ಆವೃತ್ತಿಗಳು
Kannada

ಅಪ್ಪನ ಪ್ರೀತಿ ಜೊತೆಗೆ ಕೇಕ್ ಉದ್ಯಮದಲ್ಲಿ ಯಶಸ್ವಿಯಾದ ಬೆಂಗಳೂರಿನ ಯುವತಿ

ಟೀಮ್​​ ವೈ.ಎಸ್​. ಕನ್ನಡ

YourStory Kannada
11th Dec 2015
Add to
Shares
0
Comments
Share This
Add to
Shares
0
Comments
Share

ಕೇಕ್ ಅಂದ್ರೆ ಯಾರಿಗೆ ಇಷ್ಟವಿಲ್ಲ. ಕೇಕ್ ಇಲ್ಲದೆ ಹುಟ್ಟುಹಬ್ಬ, ವಾರ್ಷಿಕೋತ್ಸವ ಆಚರಿಸಲು ಸಾಧ್ಯವೆ ಇಲ್ಲ ಎನ್ನುವ ಕಾಲ ಇದು. ಇದನ್ನು ಬಂಡವಾಳ ಮಾಡಿಕೊಂಡು ಉದ್ಯಮಕ್ಕೆ ಕಾಲಿಟ್ಟವರು ಶಿವಾಲಿ ಪ್ರಕಾಶ್.

ಶಿವಾಲಿಗೆ ತಂದೆಯೇ ಸ್ಫೂರ್ತಿ. ಅವರನ್ನು ಆದರ್ಶವಾಗಿಟ್ಟುಕೊಂಡು,ಅವರ ನೆನಪಿಗಾಗಿ ಶುರುವಾಗಿದ್ದು Pop'z ಕಿಚನ್. 2012ರಲ್ಲಿ ಬೆಂಗಳೂರಿನಲ್ಲಿ ಶುರುವಾದ ಈ ಕಿಚನ್, ಕೇಕ್ ಪ್ರಿಯರ ಮನ ತಣಿಸುತ್ತಿದೆ. ಶಿವಾಲಿ ಅವರ ತಂದೆ 30 ವರ್ಷಗಳ ಹಿಂದೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಚಿಲ್ಲರೆ ಔಟ್ಲೆಟ್ ಸ್ಥಾಪಿಸಿದ್ದರು. ತಂದೆ ಮರಣದ ನಂತರ ಅವರ ನೆನಪಿಗಾಗಿ ಶಿವಾಲಿ, ತಮ್ಮದೇ ಆದ ಒಂದು ವ್ಯಾಪಾರ ಶುರುಮಾಡಲು ಮುಂದಾದರು.

image


ಆರಂಭ

2010ರಲ್ಲಿ ಬೆಂಗಳೂರಿನ ಕ್ರೈಸ್ಟ್​​ ಕಾಲೇಜಿನಲ್ಲಿ ಪದವಿ ಮುಗಿಸಿದ ಶಿವಾಲಿ, ಎರಡು ವರ್ಷಗಳ ಕಾಲ "ಬೇಕಿಂಗನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಎಂದು ನಾನು ಎಂದೂ ಯೋಚಿಸಿರಲಿಲ್ಲ. ಅದೇ ಕ್ಷೇತ್ರದಲ್ಲಿ ವ್ಯಾಪಾರ ಶುರುಮಾಡುವುದಂತೂ ದೂರದ ಮಾತಾಗಿತ್ತು. ನಾನು ಬೇಕಿಂಗನ್ನು ವ್ಯಾಪಾರವಾಗಿ ಆರಂಭಿಸಿ ಮೂರು ವರ್ಷ ಕಳೆದಿವೆ. ಈಗ ಇದರ ಜೊತೆ ಭಾವನಾತ್ಮಕ ಸಂಬಂಧ ಬೆಳೆದಿದೆ’’ ಎನ್ನುತ್ತಾರೆ ಶಿವಾಲಿ.

ತನ್ನ ಕುಟುಂಬಸ್ಥರು ಮತ್ತು ಪರಿಚಯಸ್ಥರ ಮನೆಯ ವಿಶೇಷ ಸಂದರ್ಭಗಳಲ್ಲಿ ಕೇಕ್ ತಯಾರಿಸಿ ವ್ಯಾಪಾರ ಶುರು ಮಾಡಿದರು. ನಾನು ತಯಾರಿಸಿದ ಕೇಕ್ ಜನಪ್ರಿಯವಾಗಿದೆ ಎಂಬ ವಿಷಯ ನನಗೆ ಇನ್ನೂ ಅಚ್ಚರಿಯನ್ನುಂಟು ಮಾಡುತ್ತಿದೆ ಎಂದು ಮುಗುಳ್ನಗುತ್ತಾರೆ ಶಿವಾಲಿ.

ನಟ ವಿವೇಕ್ ಒಬೆರಾಯ್ ಮಗಳ ಹುಟ್ಟುಹಬ್ಬದಂದು ಕೇಕ್ ತಯಾರಿಸಿದ್ದು ಶಿವಾಲಿ ಬೇಕಿಂಗ್ ವೃತ್ತಿಯಲ್ಲಿ ಒಂದು ಪ್ರಮುಖ ಸಾಧನೆಯಾಗಿದೆ. ಈ ಬಗ್ಗೆ ಮಾತನಾಡುತ್ತ, ಹೃತಿಕ್ ರೋಷನ್ ಅವರಿಗೆ ಕೂಡ Pop'z ಕಿಚನ್ ನಲ್ಲಿ ಸಿದ್ಧವಾದ ಕೇಕ್ ಗಳ ಡಬ್ಬವನ್ನು ತಲುಪಿಸಲು ಯಶಸ್ವಿಯಾಗಿರುವುದಾಗಿ ಶಿವಾಲಿ ಹೇಳ್ತಾರೆ.

image


ಬೆಂಗಳೂರಿನ ಹುಡುಗಿ

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು 27 ವರ್ಷ ಕಳೆದಿರುವ ಶಿವಾಲಿ ಬೆಂಗಳೂರಿನಲ್ಲಾಗುತ್ತಿರುವ ಪ್ರತಿಯೊಂದು ಬದಲಾವಣೆಗೆ ಸಾಕ್ಷಿಯಾಗಿದ್ದಾರೆ. "ಇದು ಉತ್ಪ್ರೇಕ್ಷೆಯಾಗಬಹುದು. ಆದರೂ ನನ್ನ ಬಾಲ್ಯ ಅತ್ಯುತ್ತಮವಾಗಿತ್ತು. ಬಿಷಪ್ ಕಾಟನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಕಲಿತೆ. ತಂದೆ-ತಾಯಿ ವಾಯ್ಸ್ ತರಬೇತಿಗೆ ಸೇರಿಸಿದರು. ಜೊತೆಗೆ ಗಿಟಾರ್ ಕ್ಲಾಸ್ ಗೆ ಹೋಗುತ್ತಿದ್ದೆ. ಚಿಕ್ಕವನಿರುವಾಗ ನಾನು ಕ್ರೀಡಾಪಟು ಕೂಡ ಆಗಿದ್ದೆ’’ ಎನ್ನುತ್ತಾರೆ ಶಿವಾಲಿ.

ಪ್ರಯೋಗ ಮಾಡಲು ಹಾಗೂ ಹೊಸದೊಂದನ್ನು ಆರಂಭಿಸಲು ಬೆಂಗಳೂರಿನಷ್ಟು ಉತ್ತಮ ಮಹಾನಗರ ಯಾವುದೂ ಇಲ್ಲ. ಪಾಕಶಾಸ್ತ್ರ ಕ್ಷೇತ್ರದಲ್ಲಂತೂ ಬೆಂಗಳೂರಿಗಿಂತ ಒಳ್ಳೆಯ ಜಾಗ ಸಿಗಲು ಸಾಧ್ಯವೇ ಇಲ್ಲ. ಇದಲ್ಲದೆ ಬೆಂಗಳೂರಿನಲ್ಲಿ ಯುವಕರ ಸಂಖ್ಯೆ ಜಾಸ್ತಿ ಇದೆ. ಅವರಿಗೆ ಇಲ್ಲಿ ಸಾಕಷ್ಟು ಕೆಲಸ ದೊರೆಯುತ್ತದೆ. ಯುವ ಜನತೆ ವ್ಯಾಪಾರದ ಬಗ್ಗೆ ಅದ್ಭುತ ಕಲ್ಪನೆ ಹೊಂದಿದ್ದಾರೆ. ತಮ್ಮ ಕಲ್ಪನೆಗಳಿಗೆ ಒಂದು ವೇದಿಕೆ ಒದಗಿಸಿ ಉದಯೋನ್ಮುಕ ಕ್ಷೇತ್ರದಲ್ಲಿ ಪ್ರಯೋಗ ಮಾಡುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಹೆಚ್ಚು ಸಾಮರ್ಥ್ಯದಿಂದಾಗಿ ಸಣ್ಣ ವ್ಯಾಪಾರ ಕೂಡ ಕಡಿಮೆ ಸಮಯದಲ್ಲಿ ಹೆಸರು ಮಾಡಬಹುದಾಗಿದೆ. ಅಲ್ಲದೆ ಸುಲಭವಾಗಿ ಹೂಡಿಕೆ ಕೂಡ ಮಾಡಬಹುದಾಗಿದೆ. ನಾನು ಇದಕ್ಕೊಂದು ಸಾಕ್ಷಿ ಹಾಗೂ ಇದರ ಒಂದು ಭಾಗವಾಗಿರುವುದರಿಂದ ಇಷ್ಟು ವಿಶ್ವಾಸದಿಂದ ಹೇಳುತ್ತೇನೆ’’. ಮಾರುಕಟ್ಟೆಯನ್ನು ಅರಿತುಕೊಳ್ಳಲು ನಾನು ಮೊದಲು ಮನೆಯಲ್ಲೇ ಬೇಕ್ ಮಾಡಿ ಗ್ರಾಹಕರಿಗೆ ತಲುಪಿಸುತ್ತಿದ್ದೆ. ಈ ಮೂಲಕ ನನ್ನ ಉತ್ಪಾದನೆಯನ್ನು ಸಂಭಾವ್ಯ ಗ್ರಾಹಕರು ಸ್ವೀಕರಿಸುತ್ತಾರಾ ಇಲ್ವ ಎಂಬುದನ್ನು ತಿಳಿಯಲು ಯಶಸ್ವಿಯಾದೆ’’ ಎನ್ನುತ್ತಾ ಶಿವಾಲಿ. ಮುಂದಿನ ದಿನಗಳಲ್ಲಿ ಒಂದು ಔಟ್ ಲೆಟ್ ಸ್ಥಾಪಿಸುವ ದಿಕ್ಕಿನಲ್ಲಿ ಶಿವಾಲಿ ಹೆಜ್ಜೆ ಇಡುತ್ತಿದ್ದಾರೆ.

Pop'z ಕಿಚನ್

ಸಿಹಿತಿಂಡಿಗಳು Pop'z ಕಿಚನ್ ವಿಶೇಷವಾಗಿದೆ. ಜನ್ಮದಿನ, ವಾರ್ಷಿಕೋತ್ಸವ, ನಿಶ್ಚಿತಾರ್ಥ, ವಿವಾಹ, ಗಾನಗೋಷ್ಠಿ ಮತ್ತು ಇತರ ಕಾರ್ಯಕ್ರಮಗಳಿಗೆ ಕೇಕ್ ಹಾಗೂ ಕಪ್ ಕೇಕ್ ತಯಾರಿಸಿ ಕೊಡಲಾಗುತ್ತದೆ. ಶಿವಾಲಿ ತಮ್ಮ ಫೇಸ್ ಬುಕ್ ಪೇಜ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾರೆ. ತಮ್ಮದೇ ವೆಬ್ ಸೈಟ್ ತೆರೆಯುವ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ. ಫೇಸ್ ಬುಕ್ಕನ್ನು ಅವರು ಕೇವಲ ಮಾರ್ಕೆಟಿಂಗ್ ಗೆ ಮಾತ್ರ ಬಳಸುತ್ತಾರಂತೆ. ಮಾತಿನ ಮೂಲಕ ಪ್ರಚಾರವಾಗುವುದೇ ಹೆಚ್ಚುಎನ್ನುತ್ತಾರೆ.

ಪ್ರತಿ ವಾರ ಅವರು 50ಕ್ಕೂ ಹೆಚ್ಚು ಕೇಕ್ ಸಿದ್ಧಪಡಿಸುತ್ತಾರೆ. ಇದರ ಬೇಡಿಕೆ ಹೆಚ್ಚಾಗುತ್ತಿದೆ. ಕ್ಯಾಶ್ ಆನ್ ಡಿಲೆವರಿ ವ್ಯವಸ್ಥೆ ಇದೆ. ಗ್ರಾಹಕರ ಮನೆಗೆ ಕೇಕ್ ವಿತರಣೆ ಮಾಡಲು ಒಬ್ಬ ಯುವಕನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. 3ಡಿ ಕೇಕ್ ಡಿಲೇವರಿಗೆ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾರಿನ ಮೂಲಕ ಗ್ರಾಹಕರಿಗೆ ತಲುಪಿಸುತ್ತಾರೆ. ಕೇಕ್ ಗೆ ಯಾವುದೇ ಹಾನಿಯಾಗದಂತೆ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಿರುವುದಾಗಿ ಶಿವಾಲಿ ಹೇಳ್ತಾರೆ.

ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಕೇಕ್ ತಯಾರಿಸುವ ಎಲ್ಲ ಕೆಲಸವನ್ನು ಶಿವಾಲಿ ತಾವೇ ಮಾಡ್ತಾರೆ. ಉಳಿದ ಕೆಲಸಕ್ಕೆ ಮಾತ್ರ ಸಹಾಯಕರನ್ನು ನೇಮಿಸಿಕೊಂಡಿದ್ದಾರೆ.

image


ವಿಶೇಷತೆ

ಪ್ರತಿ ಬಾರಿ ಹೊಸದನ್ನು ಕಲಿಯಲು ಹಾಗೂ ಪ್ರಯೋಗ ಮಾಡಲು ಶಿವಾನಿ ಬಯಸುತ್ತಾರೆ. ವಿಭಿನ್ನ ಬಗೆಯ ಕೇಕ್ ಮೂಲಕ ಪ್ರತಿಸ್ಪರ್ಧಿಗಿಂತ ಒಂದು ಹೆಜ್ಜೆ ಮುಂದಿರುವುದು ಅವರ ಗುರಿ. ಚಾಕೋ ಲಾವಾ ಫಿಜ್ಜಾ ವಾಸ್ತವವಾಗಿ ಶೋಧ. ರೆಡ್ ವೆಲ್ವೆಟ್ ಕೇಕ್,ಬ್ಲೂಬರಿ ಚೀಸ್ ಕೇಕ್ ಇದು ಶಿವಾಲಿ ಸಿದ್ಧಪಡಿಸುವ ಹಾಗೂ ಬೇಡಿಕೆಯ ಕೇಕ್ ಗಳಾಗಿವೆ.

ಗ್ರಾಹಕರಿಗೆ ಸರ್ವ ಶ್ರೇಷ್ಠವಾದದ್ದನ್ನು ನೀಡಲು ಶಿವಾಲಿ ಬಯಸುತ್ತಾರೆ. ಶುದ್ಧ ಮತ್ತು ರುಚಿಯಲ್ಲಿ ಯಾವುದೇ ರಾಜೀ ಇಲ್ಲ. ಕೇಕ್ ತಯಾರಿಕೆಗಾಗಿ ಸಿಂಗಾಪುರದಿಂದ ಕೆಲವೊಂದು ವಸ್ತುಗಳನ್ನು ತರಿಸಿಕೊಳ್ಳುತ್ತಾರೆ. ಒಮ್ಮೆ ತಿಂದ ಗ್ರಾಹಕ ಮತ್ತೆ ಮತ್ತೆ ತಿನ್ನ ಬಯಸುವ ರುಚಿ ನೀಡಬೇಕೆಂಬುದು ಶಿವಾಲಿ ಮೂಲ ಉದ್ದೇಶವಾಗಿದೆ.

ಲೇಖಕರು : ತಾನ್ವಿ ದುಬೇ

ಅನುವಾದಕರು: ರೂಪಾ ಹೆಗಡೆ


Add to
Shares
0
Comments
Share This
Add to
Shares
0
Comments
Share
Report an issue
Authors

Related Tags