ಆವೃತ್ತಿಗಳು
Kannada

ಆ್ಯಪ್ ಮೆಟ್ರಿಕ್ಸ್​​​ನತ್ತ ಚಿತ್ತ-ಸ್ಟೈಲ್ ಆ್ಯಪ್ ಯಶಸ್ಸಿಗಾಗಿ ಪಾಠ

ಭಾರತಿ ಭಟ್​​

10th Nov 2015
Add to
Shares
1
Comments
Share This
Add to
Shares
1
Comments
Share

ಇನ್ಮೇಲೆ ನಿಮಗಿಷ್ಟವಾದ ಸಲೂನ್, ಸ್ಪಾ, ಅಥವಾ ಬ್ಯೂಟಿಪಾರ್ಲರ್‍ಗಳನ್ನು ಹುಡುಕಿಕೊಂಡು ಅಲೆಯಬೇಕಾಗಿಲ್ಲ. ಇದಕ್ಕಾಗಿಯೇ `ಸ್ಟೈಲ್' ಆ್ಯಪ್ ಬಂದಿದೆ. ಸ್ಟೈಲ್ ಆ್ಯಪ್‍ನ ಸಹಸಂಸ್ಥಾಪಕರಾದ ಶ್ರೀಕಾಂತ್ ಸಿಎಚ್ ಸಂಸ್ಥೆಯ ಏಳು ಬೀಳುಗಳು ಹಾಗೂ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಅವರ ಅನುಭವಗಳನ್ನು ಅವರ ಮಾತುಗಳಲ್ಲೇ ಕೇಳೋಣ.

image


ಇತ್ತೀಚೆಗಷ್ಟೆ `ದಿ ರೈಸ್ & ದಿ ಫಾಲ್ ಆಫ್ ದಿ ಎವರೆಸ್ಟ್' ಲೇಖನ ಓದಿದ್ದ ನನಗೆ ಅಚ್ಚರಿಯಾಗಿತ್ತು. ಆದ್ರೆ ಒಮ್ಮೆಲೇ ಜನರನ್ನು ಆಕರ್ಷಿಸಿದ್ದ ಅಪ್ಲಿಕೇಷನ್ ತಂತ್ರಜ್ಞಾನ ಅಂತಿಮವಾಗಿ ಕುಸಿತ ಕಂಡಿದ್ದೇಕೆ ಅನ್ನೋದು ಅರ್ಥವಾಗಿತ್ತು. ಎವರೆಸ್ಟ್ ಅನ್ನೋದು ಸರಿಯಾಗಿ ಆರಂಭವಾಗದ ಗುರಿ ಸ್ಥಾಪನೆಯ ಆ್ಯಪ್. ವಿನ್ಯಾಸ ಹಾಗೂ ನಿಧಿ ಸಂಗ್ರಹಿಸುವ ಸಂಸ್ಥಾಪಕರ ಸಾಮರ್ಥ್ಯದಿಂದಾಗಿ ಇದು ಅಪಾರ ಮೆಚ್ಚುಗೆ ಗಳಿಸಿತ್ತು. ಕಾರ್ಯಮಾದರಿ, ತಂತ್ರಜ್ಞಾನ ಸಹ ಸಂಸ್ಥಾಪಕರು ಇಲ್ಲದಿದ್ರೂ ನಿಧಿ ಸಂಗ್ರಹದಲ್ಲಿ ಮುಂದಿತ್ತು. ಆದ್ರೆ ಆ್ಯಪ್ ವೈಫಲ್ಯಕ್ಕೆ ಕಾರಣವನ್ನು ಸಂಸ್ಥಾಪಕರು 8 ತಿಂಗಳ ನಂತರ ಪರಿಗಣಿಸಿದ್ದಾರೆ ಅಂತಾ ಲೇಖನದಲ್ಲಿ ಬರೆಯಲಾಗಿದೆ. ಆದ್ರೆ ನಾವು ಇಂತಹ ತಪ್ಪನ್ನು ಮಾಡಿಲ್ಲ. `ಸ್ಟೈಲ್'ನಲ್ಲಿ ಪ್ರಸ್ತುತವಾದ ಮೆಟ್ರಿಕ್ಸ್ ಬಗ್ಗೆ ಮೊದಲೇ ಗಮನಹರಿಸಿದ್ವಿ. ಪ್ರಕ್ರಿಯೆಯ ಜೊತೆಗೆ ಕಲಿಕೆಯನ್ನೂ ಮುಂದುವರಿಸಿದ್ವಿ.

`ಸ್ಟೈಲ್' ಅನ್ನೋದು ಮೊಬೈಲ್ ಆ್ಯಪ್, ಸದ್ಯ ಬೆಂಗಳೂರಲ್ಲಿದೆ. ಸಲೂನ್‍ಗಳಿಗೆ ಗ್ರಾಹಕರು ಈ ಆ್ಯಪ್ ಮೂಲಕ ಅಪಾಯಿಂಟ್‍ಮೆಂಟ್ ಫಿಕ್ಸ್ ಮಾಡಿಕೊಳ್ಳಬಹುದು, ಅದರ ವೆಚ್ಚವನ್ನೂ ಕೇವಲ ಮೂರು ನಿಮಿಷಗಳೊಳಗೆ ಭರಿಸಬಹುದು. ಈ ಆ್ಯಪ್ ಪ್ರಸ್ತುತ ಸ್ಟೈಲ್ ಹಾಗೂ ಟ್ರೆಂಡ್‍ಗೆ ತಕ್ಕಂತಿದೆ. ಈ ಆ್ಯಪ್ ಅನ್ನು ಜನರು ಇನ್‍ಸ್ಟಾಲ್ ಮಾಡಿಕೊಳ್ಳುವುದು ದೊಡ್ಡ ಸವಾಲಲ್ಲ, ಆದ್ರೆ ಅದರಲ್ಲಿ ಜನರು ನಿರತರಾಗುವಂತೆ ಮಾಡುವುದೇ ಚಾಲೆಂಜ್. ಆ್ಯಪ್ ಬಳಕೆ ಅನ್ನೋದು, ಉತ್ತಮ ವಿನ್ಯಾಸ ಮತ್ತು ಲಕ್ಷಣವನ್ನೂ ಮೀರಿದ್ದು. ಗ್ರಾಹಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆ್ಯಪ್‍ನಿಂದಾಗುವ ಲಾಭದ ಬಗ್ಗೆ ವಿವರಿಸಿ, ಅದರಲ್ಲಿ ಅವರು ನಿರತರಾಗುವಂತೆ ಮಾಡಲು ನಾವು ಸಾಕಷ್ಟು ಕಸರತ್ತು ಮಾಡಿದ್ದೇವೆ.

image


ಪ್ರಯೋಜನಕಾರಿ ಅಂಶಗಳು...

ಆ್ಯಪ್ ಡೌನ್‍ಲೋಡ್ ಮಾಡಿಕೊಂಡವರ ಪೈಕಿ ಶೇಕಡಾ 22ರಷ್ಟು ಮಂದಿ ಒಮ್ಮೆ ಮಾತ್ರ ಅದನ್ನು ಬಳಸ್ತಾರೆ. ಹಾಗಾಗಿ ಬಳಕೆಯನ್ನು ಹೆಚ್ಚಿಸಲು ನೋಂದಣಿ ಅನಿವಾರ್ಯವಾಗಿತ್ತು. ಆ್ಯಪ್ ಇನ್‍ಸ್ಟಾಲ್ ಮಾಡಿಕೊಂಡವರಿಗೆಲ್ಲ ನಾವೊಂದು ಸುಂದರವಾದ ಇ-ಮೇಲ್ ಕಳಿಸುತ್ತೇವೆ. ಆ್ಯಪ್ ಇನ್‍ಸ್ಟಾಲ್ ಆಗಿ 8 ತಾಸುಗಳ ಬಳಿಕ ಮೇಲ್ ಕಳಿಸುವುದರಿಂದ ಲಾಭವಿದೆ ಅನ್ನೋದು ಆಗ ನಮಗೆ ಅರಿವಾಯ್ತು. ಆ್ಯಪ್‍ನ ಪ್ರಯೋಜನಗಳನ್ನು ತಿಳಿಸುವ ಕೂಪನ್ ಒಂದನ್ನು ಸಹ ಇ-ಮೇಲ್ ಜೊತೆಗೆ ಕಳಿಸಿಕೊಡಲಾಗುತ್ತದೆ. ಸರಿಯಾದ ರೀತಿಯಲ್ಲಿ ಸಲೂನ್ ಬುಕ್ಕಿಂಗ್ ಅನ್ನು ಸರಳಗೊಳಿಸುವ ಉದ್ದೇಶದಿಂದ ನಾವು ಇ-ಮೇಲ್ ಕಳಿಸುತ್ತಿದ್ವಿ. ಕ್ಲಿಕ್ ಹಾಗೂ ಪರಿವರ್ತನೆಯ ದರವನ್ನು ನೋಡಿದ ನಾವು ಸಂದೇಶದ ಜೊತೆ ಸ್ವಾಗತ ಇ-ಮೇಲ್ ಕಳಿಸಲಾರಂಭಿಸಿದ್ವಿ. ಇದ್ರಿಂದಾಗಿ ಬುಕ್ಕಿಂಗ್ ಸಂದರ್ಭದಲ್ಲಿ ರಿಯಾಯಿತಿ ಪಡೆಯಲು ಗ್ರಾಹಕರು ಕೂಪನ್ ಬಳಸಿಕೊಳ್ಳಲು ಅನುಕೂಲವಾಯ್ತು.

`ಬುಕ್ ನೌ ಆನ್ ಸ್ಟೈಲ್' ಇದ್ದಿದ್ದನ್ನು ನಾವು `ಆ್ಯಡ್ ಕೂಪನ್ ಆನ್ ಸ್ಟೈಲ್' ಎಂದು ಬದಲಾಯಿಸಿದ್ವಿ. ಇದರಿಂದಾಗಿ ಕ್ಲಿಕ್ ದರ ಶೇಕಡಾ 2 ರಿಂದ 5.5ರಷ್ಟು ಹೆಚ್ಚಳವಾಯ್ತು. ಪರಿವರ್ತನೆ ಡಬಲ್ ಆಗಿತ್ತು. ಬುಕ್ಕಿಂಗ್ ಸಂದರ್ಭದಲ್ಲಿ ಕೂಪನ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವುದು ಯೋಜನೆಯಾಗಿತ್ತು. ಅದರಂತೆ ಕೂಪನ್ ಪಡೆದ ಗ್ರಾಹಕರು ಯಾರೂ ಕೂಡ `ಸ್ಟೈಲ್' ಆ್ಯಪ್‍ನ್ನು ಅನ್‍ಇನ್‍ಸ್ಟಾಲ್ ಮಾಡಲು ಮುಂದಾಗಲಿಲ್ಲ.

ಸರಿಯಾದ ಸಮಯದಲ್ಲಿ ಮುನ್ನಡೆ...

ಬುಕ್ಕಿಂಗ್ ಹಾಗೂ ಗ್ರಾಹಕರ ಸಲೂನ್ ಭೇಟಿ ನಡುವೆ 23 ದಿನಗಳ ಅಂತರವಿತ್ತು. ಹಾಗಾಗಿ ಮುಂದಿನ ಸೇವೆ ನಿಗದಿಗೊಳಿಸಲು ಗ್ರಾಹಕರನ್ನು ಎಚ್ಚರಿಸುವ ಸಂದೇಶವೊಂದನ್ನು `ಸ್ಟೈಲ್' ಆ್ಯಪ್ ಮೂಲಕ ಕಳಿಸುತ್ತೇವೆ. ಇದ್ರಿಂದಾಗಿ ಶೇಕಡಾ 46ರಷ್ಟು ಗ್ರಾಹಕರು ಮತ್ತೊಮ್ಮೆ ಸಲೂನ್ ಸೇವೆ ಪಡೆಯಲು `ಸ್ಟೈಲ್' ಆ್ಯಪ್ ಮೂಲಕ ಬುಕ್ಕಿಂಗ್ ಮಾಡ್ತಿದ್ದಾರೆ. ಆ್ಯಪ್ ಬಳಕೆದಾರರಿಂದ ರೇಟಿಂಗ್ ಕೂಡ ಪಡೆಯುತ್ತಿದ್ದು, ಅದರಿಂದ್ಲೂ ಒಳ್ಳೆ ಫಲಿತಾಂಶ ಸಿಕ್ಕಿದೆ. `ಸ್ಟೈಲ್' ಮೂಲಕ ಬುಕ್ಕಿಂಗ್ ಮಾಡಿದ ಗ್ರಾಹಕರಿಂದ ಆ್ಯಪ್ ನೋಟಿಫಿಕೇಷನ್, ವಿಮರ್ಷೆ ಹಾಗೂ ರೇಟಿಂಗ್‍ನ್ನು ಕೇಳುತ್ತದೆ. ನಮಗೆ 5 ಸ್ಟಾರ್ ಕೊಡಿ ಎಂದೇನೂ ಕೇಳುವುದಿಲ್ಲ. ಆದ್ರೆ ನಕ್ಷತ್ರಗಳ ಚಿತ್ರವನ್ನು ಕ್ಲಿಕ್ ಮಾಡುವ ಮೂಲಕ ಗ್ರಾಹಕರು ಅಭಿಪ್ರಾಯ ಹಂಚಿಕೊಳ್ಳಬಹುದು.

image


ಅಸ್ಥಾಪನೆ ನಂತರದ ಬದುಕು...

ಬಳಕೆದಾರರು ಆ್ಯಪ್ ಇನ್‍ಸ್ಟಾಲ್ ಮಾಡಿಕೊಳ್ಳುವಂತೆ ನೋಡಿಕೊಂಡಾಕ್ಷಣ ನಮ್ಮ ಕೆಲಸ ಮುಗಿಯೆತೆಂದು ಅರ್ಥವಲ್ಲ. ಅಸ್ಥಾಪನೆಯ ದರಗಳು ಕೂಡ ಆ್ಯಪ್ ಕಂಪನಿಗಳಿಗೆ ದೊಡ್ಡ ತಲೆನೋವು. `ಸ್ಟೈಲ್'ನಲ್ಲಿ ನಾವು ಅಸ್ಥಾಪನೆಯ ದರವನ್ನು ಶೇಕಡಾ 38ಕ್ಕಿಂತ ಕಡಿಮೆ ಇರುವಂತೆ ನೋಡಿಕೊಂಡಿದ್ದೇವೆ. ಬಳಕೆದಾರರು ಆ್ಯಪ್ ಅನ್‍ಇನ್‍ಸ್ಟಾಲ್ ಮಾಡಿದ ಬಳಿಕವೂ ಅವರೊಂದಿಗೆ ಸಂಪರ್ಕದಲ್ಲಿರುವುದು ನಮ್ಮ ಉದ್ದೇಶ. ಇದಕ್ಕಾಗಿಯೇ ಆ್ಯಪ್ ಅಸ್ಥಾಪನೆಯ ಬಳಿಕ ಇ-ಮೇಲ್ ಒಂದನ್ನು ಕಳಿಸುತ್ತೇವೆ.

ಅನ್‍ಇನ್‍ಸ್ಟಾಲ್ ಮೇಲ್‍ನ ಅಂಕಿ ಅಂಶಗಳು ನಿಜಕ್ಕೂ ಪ್ರೋತ್ಸಾಹಕಾರಿಯಾಗಿವೆ. ಬಳಕೆದಾರರು ಅಸ್ಥಾಪನೆಗೆ ಕಾರಣಗಳನ್ನು ನೀಡಿ, ನಮ್ಮ ಇ-ಮೇಲ್‍ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಮುಂದೊಮ್ಮೆ ಸಲೂನ್ ಬುಕ್ಕಿಂಗ್ ಅಗತ್ಯವಿದ್ದಾಗ `ಸ್ಟೈಲ್' ಆ್ಯಪ್‍ನ ನೆರವು ಪಡೆಯುವುದಾಗಿ ಅಭಯ ನೀಡುತ್ತಾರೆ. ಆ್ಯಪ್‍ನಿಂದಾಗುವ ಪ್ರಯೋಜನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹ ಗ್ರಾಹಕರು ಇಮೇಲ್ ಕಳಿಸುತ್ತಾರೆ.

ಚಿಕ್ಕ ಚಿಕ್ಕ ಬದಲಾವಣೆಗಳು ಕೂಡ ಪರಿವರ್ತನೆಯ ದರದ ಮೇಲೆ ಎಂತಹ ಪರಿಣಾಮ ಬೀರುತ್ತವೆ ಅನ್ನೋದು ನಿಜಕ್ಕೂ ಕುತೂಹಲಕಾರಿ. ಸದ್ಯ ನಾವು ಮೆಟ್ರಿಕ್ಸ್ ಬಗ್ಗೆ ಹೆಚ್ಚು ಗಮನಹರಿಸಿದ್ದೇವೆ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags