ಆವೃತ್ತಿಗಳು
Kannada

ಆರೋಗ್ಯದ ಹಿಂದಿದೆ ಮೇಕೆ ಹಾಲಿನ ರಹಸ್ಯ..!

ಟೀಮ್​ ವೈ.ಎಸ್​. ಕನ್ನಡ

31st Aug 2016
Add to
Shares
5
Comments
Share This
Add to
Shares
5
Comments
Share

ಹೈನುಗಾರಿಕೆಯ ಕ್ರಾಂತಿಯಿಂದಾಗಿ ಈಗ ದೇಶದ ಯಾವುದೇ ಮೂಲೆಯಲ್ಲಿ ಯಾವಾಗ ಬೇಕೆಂದರೂ ಹಸುವಿನ ಹಾಲು ಸಿಗುತ್ತೆ. ಆದ್ರೆ ಮೇಕೆ ಹಾಲು ಸಿಗಲ್ಲ. ಈ ಕೊರತೆ ನೀಗಿಸುವ ಸಲುವಾಗಿ ರಾಜ್ಯ ಸರ್ಕಾರ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಯೋಜನೆಯೇ ಮೈ ಗೋಟ್ ಯೋಜನೆ.

image


ಮೇಕೆ ಹಾಲಿನಿಂದ ಅನೇಕ ರೀತಿಯಲ್ಲಿ ಉಪಯೋಗಗಳಿವೆ. ಮೇಕೆ ಹಾಲು ತಾಯಿ ಹಾಲಿಗೆ ಸಮವಾಗಿರುತ್ತದೆ. ಮೇಕೆ ಹಾಲಿನಲ್ಲಿ ಆರೋಗ್ಯಕರ ಅಂಶಗಳಿದ್ದು, ಕಾಯಿಲೆಯಿಂದ ಬಳಲುತ್ತಿದ್ದವರಿಗೂ ಮದ್ದು ಆಗಿದೆ. ಲಕ್ವ ಹೊಡೆದವರಿಗೆ, ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರಿಗೆ, ಅಸ್ತಮಾ ರೋಗಿಗಳಿಗೆ, ಲೈಂಗಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದಲ್ಲದೇ ಹೊಟ್ಟೆ ತೊಂದರೆ ಉಳ್ಳವರಿಗೆ ಬೇಗ ಡೈಜೆಷನ್ ಆಗೋಕೆ ಮೇಕೆ ಹಾಲು ಅನುಕೂಲಕರವಾಗಲಿದೆ.

ಮೇಕೆ ಹಾಲು ಮಾರಾಟದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮೈಸೂರು ವಿದ್ಯಾರಣ್ಯಪುರಂ ನಿವಾಸಿಯಾಗಿರುವ ಶ್ರೀನಿವಾಸ ಆಚಾರ್ಯ ಮುಂದಾಗಿದ್ದಾರೆ. ಇವರು ಫಾರಂಗಳನ್ನು ನಿರ್ಮಿಸಿದ್ದಾರೆ. ಫಾರಂನಲ್ಲಿ ಹಾಲು ಕರೆಯುವುದು. ತಾಂತ್ರಿಕ ವಿಭಾಗ ಬೇರೆ ಇದ್ದು ಮಷಿನ್​ನಲ್ಲಿಯೇ ಹಾಲು ಕರೆಯುವುದು, ಪಾಶ್ಚರೀಕರಿಸಿ, ಶುದ್ಧೀಕರಿಸಿ, ಪ್ಯಾಕ್ ಕೂಡ ಮಾಡಿಕೊಡಲಾಗುವುದು. ಟ್ರಾನ್ಸ್​ಪೋರ್ಟ್ ಕೋಲ್ಡ್ ಚೈನ್ ವೆಹಿಕಲ್ ಅಲ್ಲಿ ಕಳುಹಿಸಲಾಗುತ್ತದೆ.

image


ಇನ್ನು ಫಾರಂನಲ್ಲಿ 20 ಜನ ಕೆಲಸ ಮಾಡುತ್ತಿದ್ದು, ಮಾರುಕಟ್ಟೆ ವಿಭಾಗದಲ್ಲಿ 3 ಮಂದಿ ಇದ್ದಾರೆ. ಮೂರು ತಿಂಗಳಿನಿಂದ 1,000 ಸಾವಿರ ಲೀಟರ್ ಹಾಲು ನೀಡಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ದಿನಕ್ಕೆ 200 ಲೀಟರ್ ಹಾಲು ಉತ್ಪತ್ತಿಯಾಗುತ್ತದೆ. 1 ಲೀಟರ್ ಹಾಲಿನ ಬೆಲೆ 250 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.

ಇದನ್ನು ಓದಿ: ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!

ಇನ್ನು ಮೈಸೂರು ವಿದ್ಯಾರಣ್ಯಪುರಂ ನಿವಾಸಿ ಶ್ರೀನಿವಾಸ ಆಚಾರ್ಯ, ಬಿಕಾಂ ವ್ಯಾಸಂಗ ಮಾಡಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದರು. ಕಳೆದ 5 ವರ್ಷದ ಹಿಂದೆ 50 ಎಕರೆ ಭೂಮಿ ಖರೀದಿ ಮಾಡಿದ್ದರು. 4 ವರ್ಷದಿಂದ ಮೇಕೆ ಸಾಕಾಣೆ ಮಾಡುತ್ತಿದ್ದು ಸದ್ಯ 1,000 ಮೇಕೆ ಫಾರಂನಲ್ಲಿ ಇದೆ.

image


ಮೈಸೂರಲ್ಲಿ ಸಣ್ಣ ವ್ಯವಹಾರ ಮಾಡಿಕೊಂಡಿದ್ದ ಶ್ರೀನಿವಾಸ್​ಗೆ ಕೃಷಿ ಕಡೆ ಒಲವು ಹೆಚ್ಚಿತು. ಕೃಷಿಯ ಬಗ್ಗೆ ಸಾಕಷ್ಟು ಆಸಕ್ತಿ ಇದ್ದ ಕಾರಣ ಅವರು ನಂಜನಗೂಡು ತಾಲೂಕು ಹೆಡಹಳ್ಳಿಯಲ್ಲಿ 50 ಎಕರೆ ಜಮೀನು ಖರೀದಿಸಿ ಕೃಷಿಯ ಕಡೆ ಒಲವು ತೋರಿದ್ರು. ಆರ್ಗಾನಿಕ್ ಫ್ರೂಟ್ ಗಾರ್ಡನ್ ಮಾಡಬೇಕು ಎಂದುಕೊಂಡಿದ್ದ ಶ್ರೀನಿವಾಸ್, ಮಾವು, ಸಪೋಟ, ಕಿತ್ತಳೆ ಬೆಳೆಯಬೇಕೆಂದುಕೊಂಡಿದ್ದು, ಎಷ್ಟೇ ಗೊಬ್ಬರ ಹಾಕಿದರೂ ಸಾಲಲಿಲ್ಲ. ಜಮೀನಿಗೆ ಆರಂಭದಲ್ಲಿ 150 ಲೋಡ್ ಗೊಬ್ಬರ ಹಾಕಿದರೂ ಪ್ರಯೋಜನವಾಗಲಿಲ್ಲ. ಆ ಕಾರಣದಿಂದ ಮೇಕೆ ಸಾಕಾಣೆ ಆರಂಭಿಸಿದೆ. ಆಗ ಗೊಬ್ಬರ, ಹಾಲು, ಮೇಕೆ ಸಾಕಾಣೆ ಬೆಳವಣಿಗೆಗೆ ಮುಂದಾದೆ ಅಂದ್ರು.

" ಮೇಕೆ ಹಾಲನ್ನು ಉತ್ಪತ್ತಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆರಂಭದಲ್ಲಿ ಏನೂ ಕೂಡ ಗೊತ್ತಿರಲಿಲ್ಲ. ಸ್ವಲ್ಪ ವಿಷಯ ತಿಳಿದು ಗಟ್ಟಿ ಮನಸ್ಸು ಮಾಡಿ ಆರಂಭಿಸಿದೆ. ಆರಂಭದಲ್ಲಿ 180 ಮೇಕೆ ತಂದು, ತೊಂದರೆಯಾಯ್ತು. ಒಂದೇ ತಿಂಗಳಲ್ಲಿ 150 ಮೇಕೆಗಳು ಸತ್ತು ಹೋದವು. ಆ ಮೇಲೆ ಉತ್ತರ ಭಾರತ ಸೇರಿದಂತೆ ಹಲವೆಡೆ ಪ್ರವಾಸ ಮಾಡಿದೆ. ಅಲ್ಲಿ ಕಲಿತಿದ್ದನ್ನು ಇಲ್ಲಿ ಪ್ರಯೋಗ ಮಾಡಿದೆ."
-ಶ್ರೀನಿವಾಸ ಆಚಾರ್ಯ, ಉದ್ಯಮಿ

ಭಾರತದಲ್ಲಿ ಒಟ್ಟು 28 ಜಾತಿಯ ಮೇಕೆಗಳಿವೆ. ಪಂಜಾಬ್, ರಾಜಸ್ತಾನ್, ಗುಜರಾತ್ ಹೀಗೆ ಬೇರೆ ಬೇರೆ ಕಡೆಯ ತಳಿಗಳಿವೆ. ಪ್ರತಿ ರಾಜ್ಯದಿಂದ 8 ರಿಂದ 10 ಮೇಕೆಗಳನ್ನು ಮಾತ್ರ ತರುವ ಕೆಲಸ ಮಾಡಿದೆ. ತನ್ನಿಷ್ಟಕ್ಕೆ ತಾನು ಸ್ವ-ಇಚ್ಛೆಯಿಂದ ಬೆಳೆಯುವ ಪ್ರಾಣಿ ಮೇಕೆ ಸಾಕಾಣೆ. ಊರೂರು ಸುತ್ತಿ ಮೇಯಿಸುವುದು ಸಂಪ್ರದಾಯವಾಗಿದ್ದು ಅದಕ್ಕೆ ಮೇಕೆಗಳು ಹೊಂದಿಕೊಂಡು ಬಿಟ್ಟಿದೆ.

image


ಕುರಿಗೆ ಶೇಕಡಾ 17ರಷ್ಟು ಪೌಷ್ಠಿಕಾಂಶ ಸಿಗಬೇಕು. ಹುಲ್ಲಲ್ಲಿ ಕೇವಲ ಶೇಕಡಾ 1ರಷ್ಟು ಮಾತ್ರವಿದೆ. ಕುರಿ ಸಾಕಾಣೆ ಕೂಡ ಒಂದು ಕಲೆಯಾಗಿದ್ದು, ಅದರ ಯುರೀನ್, ಪಿಕ್ಕೆಯಿಂದ ತೊಂದರೆ ಆಗದ ರೀತಿ ನೋಡಕೊಳ್ಳಬೇಕು. ಮೇಕೆಗಳಿಗೆ ದಿನಕ್ಕೆ ನಾಲ್ಕು ಬಾರಿ ಕೈ ತಿಂಡಿ, ಹಸಿ ಮೇವು, ಒಣ ಮೇವು ನೀಡಬೇಕು. ಅಲ್ಲದೇ ಮೆಕ್ಕೇಜೋಳ, ಕಡ್ಲೇಕಾಯಿ, ಹುಂಡಿ ಹುರುಳಿ, ತೊಗರಿ, ಹಸಿರು ಕಾಳು, ರವೆ ಬೂಸ ಸಾಲ್ಟ್, ಮಿನರಲ್ ಮಿಕ್ಸರ್ ನೀಡಿದರೆ ಸಮೃದ್ಧಿಯಾಗಿ ಬೆಳೆಯುತ್ತದೆ.

ಒಟ್ಟಿನಲ್ಲಿ ಮೇಕೆ ಹಾಲಿನಿಂದ ಇಷ್ಟೆಲ್ಲಾ ಉಪಯೋಗಗಳಿದ್ದು ಜನರಿಗೆ ಆರೋಗ್ಯಕ್ಕೆ ಅನುಕೂಲಕರವಾಗಲಿದೆ. ಈಗಾಗಲೇ ಮೇಕೆ ಹಾಲು ಮಾರುಕಟ್ಟೆಗೆ ಬಂದಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸಹಕಾರಿಯಾಗುತ್ತೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕು.

ಇದನ್ನು ಓದಿ:

1. ಸಂಬಂಧಗಳಿಗೇಕೆ ಕಟ್ಟಳೆಗಳ ಭಯ- ಗಂಟೆಗಳ ಲೆಕ್ಕದಲ್ಲಿ ಅವಿವಾಹಿತರಿಗೆ ರೂಮ್​ ಲಭ್ಯ..!

2. ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ

3. ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್

Add to
Shares
5
Comments
Share This
Add to
Shares
5
Comments
Share
Report an issue
Authors

Related Tags