ಆವೃತ್ತಿಗಳು
Kannada

ಮಗುವನ್ನು ಬೆಳೆಸುವುದಕ್ಕೂ, ಉದ್ಯಮವನ್ನು ಬೆಳೆಸುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ- ಮಾವಿನ್ ಸಂಸ್ಥೆಯ ಸಂಸ್ಥಾಪಕಿಯ ಮಾತು

ಟೀಮ್​​ ವೈ.ಎಸ್​​.

13th Oct 2015
Add to
Shares
0
Comments
Share This
Add to
Shares
0
Comments
Share

ಅಂಬೆಗಾಲಿಡುವ ಮಗುವಿನ ತಾಯಿಯಾಗಿ ಮತ್ತು ಕೇವಲ 1 ವರ್ಷದ ಹಿಂದಷ್ಟೇ ಆರಂಭಿಸಿದ ಉದ್ಯಮದ ಸಂಸ್ಥಾಪಕಿಯಾಗಿ ರೈನಾ ಕುಮಾರಾ, ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಹೇಳುತ್ತಾರೆ.

ಪ್ರತಿ 6 ತಿಂಗಳಿಗೊಮ್ಮೆ ಹಲ್ಲುಹುಟ್ಟುವ ನೋವನ್ನು ಮಕ್ಕಳು ಅನುಭವಿಸುತ್ತಾರೆ. ಇದರಿಂದ ಹೆತ್ತವರಿಗೂ ನೋವಾಗುತ್ತದೆ. ಹಾಗೆಯೇ ಉದ್ಯಮದಲ್ಲಿ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿಯೇ ಮತ್ತೊಂದು ಹೊಸ ಬೆಳವಣಿಗೆ ನಮಗಾಗಿ ಕಾದಿರುತ್ತದೆ. ಹೀಗಾಗಿ ಯಾವುದೇ ಉದ್ಯಮವನ್ನು ಆರಂಭಿಸಬೇಕಾದರೂ, ಚಿಕ್ಕಮಗು ನಿಮ್ಮ ಮನೆಯಲ್ಲಿದ್ದರೂ ನಿಮಗೆ ವಿಶ್ರಾಂತಿಯೇ ದೊರೆಯುವುದಿಲ್ಲ ಎನ್ನುತ್ತಾರೆ ರೈನಾ ಕುಮಾರ.

image


ಸಿಲಿಕಾನ್ ವ್ಯಾಲಿ ಮೂಲದ ಉದಯೋನ್ಮುಖ ಉದ್ಯಮಗಳ ಮಾರುಕಟ್ಟೆಯ ಮಾಹಿತಿ ವೆಚ್ಚವನ್ನು ಕಡಿಮೆ ಮಾಡುವ ಮಾವಿನ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ ರೈನಾ. ಪ್ರಸ್ತುತ ರೈನಾ ಯುಕ್ಸ್/ಯುಐ ಬ್ರ್ಯಾಂಡ್ ಮತ್ತು ಮಾರ್ಕೆಟಿಂಗ್ ನೀತಿಯನ್ನು ಮಾವಿನ್ ಸಂಸ್ಥೆಗಾಗಿ ರೂಪಿಸುತ್ತಿದ್ದಾರೆ ಮಾವಿನ್.

ಆರಂಭದ ವರ್ಷಗಳು

ಕ್ಯಾಲಿಫೋರ್ನಿಯಾದಲ್ಲೇ ಹುಟ್ಟಿ ಬೆಳೆದ ರೈನಾ ಸದಾ ದೊಡ್ಡ ದೊಡ್ಡ ನಗರಗಳನ್ನು ಇಷ್ಟಪಡುತ್ತಾರೆ. ಲುಧಿಯಾನದಲ್ಲಿ ಅಜ್ಜಿ, ತಾತನ ಜೊತೆ ಇದ್ದ ರೈನಾ, ಪ್ರತಿ ಬೇಸಿಗೆಯಲ್ಲೂ ಭಾರತದಲ್ಲಿದ್ದ ಕುಟುಂಬಸ್ಥರನ್ನು ಭೇಟಿಯಾಗುತ್ತಿದ್ದರು. ಹೀಗಾಗಿ ಭಾರತದೊಂದಿಗೆ ಅವರ ಸಂಪರ್ಕ ಕಡಿತಗೊಳ್ಳಲಿಲ್ಲ.

ಗಮನಿಸುವುದು ಹೇಗೆ ಎಂದು ತಿಳಿದಿದ್ದರೆ, ಎಲ್ಲಾ ಕಡೆ ಅಂದರೆ ದೊಡ್ಡ, ಬಿಡುವಿರದ, ಗಲಭೆಯ ನಗರಗಳಿಂದಲೂ ಪ್ರೇರಣೆ ದೊರೆಯುತ್ತದೆ ಎನ್ನುತ್ತಾರೆ ರೈನಾ. ಸೃಜನಶೀಲತೆ ಮತ್ತು ವೈವಿಧ್ಯತೆಗಳಿಂದ ಕೂಡಿದ ಬದುಕು, ಪ್ರಪಂಚದ ಎಲ್ಲಾ ಮೂಲೆಯ ಜನಗಳೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಇಂದು ಅವರನ್ನು ಈ ಮಟ್ಟಕ್ಕೇರಿಸಿದೆ ಎನ್ನುತ್ತಾರೆ ರೈನಾ.

ವೀಡನ್+ಕೆನಡಿಯ ಡಿಜಿಟಲ್ ಕಾರ್ಯತಂತ್ರದ ತಂಡದ ನಿರ್ವಹಣೆ, ಬಿಬಿಜಿ(ಬ್ರಾಡ್‌ಕಾಸ್ಟಿಂಗ್ ಬೋರ್ಡ್ ಆಫ್ ಗವರ್ನರ್ಸ್)ಯ ಸಂಶೋಧನಾ ವಿಭಾಗದ ಸಹ ನಿರ್ದೇಶಕಿಯಾಗಿ, ಒಬಾಮಾ ಆಡಳಿತಾವಧಿಯಲ್ಲಿ ಒಕ್ಕೂಟ ಸಂಸ್ಥೆಯ ನಿರ್ವಹಣೆ, ಮಾಧ್ಯಮಗಳ ಭವಿಷ್ಯದ ಬಗ್ಗೆ ಅಧ್ಯಕ್ಷರಿಗೆ ಸಲಹಾ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ ರೈನಾ. 2006ರಲ್ಲಿ ಜಗ್ಗರ್ ನೌಟ್ ಎಂಬ ನವೀನ ಸಲಹಾ ಸಂಸ್ಥೆಯನ್ನು ಆರಂಭಿಸಿದರು ರೈನಾ.

ಬೋಸ್ಟನ್ ವಿವಿಯಲ್ಲಿ ಫಿಲ್ಮ್ ಮತ್ತು ಟೆಲಿವಿಶನ್ ವಿಭಾಗದಲ್ಲಿ ಬಿ.ಎಸ್ ಪದವಿ, ಎನ್‌ವೈಯುನ ಐಟಿಪಿಯಲ್ಲಿಟೆಲಿಕಮ್ಯುನಿಕೇಶನ್ಸ್ ವಿಭಾಗದಲ್ಲಿ ಎಂಎ ಪದವಿ ಮತ್ತು ಹಾರ್ವರ್ಡ್ ವಿವಿಯ ಅರ್ಬನ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್ ವಿಭಾಗದ ಡಿಜಿಟಲ್ ಅಪ್ಲಿಕೇಶನ್ಸ್ ನಲ್ಲಿ ಎಂ.ಡಿಇಎಸ್.ಎಸ್ ಎಂಬ ಪದವಿಯನ್ನು ಪಡೆದಿದ್ದಾರೆ ರೈನಾ.

image


ಮಾವಿನ್ ಮತ್ತು ಜಿಗ್ಯಾಟೋ

ಮಾಹಿತಿ ಪಡೆಯುವುದು ಮತ್ತು ಪ್ರಸಾರ ಮಾಡುವುದು ಮತ್ತು ಕೈಗೆಟುಕುವ ದರದಲ್ಲಿ ಇಂಟರ್‌ನೆಟ್ ಸಂಪರ್ಕ ದೊರಕಿಸಿಕೊಡುವುದಕ್ಕಾಗಿ ಮಾವಿನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ ಎನ್ನುತ್ತಾರೆ ರೈನಾ.

ಇಂಟರ್‌ನೆಟ್‌ನ ಅವಶ್ಯಕತೆ ಮತ್ತು ಪ್ರಪಂಚದ 3ನೇ 2ಭಾಗದಲ್ಲಿಇಂಟರ್‌ನೆಟ್ ಸೌಲಭ್ಯ ಇಲ್ಲ ಎಂಬುದನ್ನು ರೈನಾ ಮತ್ತವರ ತಂಡ ಮನಗಂಡಿದೆ. ಹಾಗಾಗಿ ಅವರು ಪರಸ್ಪರ ಸಹಕಾರಿ ವ್ಯವಸ್ಥೆಯ ಮೂಲಕ ಕೊನೆಯ ಬಳಕೆದಾರ ಸಹ ಈ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗಿಯಾಗುವಂತೆ ಯೋಜನೆ ರೂಪಿಸುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಇಲ್ಲಿ ಆ್ಯಪ್ ಪ್ರಕಾಶಕರು ತಮ್ಮ ಪ್ರಭಾವ ಬಳಸಿ ಆ್ಯಪ್‌ನಲ್ಲಿ ಮಾಹಿತಿ ಸಂಗ್ರಹಣೆ ವ್ಯವಸ್ಥೆಯನ್ನು ವಿಸ್ತರಿಸುತ್ತಿದ್ದಾರೆ.

ಮಾವಿನ್ ಸಂಸ್ಥೆಯ ಜಿಗ್ಯಾಟೋ ಎಂಬ ಆ್ಯಪ್ ಕೇವಲ ಪ್ರೀಪೇಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಆ್ಯಪ್ ಮೂಲಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಅನಿರ್ಬಂಧಿತ ಇಂಟರ್‌ನೆಟ್ ಸೇವೆ ಮತ್ತು ಬಳಕೆದಾರರು ಇಚ್ಛಿಸಿದ ಆ್ಯಪ್ ಬಳಕೆ ಮತ್ತು ಪ್ರೀಪೇಡ್ ಅಕೌಂಟ್ ಮುಖಾಂತರ ಮೆಗಾಬೈಟ್ ಇಂಟರ್‌ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ಇದು ಬಹುತೇಕ ಗೂಗಲ್ ಮತ್ತು ಮೈಕ್ರೋಸಾಫ್ಟ್‌ ನ ಮಾಜಿ ಕಾರ್ಯನಿರ್ವಾಹಕರು, ಸೃಜನಶೀಲ ವ್ಯವಸ್ಥೆಯ ಚಿಂತಕರು, ವಿನ್ಯಾಸಕರು ಮತ್ತು ಉತ್ಪನ್ನದ ಪ್ರಚಾರಕರನ್ನು ಸೇರಿ 10 ಮಂದಿ ಕೆಲಸಗಾರರನ್ನು ಹೊಂದಿದೆ.

ಇದು ಕೇವಲ ಒಂದು ಆ್ಯಪ್‌ ಆಗಿದ್ದರೂ ಕೊನೆಯ ಬಳಕೆದಾರನ ಜೀವನವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ ಬಹಳ ಕಾಲ ಮೊಬೈಲ್ ರೀಚಾರ್ಜ್ ಮಾಡದೇ ಇರುವುದು ಅಥವಾ ಇಂಟರ್‌ನೆಟ್ ಸೇವೆ ಪಡೆಯಲು ಚಿಂತಿಸುವ ಅಗತ್ಯವಿಲ್ಲದೇ ಆ್ಯಪ್ ಸೇವೆ ಪಡೆಯಬಹುದಾಗಿದೆ. ನಿತ್ಯ ಜೀವನದಲ್ಲಿ ಸಣ್ಣ ಸುಧಾರಣೆ ತರುವುದು ಈ ಆ್ಯಪ್ನ ಗುರಿ.

ತಂತ್ರಜ್ಞಾನದಲ್ಲಿ ಮಹಿಳೆ

ಹೂಡಿಕೆ, ಕೆಲಸಗಾರರ ನೇಮಕ, ಮಾರುಕಟ್ಟೆ ವ್ಯಾಪ್ತಿಯ ಮಾಪನ, ಬಹು ವಿಧದ ಕಾರ್ಯಗಳು ಹಾಗೂ ಆದ್ಯತೆಯಂತಹ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ರೈನಾ ಸಹ ಅನುಭವಿಸಿದ್ದಾರೆ.

ಎಲ್ಲಾ ಸಮಯಗಳಲ್ಲೂ ಒಂದೇ ರೀತಿಯಲ್ಲಿರುವುದು ಮಹಿಳೆಗೆ ಅತ್ಯಂತ ದೊಡ್ಡ ಸವಾಲು ಎಂದಿದ್ದಾರೆ ರೈನಾ

ತಂತ್ರಜ್ಞಾನದಲ್ಲಿ ಮಹಿಳೆಯರು ಹಿಂದುಳಿದಿದ್ದಾರೆ ಎಂಬ ವಿಚಾರವನ್ನು ರೈನಾ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮಹಿಳೆಯರನ್ನೇ ಕೆಲಸಕ್ಕೆ ತೆಗೆದುಕೊಳ್ಳುವತ್ತ, ಮಹಿಳೆಯೊಂದಿಗೆ ಕೆಲಸಕಾರ್ಯಗಳನ್ನು ಹಂಚಿಕೊಳ್ಳುವತ್ತ ರೈನಾ ಹೆಚ್ಚಿನ ಗಮನ ಹರಿಸಿದ್ದಾರೆ. ಈ ಮೂಲಕ ಮಹಿಳೆಯೂ ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿ ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದಾರೆ.

ಮಹಿಳೆಗೆ ತಮ್ಮ ಗುರಿ ಸಾಧಿಸಲು ಸಹಾಯ ಮಾಡುವತ್ತ ಹಾಗೂ ಅವರೂ ಸಹ ತಂತ್ರಜ್ಞಾನ ಉದ್ಯಮದಲ್ಲಿ ಕೈಜೋಡಿಸುವಂತೆ ಮಾಡುವತ್ತ ರೈನಾ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ರೈನಾ 2 ನಿಯಮಗಳನ್ನು ಹಾಕಿಕೊಂಡಿದ್ದಾರೆ.

1. ಅವರೆಂದಿಗೂ ಉಚಿತವಾಗಿ ಕೆಲಸ ಮಾಡಿಕೊಡುವುದಿಲ್ಲ.

2. ಮಹಿಳೆಯರಿಗೆ ಮಾರ್ಗದರ್ಶಿಯಾಗಿ ಅಥವಾ ಸಲಹೆಗಾರ್ತಿಯಾಗಿ ಮಹಿಳೆಯರು ಅವರದ್ದೇ ಆದ ರೀತಿಯಲ್ಲಿ ಗುರಿ ಸಾಧಿಸಲು ಸಹಾಯ ಮಾಡುತ್ತಾರೆ.

ಉದ್ಯಮ ಲೋಕದಲ್ಲಿ ಸ್ವತಃ ರೈನಾರಿಗೂ ಅನೇಕ ಸಮಸ್ಯೆಗಳು, ಸವಾಲುಗಳು ಕಾಡಿದ್ದಿದೆ. ಆದರೆ ಅವರು ಅದನ್ನು ಮೆಟ್ಟಿ ನಿಂತಿದ್ದಾರೆ. ಕನಸಿನೊಂದಿಗೆ ನಡೆಯುವ, ಕನಸುಗಳನ್ನು ನನಸಾಗಿಸಿಕೊಳ್ಳುವ, ಪ್ರಪಂಚದಲ್ಲಿ ಒಂದು ಒಳ್ಳೆಯ ಬದಲಾವಣೆ ತರುವ ಯಾವುದೇ ಯಶಸ್ವಿ ಪುರುಷ ಅಥವಾ ಮಹಿಳೆ ರೈನಾರಿಗೆ ಮಾದರಿ.

ಅವರು ಈ ಮಟ್ಟಕ್ಕೇರಲು ಸಹಾಯಕರಾಗಿ ನಿಂತ ತಮ್ಮ ಪತಿಯ ಬೆಂಬಲವನ್ನು ರೈನಾ ಕುಮಾರ ನೆನಪಿಸಿಕೊಳ್ಳುತ್ತಾರೆ. ಅಂತಹವರನ್ನು ಪತಿಯಾಗಿ ಪಡೆಯಲು ಅದೃಷ್ಟ ಮಾಡಿದ್ದೆ ಎನ್ನುವ ಅವರು ಪತಿಯ ತಾಳ್ಮೆ, ಬೆಂಬಲ, ನಕಾರಾತ್ಮಕ ವರ್ತನೆಗಳಿಂದ ಹೊರತಂದ ರೀತಿಗೆ ಮನತುಂಬಿ ಧನ್ಯವಾದಗಳನ್ನು ಅರ್ಪಿಸುತ್ತಾರೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags