ಆವೃತ್ತಿಗಳು
Kannada

ಮಾರ್ಕೆಟಿಂಗ್ ಕೇವಲ ಆಯ್ಕೆಯಲ್ಲ, ಅದು ಅನಿವಾರ್ಯತೆ

ಟೀಮ್​​ ವೈ.ಎಸ್​​.ಕನ್ನಡ

25th Nov 2015
Add to
Shares
11
Comments
Share This
Add to
Shares
11
Comments
Share

ಸಾಮಾಜಿಕ ಉದ್ಯಮಗಳನ್ನು, ಸಮಾಜದಲ್ಲಿ ಒಳ್ಳೆಯ ಪರಿಸರ ಸೃಷ್ಟಿಸುವ ಹಾಗೂ ದೂರದೃಷ್ಟಿ ಹೊಂದಿರುವ ಕಂಪನಿಗಳು ಎನ್ನಬಹುದು. ಲಕ್ಷಾಂತರ ಜನರ ಜೀವನಗಳ ಮೇಲೆ ಪ್ರಭಾವ ಬೀರಲು, ಕಡಿಮೆ ವೇಗದ ಪ್ರಗತಿಯನ್ನು ಅವು ಒಪ್ಪಿಕೊಂಡಿರ್ತವೆ. ಯಶಸ್ಸಿಗಾಗಿ ಸುದೀರ್ಘ ಕಾಯುವಿಕೆಯೂ ಆ ಉದ್ಯಮದ ಒಂದು ಪ್ರಮುಖ ಅಂಶವಾಗಿರುತ್ತದೆ. ರಾತ್ರೋರಾತ್ರಿ ಅವುಗಳಿಗೆ ಯಶಸ್ಸು ಲಭಿಸಿಬಿಡುವುದಿಲ್ಲ. ವಿಶ್ವದಲ್ಲೇ ಅತ್ಯುತ್ತಮ ಎನಿಸಿಕೊಂಡ ಸಾಮಾಜಿಕ ಉದ್ದಿಮೆಗಳೂ ಕೂಡ, ಆ ಯಶಸ್ಸನ್ನು ಪಡೆಯಲು ದಶಕಗಳ ಕಾಲ ಶ್ರಮಿಸಿರುತ್ತವೆ. ಆ ಸಾಮಾಜಿಕ ಉದ್ದಿಮೆಯನ್ನು ತಳಮಟ್ಟದಿಂದ ಕಟ್ಟಲು ಅಳವಡಿಸಿಕೊಂಡ ಆಂತರಿಕ ಅಂಶಗಳೇ ಅವುಗಳ ಬೆಳವಣಿಗೆಗೆ ಕಾರಣವಾಗಿರುತ್ತವೆ. ಸಾಂಪ್ರದಾಯಿಕ ಉದ್ಯಮಗಳಂತೆ ಆದಾಯ ಮತ್ತು ಲಾಭಗಳಿಂದ ಸಾಮಾಜಿಕ ಉದ್ದಿಮೆಗಳ ಯಶಸ್ಸನ್ನು ಅಳೆಯಲಾಗುವುದಿಲ್ಲ. ಬದಲಿಗೆ ಅದು ಬೀರುವ ಸಾಮಾಜಿಕ ಪರಿಣಾಮ, ಸಂರಕ್ಷಣೆ ಮತ್ತು ಸಾಮರ್ಥ್ಯಗಳ ಮೂಲಕ ಈ ಉದ್ಯಮಗಳ ಯಶಸ್ಸನ್ನು ನಿರ್ಧರಿಸಲಾಗುತ್ತದೆ.

image


ಉದ್ಯಮವೊಂದರ ಆದಾಯದ ಒಳಹರಿವು ಹಾಗೂ ಕ್ರಮೇಣ ಯಶಸ್ಸಿಗೆ ಕಾರಣವಾಗುವ ಹಲವು ಅಂಶಗಳಲ್ಲಿ ಮಾರ್ಕೆಟಿಂಗ್ ಪ್ರಮುಖವಾದುದು. ಹೀಗಾಗಿಯೇ ಸಾಂಪ್ರದಾಯಿಕ ಉದ್ದಿಮೆಗಳಲ್ಲಿ ಮಾರ್ಕೆಟಿಂಗ್‍ನತ್ತ ವಿಶೇಷ ಗಮನ ಹರಿಸಲಾಗುತ್ತೆ ಹಾಗೂ ಅದಕ್ಕೆಂದೇ ಹಣ ಮೀಸಲಿಡಲಾಗುತ್ತೆ. ಕ್ರೀಡಾ ವಸ್ತುಗಳ ಸಂಶೋಧನೆ ಮತ್ತು ವಿಶ್ಲೇಷಣೆಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಕೈಗಾರಿಕಾ ದಿಗ್ಗಜ ಮ್ಯಾಟ್ ಪೊವೆಲ್, ಮಾರ್ಕೆಟಿಂಗ್ ಎಷ್ಟು ಮುಖ್ಯ ಅನ್ನೋದರ ಕುರಿತು ಕೆಲ ಮಾಹಿತಿಗಳನ್ನು ಕೊಟ್ಟಿದ್ದಾರೆ.

ಸಾಮಾಜಿಕ ಉದ್ದಿಮೆಗಳು ಕೆಲವೊಮ್ಮೆ ಸಂಪನ್ಮೂಲಗಳ ಕೊರತೆಯಿಂದಾಗಿ ಮಾರ್ಕೆಟಿಂಗ್‍ಗೆ ಹಣ ಮೀಸಲಿಡಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವೊಮ್ಮೆ ಮಾರ್ಕೆಟಿಂಗ್ ಏನಿದ್ದರೂ ದೊಡ್ಡ ಕಂಪನಿಗಳಿಗಷ್ಟೇ, ನಮ್ಮಂತಹ ಸಣ್ಣ ಕಂಪನಿಗಳಿಗೆ ಅದೆಲ್ಲಾ ಹೊರೆಯಾಗುತ್ತೆ ಅಂತ ಸುಮ್ಮನಾಗಿಬಿಡ್ತಾರೆ. ಆದ್ರೆ ಅವರಿಗೆ ಅದನ್ನು ಆರೈಕೆ ಮಾಡುವ ಅಗತ್ಯವಿಲ್ಲ. ನಿಮ್ಮ ವ್ಯಾಪಾರದ ಉದ್ದೇಶದ ಕುರಿತು ಯೋಚಿಸುತ್ತಾ, ನಿಮ್ಮ ಧ್ಯೇಯದ ಕುರಿತು ಗ್ರಾಹಕರಲ್ಲಿ ಅಭಿಮಾನವಿದ್ದರೆ ಮತ್ತು ಹೃದಯವನ್ನೇ ಕಲಕುವ ಅಥವಾ ಆಘಾತಕಾರಿ ಅಂಕಿ-ಅಂಶಗಳ ಕುರಿತು ನೀವು ಕೆಲಸ ಮಾಡುತ್ತಿದ್ದರೆ, ಅವಷ್ಟಕ್ಕೆ ಅವೇ ಮಾರ್ಕೆಟಿಂಗ್ ಮಾಡಿಕೊಡುತ್ತವೆ.

ಒಂದು ವಿಷಯ ಅಥವಾ ಸಮಸ್ಯೆ ಕುರಿತು ಹೇಳಿಕೊಳ್ಳದೇ ಅಥವಾ ಮತ್ತೊಬ್ಬರಿಗೆ ಸರಿಯಾಗಿ ತಿಳಿಸದೇ, ಅವರನ್ನು ಅದರಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ. ಒಂದು ಚಳುವಳಿಯಾಗಲೀ ಅಥವಾ ಗುರಿಯನ್ನಾಗಲೀ ಮುಟ್ಟಲು ಮತ್ತೊಬ್ಬರ ಸಹಭಾಗಿತ್ವ ಪಡೆಯಲು ಅದರ ಕುರಿತು ಮಾಹಿತಿ ಸರಿಯಾಗಿ ತಿಳಿಸುವುದು ಮುಖ್ಯ. ಅದೇ ರೀತಿ ನಿಮ್ಮ ಇರುವಿಕೆ ಬಗ್ಗೆ ಗ್ರಾಹಕರಿಗೆ ಗೊತ್ತಿಲ್ಲ ಅಂದ್ರೆ ಯಾವ ಮಾರುಕಟ್ಟೆಯೂ ನಿಮಗೆ ಸ್ಪಂದಿಸುವುದಿಲ್ಲ. ನೀವು ಆ ಮಾರುಕಟ್ಟೆಯಲ್ಲಿ ಯಾಕಿದ್ದೀರಿ? ನಿಮ್ಮ ಉದ್ದೇಶವೇನು? ಎಂಬುದು ಮೊದಲು ನಿಮಗೆ ತಿಳಿದಿರಬೇಕು. ನಿಮ್ಮ ಉತ್ಪನ್ನವನ್ನು ಗ್ರಾಹಕರು ಖರೀದಿಸುವಂತೆ ಮಾಡಬೇಕು, ಅದನ್ನು ಖರೀದಿಸಿದ ಬಳಿಕ ಅವರಿಗೆ ಖುಷಿಯಾಗಬೇಕು. ಹೀಗಾಗಿಯೇ ಗ್ರಾಹಕರನ್ನು ಸೆಳೆಯುವುದಕ್ಕಾದ್ರೂ ಸಾಮಾಜಿಕ ಉದ್ದಿಮೆಗಳು ಮಾರ್ಕೆಟಿಂಗ್‍ನಿಂದ ವಿಮುಖವಾಗಬಾರದು. ಬದಲಿಗೆ ಅದನ್ನು ಪ್ರಭಾವಶಾಲಿಯಾಗಿ, ಪರಿಣಾಮಶಾಲಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು.

ಸಾಂಪ್ರದಾಯಿಕ ಉದ್ಯಮಗಳಲ್ಲಿ ಬಜೆಟ್ ಹೇಗೆ ಬೇಕಾದ್ರೂ ಹೊಂದಿಕೊಳ್ಳುತ್ತದೆ. ಆದ್ರೆ ಸಾಮಾಜಿಕ ಉದ್ದಿಮೆಗಳು ಹಾಗಲ್ಲ. ಬಹಳ ಜಾಣ್ಮೆಯಿಂದ ಹಾಗೂ ಹೊಸ ಹೊಸ ಐಡಿಯಾಗಳ ಮೂಲಕ ಮಾರ್ಕೆಟಿಂಗ್ ಕೆಲಸಗಳನ್ನು ಮಾಡಬೇಕು. ಮಾರ್ಕೆಟಿಂಗ್ ಸಾರ್ವಜನಿಕರಿಗೆ ಸಂಸ್ಥೆಯ ಉದ್ದೇಶವನ್ನು ವ್ಯಾಖ್ಯಾನಿಸುತ್ತದೆ. ಹಾಗೂ ಕಂಪನಿಯನ್ನು ಮುಂದಕ್ಕೆ ಕೊಂಡೊಯ್ಯಲು ಜನರಿಂದ ಬೆಂಬಲ ಪಡೆಯಲು ಸಹಕರಿಸುತ್ತದೆ. ಇದು ಬರಿಯ ಆಯ್ಕೆಯಲ್ಲ ಬದಲಿಗೆ ಅನಿವಾರ್ಯತೆ. ಇದರ ವ್ಯಾಪ್ತಿ ಮಾರುಕಟ್ಟೆಗಳಲ್ಲಿ ಮೌಲ್ಯ ವಿನಿಮಯ ಮಾಡುವುದಕ್ಕಷ್ಟೇ ಸೀಮಿತವಲ್ಲ ಅದರ ಜೊತೆಗೆ ಬಂಡವಾಳ ರೂಪದಲ್ಲಿ ಕೊಡುಗೆ ನೀಡಲು, ಸಮಯ ಮತ್ತು ಸೇವೆ ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡುವುದೂ ಕೂಡ ಮಾರ್ಕೆಟಿಂಗ್ ಕೆಲಸ. ಸಾಮಾಜಿಕ ಉದ್ದಿಮೆಗಳ ವಿಷಯಕ್ಕೆ ಬಂದಾಗ ಗ್ರಾಹಕರನ್ನು ಸೆಳೆಯಲು ಉಪಯೋಗಿಸುವ ಮಾರುಕಟ್ಟೆ ತಂತ್ರಗಳೂ ಬದಲಾಗುತ್ತವೆ. ಬಹುತೇಕ ಸಮಯಗಳಲ್ಲಿ ಬಂಡವಾಳ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡುವುದು ಮಾತ್ರವಲ್ಲ ಆ ಉತ್ಪನ್ನಗಳನ್ನು ಉಪಯೋಗಿಸುವ ಜನರಲ್ಲೂ ಅರಿವು ಮೂಡಿಸಬೇಕು. ಇದು ಮಾರ್ಕೆಟಿಂಗ್ ಮಾಡುವ ಸಾಮಾಜಿಕ ಉದ್ಯಮಗಳ ಪಾಲಿಗೆ ಶಾಪವೂ ಹೌದು, ವರವೂ ಹೌದು. ಇದು ಒಂದೇ ಸಮಯದಲ್ಲಿ ಸರಳ ಹಾಗೂ ಕ್ಲಿಷ್ಟಕರವಾಗಿಯೂ ಇರುತ್ತದೆ.

ಮುಂದಿನ ದಿನಗಳಲ್ಲಿ, ಅತ್ಯುತ್ತಮ ಮಾರ್ಕೆಟಿಂಗ್ ತಂತ್ರಗಳ ಮೂಲಕ ಅತ್ಯದ್ಭುತ ಯಶಸ್ಸನ್ನು ಗಳಿಸಿರುವ ಸಾಮಾಜಿಕ ಉದ್ಯಮಗಳ ಕುರಿತು ಮಾತನಾಡೋಣ. ಹಾಗೇ ಕೆಲವು ಆಸಕ್ತಿದಾಯಕ ಹಾಗೂ ಜಿಜ್ಞಾಸೆಯ ವಿಧಾನಗಳನ್ನು ಅನುಸರಿಸುವ ಸಾಮಾಜಿಕ ಉದ್ಯಮಗಳ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳೋಣ. ನಾವು ಸಾಮಾಜಿಕ ಉದ್ದಿಮೆಗಳ ಮಾರ್ಕೆಟಿಂಗ್ ಕುರಿತ ಹಲವು ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಪಡೆಯೋಣ. ಕೆಲವು ಸಾಮಾನ್ಯ ತಪ್ಪುಗಳನ್ನು ಮತ್ತು ಪ್ರಮಾದಗಳನ್ನು, ಯಶಸ್ವೀ ಪ್ರಚಾರಾಂದೋಲನವನ್ನು ಮತ್ತು ಅವು ಹೇಗೆ ಕೆಲಸ ಮಾಡಿದ್ವು ಅನ್ನೋದನ್ನು, ಸರಿಯಾದ ಮಾರ್ಕೆಟಿಂಗ್ ಮೂಲಕ ಯಶಸ್ವಿಯಾದ ಸಾಮಾಜಿಕ ಉದ್ಯಮಗಳ ಕುರಿತು ಹಾಗೂ ಏನೇ ಸರ್ಕಸ್ ಮಾಡಿದ್ರೂ ಸರಿಯಾದ ಮಾರ್ಕೆಟಿಂಗ್ ಮಾಡುವಲ್ಲಿ ಸೋತ ಕಂಪನಿಗಳ ಕುರಿತೂ ತಿಳಿದುಕೊಳ್ಳೋಣ.

ಲೇಖಕರು: ಕೃತಿ ಪೂನಿಯಾ

ಅನುವಾದಕರು: ವಿಶಾಂತ್​​​​

Add to
Shares
11
Comments
Share This
Add to
Shares
11
Comments
Share
Report an issue
Authors

Related Tags