ಆವೃತ್ತಿಗಳು
Kannada

ಮನೆ ಮಾಲೀಕರ ಆಪ್ತಮಿತ್ರ ಈ ಜೆನಿಫೈ

ಉಷಾ ಹರೀಶ್​

YourStory Kannada
22nd Mar 2016
Add to
Shares
4
Comments
Share This
Add to
Shares
4
Comments
Share

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆಯೊಂದಿದೆ. ಪ್ರತಿಯೊಬ್ಬರ ಕನಸು ಸ್ವಂತಕ್ಕೊಂದು ಮನೆ ಕಟ್ಟುವುದು. ವಾಸ ಮಾಡಲು ಒಂದು ಕಟ್ಟಿಕೊಂಡ ನಂತರ ಜೊತೆಗೆ ಬಾಡಿಗೆ ನೀಡಲು ಒಂದು ಮನೆ ಕಟ್ಟಿದರೆ ಬರುವ ಬಾಡಿಗೆ ಹಣದಲ್ಲಿ ಉತ್ತಮ ಜೀವನ ನಡೆಸಬಹುದು ಎಂಬ ಆಸೆಯೂ ಇರುತ್ತದೆ. ಆದರೆ ಮನೆ ಕಟ್ಟುವುದು ಎಷ್ಟು ಕಷ್ಟವೋ ಅದನ್ನು ಬಾಡಿಗೆದಾರರಿಗೆ ನೀಡಿ ಉತ್ತಮ ನಿರ್ವಹಣೆ ಮಾಡಿಸುವುದು ಅಷ್ಟೇ ಕಷ್ಟ. ಇನ್ನು ಮನೆ ಕಟ್ಟಿದ ನಂತರ ಬಾಡಿಗೆದಾರರನ್ನು ಹುಡುಕುವುದಷ್ಟೇ ಅಲ್ಲದೇ ಉತ್ತಮ ಬಾಡಿಗೆದಾರರನ್ನು ಹುಡುಕುವುದು ಸಹ ಕಷ್ಟ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಪ್ರಾರಂಭವಾಗಿದೆ ಜೆನಿಫೈ ಎಂಬ ವೆಬ್ ತಾಣ.

image


ಹೌದು ಮದ್ರಾಸ್​​ನ ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಸುದರ್ಶನ್ ಜೆ ಪುರೋಹಿತ್, ಅಂಕುರ್ ಅಗರವಾಲ್, ಮತ್ತು ಕೈಲಾಶ್ ರಾಠಿ ಎಂಬ ಸ್ನೇಹಿತರು ಸೇರಿಕೊಂಡು ಆರಂಭಿಸಿರುವ ಈ ಜೆನಿಫೈ ರೆಟಿಂಗ್ ಎಂಬ ವೆಬ್​ಸೈಟ್ ಮೂಲಕ ಹೊಸ ಮನೆ ಕಟ್ಟಿರುವ ಮಾಲೀಕರಿಗೆ, ಮತ್ತು ಬೆಂಗಳೂರಿಗೆ ಹೊಸದಾಗಿ ಬಂದು ಮನೆಯನ್ನು ಹುಡುಕಲು ತೊಂದರೆ ಪಡುವವರಿಗೆ ಮನೆಯನ್ನು ಬಾಡಿಗೆಗೆ ಪಡೆದ ನಂತರ ನಾಲ್ಕಾರು ತಿಂಗಳ ನಂತರ ನೀರು ಕರೆಂಟ್ ಸಮಸ್ಯೆ ಇದ್ದರೆ ಏನು ಮಾಡುವುದು? ಅದರ ದುರಸ್ತಿಯನ್ನು ನಾವೇ ಮಾಡಿಸಿಕೊಳ್ಳಬೇಕಾ. ಮಾಲೀಕರಿಗೆ ಐಡಿ ಕಾರ್ಡ್, ದೃಢೀಕರಣ ಪತ್ರಗಳು ಮಾಲೀಕರ ಕಿರಿಕಿರಿ ಹೀಗೆ ಮಾಲೀಕರು ಬಾಡಿಗೆದಾರರ ಪ್ರಶ್ನೆಗಳಿಗೆ ಉತ್ತರ ನೀಡುವುದೇ ಜೆನಿಫೈ ರೇಟಿಂಗ್ ಕಂಪನಿ!

image


ನೀವು ಒಂದು ಬಾರಿ ಈ ವೆಬ್​ಸೈಟ್​ಗೆ ಲಾಗ್ ಇನ್ ಆದರೆ ಮನೆಗಳ ಚಿತ್ರ ಆ ಮನೆಗಳು ಇರುವ ಪ್ರದೇಶ, ಬಾಡಿಗೆ ದರ ಎಲ್ಲವು ಸಿಗುತ್ತದೆ. ಜಿಪಿಎಸ್ ಮೂಲಕ ನಿಮಗೆ ರಸ್ತೆಯನ್ನು ಈ ವೆಬ್​ಸೈಟ್​ ತೋರಿಸುತ್ತದೆ. ಈ ವೆಬ್​ಸೈಟ್​ ಅಚ್ಚುಕಟ್ಟಾದ ಮನೆಗಳನ್ನು ಮಾತ್ರ ಬಾಡಿಗೆದಾರರಿಗೆ ತೋರಿಸುತ್ತದೆ.

ಆನ್​ಲೈನ್​ನಲ್ಲೇ ಪೇಮೆಂಟ್

ನಿಮಗೆ ಮನೆ ಇಷ್ಟ ಆದಲ್ಲಿ ಮುಂಗಡ ಹಣವನ್ನು ಆನ್​ಲೈನ್​ನಲ್ಲೇ ಪಾವತಿ ಮಾಡಬಹುದು. ನೀವು ಪೇಮಂಟ್ ಮಾಡಿದ ಮರುಕ್ಷಣದಿಂದ ಬಾಡಿಗೆ ಪಡೆಯಬಹುದು. ಬಾಡಿಗೆದಾರರ ಗುರುತು ದೃಢೀಕರಣವನ್ನು ಜೆನಿಫೈನ ಸಿಬ್ಬಂದಿಯೇ ಮಾಡಿ ಮನೆ ಮಾಲೀಕರಿಗೆ ತಿಳಿಸುತ್ತಾರೆ.

ಇದನ್ನು ಓದಿ: ಹೊಸ ಉದ್ಯಮಕ್ಕೆ ನಾಂದಿ ಹಾಡಿತು ಆಫೀಸ್ ಗೆಳೆತನ....

ಮನೆ ಮಾಲೀಕರು ಈ ಕಂಪನಿಯ ಸುಪರ್ಧಿಗೆ ತಮ್ಮ ಮನೆಯನ್ನು ನೀಡಿದರೆ ಸಾಕು ಪ್ರತಿ ತಿಂಗಳು ಬಾಡಿಗೆ ಪಡೆಲು ಅವರು ಬಾಡಿಗೆದಾರರನ್ನು ಕೇಳುವಂತಿಲ್ಲ ಬಾಡಿಗೆ ಅವರ ಖಾತೆಗೆ ಬಂದು ಬೀಳುತ್ತದೆ.

ನೀರು ಬರದಿದ್ದರೆ ಜೆನಿಫೈ ಜವಬ್ದಾರಿ

ಬಾಡಿಗೆ ಮನೆಯಲ್ಲಿ ನೀರು ಬರದಿದ್ದರೆ, ಕರೆಂಟ್ ತೊಂದರೆಯಾದರೆ ಅಅದಕ್ಕೆ ಜೆನಿಫೈ ಜವಬ್ದಾರಿಯಾಗಿರುತ್ತದೆ. ಅಲ್ಲದೇ ಈ ದುರಸ್ತಿ ಕೆಲಸಗಳಿಗೆ ಯಾವುದೇ ಹಣ ಪಡೆಯುವುದಿಲ್ಲ. ಬೆಂಗಳೂರಿನ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಜೆನಿಪೈ ಈಗಾಗಲೇ 1800 ಫ್ಲಾಟ್ಗಳನ್ನು ಹೊಂದಿದೆ. ಗ್ರಾಹಕರಿಗೆ ಅನುಕೂಲವಾಗಲೆಂದೆ ಸುಮಾರು140 ಮಂದಿ ಇದರಲ್ಲಿ ದುಡಿಯುತ್ತಿದ್ದಾರೆ.

ಕಮಿಷನ್ ಇಲ್ಲ

ಮನೆ ಬಾಡಿಗೆ ಕೊಡಿಸುವುದಕ್ಕೆ ಬಾಡಿಗೆದಾರರಿಂದ ಜೆನಿಫೈ ಕಮಿಷನ್ ಪಡೆಯುವದಿಲ್ಲ. ಅದರ ಬದಲಿಗೆ ಮಾಲೀಕರಿಂದ ಒಂದು ವರ್ಷದಲ್ಲಿ ಒಂದು ತಿಂಗಳ ಬಾಡಿಗೆಯನ್ನು ಮಾಲೀಕರಿಂದ ಪಡೆಯುತ್ತದೆ. ಬಾಡಿಗೆದಾರರು ಯಾವುದೇ ಕ್ಷಣದಲ್ಲಿ ಏನೆ ಸಮಸ್ಯೆ ಉದ್ಭವಿಸಿದರೂ ಜೆನಿಫೈಗೆ ಒಂದು ಕರೆ ಮಾಡಿದರೆ ಸಾಕು ಅವರು ಬಂದು ಪರಿಹರಿಸುತ್ತಾರೆ.

image


ಮನೆ ಖಾಲಿ ಇದ್ದರೂ ಬಾಡಿಗೆ

ಒಂದು ಬಾರಿ ನೀವು ಜೆನಿಫೈಗೆ ಮನೆಯನ್ನು ವಹಿಸಿದರೆ ಸಾಕು ಒಬ್ಬ ಬಾಡಿಗೆದಾರ ಸಿಕ್ಕಿ ಅವರು ಖಾಲಿ ಮಾಡಿದರೂ ಬಾಡಿಗೆ ಮಲೀಕರ ಖಾತೆಗೆ ಖಾತೆಗೆ ಜಮಾ ಆಗುತ್ತಲೇ ಇರುತ್ತದೆ. ಬೆಂಗಳೂರಿನಲ್ಲಿ 24 ಲಕ್ಷ ಮನೆಗಳಿದ್ದು ಅವುಗಳಲ್ಲಿ ಶೇ 70 ರಷ್ಟು ಮಂದಿ ಮನೆಯನ್ನು ಕಟ್ಟಿ ಬೇರೆ ಕಡೆ ವಾಸವಾಗಿದ್ದಾರೆ. ಅಂತವರು ಜೆನಿಫೈ ರೇಟಿಂಗ್ಗೆ ಮನೆ ನೀಡಿ ಆರಾಮಾಗಿರಬಹುದು.

ಮೂವರ ಸ್ನೇಹಿತರ ಶ್ರಮ

ಸುದರ್ಶನ್ ಜೆ ಪುರೋಹಿತ್, ಅಂಕುರ್ ಅಗರವಾಲ್, ಮತ್ತು ಕೈಲಾಶ್ ರಾಠಿ ಈ ಮೂರು ಜನ ಸೇರಿಕೊಂಡು ಪ್ರಾರಂಭ ಮಾಡಿರುವ ಕಂಪನಿಗೆ ಇಲ್ಲಿಯವರೆಗೂ ಒಟ್ಟು 4 ಕೋಟಿ ರೂಪಾಯಿ ಖರ್ಚಾಗಿದೆ. ಆ ಬಂಡವಾಳವನ್ನು ತಮ್ಮ ಆಪ್ತರ ಬಳಿ ಸಂಗ್ರಹಿಸಿರುವ ಈ ಮೂವರು ಸ್ನೇಹಿತರು.ಸುಮಾರು 140 ಮಂದಿಗೆ ಉದ್ಯೋಗ ನೀಡಿದ್ದಾರೆ. ಜೊತೆಗೆ ಪ್ಲಂಬರ್, ಕಾರ್ಪೆಂಟರ್, ಪೇಂಟರ್ ಸೇರಿದಂತೆ ಮತ್ತಿತರರಿಗೆ ಉದ್ಯೋಗ ನೀಡಿರುವ ಹೆಗ್ಗಳಿಕೆ ಇವರದ್ದು. ಇವರ ಕಂಪನಿಗೆ ನೀವು ಲಾಗ್ ಇನ್ ಆದರೆ ನಿಮಗೆ ಮನೆ ಇರುವ ಜಾಗವನ್ನು ಜಿಪಿಎಸ್ಮೂಲಕ ರಸ್ತೆಗಳನ್ನು ಗೈಡ್ ಮಾಡುತ್ತಾ ಹೋಗುತ್ತದೆ ಇದಕ್ಕಾಗಿ ಇವರು ಗೂಗಲ್ನ ಸಹಭಾಗಿತ್ವ ಪಡೆದುಕೊಂಡಿದ್ದಾರೆ. ಕಂಪನಿಯಲ್ಲಿ ಇನ್ನಷ್ಟು ಹೂಡಿಕೆ ಮಾಡಲು ಹೂಡಿಕೆ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಸಧ್ಯಕ್ಕೆ ಸಧ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಇರುವ ಈ ಜೆನಿಫೈ ಸೇವೆಯನ್ನು ಮುಂದಿನ ದಿನಗಳಲ್ಲಿ ಚೆನ್ನೈ ಮುಂಬೈನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಸಧ್ಯಕ್ಕೆ ಉತ್ತಮಲಾಭದಲ್ಲಿರುವ ಇವರ ಸಂಸ್ಥೆ ಕಟ್ಟಡದ ಮಾಲೀಕ ಮತ್ತು ಬಾಡಿಗೆದಾರರ ಆಶಾಭಾವನೆಗಳಿ ಸೂಕ್ತವಾಗಿ ಸ್ಪಂದಿಸಿ ಇಬ್ಬರಿಗೂ ಭದ್ರತೆ ಕಲ್ಪಿಸಿಕೊಟ್ಟು ಮಾಲೀಕರಿಗೆ ನೆಮ್ಮದಿಯನ್ನು ನೀಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಇದನ್ನು ಓದಿ

1. ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...! 

2. ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

3. ಚೆನ್ನೈ ಪ್ರವಾಹ ಪೀಡಿತರಿಗಾಗಿ ಅಮರಿಕದಿಂದ ಹರಿದು ಬಂತು ನೆರವು - ಕಸ್ಟಮ್ಸ್ ಕಿರಿಕಿರಿಯಿಂದ ಸಂತ್ರಸ್ಥರನ್ನು ಇನ್ನೂ ತಲುಪಿಲ್ಲ..!

Add to
Shares
4
Comments
Share This
Add to
Shares
4
Comments
Share
Report an issue
Authors

Related Tags