರಬೇತಿ ನೀಡುತ್ತಿದ್ದಾರೆ.

image


ಶ್ವೇತಾ ಪ್ರಭಾಕರನ್ ಅವರ ತಂದೆ ಮೂಲತಃ ತಮಿಳುನಾಡಿನವರು. ತಂದೆ ತಾಯಿ ಇಬ್ಬರೂ ಕಂಪ್ಯೂಟರ್ ಎಂಜಿನಿಯರ್​​ಗಳಾಗಿದ್ದಾರೆ. ಅಮೆರಿಕಾದ ಇವರು ವರ್ಜಿನಿಯಾದಲ್ಲಿ ಇವರ ವಾಸ.

ತಮ್ಮ ಸಂಸ್ಥೆಯನ್ನು ಲಾಭರಹಿತ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿರುವ ಕಾರಣಕ್ಕಾಗಿಯೇ ಶ್ವೇತಾ ಅವರನ್ನು ವೈಟ್ ಹೌಸ್​​ನ ಪ್ರತಿಷ್ಠಿತ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಮಿಷನ್ 20..

ತಮ್ಮ ಸಂಸ್ಥೆಯ ಮೂಲಕ ಶ್ವೇತಾ ಮಿಷನ್ 20 ಎಂಬ ಅಭಿಯಾನ ಆರಂಭಿಸಿದ್ದಾರೆ. ಈ ಮಿಷನ್ 20 ಎಂದರೆ 2020ರ ವೇಳೆಗೆ ಅಮೇರಿಕಾದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಐಟಿ ಹುದ್ದೆಗಳು ಖಾಲಿಯಾಗಲಿವೆ. ಆ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಶ್ವೇತಾ ಈಗಿನಿಂದಲೇ ವಿದ್ಯಾರ್ಥಿಗಳಿಗೆ ಐಟಿ ತರಬೇತಿ ನೀಡುವ ಸಲುವಾಗಿ ಈ ಅಭಿಯಾನಕ್ಕೆ ಮಿಷನ್ 20 ಹೆಸರಿಟ್ಟಿದ್ದಾರೆ. ಅಲ್ಲದೇ ಆ ನಿಟ್ಟಿನಲ್ಲಿ ಯಶಸ್ವಿ ಸಹ ಆಗಿದ್ದಾರೆ.ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ತರಗತಿ ನಡೆಸಿ ಉತ್ತಮ ತರಬೇತಿ ನೀಡುತ್ತಿದ್ದಾರೆ.

image


ಅಮೆರಿಕಾ ಸರ್ಕಾರದಿಂದ ಧನ ಸಹಾಯ

ಮತ್ತೊಂದು ವಿಶೇಷವೆಂದರೆ ಶ್ವೇತಾ ಪ್ರಭಾರಕರನ್ ಅವರ ಹೊಸ ಸಾಹಸಕ್ಕೆ ಅವರ ಪೋಷಕರ ಜತೆಗೆ ಅಮೆರಿಕಾ ಸರ್ಕಾರವು ಬೆನ್ನೆಲುಬಾಗಿ ನಿಂತು ಸಾಕಷ್ಟು ಧನಸಹಾಯ ಮಾಡಿದೆ.

ಅಷ್ಟೇ ಅಲ್ಲದೆ ಶ್ವೇತಾ ಮುಂದಿನ ದಿನಗಳಲ್ಲೆ ಐಟಿ ಕ್ಷೇತ್ರದ ಮೂಲಕ ಅಮೇರಿಕಾವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕನಸು ಹೊಂದಿದ್ದಾರೆ.

ಶ್ವೇತ ಭವನದ ಮೆಚ್ಚುಗೆ ಗಳಿಕೆ

ಅಮೆರಿಕಾ ಸರ್ಕಾರ ಶ್ವೇತಾ ಪ್ರಭಾಕರನ್ ಅವರ ಕನಸಿಗೆ ಹಣ ಸಹಾಯವನ್ನು ನೀಡುರುವುದಲ್ಲದೆ ಆಕೆಯನ್ನು ಅಮೆರಿಕಾದ ಭರವಸೆಯ ನಾಯಕಿ ಎಂದು ಕೊಂಡಾಡಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ವೃತ್ತಿಪರ ತರಬೇತಿ ನೀಡಿದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಈ ಸಂಸ್ಥೆ ಪ್ರಾರಂಭಿಸಿರುವುದಾಗಿ ಶ್ವೇತಾ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಭಾರತೀಯರೊಬ್ಬರು ಅಮೆರಿಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿರುವುದು ನಮ್ಮಂತಹ ಭಾರತೀಯರಿಗೆ ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲದೇ ಅಮೆರಿಕನ್ನರಿಗೆ ಶ್ವೇತಾ ಮಾದರಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags