ಬಜೆಟ್‌ 2021: ಎಂಎಸ್‌ಎಂಇಗೆ 15,700 ಕೋಟಿ, ಉತ್ಪನ್ನಗಳ ಮೇಲಿನ ಕಸ್ಟಮ್ಸ್‌ ಸುಂಕ ರದ್ದು

ಕೇಂದ್ರ ಬಜೆಟ್‌ 2021ರಲ್ಲಿ ಎಂಎಸ್‌ಎಂಇ ವಲಯಕ್ಕೆ 15,700 ಕೋಟಿ ಅನುದಾನ ನೀಡಿದ್ದು ಕಳೆದ ವರ್ಷಕ್ಕೆ ಹೊಲಿಸಿದರೆ ಅನುದಾನ ದ್ವಿಗುಣಗೊಂಡಿದೆ.

ಬಜೆಟ್‌ 2021: ಎಂಎಸ್‌ಎಂಇಗೆ 15,700 ಕೋಟಿ, ಉತ್ಪನ್ನಗಳ ಮೇಲಿನ ಕಸ್ಟಮ್ಸ್‌ ಸುಂಕ ರದ್ದು

Monday February 01, 2021,

2 min Read

ಕೊರೊನಾ ವೈರಾಣುವಿನಿಂದ ಕಷ್ಟಕ್ಕೊಳಗಾಗಿದ್ದ ಹಲವು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕೇಂದ್ರ ಬಜೆಟ್‌ 2021ರ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿವೆ ವಿಶೇಷವಾಗಿ ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಕಷ್ಟ ಅನುಭವಿಸಿ ಉಳಿದುಕೊಂಡಿರುವ ಉದ್ಯಮಗಳು.


ಬಜೆಟ್‌ 2021 ರಲ್ಲಿ ನಿರ್ಮಲಾ ಸೀತಾರಾಮನ್‌ ಎಂಎಸ್‌ಎಂಇ ಕ್ಷೇತ್ರಕ್ಕೆ 15,700 ಕೋಟಿಯ ಅನುದಾನ ನೀಡಿದ್ದಾರೆ. ಜತೆಗೆ ಕ್ಷೇತ್ರದ ಬೆಳವಣಿಗೆ ಸಲಹೆ ಸೂಚನೆಗಳಿಗಾಗಿ ಡೇಟಾ ಅನಲಿಟಿಕ್ಸ್‌, ಮಶಿನ್‌ ಲರ್ನಿಂಗ್‌ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ವಿಶೇಷ ಉಪಯೋಗವನ್ನು ಮಾಡಲಿದ್ದಾರೆ.


“ಎಂಎಸ್‌ಎಂಇ ವಲಯಕ್ಕೆ ಬೆಂಬಲ ನೀಡಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಬಾರಿ 15,700 ಕೋಟಿ ಅನುದಾನ ನೀಡಿದ್ದೇವೆ, ಇದು ಕಳೆದ ಬಾರಿಗೆ ಹೊಲಿಸಿದರೆ ದ್ವಿಗುಣಗೊಂಡಿದೆ,” ಎಂದರು ಅವರು.


2020-21 ರಲ್ಲಿ ಈ ವಲಯಕ್ಕೆ 7,572 ಕೋಟಿಯ ಅನುದಾನ ದೊರೆತಿತ್ತು.


50 ಲಕ್ಷದ ಮಿತಿಯಿಂದ 2 ಕೋಟಿ ವರೆಗೆ ಬಂಡವಾಳ ಮತ್ತು 2 ಕೋಟಿ ವಹಿವಾಟಿನಿಂದ 20 ಕೋಟಿಗೆ ಏರಿಸುವ ಮೂಲಕ ವಿತ್ತ ಸಚಿವೆ ಸಣ್ಣ ಕಂಪನಿಗಳ ವ್ಯಾಖ್ಯಾನವನ್ನು ಬದಲಿಸಿದರು. ಈ ನಡೆ ಎರಡು ಲಕ್ಷ ಕಂಪನಿಗಳಿಗೆ ಸಹಾಯವಾಗಲಿದೆ.


ಈ ಹಣಕಾಸು ವರ್ಷದಿಂದ ಪ್ರಾರಂಭವಾಗಿ ಮುಂದಿನ 5 ವರ್ಷದ ವರೆಗೆ ಆತ್ಮನಿರ್ಭರ ಭಾರತಕ್ಕಾಗಿ ಉತ್ಪಾದನಾ ನಾಯಕರನ್ನು ಹುಟ್ಟುಹಾಕಲು 1.97 ಲಕ್ಷ ಕೋಟಿಯ ಪಿಎಲ್‌ಐ ಯೋಜನೆಗಳಿಗೆ ಸರ್ಕಾರ ಬದ್ಧವಾಗಿರುತ್ತದೆ.

“ನಮ್ಮ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗಾಗಿ ನಮ್ಮ ಉತ್ಪಾದನಾ ವಲಯ ಸುಸ್ಥಿರ ರೀತಿಯಲ್ಲಿ ಎರಡು ಸಂಖ್ಯೆಯಲ್ಲಿ ಬೆಳೆಯಬೇಕು. ನಮ್ಮ ಉತ್ಪಾದನಾ ಕಂಪನಿಗಳು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವಾಗಬೇಕು,” ಎಂದರು ಅವರು.


ಸ್ಥಳೀಯ ಜವಳಿ ಉದ್ಯಮಕ್ಕೆ ವೇಗ ನೀಡಲು ಮತ್ತು ಜಾಗತಿಕವಾಗಿ ಜವಳಿ ಉದ್ಯಮದಲ್ಲಿ ಮುಂಚೂಣಿಯಲ್ಲಿರಲು ವಿತ್ತ ಸಚಿವೆ ಏಳು ಜವಳಿ ಉದ್ಯಾನಗಳನ್ನು ನಿರ್ಮಿಸುವುದಾಗಿ ಘೋಷಿಸಿದರು.


ಸ್ಥಳೀಯ ಎಲೆಕ್ಟ್ರಾನಿಕ್‌ ಉತ್ಪಾದನಾ ವಲಯ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ದೇಶ ಈಗ ಮೊಬೈಲ್‌ ಮತ್ತು ಚಾರ್ಜರ್‌ಗಳನ್ನು ರಫ್ತು ಮಾಡುತ್ತಿದೆ. ಇನ್ನೂ ಹೆಚ್ಚಿನ ಮೌಲ್ಯ ನೀಡಲು ಸರ್ಕಾರ ಚಾರ್ಜರ್‌ ಮತ್ತು ಮೊಬೈಲ್‌ನ ಬಿಡಿ ಭಾಗಗಳ ಮೇಲೆ ಕೆಲವು ವಿನಾಯಿತಿಗಳನ್ನು ಹಿಂತೆಗೆದುಕೊಳ್ಳುತ್ತಿದೆ.


“ಎಂಎಸ್‌ಎಂಇ ಮತ್ತು ಇತರರ ಉದ್ಯಮಗಳು ಕಬ್ಬಿಣ ಮತ್ತು ಉಕ್ಕಿನ ಬೆಳೆ ಏರಿಕೆಯಿಂದ ಭಾರಿ ಹೊಡೆತಕ್ಕೊಳಗಾಗಿವೆ. ಆದ್ದರಿಂದ, ನಾವು ಮಿಶ್ರಲೋಹವಲ್ಲದ, ಮಿಶ್ರಲೋಹ ಮತ್ತು ಸ್ಟೇನ್‌ಲೆಸ್ ಸ್ಟೀಲ್ನ ಸೆಮಿಸ್, ಫ್ಲ್ಯಾಟ್‌ಗಳು ಮತ್ತು ಲೌಗ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಏಕರೂಪವಾಗಿ ಶೇಕಡಾ 7.5 ಕ್ಕೆ ಇಳಿಸುತ್ತಿದ್ದೇವೆ. ಸ್ಟೀಲ್ ಮತ್ತು ಕಾಪರ್ ಸ್ಕ್ರ್ಯಾಪ್, ಜವಳಿ ಬಟ್ಟೆಗಳ ಮೇಲಿನ ಸುಂಕಕ್ಕೂ ವಿನಾಯಿತಿ ನೀಡುತ್ತಿದ್ದೇನೆ” ಎಂದು ಅವರು ಘೋಷಿಸಿದರು.