ಆವೃತ್ತಿಗಳು
Kannada

ಸ್ವಚ್ಛ,ಸುಂದರ ಬೆಂಗಳೂರಿಗಾಗಿ 'ಜರ್ಮನ್​ ಡಸ್ಟ್​ಬಿನ್​'..!

ಟೀಮ್​ ವೈ.ಎಸ್​. ಕನ್ನಡ

YourStory Kannada
1st Jun 2016
Add to
Shares
3
Comments
Share This
Add to
Shares
3
Comments
Share

ಬೆಂಗಳೂರು ಅಂದರೆ ಮೊದಲು ನೆನಪಿಗೆ ಬರೋದು ಕಸ. ಎಲ್ಲಿ ಹೋದ್ರೂ ರಾಶಿ ರಾಶಿ ಕಸ, ಜೊತೆಗೆ ಕೆಟ್ಟ ವಾಸನೆ. ಈ ಕಸದ ವಿಂಗಡನೆ ಅದೆಷ್ಟು ಕಷ್ಟ ಅಂದ್ರೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೂ ಹೇಗಪ್ಪಾ ಇದನ್ನು ಸಂಭಾಳಿಸುವುದು ಅನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್​ ಯೋಜನೆ ಸಿಲಿಕಾನ್​ ಸಿಟಿಯಲ್ಲಿ ಅಳವಡಿಸಿಕೊಂಡರೆ ಬೆಂಗಳೂರು ಶೀಘ್ರದಲ್ಲೇ ಕ್ಲೀನ್​ ಸಿಟಿ ಆದ್ರೂ ಆಗಬಹುದು. ಆದ್ರೆ ಇದು ಅಷ್ಟು ಸುಲಭದ ಮಾತಲ್ಲ ಅಂತ ಎಲ್ಲರಿಗೂ ಗೊತ್ತು.

image


ಸಿಲಿಕಾನ್ ಸಿಟಿ ಬೆಂಗಳೂರು ಕಸದ ವಿಚಾರದಲ್ಲಿ ಕುಖ್ಯಾತಿ ಪಡೆದು ರಾಷ್ಟ್ರಾದಾದ್ಯಂತ ಸುದ್ದಿ ಮಾಡಿತ್ತು. ಆದರೆ ಅದನ್ನು ನಮ್ಮ ರಾಜಧಾನಿಯನ್ನು ಆಳುವವರು ಆದಷ್ಟು ಬೇಗ ತೊಡೆದು ಹಾಕಬೇಕು ಎಂದು ತೀರ್ಮಾನಿಸಿದಂತಿದೆ . ಏಕೆಂದರೆ ರಾಜಧಾನಿಯಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಮೊದಲನೆಯದು ಒಣ ಕಸ ಮತ್ತು ಹಸಿ ಕಸಕ್ಕೆ ಪ್ರತ್ಯೇಕ ಡಸ್ಟ್ ಬಿನ್ ಇಟ್ಟು ಜನರಿಗೆ ಅದರಲ್ಲಿ ಕಸ ಹಾಕುವಂತೆ ಮಾಡಿದ್ದಾರೆ.

image


ವೈಜ್ಞಾನಿಕ ಕಸ ವಿಲೇವಾರಿಗೆ ಒತ್ತು ನೀಡುವ ಸಲುವಾಗಿ ಪಾಲಿಕೆ ಈಗಾಗಲೇ ಎಲ್ಲೆಡೆ ಒಣ ಹಾಗೂ ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿದೆ. ಈ ಪದ್ಧತಿಯನ್ನು ಜನಪ್ರಿಯಗೊಳಿಸಲು ಮನೆಗಳಿಂದ ಸಂಗ್ರಹಿಸುತ್ತಿರುವ ಪದ್ಧತಿಗೆ ಜನತೆ ಕ್ರಮೇಣ ಒಗ್ಗಿಕೊಳ್ಳುತ್ತಿದ್ದಾರೆ. ಇದನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಜನ ಸಂಚಾರದ ದಟ್ಟಣೆ ಪ್ರದೇಶಗಳಲ್ಲೂ ಪ್ರತ್ಯೇಕ ಬಿನ್​ಗಳನ್ನಿಟ್ಟು ಕಸ ಸಂಗ್ರಹಿಸಲು ಪ್ರಾಯೋಗಿಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಇದನ್ನು ಓದಿ: ಹಿರಿಯ ಐಎಎಸ್​​ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ

ಜರ್ಮನ್ ದೇಶದ ನಾನಾ ನಗರಗಳಲ್ಲಿ ಇಂತಹ ಡಬ್ಬಿಗಳನ್ನು ಕಸ ಸಂಗ್ರಹಿಸಲು ಉಪಯೋಗಿಸಲಾಗುತ್ತಿದೆ. ಇವುಗಳನ್ನು ಮೊದಲ ಬಾರಿಗೆ ಚೆನ್ನೈ ಮಹಾನಗರ ಪಾಲಿಕೆ ಪರಿಚಯಿಸಿ ಯಶಸ್ವಿಯಾಗಿದೆ. ಈಗ ಬೆಂಗಳೂರಿನಲ್ಲೂ ಪರಿಚಯಿಸುತ್ತಿರುವ ಕಾರಣ ‘ಜರ್ಮನ್ ಡಸ್ಟ್​ಬಿನ್​​’ ಹೆಸರಿನಿಂದ ಗುರುತಿಸಲು ಚಿಂತನೆ ನಡೆದಿದೆ. ಕಾರ್ಪೊರೇಟ್ ಕಂಪನಿಯೊಂದು ಇಂತಹ ಐಡಿಯಾವನ್ನು ಕೃತಿರೂಪಕ್ಕೆ ಇಳಿಸುವ ಸಾಹಸಕ್ಕೆ ಕೈಹಾಕಿದೆ.

ಶೀಘ್ರ ಜನ ಬಳಕೆಗೆ ಮುಕ್ತ

ನಗರದ ಹೆಚ್ಚು ಜನಸಂದಣಿ ಉಳ್ಳ ಪ್ರಮುಖ ಮಾರ್ಗಗಳ ರಸ್ತೆ ಬದಿಗಳಲ್ಲಿ ಇಂತಹ ಹೊಸ ವಿನ್ಯಾಸದ ಕಸದ ಡಬ್ಬಿಗಳನ್ನು ಸ್ಥಾಪಿಸಲಾಗುತ್ತದೆ. ಪೈಲಟ್ ಯೋಜನೆ ಅಡಿ 12 ಸ್ಥಳಗಳನ್ನು ಆಯ್ಕೆ ಮಾಡಿ ಅಲ್ಲೆಲ್ಲಾ ಅಳವಡಿಸುವ ಕೆಲಸ ಅಂತಿಮ ಹಂತ ತಲುಪಿದೆ. ಮಹಾತ್ಮಗಾಂಧಿ ರಸ್ತೆಯ ಸುತ್ತಮುತ್ತಲಿನ ರಸ್ತೆಗಳಲ್ಲೇ ‘ಜರ್ಮನ್ ಡಸ್ಟ್​ಬಿನ್’ಗಳನ್ನು ಸ್ಥಾಪಿಸಿದ್ದು, ಜನರು ಇಷ್ಟಪಟ್ಟಲ್ಲಿ ಇನ್ನಷ್ಟು ‘ಜರ್ಮನ್ ಡಸ್ಟ್​ಬಿನ್’ಗಳನ್ನು ಅಳವಡಿಸಲಾಗುತ್ತದೆ. ಹೊಸ ಮಾದರಿಯತ್ತ ಜನರನ್ನು ಸೆಳೆಯಲು ಡಬ್ಬಿಗಳ ಮೇಲೆ ‘ಸ್ವಚ್ಛ ಬೆಂಗಳೂರು ಸುಂದರ ಬೆಂಗಳೂರು’ ಘೋಷ ವಾಕ್ಯವನ್ನು ಕನ್ನಡ ಹಾಗೂ ಇಂಗ್ಲೀಷ್​ನಲ್ಲಿ ಬರೆಯಲಾಗಿದೆ. ಜೂನ್ ಆರಂಭದಲ್ಲಿ ಜರ್ಮನ್​ ಡಸ್ಟ್​ಬಿನ್​ ಬೆಂಗಳೂರನ್ನು ಸುಂದರಗೊಳಿಸುವ ಕಾರ್ಯ ಆರಂಭಿಸಲಿದೆ.

image


ಏನಿದರ ವಿಶೇಷತೆ?

ಹೊಸ ಮಾದರಿಯ ‘ಜರ್ಮನ್ ಡಸ್ಟ್​ಬಿನ್’ಗಳು ಹಾಲಿ ಉಪಯೋಗಿಸುತ್ತಿರುವ ಕಸದ ಡಬ್ಬಿಗಳಿಗಿಂತ ಗಾತ್ರದಲ್ಲಿ ದೊಡ್ಡದಿವೆ. ಹೆಚ್ಚು ಪ್ರಮಾಣದ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಒಂದೇ ದಿನದಲ್ಲಿ ತುಂಬುವ ಭಯ ಇಲ್ಲ. ಕಸ ಹಾಕಲು ಡಬ್ಬಿಯ ಮೇಲ್ಭಾಗದಲ್ಲಿ ಮುಚ್ಚಳವನ್ನು ಅಳವಡಿಸಲಾಗಿದೆ. ದಾರಿಹೋಕರಿಗೆ ಸುಲಭವಾಗಿ ಗುರುತಿಸಲು ಫುಟ್​ಪಾತ್​ ಬದಿಯ ಸ್ಥಳ ಆಯ್ಕೆ ಮಾಡಲಾಗಿದೆ. ಒಣ ಹಾಗೂ ಹಸಿ ತ್ಯಾಜ್ಯವನ್ನು ಹಾಕಲು ಪ್ರತ್ಯೇಕ ಬಿನ್ ಇರುವುದರಿಂದ ತ್ಯಾಜ್ಯ ಮಿಶ್ರಣವಾಗುವುದು ತಪ್ಪುತ್ತದೆ.

ಡಸ್ಟ್​ಬಿನ್​ಗಳ ಮೇಲ್ಭಾಗದಲ್ಲಿ ಹಿಡಿಕೆ ಹೊಂದಿದ್ದು, ಇವುಗಳನ್ನು ಎತ್ತಿ ಟ್ರಾಲಿಯೊಳಗೆ ಕಸವನ್ನು ತುಂಬಿಕೊಂಡು ಹೋಗಬಹುದು. ಇದಕ್ಕಾಗಿಯೇ ಸಿದ್ಧಪಡಿಸಿರುವ ಟ್ರಾಲಿ ಸೌಲಭ್ಯವುಳ್ಳ ಮಿನಿ ಲಾರಿಯನ್ನು ಖಾಸಗಿ ವಾಹನ ತಯಾರಕ ಕಂಪನಿ ರೂಪಿಸಿದೆ. ಈ ಮಿನಿ ಲಾರಿಯು ನಿತ್ಯ ನಿಗದಿತ ಸಮಯದಲ್ಲಿ ಎಲ್ಲಾ ಡಸ್ಟ್​ಬಿನ್​ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ತುಂಬಿಕೊಂಡು ಡಂಪಿಂಗ್ ಯಾರ್ಡ್​ನತ್ತ ಪ್ರಯಾಣ ಬೆಳಸಲಿದೆ. ವಾಹನ ಸಿಬ್ಬಂದಿಯನ್ನು ಖಾಸಗಿ ಕಂಪನಿಗಳೇ ನಿರ್ವಹಿಸಲಿವೆ. ಈ ಮೂಲಕ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ಕಾರ್ಯದ ಅಡಿ ತ್ಯಾಜ್ಯ ಸಂಗ್ರಹಿಸಲು ವಿನೂತನ ಉಪಕ್ರಮಕ್ಕೆ ಚಾಲನೆ ಸಿಗುತ್ತದೆ. ಒಟ್ಟಿನಲ್ಲಿ ಕಸ ವಿಲೇವಾರಿಗೆ ಒಂದೊಳ್ಳೆ ಮಾರ್ಗವನ್ನು ಬಿಬಿಎಂಪಿ ಕೈಗೊಂಡಿದೆ.

image


ಟೆನ್ಷನ್​ ತಪ್ಪುತ್ತೆ.. ವಾಸನೆ ದೂರ ಹೋಗುತ್ತೆ..!

ಬೆಂಗಳೂರಿನ ಜನಕ್ಕೆ ಕಸ ಎಸೆಯೋದೇ ದೊಡ್ಡ ತಲೆ ನೋವಾಗಿತ್ತು. ರಾತ್ರಿಯಾದರೆ ಯಾವುದೋ ಅಂಗಡಿ ಮುಂದೆ ಅಥವಾ ಇನ್ಯಾರದೋ ಗೇಟ್​ ಬಳಿ ಕಸದ ಚೀಲ ಇಟ್ಟು ಎಸ್ಕೇಪ್​ ಆಗ್ತಾ ಇದ್ರು. ಆ ಕಸದಿಂದ ಹೊರ ಬರುತ್ತಿದ್ದ ದುರ್ನಾತ ಸಹಿಸಿಕೊಳ್ಳೋದಿಕ್ಕೆ ಅಸಾಧ್ಯವಾಗ್ತಾ ಇತ್ತು. ಆದ್ರೆ ಈಗ ಜರ್ಮನ್​ ಡಸ್ಟ್​ಬಿನ್​ ಇವೆಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಉತ್ತಮ ವಾತಾವರಣ ನಿರ್ಮಿಸಲು ಸಹಾರ ಮಾಡಬಹುದು. ಕಸದ ಸಮಸ್ಯೆಯಿಂದ ನೊಂದಿದ್ದ ಬೆಂಗಳೂರಿನ ಜನಕ್ಕೆ ಜರ್ಮನ್​ ಡಸ್ಟ್​ಬಿನ್​ ಮುಕ್ತಿ ನೀಡಲಿ ಅನ್ನೋದು ಎಲ್ಲರ ಬಯಕೆ.

ಇದನ್ನು ಓದಿ

1. ಹೈ-ಫೈ ಸ್ಪಾದಲ್ಲಿ ಮೆರುಗಲಿದೆ ಕೈ ಕಾಲುಗಳು

2. ಕಟ್ಟಡ ಕಟ್ಟಲು ಇಟ್ಟಿಗೆ ನೀಡ್ತಿದ್ದ ಕಾರ್ಮಿಕ ಈಗ 20 ಕಂಪನಿಗಳ ಮಾಲೀಕ

3. ಹಲ್ಲು ನೋವೇ...? ಡೋಂಟ್​ವರಿ.. ಮನೆಗೆ ವೈದ್ಯರನ್ನು ಕರೆಸಿಕೊಳ್ಳಿ..!


Add to
Shares
3
Comments
Share This
Add to
Shares
3
Comments
Share
Report an issue
Authors

Related Tags