ಆವೃತ್ತಿಗಳು
Kannada

ಬುಲೆಟ್ ಟ್ರೈನ್ ವೇಗದಲ್ಲಿ ಓಡುತ್ತಿದೆ ರೈಲ್​ಯಾತ್ರಿ

ಟೀಮ್​​ ವೈ.ಎಸ್​​.

YourStory Kannada
21st Oct 2015
11+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಭಾರತೀಯ ರೈಲ್ವೇ ದೇಶದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿದೆ. ದೇಶದಲ್ಲಿ ಸಾರಿಗೆ ನವ್ಯೋದ್ಯಮಗಳಿಗೆ ವಿಪುಲ ಅವಕಾಶವೂ ಇದೆ. ಕೆಲ ವರ್ಷಗಳಿಂದೀಚೆಗೆ ಹಲವು ನವ್ಯೋದ್ಯಮಿಗಳು ಈ ವಲಯದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ರೈಲ್​ಯಾತ್ರಿಯ ಸಂಸ್ಥಾಪಕ ಮನೀಷ್ ರಾಥಿ ಮಾತ್ರ ಎಲ್ಲರಿಗಿಂತ ವಿಭಿನ್ನವಾಗಿ ಉದ್ಯಮ ನಡೆಸುತ್ತಿದ್ದಾರೆ. ವಾಯುಯಾನಿಗಳಿಗಾಗಿ ಸಾಕಷ್ಟು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಆದರೆ, ಬಳಕೆದಾರರ ಸಂಖ್ಯೆ ಮಾತ್ರ ಕಡಿಮೆ. ನನಗೆ ಗೊತ್ತಿಲ್ಲ ಯಾಕೆ ಯಾರೂ ಕೂಡಾ ವಿಶಾಲ ಜನ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು.. ಎರಡು ವರ್ಷಗಳ ಹಿಂದೆ ನಾವು ಭಾರತೀಯ ರೈಲ್ವೇ ಪ್ರಯಾಣಿಕರಿಗಾಗಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆವು, ಅದೇ ರೈಲ್ ಯಾತ್ರಿ ಎನ್ನುತ್ತಾರೆ ಮನೀಷ್.

image


ರೈಲ್ ಯಾತ್ರಿಯು ಭಾರತೀಯ ರೈಲ್ವೇ ಪ್ರಯಾಣಿಕರು ಬಳಸುವ ಎಲ್ಲಾ ವೆಬ್ ಅಪ್ಲಿಕೇಶನ್​​ನ ಸಂಗ್ರಹವಾಗಿದೆ. ಈ ನವ್ಯೋದ್ಯಮವನ್ನು ಎರಡು ವರ್ಷಗಳ ಹಿಂದೆ ನವ್ಯೋದ್ಯಮ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಲಹೆಗಾರರಾಗಿದ್ದ ಮೂವರು ಸೇರಿಕೊಂಡು ಆರಂಭಿಸಿದರು. 18 ಸ್ಟಾರ್ಟ್ ಆ್ಯಪ್​​ಗಳ ಜೊತೆ ಕೆಲಸ ಮಾಡಿದ ಬಳಿಕ ನಾವು ನಮ್ಮದೇ ಉದ್ಯಮವೊಂದನ್ನು ಆರಂಭಿಸಲು ನಿರ್ಧರಿಸಿದೆವು ಎನ್ನುತ್ತಾರೆ ಮನೀಷ್.

ಉತ್ಪನ್ನಗಳು

ಪ್ರತಿದಿನ ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವ ಜನರ ಬವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಪರಿಹಾರ ನೀಡಲು ಚಿಂತನೆ ನಡೆಸಿದೆವು. ಮಾರುಕಟ್ಟೆಯಲ್ಲಿ ಆಗಲೇ ರೈಲ್ವೇ ಸಮಸ್ಯೆಗಳನ್ನು ಪರಿಹರಿಸುವ ಸಾಕಷ್ಟು ಉತ್ಪನ್ನಗಳಿದ್ದವು. ಆದರೆ ನಾವೂ ಎಲ್ಲದಕ್ಕೂ ಏಕೀಕಕೃತ ಪರಿಹಾರ ನೀಡಲು ಯೋಚಿಸಿದೆವು. ನಾವು ಭಾರತೀಯ ರೈಲ್ವೇ ಇಲಾಖೆ ಜೊತೆ ಸಾಕಷ್ಟು ಚರ್ಚೆ ನಡೆಸಿದ ಬಳಿಕವೇ ನಮ್ಮ ಉತ್ಪನ್ನವನ್ನು ಹೆಚ್ಚು ಜನಸ್ನೇಹಿಯಾಗಿ ರೂಪಿಸಿದೆವು ಎನ್ನುತ್ತಾರೆ ಮನೀಷ್.

image


ರೈಲ್ ರಾಡಾರ್

ರೈಲ್ವೇ ಜೊತೆಗಿನ ಕಲಿಕೆಯೇ ನಮಗೆ ಇನ್ನೊಂದು ಉತ್ಪನ್ನ ತಯಾರಿಸಲು ಪ್ರೇರಣೆ ನೀಡಿತು. ಅದೇ ರೈಲ್ ರಾಡಾರ್. ಇದು ಮ್ಯಾಪ್ ಆಧರಿತ ವ್ಯವಸ್ಥೆಯಾಗಿದ್ದು, ರೈಲು ಎಲ್ಲಿದೆ ಎನ್ನುವುದರ ಬಗ್ಗೆ ರಿಯಲ್​ಟೈಮ್​​ ಮಾಹಿತಿ ನೀಡುತ್ತದೆ. ರೈಲುಗಳು ಅಪರಿಚಿತ ಪ್ರದೇಶದಲ್ಲೆಲ್ಲೂ ಓಡಾಡುವುದಿಲ್ಲ. ಜನರಿಗೆ ರೈಲಿನ ಆಗಮನ, ನಿರ್ಗಮನ ಚಲನವಲನ ಹೀಗೆ ಅಗತ್ಯ ಮಾಹಿತಿಗಳನ್ನು ಪಡೆಯಲು ಸಾಧ್ಯವಿರಲಿಲ್ಲ. ಇದಕ್ಕಾಗಿಯೇ ನಾವು ರೈಲ್ ರಾಡಾರ್ ಆರಂಭಿಸಿದೆವು, ಎಂದು ವಿವರಿಸುತ್ತಾರೆ ಮನೀಷ್.

ರೈಲ್ ಯಾತ್ರಿ ಆರಂಭಿಸಿದ ಮೂರನೇ ಉತ್ಪನ್ನವೇ ರೈಲ್ ವಿಸ್ಡಮ್. ಇದು ಅತ್ಯಂತ ಆಸಕ್ತಿದಾಯಕವಾದ, ಕ್ರೌಡ್ ಆಧರಿತ ನಿಲ್ದಾಣ ಮತ್ತು ರೈಲುಗಳ ಮಾಹಿತಿ ವ್ಯವಸ್ಥೆಯಾಗಿದೆ. ಮ್ಯಾಪ್ ಆಧರಿತ ಈ ವೇದಿಕೆಯು, ನಿಮಗೆ ನಿರ್ದಿಷ್ಟವಾದ ರೈಲ್ವೇ ನಿಲ್ದಾಣದ ಸುತ್ತಮುತ್ತ ಇರುವ ಜನಪ್ರಿಯ ರೆಸ್ಟೋರೆಂಟ್ ಅಥವಾ ಹೊಟೇಲ್​ಗಳ ಮಾಹಿತಿ ನೀಡುತ್ತದೆ. ಈಗಾಗಲೇ ರೈಲ್ ಯಾತ್ರಿಯು ಬೇಟಾ ವರ್ಷನ್ ಬಿಡುಗಡೆ ಮಾಡಿದ್ದು, ಸುಮಾರು 500 ಪ್ರಮುಖ ನಿಲ್ದಾಣಗಳ ಮಾಹಿತಿ ಇದರಲ್ಲಿ ಸಧ್ಯಕ್ಕೆ ಲಭ್ಯವಿದೆ.

ಭಾರತೀಯ ರೈಲ್ವೇ ಜೊತೆ ಕೆಲಸ

ಸರ್ಕಾರಿ ಸ್ವಾಮ್ಯದ ಸಂಸ್ಥೆ ಅದರಲ್ಲೂ ಭಾರತೀಯ ರೈಲ್ವೇಯಂತಹ ಬೃಹತ್ ವ್ಯವಸ್ಥೆಯೊಂದಿಗೆ ವ್ಯವಹರಿಸುವುದು ನವ್ಯೋದ್ಯಮಿಗಳಿಗೆ ದೊಡ್ಡ ಸವಾಲು ಎನ್ನುತ್ತಾರೆ ಮನೀಷ್. ನಾವು ರೈಲ್ವೇ ಮಾಹಿತಿ ತಂತ್ರಜಾನ ವಿಭಾಗದ ಜೊತೆ ಕೆಲಸ ಮಾಡಿದ್ದೇವೆ. ಈ ವ್ಯವಹಾರವು ಉಭಯ ಕಡೆಗಳಿಗೂ ಲಾಭದಾಯಕವಾಗಿತ್ತು. ಅವರು ಹೊಸತನ್ನು ಪ್ರಯೋಗ ಮಾಡಬೇಕು ಎಂದುಕೊಂಡಿದ್ದರು. ನಮ್ಮ ಬಳಿ ಅವರ ಅವಶ್ಯಕತೆಗಳನ್ನು ಪೂರೈಸುವ ಸೊಲ್ಯೂಷನ್​​ಗಳಿದ್ದವು. ಹೀಗಿದ್ದರೂ ಕೂಡಾ ರೈಲ್ವೇ ಜೊತೆ ಕೆಲಸ ಮಾಡುವಾಗ ರೈಲ್​ಯಾತ್ರಿಗೆ ಕೆಲವೊಂದು ನಿರ್ಬಂಧಗಳಿದ್ದವು, ಎನ್ನುತ್ತಾರೆ ಮನೀಷ್.

ಆದರೆ, ಈ ವ್ಯವಹಾರದಿಂದಾಗಿ ಭಾರತೀಯ ರೈಲ್ವೇಯ ವಿಸ್ತಾರವನ್ನು ಅರ್ಥೈಸಿಕೊಳ್ಳುವುದು ಸಾಧ್ಯವಾಗಿಲ್ಲ. ಅವರ ಜೊತೆ ಕೆಲಸ ಮಾಡುವುದು ನಮಗೆ ತುಂಬಾ ಲಾಭದಾಯಕವಾಗಿತ್ತು. ತೆರೆಯ ಹಿಂದೆ ಏನು ನಡೆಯುತ್ತದೆ ಎನ್ನುವುದರ ಬಗ್ಗೆ ನಮಗೆ ಅತಿ ಉಪಯುಕ್ತ ಮಾಹಿತಿ ದೊರೆತಿತ್ತು. ನಮ್ಮ ಬಳಿ ತಂತ್ರಜ್ಞಾನದ ಬೆನ್ನೆಲುಬು ಇದ್ದರೆ, ಅವರ ಬಳಿ ರೈಲ್ವೇ ಬಗ್ಗೆ ಅಪಾರ ಜಾನವಿತ್ತು. ಹೌದು ಅಲ್ಲಿ ನಿರ್ಬಂಧಗಳಿದ್ದವು. ಆದರೆ ನಾವದನ್ನು ಗೌರವಿಸುತ್ತಿದ್ದೆವು, ಎನ್ನುತ್ತಾರೆ ಮನೀಷ್.

image


ಒಂದು ಹಿನ್ನೋಟ ಮತ್ತು ಮುಂದಿನ ಹಾದಿ

ನವ್ಯೋದ್ಯಮಗಳ ಜೊತೆಗೆ ಕೆಲಸ ಮಾಡಿದ್ದರಿಂದ, ಮನೀಷ್ ಮತ್ತು ಅವರ ತಂಡಕ್ಕೆ ನಿಜವಾಗಿಯೂ ಏನು ಮಾಡಬೇಕು ಎನ್ನುವುದು ತಿಳಿದಿತ್ತು. ನಾವು ಕೆಲಸ ಮಾಡಿದ್ದೂ ಸೇರಿದಂತೆ, ಸರಾಸರಿ 8 ನವ್ಯೋದ್ಯಮಗಳಲ್ಲಿ ಒಂದು ಮಾತ್ರ ಯಶೋಗಾಥೆ ಹೇಳಲು ಉಳಿಯುತ್ತಿದ್ದವು. ಉದ್ಯಮದಲ್ಲಿ ಬಂಡವಾಳ ತೊಡಗಿಸುವ ರಿಸ್ಕ್ ಎಷ್ಟು ಎನ್ನುವುದನ್ನು ನಾವು ಸರಿಯಾಗಿ ತಿಳಿದುಕೊಂಡಿದ್ದೆವು. ಅದೇ ರೀತಿ ಗ್ರಾಹಕರ ಆದ್ಯತೆಗಳ ಬಗ್ಗೆಯೂ ನಮಗೆ ತಿಳುವಳಿಕೆ ಇತ್ತು.

ಸಧ್ಯಕ್ಕೆ ರೈಲ್​ಯಾತ್ರಿಯ ಏಕೈಕ ಆದಾಯ ಮೂಲ ಗೂಗಲ್ ಆ್ಯಡ್ಸ್​​. ಅದರಿಂದ ಬರುತ್ತಿರುವ ಆದಾಯದಿಂದ ಅವರ ತಂಡದ ಜೀವನ ನಿರ್ವಹಣೆಯಾಗುತ್ತಿದೆ ಎನ್ನುತ್ತಾರೆ ಮನೀಷ್. ನಾವು ಮೊದಲಿಗೆ ದೊಡ್ಡದೊಂದು ಸಮುದಾಯವನ್ನು ರಚಿಸುವತ್ತ ಗಮನಹರಿಸಿದ್ದೇವೆ. ಮೊದಲು ಅವರು ನಮ್ಮ ಉತ್ಪನ್ನ ಬಳಸುವಂತಾಗಬೇಕು. ನಮ್ಮ ಉತ್ಪನ್ನಗಳು ಯಶಸ್ವಿಯಾದರೆ, ನಾವು ಅವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹೂಡಿಕೆ ಸ್ವಾಗತಿಸಬಹುದು. ಈಗಾಗಲೇ ಕೆಲವರು ಹೂಡಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುತ್ತಾರೆ ಮನೀಷ್ . ಇದೊಂದು ರೀತಿಯಲ್ಲಿ ಗಿಡ ನೆಟ್ಟ ಹಾಗೆ, ನೀವು ನೀರು ಹಾಕಿ, ಬೆಳೆಸಿದರೆ ಅದು ಹಣ್ಣು ಕೊಡುತ್ತದೆ. ನೀವು ಯಾವ ಗಿಡ ನೆಡುತ್ತೀರಿ ಎನ್ನುವುದೇ ಸಧ್ಯದ ಪ್ರಶ್ನೆಯಾಗಿರಬೇಕು ಎನ್ನುತ್ತಾರೆ ಮನೀಷ್.

ಸ್ಪರ್ಧೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಕೇಳಿದರೆ, ಸ್ಪರ್ಧೆ ಒಳ್ಳೆಯದೇ ಎನ್ನುತ್ತಾರೆ ಮನೀಷ್. ಅದರರ್ಥ ನೀವು ಸತ್ತು ಹೋಗಿರೋ ಮಾರುಕಟ್ಟೆಯಲ್ಲಿಲ್ಲ ಎಂದು. ನಮಗೆ ಕೆಲವೊಂದು ಆಂತರಿಕ ಗುರಿಗಳಿವೆ. ಅದು ಹೊರತು ಪಡಿಸಿದರೆ, ಪ್ರಯಾಣಿಕರಿಗೆ ರೈಲ್ವೇಯ ಹಿತಾನುಭವ ಮಾಡುವುದೇ ನಮ್ಮ ಗುರಿ. ಕಳೆದ ಕೆಲವು ತಿಂಗಳುಗಳಲ್ಲಿ ಅದನ್ನು ಸಾಧಿಸಿದ್ದೇವೆ ಎಂದು ಮಾತು ಮುಗಿಸುತ್ತಾರೆ ಮನೀಷ್.

11+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags