ಆವೃತ್ತಿಗಳು
Kannada

ಸ್ಲಮ್ ಮಕ್ಕಳೇ ನಡೆಸುತ್ತಿರುವ ಪತ್ರಿಕೆ ''ಬಾಲಕ್​ನಾಮಾ''

ಟೀಮ್ ವೈ.ಎಸ್.ಕನ್ನಡ 

YourStory Kannada
20th Aug 2016
8+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

'ಬಾಲಕ್​ನಾಮಾ' ...ದೆಹಲಿ ಹಾಗೂ ಅಕ್ಕಪಕ್ಕದ ರಾಜ್ಯಗಳ ಕೊಳಗೇರಿ ಮಕ್ಕಳೇ ನಡೆಸುತ್ತಿರುವ ಪತ್ರಿಕೆ ಇದು. 8 ಪುಟಗಳನ್ನೊಳಗೊಂಡ ಈ ಪತ್ರಿಕೆಯಲ್ಲಿ ಬೀದಿ ಬದಿಯ ಮಕ್ಕಳ ಬದುಕು, ಲೈಂಗಿಕ ಕಿರುಕುಳದಂತಹ ಪ್ರಕರಣಗಳು, ಬಾಲ ಕಾರ್ಮಿಕರು, ಪೊಲೀಸರ ಕ್ರೌರ್ಯಕ್ಕೆ ಸಂಬಂಧಪಟ್ಟ ಲೇಖನಗಳು ಪ್ರಕಟವಾಗುತ್ತವೆ. ಇದರ ಜೊತೆಗೆ ಧನಾತ್ಮಕವಾದ ಒಳ್ಳೆಯ ಲೇಖನಗಳನ್ನು ಸಹ ನೀವು ಓದಬಹುದು.

''ಬಾಲಿವುಡ್ ನಟರೊಬ್ಬರ ನಾಯಿ ಗಾಯಗೊಂಡ್ರೆ ಅದೇ ಬ್ರೇಕಿಂಗ್ ನ್ಯೂಸ್, ಭಾರತದ ಎಲ್ಲಾ ದಿನಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಅದು ದೊಡ್ಡ ಸುದ್ದಿಯಾಗುತ್ತೆ. ರೈಲ್ವೆ ಫ್ಲಾಟ್​ಫಾರ್ಮ್​ನಲ್ಲಿ ಮಲಗಿದ್ದ ಬೀದಿ ನಾಯಿ ಸತ್ತರೆ ಅಥವಾ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ್ರೆ ಯಾರೂ ಕೇರ್ ಮಾಡುವುದಿಲ್ಲ'' ಅನ್ನೋದು ಬಾಲಕ್​ನಾಮಾ ಪತ್ರಿಕೆಗಾಗಿ ಕಾರ್ಯನಿರ್ವಹಿಸ್ತಾ ಇರೋ ಪತ್ರಕರ್ತ ವಿಕಾಸ್ ಕುಮಾರ್ ಅವರ ಅಭಿಪ್ರಾಯ. ವಿಕಾಸ ಅವರ ಕಥೆ ಕೇಳಿದ್ರೆ ನೀವು ಕೂಡ ಅಚ್ಚರಿಪಡ್ತೀರಾ. ಅಸಲಿಗೆ ವಿಕಾಸ್ ಮೊದ್ಲು ಚಿಂದಿ ಆಯ್ತಾ ಇದ್ರು, ಅಷ್ಟೇ ಅಲ್ಲ ಡ್ರಗ್ಸ್ ದಾಸರಾಗಿದ್ದ ವಿಕಾಸ್ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ರು. ಆದ್ರೆ ಈಗ ಅವರ ಜೀವನ ಬದಲಾಗಿದೆ. ಕೇವಲ ಪತ್ರಕರ್ತ ಮಾತ್ರವಲ್ಲ ವಿಕಾಸ್ ಈಗ ಬಾಲಕ್​ನಾಮಾದ ಮುಖವಾಣಿ ಅಂದ್ರೂ ತಪ್ಪಾಗಲಾರದು.

ಬಾಲಕ್​ನಾಮಾ ಪತ್ರಿಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಕಟವಾಗುತ್ತೆ. ಬಾಲಕ್​ನಾಮಾ ಪತ್ರಿಕೆಗಾಗಿ 14 ವರದಿಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣದ ಪುಟ್ಟ ಪ್ರತಿಭೆಗಳು, ಪುಟಾಣಿ ವರದಿಗಾಗರರು ಸುದ್ದಿಗಳನ್ನು ಬಾಲಕ್​ನಾಮಾಗೆ ಕಳುಹಿಸ್ತಾರೆ. ಬಾಲಕ್​ನಾಮಾ ದಿನಪತ್ರಿಕೆಯ ಬೆಲೆ ಕೇವಲ 2 ರೂಪಾಯಿ. ದೆಹಲಿಯ ಎನ್​ಜಿಓ ಒಂದರ ಸದಸ್ಯೆ ಚೇತನಾ ಎಂಬುವವರು ಬಾಲಕ್​ನಾಮಾ ಪತ್ರಿಕೆಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪತ್ರಿಕೆಯ ಸರ್ಕ್ಯುಲೇಶನ್ ಕೂಡ ಹೆಚ್ಚಾಗಿದ್ದು ಸದ್ಯ 5500 ಪತ್ರಿಕೆಗಳು ಮಾರಾಟವಾಗುತ್ತಿವೆ. ಆದ್ರೆ ಪತ್ರಿಕೆಯನ್ನು ಮುನ್ನಡೆಸಲು ಹಣಕಾಸಿನ ಅಗತ್ಯವಿದ್ದು, ಜಾಹೀರಾತುದಾರರ ನಿರೀಕ್ಷೆಯಲ್ಲಿದೆ. ಅಷ್ಟೇ ಅಲ್ಲ ಸರ್ಕಾರದಿಂದ ಕೂಡ ನೆರವು ಸಿಗುತ್ತಿಲ್ಲ.

ಬಾಲಕ್​ನಾಮಾ ಪತ್ರಿಕೆಯ ಸಂಪಾದಕಿ ಚಾಂದಿನಿ ಕೂಡ ಹಿಂದೊಮ್ಮೆ ಚಿಂದಿ ಆಯುವ ಕೆಲಸ ಮಾಡ್ತಾ ಇದ್ರು. ಜೊತೆಗೆ ಬೀದಿ ಬದಿಗಳಲ್ಲಿ ಹಾಡು, ಡ್ಯಾನ್ಸ್ ಮಾಡುತ್ತ ಜೀವನ ಸಾಗಿಸ್ತಾ ಇದ್ರು. ''ಬಾಲಕ್​ನಾಮಾ ಪತ್ರಿಕೆಯ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಯಾಕಂದ್ರೆ ಇದರಲ್ಲಿ ಭಾರತದ ನೈಜ ಚಿತ್ರಣವಿದೆ. ಬಾಲ್ಯವನ್ನೇ ಕಳೆದುಕೊಂಡ ಮಕ್ಕಳು, ಹಸಿವಿನಿಂದ ಕಂಗಾಲಾದವರು, ಭಿಕ್ಷುಕರು, ನಿಂದನೆಗೊಳಗಾದವರು, ಬಲವಂತವಾಗಿ ದುಡಿಮೆ ಮಾಡುತ್ತಿರುವವರ ನೋವಿನ ಧ್ವನಿ ಇದು. ಇಂಥದ್ದೇ ಸ್ಥಿತಿ ಎದುರಿಸುತ್ತಿರುವ ಮಕ್ಕಳ ಬಗ್ಗೆ ಪತ್ರಿಕೆ ಬೆಳಕು ಚೆಲ್ಲುತ್ತಿದೆ'' ಎನ್ನುತ್ತಾರೆ ಚಾಂದಿನಿ.

ಇದನ್ನೂ ಓದಿ...

ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!

ಮಣಿಪುರಕ್ಕೆ ಬರಲಿದೆ ಅತಿ ಉದ್ದದ ರೈಲ್ವೆ ಸುರಂಗ, ಬಲು ಎತ್ತರದ ಸೇತುವೆ...

8+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags