ಆವೃತ್ತಿಗಳು
Kannada

ಆರೋಗ್ಯಕರ ಜೀವನಶೈಲಿ ಗೆ ಸಹಾಯ ಮಾಡುತ್ತಿರುವ ಬೆಂಗಳೂರು ಮೂಲದ ನ್ಯೂಟ್ರಿಷಿಯನ್ ಕಂಪನಿ

Team YS Kannada
24th Jun 2015
2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ನೀವು ಸಣ್ಣಗಾಗಬೇಕೇ.. 30 ದಿನಗಳಲ್ಲಿ ಫಿಟ್​​ ಅಂಡ್​ ಫೈನ್​​ ಆಗ್ಬೇಕಾ.. ಅದ್ಯಾವುದೋ ಬೆಲ್ಟ್​ ಉಪಯೋಗಿಸಿಕೊಂಡು ದಪ್ಪಗಿದ್ದವರು ತೆಳ್ಳಗೆ ಆಗಿದ್ದಾರೆ.. ಇಂತಹ ಜಾಹೀರಾತುಗಳನ್ನು ಟಿವಿಯಲ್ಲಿ ನೋಡಿ ಬೇಜಾರಗಿದೆ.. ಆದ್ರೆ ಆರೋಗ್ಯಕರ ಆಹಾರಕ್ರಮದಿಂದ ಸಣ್ಣಗಾದವ್ರ ಬಗ್ಗೆ ಕೇಳಿದ್ದು ಅಪರೂಪ. ಆದ್ರೆ ಸಿಲಿಕಾನ್​ ಸಿಟಿಯಲ್ಲೊಬ್ಬ ಸರಿಯಾದ ಜೀವನ ಕ್ರಮದಿಂದ 30 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ಸ್ಲಿಮ್​ ಆಗಿ ಫಿಟ್​​ನೆಸ್​ ಪಡೆದಿದ್ದಾರೆ. ಅಷ್ಟೇ ಅಲ್ಲ ಹಲವರಿಗೆ ಸಣ್ಣಗಾಗುವ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಅವ್ರ ಹೆಸರು ಕುಶಾಲ್​​.

image


ನ್ಯೂಟ್ರಿಷಿಯನ್ 2014 ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿತು. ಈ ಒಂದು ಕಂಪನಿ ಪೌಷ್ಟಿಕತಜ್ಞರು ಅನೊಮೋದನೆ ಮಾಡಿರುವ ತಾಜಾ ಆಹಾರವನ್ನು ತಯಾರಿಸಿ ನಿಮಗೆ ತಲುಪುವಂತೆ ಮಾಡುತ್ತದೆ ಅದರಿಂದ ನೀವು ಚೆಂದ ಕಾಣಲು ಮತ್ತು ನಿಮ್ಮಲ್ಲಿ ಉತ್ತಮ ಭಾವನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ನಾನು ತೂಕ ಇಳಿಸಿಕೊಳ್ಳಲು ಬಹಳಷ್ಟು ಮಂದಿಗೆ ಮಾರ್ಗದರ್ಶನ ನೀಡಲು ಆರಂಭಿಸಿದೆ. ಅವಾಗ ನನಗೆ ತಿಳಿದಿದ್ದು ಏನಂದರೆ ಅನೇಕ ಜನರು ತೂಕ ಇಳಿಸಿಕೊಳ್ಳಲು ಒಂದು ಬುದ್ಧಿವಂತ ಮತ್ತು ಪ್ರಾಯೋಗಿಕ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಪಾಲಿಸುವಲ್ಲಿ ಕಷ್ಟ ಪಡುತ್ತಾರೆ. ಎಂದು ಕುಶಾಲ್ ವಿವರಿಸುತ್ತಾರೆ. ನಾವು ತಯಾರಿಸುವ ಆಹಾರಕ್ಕೆ ನಿಯಮಿತ ಪದಾರ್ಥಗಳನ್ನು ಉಪಯೋಗಿಸುತ್ತೇವೆ, ಎಷ್ಟು ಪ್ರಮಾಣದಲ್ಲಿ ಆಹಾರವನ್ನು ಬೇಯಿಸಬೇಕು, ಎಷ್ಟು ಪ್ರಮಾಣದ ಆಹಾರವನ್ನು ತಯಾರಿಸಿ ಮತ್ತು ಅದನ್ನು ಯಾವ ಸಮಯದಲ್ಲಿ ನಿಮಗೆ ತಲುಪಿಸಬೇಕು ಎಂಬುದರ ಬಗ್ಗೆ ನಾವು ಬಹಳಷ್ಟು ಗಮನ ಹರಿಸುತ್ತೇವೆ ಎಂದು ಕುಶಾಲ್ ಮತ್ತೆ ವಿವರಣೆ ಕೊಡುತ್ತಾರೆ.

ಎಲ್ಲಾ ಕಚ್ಚಾ ಕಚ್ಚಾ ವಸ್ತುಗಳು ತಾಜಾ ಮತ್ತು ಸಾವಯವ ಅಂಗಡಿಗಳಿಂದ ಸಂಗ್ರಹಿಸಲಾಗಿದೆ. ನಾವು ಪ್ಯಾಕೇಜ್ ಉತ್ಪನ್ನಗಳನ್ನು ಉಪಯೋಗಿಸುವುದಿಲ್ಲ. ಪ್ರತಿಯೊಂದು ಸಾಸ್ ಮತ್ತು ಡಿಪ್ ನ್ನು ಯಾವುದೇ ರೀತಿಯ ಮೈದಾ ಬಳಸದೆ ಮನೆಯಲ್ಲೇ ತಯಾರು ಮಾಡಲಾಗಿದೆ. ಕಾಲಾನಂತರದಲ್ಲಿ ನಮ್ಮ ಮೆನು, ಆರೋಗ್ಯಕರ ಹೈ ಫೈಬರ್, ಹೈ ಪ್ರೋಟೀನ್ ಮತ್ತು ಶೂನ್ಯ ಟ್ರಾನ್ಸ್ ಫ್ಯಾಟ್ ಮೆನು ಆಗಿ ಹೊರಹೊಮ್ಮಿದೆ ಎಂದು ಕುಶಾಲ್ ತಮ್ಮ ಕಂಪನಿಯ ಆಹಾರದ ಬಗ್ಗೆ ವಿವರಣೆ ನೀಡುತ್ತಾರೆ.

image


ಲೀಲಾ ಹೋಟೆಲ್ ಮತ್ತು ಇತರ ಸಂಸ್ಥೆಗಳಿಂದ ಬಂದ ಶೆಫ್ಸ್ ತಂಡ ನ್ಯೂಟ್ರೀಶನ್-ಲಾಕಿಂಗ್ ಮತ್ತು ಸುವ್ಯಸ್ಥಿತ ಅಡುಗೆ ವಿಧಾನವನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದ್ದಾರೆ ,ಇದರಿಂದ ಆಹಾರವನ್ನು ಸರಿಯಾದ ಸಮಯದಲ್ಲಿ ಬೇಯಿಸಿ ಮತ್ತು ಸರಿಯಾದ ಸಮಯದಲ್ಲಿ ತಲುಪಿಸುತ್ತೇವೆ ಎಂಬುದನ್ನು ಖಚಿತಪಡಿಸಲು.

ವಾರದ ಮೆನು ಏನಿರಬೇಕು ಎಂದು ವಾರದ ಆರಂಭದಲ್ಲೇ ನಿರ್ಧಾರ ಮಾಡಿರುತ್ತೇವೆ. ಪ್ರತಿ ಊಟದ ಒಂದು ಭಾಗ ಆಹಾರ ( ಸ್ಯಾಲಡ್ಸ್, ಸ್ಯಾಂಡ್ವಿಚಸ್ ಮುಂತಾದವು), ಒಂದು ಭಾಗ ಪಾನೀಯ ( ಶೇಕ್ಸ್, ಸ್ಮೂತೀಸ್ ಮುಂತಾದವು) ಗಳನ್ನು ಒಳಗೊಂಡಿರುತ್ತದೆ. ಅವರ ಜನಪ್ರಿಯ ಆಹಾರ ಪದಾರ್ಥಗಳು ಪ್ರೋಟೀನ್ wrap, ಕೋಲೊರಿಡೋ ಸಲಾಡ್ ಅಂಡ್ ಫಿಯರೀ ಕ್ಲಬ್ ಸ್ಯಾಂಡ್‌ವಿಚ್ ಮುಂತಾದವು ಹಾಗೆಯೇ ಜನಪ್ರಿಯ ಪಾನೀಯಗಳು ಗ್ರೀನ್ ‘ಟೀ’ವಿಸ್ಟೆರ್, ಪಾಪಿ ಕ್ಲಾರೋಫಿಲ್ ಸ್ಮೂದ್ ಅಂಡ್ ಪೌಡರ್‌ಪುಫ್ಫ್ ಸ್ಮೂದ್ ಮುಂತಾದವು. ಅವರ ಆಹಾರ ಜಾದೂ ಮಾತ್ರೆಯಲ್ಲ ಆದರೆ ಖಂಡಿತವಾಗಿ ನೀವು ಒಂದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಆಹಾರ ಆರಂಭದಿಂದಲೂ ಆರೋಗ್ಯಕರ ಮತ್ತು ರುಚಿಕರ ಇದು ಗ್ರಾಹಕರನ್ನು ಆಕರ್ಷಣೆ ಮಾಡುತ್ತದೆ ಎಂದು ಕುಶಾಲ್ ಹೇಳುತ್ತಾರೆ.

ನ್ಯೂಟ್ರಿಷಿಯನ್ ನ್ನು ಒಂದು ಅಡುಗೆ ಕಂಪನಿ ಎಂದು ಕರೆಯುವಂತೆ ಮಾಡಿಲ್ಲ ಕುಶಾಲ್ ತಮ್ಮ ಗ್ರಾಹಕರ ಜೊತೆ ಮಾತಾಡುವಾಗ ತುಂಬಾ ಎಚ್ಚರ ವಹಿಸುತ್ತಾರೆ ಅದರ ಉದ್ದೇಶ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಸಹಾಯ ಮತ್ತು ಅನುಕೂಲವಾಗುವಂತೆ ಮಾಡುವುದು. ವ್ಯಾಪಾರದ ಪ್ರಕಾರ ನಮಗೆ ನಮ್ಮ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯಲ್ಲಿ ಪರಿಣಿತಿ ಇದೆ ನಮ್ಮ ಉದ್ಯಮವನ್ನು ಬೆಳೆಸಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಕುಶಾಲ್ ಹೇಳುತ್ತಾರೆ.

image


ಆಹಾರವನ್ನು ಆರೋಗ್ಯಕರ ಮತ್ತು ರುಚಿಕರ ವಾಗಿರುವಂತೆ ನೋಡಿಕೊಳ್ಳುವು ಒಂದು ದೊಡ್ಡ ಸವಾಲು, ನಾವು ನಮ್ಮ ಗ್ರಾಹಕರಿಂದ ನಮ್ಮ ಪ್ರತಿ ಊಟದ ಬಗ್ಗೆ ಪ್ರತಿಕ್ರಿಯೆಯನ್ನು ಸಂಗ್ರಹ ಮಾಡುತ್ತೇವೆ ಇದು ನಮಗೆ ಬಹಳಷ್ಟು ಸಹಾಯ ಮಾಡಿದೆ. ನಾವು ಆಹಾರವನ್ನು ಗ್ರಾಹಕರಿಗೆ ಸ್ಪೋರ್ಟ್ಸ್ ಬೈಸಿಕಲ್ಸ್ ಗಳನ್ನು ಉಪಯೋಗಿಸಿ ತಲುಪಿಸುತ್ತಿದ್ದೇವೆ ಇದರಿಂದ ಪರಿಸರವನ್ನು ಮಾಲಿನ್ಯ ಕೂಡ ಆಗುವುದಿಲ್ಲ. ಇದು ಒಂದು ಆರೋಗ್ಯಕರ ಜೀವನಶೈಲಿಗೆ ಸಹಾಯ ಮಾಡುತ್ತದೆ. ಇವಾಗ ಇದು ಕೆಲಸ ಮಾಡುತ್ತಿದೆ ಮುಂದೆ ಕಂಪನಿ ಬೆಳೆದಂತೆ ವಿತರಣೆಯಲ್ಲಿ ಹೊಸ ಕ್ರಮವನ್ನು ಹುಡುಕಬೇಕು ಎಂದು ಕುಶಾಲ್ ತಿಳಿಸುತ್ತಾರೆ.

ಟಿಫನ್ ವ್ಯವಸ್ಥೆಗಳು ಸಾಕಷ್ಟು ಇವೆ ಉದಾಹರಣೆಗೆ ಇಟ್ಸ್ ಮೈ ಮೀಲ್, ಐ ಟಿಫನ್ ಮುಂತಾದವು. ಅವು ಪರ್ಯಾಯ ಆರೋಗ್ಯಶೈಲಿ ಕ್ರಮಗಳನ್ನು ನೀಡುತ್ತವೆ. ನನ್ನ ಪ್ರಕಾರ ಆರೋಗ್ಯಕರ ಆಹಾರ ಬ್ರ್ಯಾಂಡ್ ರಚಿಸಿ ಜನಗಳಿಗೆ ಅದು ಮಾರ್ಗದರ್ಶನ ನೀಡುವಂತೆ ಮಾಡುವ ಸ್ಥಾನ ಇನ್ನೂ ಹಾಗೆಯೇ ಖಾಲಿ ಉಳಿದಿದೆ ಎಂದು ಕುಶಾಲ್ ಅಭಿಪ್ರಾಯ ಪಡುತ್ತಾರೆ.

2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags