ಬೆಂಗಳೂರಿನ ದಂಪತಿಗಳು ಪ್ಲಾಸ್ಟಿಕ್ ರಹಿತವಾಗಿ, ಪರಿಸರ ಸ್ನೇಹಿ ವಸ್ತುಗಳಿಂದ ಹೇಗೆ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಕ್ಷತಾ ಭದ್ರನ್ನಾ ಮತ್ತು ರಾಹುಲ್ ಪಗಾಡ್ ದಂಪತಿಗಳು 2016 ರಲ್ಲಿಯೇ ಪರಿಸರ ಸ್ನೇಹಿ ಕಂಪನಿಯನ್ನು ಪ್ರಾರಂಭಿಸಿದರು. ಅದೇ ಬೆಂಗಳೂರು ಮೂಲದ "ಡೋಪೋಲಜಿ". ಇದು ಪರಿಸರ ಸ್ನೇಹಿ ಪೇಪರ್ ಪೆನ್ಸಿಲ್, ಬೀಜದ ಕಾಗದಂತಹ ವಸ್ತುಗಳನ್ನು ಒದಗಿಸುತ್ತದೆ. ಇವುಗಳು ಜೈವಿಕ ವಿಘಟನೀಯವಾಗಿವೆ(ಮಣ್ಣಲ್ಲಿ‌ ಸೇರುವುದು/ವಿಲೀನವಾಗುವುದು).

ಬೆಂಗಳೂರಿನ ದಂಪತಿಗಳು ಪ್ಲಾಸ್ಟಿಕ್ ರಹಿತವಾಗಿ, ಪರಿಸರ ಸ್ನೇಹಿ ವಸ್ತುಗಳಿಂದ ಹೇಗೆ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Thursday July 18, 2019,

2 min Read

ಪ್ರತಿಯೊಂದು ವಸ್ತುವು ಸಣ್ಣ ಜೀವಿತಾವಧಿ ಹೊಂದಿದೆ. ಆದರೆ ಪ್ಲಾಸ್ಟಿಕ್ ಹಾಗಲ್ಲ. ಅದು ಭೂಮಿಯಲ್ಲಿ ಕರಗಲು ಸುಮಾರು 500 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೇ ಭಾರತವು ವಾರ್ಷಿಕವಾಗಿ 300 ದಶಲಕ್ಷ ಟನ್‍ಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ.


ಇತ್ತೀಚೆಗೆ ಪೇಸಿಫಿಕ್ ಮಹಾಸಾಗರದ ಮರೀನಾ ಕಂದಕದ ಆಳವಾದ ನೆಲದಲ್ಲಿ ಒಂದು ಪ್ಲಾಸ್ಟಿಕ್ ಚೀಲ ಪತ್ತೆಯಾಗಿದೆ. ವಿಶ್ವ ಆರ್ಥಿಕ ವೇದಿಕೆಯ ಪ್ಲಾಸ್ಟಿಕ್ ಮಾಲಿನ್ಯದ ಅಧ್ಯಯನದ ಪ್ರಕಾರ ಹೀಗೇ ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗುತ್ತಿದ್ದರೆ, 2050ರ ಸುಮಾರು ಸಮುದ್ರಗಳಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರಲಿವೆ.


ಈ ವಿಪತ್ತನ್ನು ನಿರ್ವಹಿಸಲು ಹಾಗೂ ಸುಸ್ಥಿರ ಮತ್ತು ಪ್ಲಾಸ್ಟಿಕ್ ರಹಿತವಾದ ಸುಗಮ ಭವಿಷ್ಯತ್ತಿಗಾಗಿ ಅಕ್ಷತಾ ಭದ್ರನ್ನಾ ಮತ್ತು ರಾಹುಲ್ ಪಗಾಡ್ ದಂಪತಿಗಳು 2016 ರಲ್ಲಿ ಡೋಪೋಲಜಿಯನ್ನು ಸ್ಥಾಪಿಸಿದರು.


Dopology

ಅಕ್ಷತಾ ಭದ್ರನ್ನಾ(ಎಡಕ್ಕೆ) ಮತ್ತು ರಾಹುಲ್ ಪಗಾಡ್(ಬಲಕ್ಕೆ) (ಚಿತ್ರ:ಎಡೆಕ್ಸ್ ಲೈವ್)

ಬಿದಿರಿನಿಂದ ಹಲ್ಲುಜ್ಜುವ ಬ್ರಶ್‍ಗಳು, ಬೀಜದ ಕಾಗದಗಳು ಮತ್ತು ಪತ್ರಿಕೆಗಳ ಪೆನ್ಸಿಲ್‍ಗಳನ್ನು ಈ ಕಂಪನಿಯಿಂದ ಉತ್ಪಾದಿಸಲಾಯಿತು. ಇವು ಉಪಯುಕ್ತವಾದುದಲ್ಲದೇ ಪರಿಸರ ಸ್ನೇಹಿಯೂ ಹೌದು. ಅಲ್ಲದೇ ಇವು ಕೈಗೆಟಕುವ ದರದಲ್ಲಿಯೇ ಲಭ್ಯವಾಗುತ್ತವೆ.


ಡೆಕ್ಕನ್ ಹೆರಾಲ್ಡ್ ನ ವರದಿಯಲ್ಲಿ ಅಕ್ಷತಾ ಅವರು ಹೀಗೆ ಹೇಳಿದ್ದಾರೆ.


“ಭಾರತದ ಅಧಿಕ ಮಂದಿ ಮಧ್ಯಮ ವರ್ಗದಿಂದ ಬಂದಿದ್ದಾರೆ. ಆದ್ದರಿಂದ ಸುಸ್ಥಿರತೆಯನ್ನು ಅವರ ಕೈಗೆಟಕುವಂತೆ ಮಾಡಲು ಬಯಸಿದ್ದೆವು”

ಎಲ್ಲರೂ ಖರೀದಿಸಬಹುದಾದ ಮತ್ತು ಪರಿಸರ ಸ್ನೇಹಿ ಉತ್ಪನ್ನವನ್ನು ತರಲು ಈ ದಂಪತಿಗಳು ಸುಲಭ ಪರಿಹಾರಗಳನ್ನು ಹುಡುಕಿದರು. ಉದಾಹರಣೆಗೆ ಹಳೆಯ ಪತ್ರಿಕೆಗಳಿಂದಲೇ ಪೆನ್ಸಿಲ್ ತಯಾರಿಸಲಾಯಿತು. ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ಆಲೋಚಿಸಿದ ರಾಹುಲ್, ಜೈಪುರದ ಉತ್ಪಾದಕರಿಂದ ಪೆನ್ಸಿಲ್ ಸಂಸ್ಕರಣೆ ಮಾಡಿಸುವ ಬದಲು, ತಮ್ಮ ಸ್ವಂತ ಊರಾದ ಧಾರವಾಡದಲ್ಲೇ ಒಂದು ಸ್ವಂತ ತಯಾರಿಕಾ ಘಟಕವನ್ನೇ ಸ್ಥಾಪಿಸಿದರು. ಅದು ಕಷ್ಟಸಾಧ್ಯವೂ ಆಗುತ್ತಿತ್ತು.


ಅಕ್ಷತಾ ಅವರು ಎಡೆಕ್ಸ್ ಲೈವ್‍ನಲ್ಲಿ ಮಾತನಾಡುತ್ತಾ,


ಪರಿಸರ ಸ್ನೇಹಿ ಮಾತ್ರವಲ್ಲದೇ ನಾವು ಹುಬ್ಬಳ್ಳಿ ಧಾರವಾಡದ ಜನರಿಗೆ ಉದ್ಯೋಗವನ್ನು ಕಲ್ಪಿಸಲು ಬಯಸಿದ್ದೆವು. ನಮ್ಮ ಒಂದು 2ಬಿ ಪೆನ್ಸಿಲ್ ಬೆಲೆಯು ಈಗ 9ರೂ. ಇದೆ. ಮುಂದಿನ ದಿನಗಳಲ್ಲಿ ನಾವು ಅದರ ಬೆಲೆಯನ್ನು 5ರಿಂದ 7ರೂ.ಗೆ ಇಳಿಸುತ್ತೇವೆ. ಅಲ್ಲದೇ ಬಣ್ಣದ ಪೆನ್ಸಿಲ್ ಸಹ ತಯಾರಿಸುತ್ತೇವೆ. ಹತ್ತು ಬಣ್ಣದ ಪೆನ್ಸಿಲ್ ಬೆಲೆ 120ರೂ.ಗಳು ಮತ್ತು ಅದು ದೀರ್ಘಕಾಲವಧಿಯವರೆಗೆ ಬರುತ್ತದೆ” ಎಂದಿದ್ದಾರೆ.


Dopology

ಪೇಪರ್ ಪೆನ್ಸಿಲ್ ಗಳು (ಚಿತ್ರ:ಎಡೆಕ್ಸ್ ಲೈವ್)

ಒಳನೋಟದಲ್ಲಿ ಪೆನ್ಸಿಲ್ ಉತ್ಪಾದನೆಗೆ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಅಕ್ಷತಾ ಅವರ ಪ್ರಕಾರ ಪ್ರತಿ ವರ್ಷ 6 ದಶಲಕ್ಷ ಮರಗಳಿಂದ 15 ದಶಲಕ್ಷ ಪೆನ್ಸಿಲ್ ಉತ್ಪಾದಿಸಲಾಗುತ್ತಿದೆ ಎಂದರು.


ಕಾಗದದಿಂದ ಮಾಡಿದ ಪೆನ್ಸಿಲ್‍ಗಳ ನಂತರ ಇವರು ವಿಯೆಟ್ನಾಂ ನಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ, ಬಿದಿರಿನ ಕುಂಚಗಳನ್ನು ಅವರ ಕುಟುಂಬದವರಿಗೆ ಸ್ನೇಹಿತರಿಗೆ ಮಾರಾಟ ಮಾಡತೊಡಗಿದ್ದರು. ಈ ಬಗ್ಗೆ ಮಾತನಾಡುತ್ತಾ ಅಕ್ಷತಾ ಹೀಗೆ ಹೇಳಿದರು,


"ನನ್ನ ಸಹೋದರ ವಿಜ್ಞಾನಿ. ನಾವು ಅವನಿಗೆ ಒಳ್ಳೆಯ ಪರಿಸರಕ್ಕಾಗಿ ಈ ಬಿದಿರಿನ ಕುಂಚಗಳನ್ನು ಅವನ ಗ್ರಾಹಕರಿಗೆ ಶಿಫಾರಸು ಮಾಡಲು ಹೇಳಿದೆವು. ಆದರೆ ಇದರೆ ಬೆಲೆ 210 ರೂ ಅಥವಾ ಅದಕ್ಕೂ ಹೆಚ್ಚಿನದಿದ್ದವು. ಆದ್ದರಿಂದ ಜನರು ದುಬಾರಿಯಾದ ಈ ಬ್ರಶ್‍ನ್ನು ಕೊಳ್ಳಲಿಚ್ಛಿಸಲಿಲ್ಲ. ಆದ್ದರಿಂದ ನಾವು ಬೆಬಿ ಮತ್ತು ಅಡಲ್ಟ್ ಬಿದಿರಿನ ಕುಂಚವನ್ನು ಕೇವಲ 80ರೂ ಗಳಿಗೆ ಮಾರಟ ಮಾಡಲು ಪ್ರಾರಂಭಿಸಿದೆವು. ಈಗ ಎಲ್ಲವೂ ಮಾರಾಟವಾಗಿದೆ ಮತ್ತು ನಾವು ಕಡಿಮೆ ದರದಲ್ಲಿ ಚೀನಾದಿಂದ ಇದನ್ನು ತರಿಸುತ್ತಿದ್ದೇವೆ”


ಆದಾಗ್ಯೂ ಪ್ಲಾಸ್ಟಿಕ್ ವಸ್ತುಗಳ ಮೇಲೆಯೇ ಅವಲಂಭಿತವಾದ ಜನರನ್ನು ಅದನ್ನು ಉಪಯೋಗ ಮಾಡದಂತೆ ಮನವರಿಕೆ ಮಾಡಿಕೊಡುವುದು ಮಹತ್ವವಾಗಿತ್ತು. ಆದ್ದರಿಂದ ಈ ದಂಪತಿಗಳು ಎಲ್ಲಾ ಮಾರಾಟಗಾರರನ್ನು ಭೇಟಿಯಾಗಿ ಮರುಬಳಕೆಗೆ ಬರುವಂತಹ ವಸ್ತುಗಳನ್ನೆ ಪ್ಯಾಕೆಜಿಂಗ್‍ಗಾಗಿ ಬಳಸಿ ಎಂದು ಮನವೊಲಿಸಲು ಪ್ರಯತ್ನಿಸಿದರು.


ಈಗ ಅವರು ತಮ್ಮ ಕಸ್ಟಮೈಸ್ ಪ್ಯಾಕಿಂಗ್(ಗ್ರಾಹಕರಿಗೆ ವಸ್ತುಗಳನ್ನು ಕಟ್ಟಿಕೊಡುವುದು)ಗಾಗಿ ಇತರ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮತ್ತು ಸಾಗಿಸಲಾಗುವ ಪ್ರತಿಯೊಂದು ವಸ್ತುಗಳ ಪ್ಯಾಕಿಂಗ್‍ಗಾಗಿ ಅವರು ಬೀಜದ ಕಾಗದಗಳನ್ನೇ ಬಳಸುತ್ತಿದ್ದಾರೆ. ಇದು ಜೈವಿಕ ವಿಘಟನೀಯವಾಗಿದೆ. ಬೀಜದ ಕಾಗದವು ಮಾರಿಗೋಲ್ಡ್ ಮತ್ತು ಮಲ್ಲಿಗೆ ಬೀಜಗಳನ್ನು ಒಳಗೊಂಡಿರುತ್ತದೆ. ಮತ್ತು ಕಾಗದವನ್ನು ಬಳಸಿದ ನಂತರವೂ ಅದನ್ನು ನೆಡಬಹುದಾಗಿದೆ.


ಪ್ರಸ್ತುತ ದಂಪತಿಗಳಿಗೆ ಸುಮಾರು 500 ರಿಂದ 1000 ವರೆಗೆ ಮಾತ್ರ ಬೀಜದ ಕಾಗದದ ಬೇಡಿಕೆಗಳಿವೆ. ಡೋಪೋಲಜಿಯು ಬೀಜದ ಕಾಗದಗಳ ಪ್ಯಾಕೇಜಿಂಗ್ ಸಹ ಮಾಡುತ್ತದೆ ಮತ್ತು ಪರಿಸರ ಸ್ನೇಹಿ ಸಾಬೂನು ಮತ್ತು ಸೌಂದರ್ಯ ಉತ್ಪನ್ನ ತಯಾರಿಸುವ ಒಂದು ಕಂಪನಿಗೆ ಬೆಲೆಚೀಟಿ(ಪ್ರೈಸ್ ಟ್ಯಾಗ್)ಯನ್ನು ಮಾಡಿಕೊಡುತ್ತಿದೆ.