ಆವೃತ್ತಿಗಳು
Kannada

ಮನೆಯಲ್ಲಿ ಹೈಪರ್ ಆಕ್ಟಿವ್ ಕಂದನಿದ್ದಾನಾ? ಫ್ಲಿಂಟೋ ಇರಲೇಬೇಕು..!

ಟೀಮ್​ ವೈ.ಎಸ್​​.

22nd Oct 2015
Add to
Shares
8
Comments
Share This
Add to
Shares
8
Comments
Share

ಮಕ್ಕಳೇ ಜೀವನದ ದೊಡ್ಡ ಸುಖ. ಅವರು ಬೆಳೆಯುವುದನ್ನು ನೋಡುವುದೇ ಎಲ್ಲಾ ಪೋಷಕರಿಗೆ ಬದುಕಿನ ಪರಮಾನಂದ. ಮಕ್ಕಳಿಗೆ, ತಮ್ಮ ಸುತ್ತಲಿನ ಪ್ರಪಂಚ ಸಂಪೂರ್ಣ ಹೊಸದು. ಎಲ್ಲಾ ಹೊಸ ವಿಚಾರಗಳನ್ನು ಅವರು ನಿಭಾಯಿಸಲೇ ಬೇಕು. ಅದರಲ್ಲೂ ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಅನಿವಾರ್ಯವೇ. ಸ್ಮಾರ್ಟ್​ಫೋನ್, ಟ್ಯಾಬ್ಲೆಟ್, ಟಿವಿಗಳನ್ನು ಈಗ ದೊಡ್ಡವರಿಗಿಂತ ಪುಟಾಣಿ ಮಕ್ಕಳೇ ಹೆಚ್ಚು ಬಳಸುತ್ತಿದ್ದಾರೆ. ಮಕ್ಕಳು ಎಷ್ಟರ ಮಟ್ಟಿಗೆ ಬಳಸುತ್ತಿದ್ದಾರೆ ಎಂದರೆ, ಪುಟಾಣಿಯೊಬ್ಬ ಸುಮಾರು 4000 ಅಮೆರಿಕನ್ ಡಾಲರ್ ಮೌಲ್ಯದ ವಸ್ತುಗಳನ್ನು ತನಗರಿವಿಲ್ಲದೆಯೇ ಖರೀದಿಸಿಬಿಟ್ಟಿದ್ದ..!

ಇದು ಆ ಮಗುವಿನ ಕುಟುಂಬದ ತಲೆನೋವಲ್ಲ. ಬಹುತೇಕ ನಗರಗಳ ಪೋಷಕರ ಪರಿಸ್ಥಿತಿಯೇ ಇದೇ ಆಗಿದೆ. ಇದನ್ನೇ ತಮ್ಮ ಉದ್ಯಮದ ಮೂಲ ಸೆಲೆಯಾಗಿ ಮಾಡಿಕೊಂಡವರು ವಿಜಯಬಾಬು ಗಾಂಧಿ ಮತ್ತು ಅರುಣಪ್ರಸಾದ್ ದೊರೈರಾಜು. ಇಬ್ಬರೂ ಚೆನ್ನೈ ಮೂಲದವರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚಂದಾ ಆಧರಿತ ಇ-ಕಾಮರ್ಸ್ ಸಂಸ್ಥೆ –ಫ್ಲಿಂಟೋವನ್ನು ಹುಟ್ಟುಹಾಕಿದರು. “ನಾನು ಮತ್ತು ವಿಜಯ್ ಕಳೆದ 6 ವರ್ಷಗಳಿಂದ ಸ್ನೇಹಿತರು. ವಿಜಯ್ ಅವರು ನಾಲ್ಕು ವರ್ಷದ ಮಗುವಿನ ತಂದೆ. ಅವರಿಗೆ ತನ್ನ ಮಗನಿಗಾಗಿ ಮಕ್ಕಳ ಕಿಟ್ ಒಂದನ್ನು ಅಭಿವೃದ್ಧಿಪಡಿಸಬೇಕೆಂಬ ಅಸೆ ಇತ್ತು. ಅಧವ್ ಬರ್ತ್​ಡೇಗಾಗಿ ನಾನು ಕೂಡಾ ಒಂದು ಗಿಫ್ಟ್ ಖರೀದಿಸಬೇಕಿತ್ತು. ನಾನು ಒಳ್ಳೆಯ ಗಿಫ್ಟ್ ಖರೀದಿಸಿದೆ. ಈಗ ಸಾಕಷ್ಟು ಆಯ್ಕೆಗಳಿವೆ. ಆದರೆ, ಅವುಗಳಲ್ಲಿ ಬಹುತೇಕ ಗೊಂಬೆಗಳಿಗೆ ತಲೆ ಇರಲ್ಲ. ಅಂದರೆ, ಮಕ್ಕಳ ಅಭಿವೃದ್ಧಿಗೆ ಅವು ಪೂರಕವಾಗಿಲ್ಲ. ನಾನು ಕೆಲವು ಫನ್ ಟಾಯ್, ಪುಸ್ತಕ ಮತ್ತು ಕಲಿಕೆಯ ಆಟಿಕೆಗಳನ್ನು ಮಕ್ಕಳಿಗಾಗಿ ಖರೀದಿಸಿದೆ. ಅವತ್ತೇ ನಾನು ಆ್ಯಪ್​​​ ಒಂದನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ. ಫನ್ ಮತ್ತು ಕಲಿಕೆಯನ್ನು ಒಗ್ಗೂಡಿಸಿ ಮಕ್ಕಳಿಗೆ ಇಷ್ಟವಾಗುವ ಹಾಗೆ ಪ್ರತಿ ತಿಂಗಳೂ ಒಂದು ಉತ್ಪನ್ನವನ್ನು ತಯಾರಿಸಿ ವಿಜಯ್​​ರಂತಹ ಪೋಷಕರಿಗೆ ನೀಡಲು ಯೋಚಿಸಿದೆ. ಅವತ್ತೇ ಫ್ಲಿಂಟೋ ಹುಟ್ಟಿಕೊಂಡಿತು,” ಎನ್ನುತ್ತಾರೆ ಅರುಣ್.

image


ಫ್ಲಿಂಟೋ ಎನ್ನುವುದು ಥೀಮ್ ಆಧರಿತ 3-7 ವರ್ಷ ವಯಸ್ಸಿನ ಮಕ್ಕಳಿಗೆ ಕಲಿಕೆಯ ಸಾಧನವಾಗಿದೆ. ಇದರಿಂದಾಗಿ ಮಕ್ಕಳು ಮನೆಯಲ್ಲಿ ಹೆಚ್ಚು ಕಾಲವನ್ನು ಅರ್ಥಪೂರ್ಣವಾಗಿ ಕಳೆಯಬಹುದಾಗಿದೆ. ಪ್ರತೀ ತಿಂಗಳೂ ಒಂದು ಹೊಸ ಥೀಮ್ ಅನ್ನು ಕೊಡುತ್ತೇವೆ. ವಿಜ್ಞಾನ, ಕಲೆ, ಕ್ರಾಫ್ಟ್, ಗೇಮ್ಸ್ , ಚಿತ್ರಪುಸ್ತಕಗಳು ಸೇರಿದಂತೆ ಎಲ್ಲವನ್ನೂ ಮನೆಗೆ ತಲುಪಿಸುತ್ತೇವೆ. ಪ್ರತಿಯೊಂದು ಫ್ಲಿಂಟೋ ಬಾಕ್ಸ್ ಕೂಡಾ ಎಲ್ಲಾ ಸಾಮಗ್ರಿಗಳ ಜೊತೆಗೆ ಹೇಗೆ ಬಳಸಬೇಕು ಎನ್ನುವ ಮಾರ್ಗದರ್ಶಿ ಪುಸ್ತಕವನ್ನೂ ಒಳಗೊಂಡಿರುತ್ತದೆ.

ಮಕ್ಕಳ ತಜ್ಱರು, ಆಕ್ಟಿವಿಟಿ ಡೆವಲಪರ್ಸ್, ಮತ್ತು ಕಲಿಕಾ ತಜ್ಱರ ಸಹಾಯವನ್ನು ಪಡೆದುಕೊಂಡೇ ಪ್ರತಿ ಫ್ಲಿಂಟೋ ಬಾಕ್ಸನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಎಕ್ಸ್​​ಕ್ಲೂಸಿವ್, ಅತ್ಯುತ್ತಮ ಗುಣಮಟ್ಟದ ಹಾಗೂ ಗ್ರಾಹಕ ಆಧರಿತ ಸರಕುಗಳೊಂದಿಗೆ ಬಾಕ್ಸ್ ಅನ್ನು ವಿಶಿಷ್ಟವಾಗಿ ರೂಪಿಸಲಾಗಿರುತ್ತದೆ. ಇದನ್ನು ಉಪಯೋಗಿಸುವುದರಿಂದ ಮಕ್ಕಳಲ್ಲಿ ಕೌಶಲ್ಯ, ಕ್ರಿಯೇಟಿವಿಟಿ, ಸಂಶೋಧನೆ, ಭಾಷೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.

ವ್ಯವಹಾರ

2013ರ ಫೆಬ್ರವರಿಯಲ್ಲಿ ಅರುಣ್ ಮತ್ತವರ ತಂಡ ಈ ಉತ್ಪನ್ನದ ಮೇಲೆ ಕೆಲಸ ಆರಂಭಿಸಿತು. “ಏಪ್ರಿಲ್ ವರೆಗೆ ನಾವು ಇದರ ಮೇಲೆ ಸಂಶೋಧನೆ ನಡೆಸಿ, ಪ್ರಾಯೋಗಿಕವಾಗಿ ಪರೀಕ್ಷಿಸಿ ನೋಡಿದೆವು. ಮೇನಲ್ಲಿ ಖಾಸಗಿ ಬೇಟಾ ಆರಂಭಿಸಿದೆವು. 2013ರ ಜೂನ್​​ನಲ್ಲಿ ನಾವು ಸಾರ್ವಜನಿಕರಿಗೆ ಮುಕ್ತಗೊಳಿಸಿದೆವು. ಅವರು ಇದನ್ನು ಇಷ್ಟಪಟ್ಟರು,”

ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಬಳಿಕ, ಕಂಪನಿಗೆ ಪ್ರೋತ್ಸಾಹದಾಯಕ ವ್ಯವಹಾರ ಆರಂಭವಾಯಿತು. “ನಾವು ಮೊದಲ ಮತ್ತು ಎರಡನೇ ತಿಂಗಳಿನಲ್ಲಿ ಗ್ರಾಹಕರ ಸಂಖ್ಯೆಯನ್ನು ದ್ವಿಗುಣಗೊಳಿಸಿದೆವು. ಸಧ್ಯಕ್ಕೆ ನಮ್ಮ ಬಳಿ 500 ಗ್ರಾಹಕರಿದ್ದು, ಶೇಕಡಾ 40ರಷ್ಟು ಮಂದಿ ಸುದೀರ್ಘವಾಗಿ ಗ್ರಾಹಕರಾಗಿದ್ದಾರೆ. ಮೌಖಿಕ ಪ್ರಚಾರದ ಮೂಲಕವೇ ಇಷ್ಟೊಂದು ಜನರನ್ನು ತಲುಪಿದ್ದೇವೆ ಎನ್ನುತ್ತಾರೆ ಸಂಸ್ಥಾಪಕರು. ಇದೀಗ, ಬೇರೆ ಮಾಧ್ಯಮಗಳ ಮೂಲಕವೇ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಶೇಕಡಾ 70ಕ್ಕೂ ಹೆಚ್ಚು ಗ್ರಾಹಕರು ಫ್ಲಿಂಟೋವನ್ನು ಗೆಳೆಯರ ಬಳಿ ನೋಡಿಯೇ ಬಳಸುತ್ತಿದ್ದಾರೆ. ಫ್ಲಿಂಟೋ ಬಾಕ್ಸ್​​ನ ಅನುಭವ ಪಡೆದಿದ್ದಾರೆ. ನಾವು ಇತರ ಮಾರುಕಟ್ಟೆ ವೇದಿಕೆಗೂ ಪ್ರವೇಶಿಸುತ್ತಿದ್ದು, ದೇಶದ ಉದ್ದಗಲಕ್ಕೂ ಉತ್ಪನ್ನ ತಲುಪಿಸಲು ತಯಾರಿ ನಡೆಸಿದ್ದೇವೆ.

ಕೇವಲ ವ್ಯವಹಾರವಷ್ಟೇ ಅಲ್ಲ, ಗ್ರಾಹಕರ ಪ್ರತಿಕ್ರಿಯೆಯೂ ಸಾಕಷ್ಟು ತೃಪ್ತಿ ನೀಡುತ್ತಿದೆ ಎನ್ನುತ್ತಾರೆ ಅರುಣ್. 5 ವರ್ಷದ ಹುಡುಗನೊಬ್ಬ ತನ್ನ ಬರ್ತ್​ಡೇ ಕೇಕ್ ಮೇಲೆ ಫ್ಲಿಂಟೋ ಚಿತ್ರ ಬಿಡಿಸಲು ಹಠ ಹಿಡಿದಿರುವ ಸುದ್ದಿಗಳು ನಮಗೆ ಮತ್ತಷ್ಟು ಉತ್ಸಾಹ ತುಂಬುತ್ತವೆ ಎನ್ನುತ್ತಾರೆ ಅರುಣ್. ಆ ಹುಡುಗನನ್ನು ಕರೆದು ಬರ್ತ್​ಡೇಯನ್ನೂ ಆಚರಿಸಿದ್ದಾರೆ.

image


ಮುಂದಿನ ಹಾದಿ

ಫ್ಲಿಂಟೋದಂತಹ ಯೋಚನೆಗಳಿಗೆ ಪಶ್ಚಿಮ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಇದೆ. ಸಾಂಪ್ರದಾಯಿಕ ಪೋಷಕರೂ ಈಗ, ಮಕ್ಕಳ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನ ಕೊಡಲು ಆರಂಭಿಸಿದ್ದಾರೆ. ಭಾರತದಲ್ಲಿ ಜವಬ್ದಾರಿಯುತ ಪೋಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರು ಮನೆಗಳಲ್ಲಿ ಮಕ್ಕಳನ್ನು ಅರ್ಥಪೂರ್ಣವಾಗಿ ಬೆಳೆಸುತ್ತಿದ್ದಾರೆ. ಫ್ಲಿಂಟೋ ಬಾಕ್ಸ್ ಮಕ್ಕಳನ್ನು ಅರ್ಥಪೂರ್ಣವಾಗಿ ಬಳಸಲು ಪೋಷಕರಿಗಾಗಿ ಇರುವ ಸಾಧನವಾಗಿದೆ. ಪ್ರತಿ ಫ್ಲಿಂಟೋ ಬಾಕ್ಸ್ ಕೂಡಾ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುತ್ತಿದೆ. ಸಧ್ಯ ನಮ್ಮ ಎಲ್ಲಾ ಗ್ರಾಹಕರೂ ಕೂಡಾ ಪೋಷಕರಾಗಿದ್ದು, ಅವರು ಇದನ್ನು ಇಷ್ಟಪಡುತ್ತಿದ್ದಾರೆ ಎನ್ನುತ್ತಾರೆ ಅರುಣ್

7 ಜನರ ಈ ತಂಡ, ಮುಂದಿನ ದಿನಗಳಲ್ಲಿ ಹೂಡಿಕೆಯನ್ನು ಆಹ್ವಾನಿಸಲು ಸಿದ್ಧತೆ ನಡೆಸುತ್ತಿದೆ. ಸಧ್ಯದ ವಹಿವಾಟಿನ ಪ್ರಮಾಣ ಗಮನಿಸಿದರೆ, ಭಾರತದಲ್ಲಿ ದೊಡ್ಡ ವಾಣಿಜ್ಯ ಉದ್ಯಮವಾಗುವುದು ಖಚಿತ ಎನ್ನುತ್ತಾರೆ ಅರುಣ್ ಮತ್ತವರ ತಂಡದ ಸದಸ್ಯರು.

Add to
Shares
8
Comments
Share This
Add to
Shares
8
Comments
Share
Report an issue
Authors

Related Tags