ಆವೃತ್ತಿಗಳು
Kannada

ಕಾಫಿ ಶಾಪ್​ನಲ್ಲಿ ಐ ಫೋನ್​​ ರಿಪೇರಿ - 1.2 ಕೋಟಿ ವಾರ್ಷಿಕ ವಹಿವಾಟು..!

ಟೀಮ್​ ವೈ.ಎಸ್​​.

30th Jun 2015
Add to
Shares
3
Comments
Share This
Add to
Shares
3
Comments
Share

ಅದು ಸುಮಾರು 2006ರ ಮಧ್ಯಭಾಗ. ಆಗಷ್ಟೇ ಮಾರ್ಕೆಟ್​​ಗೆ ಬಂದಿದ್ದ ಐ- ಪಾಡ್ ಗಳ ಹುಚ್ಚು ಹೆಚ್ಚಿತ್ತು. ಇನ್ನೂ ಐ- ಫೋನ್ ಗಳು ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರಲಿಲ್ಲ. 2ನೇ ವರ್ಷದ ಇಂಜಿನಿಯರಿಂಗ್​​​​ ಮಾಡಿಕೊಂಡಿದ್ದ ವಿದ್ಯಾರ್ಥಿ ಹರ್ಷ ಕೈಗೆ ಒಂದು ಐ ಪಾಡ್​ ಬಂದಿತ್ತು. ಆದ್ರೆ ದುರಾದೃಷ್ಟವೋ ಏನೋ ಹರ್ಷ ಯೂಸ್​ ಮಾಡ್ತಿದ್ದ ಐಪಾಡ್​ ಕೆಟ್ಟು ಹೋಗಿತ್ತು. ರಿಪೇರಿಗೆಂದು ಆಪಲ್​​ ಸ್ಟೋರ್​ಗೆ ಹೋದ್ರೆ ಖರ್ಚಿ ಮೊತ್ತ ಮಿತಿ ಮೀರಿತ್ತು. ಹೇಗೂಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಹೀಗಾಗಿ ತನ್ನ ಪದವಿಗೆ ನ್ಯಾಯ ಸಲ್ಲಿಸಬೇಕು ಅನ್ನೋ ಉತ್ಸಾಹದಿಂದ ಹರ್ಷ ತನ್ನ ಐ-ಪಾಡ್​​ನ್ನು ತಾನೇ ಸರಿ ಮಾಡಿಕೊಳ್ಳಲು ಮುಂದಾಗುತ್ತಾನೆ. ಅದೃಷ್ಟವಶಾತ್ ಹರ್ಷ ಅಂದುಕೊಂಡಂತೆ ಅವನ ಐ- ಪಾಡ್ ಸರಿ ಹೋಯಿತು. ಈ ವಿಷಯಎಲ್ಲ ಕಡೆ ಹರಡಿತು. ಸ್ನೇಹಿತರ ಕೈಯಲ್ಲಿ ಕೆಟ್ಟು ಹೋಗಿದ್ದ ಹಲವು ಐ- ಪಾಡ್ ಗಳನ್ನು ಕೂಡ ರಿಪೇರಿ ಮಾಡಿದ. ಸ್ನೇಹಿತ ಅಜಯ್ ಹೆಗ್ಡೆ ಜೊತೆ ಸೇರಿ ಒಂದು ಬ್ಲಾಗ್ ನಲ್ಲಿ ಹರ್ಷನ ಕೆಲಸದ ಬಗ್ಗೆ ಚಿಕ್ಕ ಆರ್ಟಿಕಲ್​ ಬರೆದುಕೊಂಡ.


image


ಹರ್ಷ ಮತ್ತು ಗೆಳೆಯರ ಓದು ಹಾಗೇ ಮುಂದುವರೆದಿತ್ತು. ಹರ್ಷ ಮತ್ತು ಸ್ನೇಹಿತರು ಬರೆದ ಪೇಜರ್ ವೆಬ್‌ಸೈಟ್ ಅವರಿಗೆ ಹಲವು ಅವಕಾಶಗಳನ್ನು ಸಿಗುವಂತೆ ಮಾಡಿತು. ಆರಂಭದಲ್ಲಿ ಹರ್ಷ ಒಂದು ಕಾಫಿ ಶಾಪ್ ನಿಂದ ಮತ್ತೊಂದು ಕಾಫಿ ಶಾಪ್ ಗೆ ತೆರಳಿ ಫೋನ್ ಗಳನ್ನು ರಿಪೇರಿ ಮಾಡುತ್ತಿದರು. ಅವರಿಬ್ಬರ ಕುಶಲತೆಯ ಪರಿಣಾಮ ಅವರು ಆ ಸ್ಥಳದಲ್ಲೇ ಫೋನ್ ಗಳನ್ನು ರಿಪೇರಿ ಮಾಡುತ್ತಿದ್ದರು. 2013 ರಲ್ಲಿ ವ್ಯಾಪಾರವನ್ನು ಅಧಿಕೃತವಾಗಿ ಆರಂಭ ಮಾಡುವ ಮೊದಲು ಅವರಿಬ್ಬರು ಹಲವು ವರ್ಷಗಳ ಕಾಲ ಅದೇ ಕೆಲಸವನ್ನು ಮುಂದುವರೆಸಿದ್ದರು. ಬಳಿಕ ಕೋರಮಂಗಲದಲ್ಲಿ ಆಫೀಸ್​ ಒಂದನ್ನು ಸ್ಥಾಪಿಸಿ ಅಲ್ಲೇ ಕೆಲಸ ಆರಂಭಿಸಿದ್ರು. ಐ ಫೋನ್​​- ಐಪಾಡ್​ನ ಎಲ್ಲಾ ಕೆಲಸಗಳನ್ನು ಅಲ್ಲೇ ಆರಂಭಿಸಿದ್ರು.

ಕೆಲಸಕ್ಕೆ ತಕ್ಕಂತೆ ತಮ್ಮ ವರ್ಕ್​ಶಾಪ್​ಗೆ ಐ ರಿಪೇರ್ ಎಂಬ ಹೆಸರು ಇಟ್ಟುಕೊಂಡ್ರು. ಕೇವಲ ಇಬ್ಬರಿಂದ ಆರಂಭವಾದ ಉದ್ಯಮ ಈಗ ಹಲವು ಉದ್ಯೋಗಿಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲ ಮೂರು ರಾಜ್ಯಗಳಲ್ಲಿ ಐ ರಿಪೇರ್ ಕಂಪನಿ ಇದೆ : ಬೆಂಗಳೂರು, ಹೈದ್ರಾಬಾದ್, ಮಣಿಪಾಲ್. ಬ್ರಾಂಚ್​​ಗಳಲ್ಲಿ 15000 ಕ್ಕೂ ಹೆಚ್ಚು ಗ್ರಾಹಕರಿಗೆ ತಮ್ಮ ಸೇವೆಯನ್ನು ಒದಗಿಸುತ್ತಿದೆ. ಕಂಪನಿಯ ವಾರ್ಷಿಕ ಲಾಭ ಸುಮಾರು 1.2 ಕೋಟಿಗಳ ಗಡಿ ದಾಟಿದೆ.

ಕೆಲಸ ಮಾಡ್ತಾ ಇದ್ದಂತೆ ಹರ್ಷಗೆ ಫೋನ್ ಭಾಗಗಳ ಅವಶ್ಯಕತೆ ಕೂಡ ಇದೆ ಎಂಬುದುನ್ನು ಕೂಡ ಅರಿತುಕೊಂಡ್ರು. ಇದಕ್ಕಾಗಿ ಆನ್​ಲೈನ್​​ ಸ್ಟೋರ್​​ಗಳನ್ನು ಕೂಡ ಆರಂಭಿಸಿದ್ರು.ಹರ್ಷ ಮತ್ತು ಅಜಯ್ ಇಬ್ಬರು ಅದೃಷ್ಟವಂತರು ಅವರ ಉದ್ಯಮ ಯಶಸ್ವಿಯಾಗಿದೆ. ಐ ರಿಪೇರ್​ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಎಲ್ಲಾ ತರಹದ ಆಪಲ್ ಉತ್ಪನ್ನಗಳನ್ನು ರಿಪೇರಿ ಮಾಡಲು ತಮ್ಮ ಸೇವೆಯನ್ನು ವಿಸ್ತಾರ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಹಾಗೆಯೇ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯ ಒದಗಿಸುವ ಯೋಜನೆ ಕೂಡ ಇದೆ.

ಇನ್ನೂ ಹಲವು ನಗರಗಳಿಗೆ ಹೊರದೇಶದಲ್ಲಿ ತಮ್ಮ ಉದ್ಯಮವನ್ನು ವಿಸ್ತಾರ ಮಾಡುವ ಯೋಜನೆ ಹಾಕಿದ್ದಾರೆ. ಒಟ್ಟಿನಲ್ಲಿ ಅನಿವಾರ್ಯ ಕಾರಣಗಳಿಗೆ ಆರಂಭಿಸಿದ ಉದ್ಯೋಗ ಈಗ ಬ್ಯುಸಿನೆಸ್​ ಆಗಿ ಬದಲಾಗಿ ಹೋಗಿದೆ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags