ಊರಿನ ಜನರೆಲ್ಲಾ ಒಂದಾದ್ರು- ಕಲುಷಿತಗೊಂಡಿದ್ದ ನದಿಯನ್ನು ಶುಚಿಗೊಳಿಸಿದ್ರು..!

ಟೀಮ್​ ವೈ.ಎಸ್​. ಕನ್ನಡ

ಊರಿನ ಜನರೆಲ್ಲಾ ಒಂದಾದ್ರು-  ಕಲುಷಿತಗೊಂಡಿದ್ದ ನದಿಯನ್ನು ಶುಚಿಗೊಳಿಸಿದ್ರು..!

Monday May 15, 2017,

2 min Read

ಕುಟ್ಟೆಂಪೆರೂರ್ ನದಿ, ಕೇರಳದ ಎರಡು ಪ್ರಮುಖ ನದಿಗಳಾದ ಪಂಬಾ ಮತ್ತು ಅಚಂಕೋವಿಲ್ ನದಿಯ ಉಪನದಿ. ಕಳೆದ 10 ವರ್ಷಗಳಲ್ಲಿ ಕುಟ್ಟೆಂಪೂರ್ ನದಿ ಸಾಕಷ್ಟು ಮಲೀನಗೊಂಡಿದೆ. ಆದ್ರೆ ಸ್ಥಳೀಯರಿಗೆ ನದಿಯ ಮಹತ್ವ ಅರಿವಾಗಿದ್ದೇ ತಡ, ತ್ಯಾಜ್ಯವನ್ನೆಲ್ಲಾ ಒಂದೆಡೆ ಸರಿಸಿ, ಕಟ್ಟೆಂಪೆರೂರ್ ನದಿಯನ್ನು ಶುಚಿಗೊಳಸಿದ್ದಾರೆ. ಅಲೆಪ್ಪಿ ಜಿಲ್ಲೆಯ ಬುಧ್ನೋರ್ ಪಂಚಾಯತ್ ವ್ಯಾಪ್ತಿಯ ಸುಮಾರು 700 ಜನರು ನದಿ ಶುಚಿಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಪುರುಷರು, ಮಹಿಳೆಯರು ಎನ್ನದೆ ಇವರೆಲ್ಲಾ ಸುಮಾರು 70 ದಿನ ಜೊತೆ ಸೇರಿ ಕೆಲಸಮಾಡಿದ್ದರು. ಪರಿಣಾಮ ಕಟ್ಟೆಂಪೆರೂರ್ ನದಿ ಶುಭ್ರವಾಗಿ ಕಂಗೊಳಿಸುತ್ತಿದೆ.

image


ಕಟ್ಟೆಂಪೆರೂರ್ ನದಿಯ ಉದ್ದಕ್ಕೂ ಹಲವು ಕಾರ್ಖಾನೆಗಳಿವೆ. ಅಲ್ಲಿಂದ ಬಂದ ತ್ಯಾಜ್ಯ, ವಿಷಯುಕ್ತ ನೀರು ಕಟ್ಟೆಂಪೆರೂರ್ ನದಿಯನ್ನು ಸಂಪೂರ್ಣವಾಗಿ ಹಾಳು ಮಾಡಿತ್ತು. ಅಷ್ಟೇ ಅಲ್ಲ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳು ನದಿ ತುಂಬಾ ತುಂಬಾ ತುಂಬಿ ಹೋಗಿದ್ದವು. ಹೀಗಾಗಿ ಕಟ್ಟೆಂಪೆರೂರ್ ನದಿ ಯಾವ ಉಪಯೋಗಕ್ಕೂ ಲಾಯಕ್ಕಿಲ್ಲದಂತೆ ಆಗಿ ಹೋಗಿತ್ತು.

“ಕಟ್ಟೆಂಪೆರೂರ್ ನದಿ ತ್ಯಾಜ್ಯಗಳಿಂದ ಕಲುಷಿತವಾಗಿದ್ದರಿಂದ ಅದರ ನೀರು ಕುಡಿಯುತ್ತಿದ್ದ ಜನರ ಆರೋಗ್ಯ ಕೂಡ ಹದಗೆಟ್ಟಿತ್ತು. ನಾನು ಡೆಂಗ್ಯೂ ಜ್ವರದಿಂದ 2 ವಾರ ಬಳಲಿದ್ದೆ. ಆದ್ರೆ ನಾನು ಚೇತರಿಸಿಕೊಂಡು ಬಂದ ಮೇಲೆ ನದಿ ನೀರನ್ನು ಶುಚಿಗೊಳಿಸುವ ಕೆಲಸದಲ್ಲಿ ಸೇರಿಕೊಂಡೆ ”
- ಗೀತಾ ಪಿ, ನದಿಶುಚಿಗೊಳಿಸಿದವರು

ಅಂದಹಾಗೇ, ಬುಧ್ನೋರ್ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾಗಿತ್ತು. ಈ ವೇಳೆಯಲ್ಲಿ ನದಿ ನೀರನ್ನು ಬಿಟ್ಟು ಬೇರೆ ನೀರಿನ ಸೋರ್ಸ್ ಕೂಡ ಇರಲಿಲ್ಲ. ತ್ಯಾಜ್ಯಗಳಿಂದ ತುಂಬಿ ಹೋಗಿದ್ದ ನದಿಯನ್ನು ಶುಚಿಗೊಳಿಸುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಸರಕಾರಕ್ಕೆ ನದಿಯನ್ನು ಸ್ವಚ್ಛಗೊಳಿಸುವ ಬಗ್ಗೆ ಮತ್ತು ಪರಿಸರಕ್ಕೆ ಅದರಿಂದಾಗುವ ಲಾಭದ ಬಗ್ಗೆ ವರದಿ ನೀಡಿದ್ರು. ಸುತ್ತಮುತ್ತಲಿನ ಜನರಿಗೆ ನದಿ ನೀರಿನ ಮಹತ್ವವನ್ನು ತಿಳಿಹೇಳಿದ್ರು. ಅಷ್ಟೇ ಅಲ್ಲ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರನ್ನು ಕೂಡ ಸೇರಿಸಿಕೊಂಡ್ರು. ಊರಿನ ಜನರೇ ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದ ಮೇಲೆ ಎಲ್ಲಾ ಕೆಲಸಗಳು ಸುಲಭವಾಯಿತು. ಕಟ್ಟೆಂಪೆರೂರ್ ನದಿ ತನ್ನ ನೈಜತೆಯನ್ನು ಮರಳಿ ಪಡೆಯಿತು.

ನದಿ ಸಚ್ಚತೆಯ ಸಮಯದಲ್ಲಿ ಸಾಕಷ್ಟು ಮುನ್ನಚ್ಚರಿಕೆಗಳನ್ನು ಕೂಡ ತೆಗೆದುಕೊಳ್ಳಲಾಗಿತ್ತು. ನದಿಯ ಕೆಳಭಾಗದಲ್ಲಿ ಸೇರಿಕೊಂಡಿದ್ದ ತ್ಯಾಜ್ಯಗಳನ್ನು ಮೊದಲು ತೆಗೆಯಲಾಯಿತು. ಪ್ಲಾಸ್ಟಿಕ್​ಗಳನ್ನು ಹೆಕ್ಕಿ ತೆಗೆಯಲಾಯಿತು. ನದಿ ಪಾತ್ರದಲ್ಲಿ ಸೇರಿದ್ದ ತ್ಯಾಜ್ಯಗಳನ್ನು ಕೂಡ ತೆಗೆದ, ಪಟ್ಟೆಂಪೆರೂರ್ ನದಿಯನ್ನು ಸ್ವಚ್ಛಗೊಳಿಸಲಾಯಿತು. ಸರಕಾರ ಮತ್ತು ಪಂಚಾಯತ್ ಜಂಟಿಯಾಗಿ ಮಾಡಿದ ಈ ಕೆಲಸ ಸಾಕಷ್ಟು ಯಶಸ್ಸು ತಂದುಕೊಟ್ಟಿದೆ. ನದಿ ಮಾತ್ರ ಶುದ್ಧವಾಗಿದ್ದು ಅಲ್ಲದೆ, ಅಲ್ಲಿನ ನೀರು ಕೂಡ ಈಗ ಬಳಕೆಗೆ ಲಭ್ಯವಿದೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಅನ್ನುವುದನ್ನು ಬೂಧನೂರ್ ಗ್ರಾಮಸ್ಥರು ಮಾಡಿ ತೋರಿಸಿದ್ದಾರೆ.

ಇದನ್ನು ಓದಿ:‘

1. ಸೊಲಾರ್​ ಉತ್ಪನ್ನಗಳಿಗೆ ಮಾರುಕಟ್ಟೆಯ ಸೃಷ್ಟಿ- ಭವಿಷ್ಯದ ಕನಸು ಕಾಣ್ತಿದೆ "ಸೊಲ್​ಟ್ರಿಕ್ಸ್​​"  

2. 1 ರೂಪಾಯಿಗೆ ವೈದ್ಯಕೀಯ ಸೇವೆ- ಮುಂಬೈನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದೆ ಭಾರತೀಯ ರೈಲ್ವೇ..!

3. ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..!