ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ- ಸಾವಯವ ಪದ್ಧತಿಯಿಂದ ಜೀವನಕ್ಕೆ ಸಿಗುತ್ತದೆ ಖುಷಿ

ಟೀಮ್​ ವೈ.ಎಸ್​. ಕನ್ನಡ

ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ- ಸಾವಯವ ಪದ್ಧತಿಯಿಂದ ಜೀವನಕ್ಕೆ ಸಿಗುತ್ತದೆ ಖುಷಿ

Sunday April 30, 2017,

4 min Read

1960ರಲ್ಲಿ ಭಾರತದಲ್ಲಿ ಆದ ಹಸಿರು ಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನೇ ಬದಲಿಸಿತ್ತು. ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಕೃಷಿಗೆ ಬುನಾಧಿ ಹಾಕಿತ್ತು. ಗುಣಮಟ್ಟದ ಕೃಷಿ ಬೀಜಗಳ ಬಳಕೆ ರೈತರು ಕೃಷಿ ಬಗ್ಗೆ ಯೋಚನೆ ಮಾಡುತ್ತಿದ್ದ ದಿಕ್ಕುಗಳನ್ನು ಬದಲಿಸಿತ್ತು. ಭತ್ತ, ಗೋದಿ ಮತ್ತು ಇತರೆ ಬೆಳೆಗಳು ಆಧುನಿಕ ಕೃಷಿಕ್ರಾಂತಿಯಿಂದ ಹೆಚ್ಚು ಇಳುವರಿ ನೀಡಲಾರಂಭಿಸಿದವು.

ಹಸಿರು ಕ್ರಾಂತಿ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿತ್ತು. ಮತ್ತೊಂದು ಕಡೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏರು-ಪೇರಿಗೂ ಕಾರಣವಾಗಿತ್ತು. ಇದೆಲ್ಲದರ ಜೊತೆಗೆ ಅತಿಯಾದ ರಸಗೊಬ್ಬರ ಹಾಗೂ ರಾಸಾಯನಿಕಗಳ ಬಳಕೆ ನಿಧಾನವಾಗಿ ಮಣ್ಣಿನಲ್ಲಿದ್ದ ನೈಸರ್ಗಿಕ ಅಂಶಗಳನ್ನು ಕಡಿಮೆ ಆಗುವಂತೆ ಮಾಡಿತ್ತು. ಯಾವುದೇ ರೀತಿಯಲ್ಲಿ ಭೂಮಿಗೆ ವಿರಾಮ ನೀಡದೆ ಬೆಳೆಗಳನ್ನು ಬೆಳೆದಿದ್ದು ಮಣ್ಣು ಸತ್ವ ಕಳೆದುಕೊಳ್ಳಲು ಕಾರಣವಾಗಿತ್ತು. ಪಂಜಾಬ್​ನಲ್ಲಿ ಸೀಡ್ ಲೆಸ್ ಗೋಧಿಯ ಕೃಷಿಯ ಜೊತೆಗೆ ಅತೀಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚು ಇಳುವರಿಯನ್ನು ತಂದುಕೊಟ್ರೂ, ಪರಿಸರದ ಮೇಲೆ ದುಷ್ಪರಿಣಾಮ ಬೀರಿತ್ತು. ನದಿಗಳು, ಅಣೆಕಟ್ಟುಗಳಲ್ಲಿ ಸಂಗ್ರಹಿಸಿಟ್ಟ ನೀರು ಯಾವುದೇ ರೀತಿಯಲ್ಲೂ ಉಪಯೋಗಕ್ಕೆ ಬಾರದಂತೆ ಕಲುಷಿತವಾಗಿತ್ತು. ಕರ್ನಾಟದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟೇ ಫಲವತ್ತತೆ ಕಳೆದುಕೊಂಡಿದ್ದ ಭೂಮಿ ಯಾವುದೇ ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗಿರಲಿಲ್ಲ.

image


ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ದೊಡ್ಡದಾಗಿ ಬೆಳೆದಿತ್ತು. ವಾತಾವರಣದಲ್ಲಿನ ಬದಲಾವಣೆ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿತ್ತು. ಉಷ್ಣಾಂಶದಲ್ಲಿ ಏರಿಕೆ ಮತ್ತು ನೀರಿನ ಕೊರತೆ ದೇಶದ ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ. ಬಿಸಿಗಾಳಿ, ಗೋಧಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿದ್ದ ಮಧ್ಯಪ್ರದೇಶದ ಗೋಧಿ ಬೆಳೆಯ ಮೇಲೆ ಹೇಳಿಕೊಳ್ಳಲಾಗದಷ್ಟು ಪರಿಣಾಮ ಬೀರಿತ್ತು. ಈಶಾನ್ಯ ರಾಜ್ಯಗಳಲ್ಲಿ ಕೃಷಿ ಮುಖ್ಯ ಚಟುವಟಿಕೆ ಆಗಿತ್ತು. ಆದ್ರೆ ಅಲ್ಲಿ ಮುಂಗಾರು ಕೈ ಕೊಟ್ಟ ಕಾರಣದಿಂದ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ. ಕಾವೇರಿ ನೀರಿನ ಕೊರತೆಯಿಂದಾಗಿ ಕರ್ನಾಟಕದ ಮಂಡ್ಯ ಜಿಲ್ಲೆ, ತಮಿಳುನಾಡಿನಲ ತಂಜಾವೂರು ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ.

ವಾತಾವರಣ ಹಾಗೂ ಪರಿಸರದಲ್ಲಿನ ಪ್ರತಿಕೂಲ ಪರಿಣಾಮಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪಶ್ಚಿಮ ಯುರೋಪಿಯನ್ ರಾಷ್ಟ್ರಗಳಲ್ಲೂ ಇದು ಸಾಕಷ್ಟು ಪರಿಣಾಮ ಬೀರಿದೆ. ಸಾನ್ಲಕ್ ಆಗ್ರೋ ಇಂಡಸ್ಟ್ರೀಸ್ ಎಂ.ಡಿ. ಹಾಗೂ ಆರ್ಥಿಕ ತಜ್ಞ ಕಂ ಸಾಮಜಿಕ ಉದ್ಯಮಿ ವಿಕ್ರಮ್ ಶಂಕರನಾರಾಯಣನ್ ಪ್ರಕಾರ ಅತಿಯಾದ ರಾಸಾಯನಿಕಗಳ ಬಳಕೆ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬರಪ್ರದೇಶಗಳ ಸಂಖ್ಯೆಗಳು ಹೆಚ್ಚುತ್ತಿವೆ. ಅದೂ ಕೂಡ ಕೃಷಿ ಚಟುವಟಿಕೆಯೇ ಮುಖ್ಯವಾಗಿರುವ ಭಾಗದಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಕಡಿಮೆ ನೀರು ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ ಮತ್ತು ವಾತಾವರಣಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಯೋಜನೆಗಳನ್ನು ಮಾಡಬೇಕಿದೆ. ಈ ಮೂಲಕ ಆಹಾರ ಉತ್ಪನ್ನಗಳನ್ನು ಬೇಡಿಕೆ ತಕ್ಕಂತೆ ಪೂರೈಸುವ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯ ಕೂಡ ಆಗಿದೆ. ಹೀಗಾಗಿ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದು ಉತ್ತಮ ಮಾರ್ಗವಾಗಿದೆ.

image


ರಕ್ಷಣೆಗಾಗಿ ಸಿರಿಧಾನ್ಯ

ಇವತ್ತು ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಕೃಷಿ ಯಾಕೆ ಅಗತ್ಯವಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಪರಿಸರವನ್ನು ಸಂರಕ್ಷಿಸುವ ಹಾಗೂ ನೀರಿನ ಅಭಾವದ ನಡುವೆ ಉತ್ತಮ ಬೆಳೆ ಬೆಳೆಯುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಕಡಿಮೆ ನೀರಿನ ಮೂಲಕ ಕೃಷಿ ಮಾಡಬಹುದಾಗಿದೆ. ಸಿರಿಧಾನ್ಯಗಳಿಗೆ ಭತ್ತ, ಗೋದಿ ಮತ್ತು ಕಬ್ಬಿನ ಬೆಳೆಗಳಿಗಿಂತ ಶೇಕಡಾ 80ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಮಣ್ಣು ಸವೆತ ತಡೆಯೋದಿಕ್ಕೂ ಸಿರಿಧಾನ್ಯಗಳ ಕೃಷಿ ಸಾಕಷ್ಟು ನೆರವು ನೀಡಲಿದೆ.

image


“ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸಬಹುದು. ಸತತ ಕೃಷಿ ಚಟುವಟಿಕೆಗಳಿಂದ ಚಿಕ್ಕ ಬ್ರೇಕ್ ಕೂಡ ಭೂಮಿಗೆ ಸಿಗುತ್ತದೆ. ಮಣ್ಣಿನ ಸವೆತ ಹಾಗೂ ನೀರಿನ ಸಂರಕ್ಷಣೆ ಕೂಡ ಸಾವಯವ ಕೃಷಿಯಿಂದ ಸಾಧ್ಯವಿದೆ. ಅಷ್ಟೇ ಅಲ್ಲ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾವಯವ ಕೃಷಿ ನೆರವು ನೀಡುತ್ತದೆ. ”
ಲಿನೆಟ್ ಅಬಾಟ್, ಪ್ರೊಫೆಸರ್ ವೆಸ್ಟರ್ನ್ ಆಸ್ಟ್ರೇಲಿಯಾ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್

ಕೃಷಿಯಲ್ಲಿ ಧಾನ್ಯಗಳನ್ನು ಬೆಳೆಯುವ ಬಗೆ

ಭಾರತದಲ್ಲಿ ಕೃಷಿಕರು ಕೇವಲ ಧಾನ್ಯಗಳ ಬೆಳೆಯನ್ನೇ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಕ್ಕಿ ಮತ್ತು ಗೋಧಿ ಭಾರತದ ಆಹಾರ ಪದ್ಧತಿಗಳಲ್ಲಿ ಅತೀ ಪ್ರಮುಖ ಸ್ಥಾನವನ್ನು ಪಡೆದಿದೆ. ಹೀಗಾಗಿ ಸಂಪೂರ್ಣವಾಗಿ ಧಾನ್ಯಗಳನ್ನು ಬೆಳೆಯುವುದು ಮತ್ತು ಅವುಗಳನ್ನು ಉಪಯೋಗಿಸುವುದು ಮೂರ್ಖತನದ ಮಾತು. ಆದ್ರೆ ಧಾನ್ಯಗಳನ್ನು ಒಂದು ಪ್ರಮುಖ ಬೆಳೆಯ ನಂತರ ಉಪಬೆಳೆಯಾಗಿ ಮತ್ತೊಂದು ಬೆಳೆಯಸ ಮಧ್ಯದಲ್ಲಿ ಬೆಳೆಯಬಹುದು. ಇದು ಮಣ್ಣಿನ ಫಲವತ್ತತೆಯನ್ನು ಕಾಪಾಡಲುನ ವಿವಿಧ ರೀತಿಯಲ್ಲಿ ನೆರವು ನೀಡುತ್ತದೆ.

ಆದ್ರೆ ಧಾನ್ಯಗಳನ್ನು ಬೆಳೆಯುವುದಕ್ಕೆ ಸಾಕಷ್ಟು ಹಿನ್ನಡೆಗಳಿವೆ. ಭತ್ತ ಮತ್ತು ಗೋಧಿಗಿಂತ ಕಡಿಮೆ ಇಳವರಿಯನ್ನು ನೀಡುವ ಕಾರಣದಿಂದ ಕೃಷಿಕರು ಇದರ ಕಡೆಗೆ ಹೆಚ್ಚು ಗಮನಕೊಡುತ್ತಿಲ್ಲ. ಶಂಕರನಾರಾಯಣ ಪ್ರಕಾರ ಮಳೆ ಹಾಗೂ ನೀರಿನ ಕೊರತೆ ಇಲ್ಲದೇ ಇದ್ದರೆ ರೈತರು ಸಾವಯವ ಕೃಷಿ ಕಡೆ ಮನಸ್ಸು ಮಾಡುವುದು ಕಡಿಮವೆ. ಕಡಿಮೆ ಬೇಡಿಕೆ ಹಾಗೂ ಕಡಿಮೆ ಬೆಲೆ ಕೂಡ ರೈತರನ್ನು ಸಾವಯವ ಧಾನ್ಯಗಳ ಕೃಷಿಯಿಂದ ದೂರ ಇಟ್ಟಿದೆ. ಈ ಸಮಸ್ಯೆಗಳಿಗೆ ಇತ್ತೀಚೆಗೆ ರಾಜ್ಯ ಸರಕಾರದ ಅನೇಕ ಸಂಸ್ಥೆಗಳು ಪರಿಹಾರ ನೀಡುವ ಪ್ರಯತ್ನ ಮಾಡುತ್ತಿವೆ. ಉದಾಹರಣೆ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇ ಗೌಡರು ಧಾನ್ಯಗಳ ಬೇಡಿಕೆ ಹೆಚ್ಚಾಗಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಸಮರ್ಥ ಜೈವಿಕ ಕೃಷಿ

ಜೈವಿಕ ಕೃಷಿ ಮೂಲಕವೇ ಪರಿಸರ ಹಾಗೂ ನೀರಿನ ಸಂರಕ್ಷಣೆ ಕಷ್ಟವಾಗಬಹುದು. ಆದ್ರೆ ಅದಕ್ಕೆ ಬೇಕಾದ ಬೇರೆ ಮಾರ್ಗಗಳನ್ನು ಆಯ್ದುಕೊಳ್ಳಬೇಕಿದೆ. ಸಮರ್ಥ ಜೈವಿಕ ಕೃಷಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸಬಲ್ಲದು. ಕಡಿಮೆ ರಸಗೊಬ್ಬರಗಳ ಬಳಕೆ, ಹನಿನೀರಾವರಿ ಪದ್ಧತಿ ಮತ್ತು ಸಾವಯವ ಗೊಬ್ಬರಗಳ ಬಳಕೆ ಕೃಷಿ ಚಟುವಟಿಕೆಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಸಾಕಷ್ಟು ಉಪಕಾರಿಯಾಗುವುದು ಖಚಿತ.

ರಾಜ್ಯ ಸರಕಾರ, ಹಲವು ಎನ್ ಜಿ ಒ ಗಳು ಈ ಬಗ್ಗೆ ಅರಿವು ಮೂಡಿಸಲು ರೈತರ ಜೊತೆ ಸಂವಾದಗಳನ್ನು ನಡೆಸುತ್ತಿವೆ. ಉದಾಹರಣೆಗೆ ಕಲ್ಚರಲಲ್ ರೀಸರ್ಚ್ ಮತ್ತು ಆ್ಯಕ್ಷನ್ (ICRA) ಸುಮಾರು 5000 ಕೃಷಿಕರ ಜೊತೆ ಕೆಲಸ ಮಾಡುತ್ತಿದೆ. ಇದು ಆ ಪ್ರದೇಶಗಳಲ್ಲಿ ಹಲವು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವ ಯೋಜನೆಗಳನ್ನು ರೈತರಿಗೆ ತಿಳಿ ಹೇಳುತ್ತಿದೆ. ಅಷ್ಟೇ ಅಲ್ಲ ಕಡಿಮೆ ನೀರಿನ ಬಳಕೆ ಹಾಗೂ ಕಡಿಮೆ ರಾಸಾಯನಿಕಗಳ ಬಳಕೆಗೂ ಉತ್ತೇಜನ ನೀಡುತ್ತಿವೆ.

ಒಂದಂತೂ ಸತ್ಯ ಭಾರತದಲ್ಲಿ ಕೃಷಿ ಚಟುವಟಿಕಗಳ ಕ್ರಮ ಒಂದೆರಡು ತಿಂಗಳಿನಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ. ಅದಕ್ಕೆ ವರ್ಷಗಳೇ ಬೇಕೆ. ಇವತ್ತು ಶುರು ಮಾಡಿಕೊಂಡರೇ ಮುಂದಿನ ಪೀಳಿಗೆಯಾದ್ರೂ ಸಾವಯವ ಕೃಷಿ ಕಡೆ ಗಮನ ಕೊಡಬಹುದು. ಪರಿಸರ ರಕ್ಷಣೆಗೆ ಮುಂದಾಗಬಹುದು. ಕರ್ನಾಟಕದಲ್ಲಿ ಕೇವಲ 4 ವರ್ಷಗಳ ಹಿಂದೆ ಸಾವಯವ ಕೃಷಿಯನ್ನು ಕೇವಲ 4000 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದ್ರೆ ಇವತ್ತು ಸುಮಾರು 94000 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಇದು ಇದೇ ರೀತಿಯಲ್ಲಿ ಮುಂದುವರೆದರೆ ವಾತಾವರಣ ಹಾಗೂ ಭೂಮಿಯ ರಕ್ಷಣೆ ಸಾಧ್ಯವಿದೆ. 

ಇದನ್ನು ಓದಿ:

1. ಮಣ್ಣಿನ ಗುಣಮಟ್ಟ ಕಾಪಾಡಲು ಬೇಕು ಸಾವಯವ ಕೃಷಿ - ಸಿರಿಧಾನ್ಯಗಳಲ್ಲಿದೆ ಉತ್ತಮ ಆರೋಗ್ಯದ ಸೀಕ್ರೆಟ್

2. ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

3. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಕಲರವ...