ಆವೃತ್ತಿಗಳು
Kannada

ವೀಕೆಂಡ್ ಲಾಂಗ್ ರೈಡ್​ಗೆ ಗಂಡುಗಾಡಿ ರಾಯಲ್ ಎನ್​ಫೀಲ್ಡ್​​ ಬೇಕಾ? ಸಿಲಿಕಾನ್ ನಗರಿಯ ಈ ರಾಯಲ್ ಬ್ರದರ್ಸ್ ಸಂಸ್ಥೆ ನಿಮ್ಮ ನೆರವಿಗೆ ಬರುತ್ತದೆ..!

ವಿಶ್ವಾಸ್​ ಭಾರಾಧ್ವಾಜ್​

27th Feb 2016
Add to
Shares
2
Comments
Share This
Add to
Shares
2
Comments
Share

ರಜಾ ದಿನಗಳು ಬಂತಂದ್ರೆ ಜಾಲಿ ಟ್ರಿಪ್ ಪ್ಲಾನ್ ಮಾಡುವ ದೊಡ್ಡ ಸಮೂಹವೇ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿದೆ. ಹೇಳಿಕೇಳಿ ಇದು ಐಟಿ-ಬಿಟಿ ಕಂಪೆನಿಗಳ ಕರ್ಮಭೂಮಿ. ಇಲ್ಲಿನ ಸಾಫ್ಟ್​ವೇರ್ ಉದ್ಯೋಗಿಗಳೂ, ಟೆಕ್ಕಿಗಳೂ ವಾರವಿಡಿ ಒತ್ತಡದ ಕೆಲಸ ಮಾಡಿ ದಣಿದಿರುತ್ತಾರೆ. ಒತ್ತಡದಿಂದ ಕೊಂಚ ಮುಕ್ತಿ ಸಿಕ್ಕರೂ ದೇಹ ಹಾಗೂ ಮನಸು ರಿಫ್ರೆಶ್ ಆಗುತ್ತದೆ. ಅದಕ್ಕೆ ಅವರು ಕಂಡುಕೊಂಡಿರುವ ವಿಧಾನವೇ ವೀಕೆಂಡ್ ಔಟಿಂಗ್. ಆದ್ರೆ ಕ್ಲಬ್, ಪಬ್, ರೆಸಾರ್ಟ್ ಮುಂತಾದ ಕಡೆಗಳ ವೀಕೆಂಡ್ ಮಸ್ತಿಗಿಂತ ಉಲ್ಲಾಸ ಕೊಡೋದು ಔಟ್​ಸೈಡ್ ರೈಡ್. ಬೆಂಗಳೂರಿನ ಮಡಿಲು ಬಿಟ್ಟು ಹೊರಗೆಲ್ಲಾದರೂ ಬೈಕ್​ನಲ್ಲಿ ಲಾಂಗ್ ರೈಡ್ ಹೋಗೋ ಮಜಾನೇ ಬೇರೆ.

image


ಒಬ್ಬ ಬೈಕರ್​ಗೆ ಇಂತಹ ಲಾಂಗ್ ರೈಡ್​ಗಳಿಗೆ ಅತ್ಯುತ್ತಮ ಸಂಗಾತಿ ಗಂಡುಗಾಡಿ ಅಂತಲೇ ಕರೆಸಿಕೊಳ್ಳುವ ರಾಯಲ್ ಎನ್​ಫೀಲ್ಡ್​​. ಆದರೆ ಇಲ್ಲೊಂದು ಸಮಸ್ಯೆ ಎದುರಾಗುತ್ತದೆ. ನಿಮ್ಮ ಸಹಚರರೊಟ್ಟಿಗೆ ಲಾಂಗ್ ರೈಡ್ ಮಾಡಬೇಕು ಅನ್ನೋ ಯೋಚನೆ ನಿಮ್ಮಲ್ಲಿದ್ರೂ ಅನೇಕ ವೇಳೆ ಎಲ್ಲಾ ಗೆಳೆಯರಲ್ಲಿ ಬೈಕ್ ಇರುವುದಿಲ್ಲ. ಇದ್ದರೂ ಅದು ರಾಯಲ್ ಎನ್ಫೀಲ್ಡ್ ಆಗಿರುವುದಿಲ್ಲ.ಇದೊಂದೆ ಕಾರಣಕ್ಕೆ ಬೈಕ್ ರೈಡ್​​ನ ನಿಮ್ಮ ಮೋಜಿನ ಟ್ರಿಪ್ ಪ್ಲಾನ್ ರದ್ಧಾಗುವ ಸಂದರ್ಭವಿರುತ್ತವೆ. ಈ ಸಮಸ್ಯೆಯನ್ನು ಅರಿತ ರಾಯಲ್ ಬ್ರದರ್ಸ್ ಬೈಕ್​ಗಳನ್ನು ಬಾಡಿಗೆ ನೀಡುವ ಕೆಲಸ ಮಾಡ್ತಿದೆ. ಬೆಂಗಳೂರಿನ ರಾಯಲ್ ಬ್ರದರ್ಸ್ ಧೈರ್ಯದ ಮೇಲೆ ನೀವಿನ್ನು ನಿಶ್ಚಿಂತೆಯಿಂದ ವೀಕೆಂಡ್ ಬೈಕ್ ರೈಡ್ ಆಯೋಜಿಸಬಹುದು.

ಇದನ್ನು ಓದಿ

ಪದ್ದತಿಯೂ ಹೌದು ವ್ಯಾಪಾರವೂ ಹೌದು

ಇಲ್ಲಿ ಮುಖ್ಯ ವಿಶೇಷತೆ ಅಂದರೆ ಸೆಲ್ಪ್ ರೈಡಿಂಗ್ ಬೈಕ್​​ಗಳನ್ನು ಬಾಡಿಗೆ ಕೊಡುವ ಈ ರಾಯಲ್ ಬ್ರದರ್ಸ್, ಕಾರ್ಯಾಚರಣೆ ನಡೆಸುತ್ತಿರೋದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ. ಮಣಿಪಾಲ್, ಮಂಗಳೂರು ಹಾಗೂ ಮೈಸೂರಿನಲ್ಲಿಯೂ ಈ ಸಂಸ್ಥೆಯ ಶಾಖೆಗಳಿವೆ. ಆರ್.ಟಿ.ಓ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ದಕ್ಷಿಣ ಭಾರತದ ಮೊತ್ತ ಮೊದಲ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುವ ಸಂಸ್ಥೆ ಅನ್ನೋ ಶ್ರೇಯ ಸಹ ರಾಯಲ್ ಬ್ರದರ್ಸ್ಗಿದೆ.

ಮಹಾನಗರಿ ಬೆಂಗಳೂರಿನಲ್ಲಿ ಕೆಲಸ ಮಾಡುವಯುವಕರಿಗೆ ರಾಯಲ್ ಎನ್​ಫೀಲ್ಡ್ ರೈಡಿಂಗ್ ಕ್ರೇಝ್ ಸರ್ವೇ ಸಾಧಾರಣ. ಹಾಗಾಗಿ ರಾಯಲ್ ಬ್ರದರ್ಸ್ ಸಂಸ್ಥೆ ಥ್ರಿಲ್ಲಿಂಗ್ ರೈಡ್ಗಾಗಿ ಹೆಚ್ಚಾಗಿ ರಾಯಲ್ ಎನ್​ಫೀಲ್ಡ್ ಅನ್ನೇ ನೀಡುತ್ತದೆ. ರಾಯಲ್ ಬ್ರದರ್ಸ್ ಸಂಸ್ಥೆಯಲ್ಲಿ ರಾಯಲ್ ಏನ್ ಫೀಲ್ಡ್ ಕ್ಲಾಸಿಕ್ ಬೈಕ್​​ಗಳನ್ನು ಹೆಚ್ಚಾಗಿ ಬಾಡಿಗೆ ನೀಡಲಾಗುತ್ತೆ. ಸಂಸ್ಥೆಯಲ್ಲಿ ಬರೋಬ್ಬರಿ 150 ರಾಯಲ್ ಎನ್​ಫೀಲ್ಡ್ ಬೈಕ್​​ಗಳಿವೆ. ಅವುಗಳಲ್ಲಿ 75 ಬೈಕ್​​ಗಳು ಸಿಲಿಕಾನ್ ನಗರಿ ಬೆಂಗಳೂರಿನಲ್ಲಿಯೇ ಲಭ್ಯವಿದೆ. ಕೇವಲ ಯುವಕರಿಗೆ ಮಾತ್ರವಲ್ಲದೇ ಯುವತಿಯರಿಗೂ ದ್ವಿಚಕ್ರವಾಹನಗಳನ್ನು ಬಾಡಿಗೆಗ ನೀಡಲಾಗುತ್ತದೆ. ಮಹಿಳೆಯರಿಗಾಗಿ ಅಂತಲೇ ಕೈನಿಟಿಕ್ ಹೋಂಡಾ, ಹೋಂಡಾ ಆಕ್ಟೀವಾಗಳು ರಾಯಲ್ ಬ್ರದರ್ಸ್​ನಲ್ಲಿ ಲಭ್ಯವಿದೆ.

image


ಯಾವುದೇ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಪಡೆಯಲು ಆನ್ ಲೈನ್ ಮುಖಾಂತರ ಬುಕ್ ಮಾಡ್ಬೇಕು. ಬುಕ್ ಮಾಡಿದ ಕೇವಲ ಒಂದು ಗಂಟೆಯ ಆಸುಪಾಸಿನಲ್ಲಿ ಬೈಕ್ ನಿಮ್ಮ ಕೈ ಸೇರುತ್ತದೆ. ವಾರಾಂತ್ಯದ ಸಮಯವಾದರೇ ರಾಯಲ್ ಎನ್ ಫೀಲ್ಡ್ ಬೈಕ್​ಗೆ ಪ್ರತೀ ಗಂಟೆಗೆ 40 ರೂಪಾಯಿ ದರ ನಿಗದಿಪಡಿಸಲಾಗಿದೆ. ಬೇರೆ ದಿನಗಳಾದರೇ ಪ್ರತೀ ಗಂಟೆಗೆ 36 ರೂಪಾಯಿಯಂತೆ ಪಾವತಿಸಬೇಕು. ಯುವತಿಯರಿಗಾಗಿ ಲಭ್ಯವಿರುವ ಕೈನಿಟಿಕೆ ಹೋಂಡಾ ಅಥವಾ ಹೋಂಡಾ ಆಕ್ಟಿವಾಗಳಾದರೇ ಗಂಟೆಗೆ 10 ರೂಪಾಯಿ ದರ ನಿಗದಿಯಾಗಿದೆ. ಬಾಡಿಗೆ ಪಡೆಯುವರು ಯಾವುದಾದರೂ ಸರ್ಕಾರಿ ಗುರುತಿನ ಚೀಟಿ ಉದಾಹರಣೆಗೆ ಚುನಾವಣಾ ಗುರುತಿನ ಚೀಟಿ, ಆಧಾರ್, ಪಾಸ್​ಪೋರ್ಟ್ ಅಥವಾ ಡ್ರೈವಿಂಗ್ ಲೈಸನ್ಸ್​​ನ ನಕಲು ನೀಡಿದರೆ ಸಾಕು. ಪ್ರತಿ ದಿನ ದ್ವಿಚಕ್ರವಾಹನ ಬೇಕೆಂದರೇ ನಿಗದಿಯಾಗಿರುವ ದರದಲ್ಲಿ ಕೊಂಚ ರಿಯಾಯಿತಿ ಸಹ ನೀಡಲಾಗುತ್ತದೆ.

2015ರಲ್ಲಿ ಆರಂಭವಾದ ರಾಯಲ್ ಬ್ರದರ್ಸ್ ಸಂಸ್ಥೆಯ ಸಂಸ್ಥಾಪಕರು ಮಂಜುನಾಥ್, ಶ್ರೀಕೃಷ್ಣ. ಹಾಗೂ ಅಭಿಷೇಕ್. ಎಂಜಿನಿಯರಿಂಗ್ ಪದವೀಧರರಾದ ಈ ಮೂವರು ತಮ್ಮದೇ ಸ್ವಂತ ಸಂಸ್ಥೆ ಹುಟ್ಟುಹಾಕಬೇಕೆನ್ನುವ ಮಹತ್ವಕಾಂಕ್ಷೆಯಿಂದ ಆರಂಭಿಸಿದ್ದು ಈ ರಾಯಲ್ ಬ್ರದರ್ಸ್ ಅನ್ನು. ರಾಜಧಾನಿಯಲ್ಲಿ ಕೆಲಸ ಮಾಡುವ ಮಲ್ಟಿ ನ್ಯಾಷನಲ್ ಕಂಪೆನಿಗಳ ಯುವಕರೇ ಇವರ ಟಾರ್ಗೆಟ್ ಕಸ್ಟಮರ್. ಬೈಕರ್ ಯುವಕರನ್ನೇ ಕೇಂದ್ರವಾಗಿಟ್ಟುಕೊಂಡು ಆರಂಭವಾದ ರಾಯಲ್ ಬದ್ರರ್ಸ್​ಗೆ ಕ್ಷಿಪ್ರಗತಿಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ. ಬೈಕ್​ಗಳನ್ನು ಬಾಡಿಗೆ ನೀಡೋದು ಮಾತ್ರವಲ್ಲದೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದು ಸಂಸ್ಥೆಯ ವಿಶ್ವಾಸಾರ್ಹತೆ ವೃದ್ಧಿಯಾಗಲು ಕಾರಣ ಅನ್ನುತ್ತಾರೆ ಅಭಿಷೇಕ್.

ರಾಜ್ಯ ಸರ್ಕಾರ ಹಿಂಬದಿ ಸವಾರರಿಗೂ ಪಿಲಿಯನ್ ಹೆಲ್ಮೆಟ್ ಕಡ್ಡಾಯ ಅನ್ನುವ ನಿಯಮ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರಾಯಲ್ ಬದ್ರರ್ಸ್ ಸಂಸ್ಥೆ ಬೈಕ್​​ಗಳ ಜೊತೆ ಎರಡು ಹೆಲ್ಮೆಟ್​ಗಳನ್ನು ಸಹ ನೀಡುತ್ತದೆ. ಆದರೆ ಈ ಹೆಲ್ಮೆಟ್​ಗಳಿಗೆ ಪ್ರತ್ಯೇಕ ಬಾಡಿಗೆ ಇಲ್ಲ. ಸಂಸ್ಥೆಯ ಎಲ್ಲಾ ಬೈಕ್​ಗಳಿಗೆ ಜಿಪಿಎಸ್ ಸೌಕರ್ಯ ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣ ಗೋವಾದಲ್ಲಿಯೂ ಶಾಖೆ ತೆರೆಯಬೇಕು ಅನ್ನುವುದು ರಾಯಲ್ ಬ್ರದರ್ಸ್​ನ ಗುರಿಯಾಗಿದೆ. 

ಇದನ್ನು ಓದಿ

1. ಮೂರು ವರ್ಷಗಳಲ್ಲಿ 3 ಉದ್ಯಮಗಳ ಸ್ಥಾಪನೆ - ಇದು 33ರ ಹರೆಯದ ಅರ್ಪಿತಾರ ಸಾಧನೆ

2. ಹಳೆಯ ಅಮೂಲ್ಯ ವಸ್ತುಗಳಿಗೆ ಸಖತ್​ ರೇಟ್​..!

3. 50 ರೂಪಾಯಿಗೆ ಸಿಗಲಿದೆ ಧ್ವನಿ ಪೆಟ್ಟಿಗೆ: ಪ್ರಾಯೋಗಿಕ ಪರೀಕ್ಷೆ ಯಶಸ್ವಿ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags