ಆವೃತ್ತಿಗಳು
Kannada

ತೊಟ್ಟಿ ಸೇರುವ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಫ್ರಾನ್ಸ್‌ ಸರ್ಕಾರ..!

ಟೀಮ್​ ವೈ.ಎಸ್​. ಕನ್ನಡ

21st Sep 2016
Add to
Shares
7
Comments
Share This
Add to
Shares
7
Comments
Share

ಜಗತ್ತಿನಲ್ಲಿ ಆಹಾರ ಕಸದ ತೊಟ್ಟಿ ಸೇರುವಷ್ಟು ಇನ್ಯಾವ ವಸ್ತು ಕೂಡ ಸೇರುವುದಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ ವಿಶ್ವದಲ್ಲಿ ಕೇವಲ 3ನೇ ಒಂದು ಭಾಗದಷ್ಟು ಆಹಾರ ಮಾತ್ರ ಸೇವನೆಯಾಗುತ್ತದೆ. ಉಳಿದೆಲ್ಲಾ ಸೇರುವುದು ಕಸದ ತೊಟ್ಟಿಯನ್ನು. ಆದ್ರೆ ಇದೇ ಆಹಾರವನ್ನು ಅಗತ್ಯವಿರವವರಿಗೆ ಕೊಟ್ರೆ ಪುಣ್ಯವೂ ಸಿಗುತ್ತದೆ. ಅವರ ಹೊಟ್ಟೆ ತುಂಬಿಸಿದ ಕೀರ್ತಿಯೂ ಸಿಗುತ್ತದೆ. ಆಹಾರವನ್ನು ಬೇಡ ಅಂತ ಬಿಸಾಕುವ ಜನರಿಗೆ ಫ್ರಾನ್ಸ್‌ ಮೊದಲ ಪಾಠವಾಗಿದೆ. ಫ್ರಾನ್ಸ್‌ನಲ್ಲಿ ಇನ್ನುಮುಂದೆ ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಫುಡ್‌ ಬಜಾರ್‌ಗಳಲ್ಲಿ, ಉಳಿದ ಆಹಾರವನ್ನು ಡಸ್ಟ್‌ ಬಿನ್‌ಗೆ ಎಸೆಯುವಂತಿಲ್ಲ. ಒಂದುವೇಳೆ ಅಪ್ಪಿತಪ್ಪಿ ಎಸೆದ್ರೆ ಶಿಕ್ಷೆ ಗ್ಯಾರೆಂಟಿ. ಯಾಕಂದ್ರೆ ಫ್ರಾನ್ಸ್‌ ಸರ್ಕಾರ ಉಳಿದ ಆಹಾರವನ್ನು ಹಸಿವಿನಿಂದ ಬಳಲುತ್ತಿರುವವರಿಗೋ ಅಥವಾ ಅನಾಥಶ್ರಮಕ್ಕೋ ಅಥವಾ ಇನ್ಯಾವಿದೋ ಚಾರಿಟೇಬಲ್‌ ಟ್ರಸ್ಟ್‌ಗೆ ಕೊಡಬೇಕು ಅಂತ ಆಜ್ಞೆ ಹೊರಡಿಸಿದೆ. ಆಹಾರದ ವಿಷಯದಲ್ಲಿ ಈ ರೀತಿಯ ಕಾನೂನುನನ್ನು ಜಾರಿಗೆ ತಂದ ಜಗತ್ತಿನ ಮೊತ್ತ ಮೊದಲ ದೇಶ ಅನ್ನೋ ಕೀರ್ತಿ ಫ್ರಾನ್ಸ್‌ ಪಾಲಾಗಿದೆ.

image


ಫ್ರಾನ್ಸ್‌ ಸರಕಾರದ ಈ ಹೊಸ ಕಾನೂನಿಗೆ ಎಲ್ಲಾ ಕಡೆಯಿಂದಲೂ ಶ್ಲಾಘನೆ ಮತ್ತು ಬೆಂಬಲ ವ್ಯಕ್ತವಾಗಿದೆ. ಸೆನೆಟ್‌ನಲ್ಲಿ ಈ ಬಿಲ್‌ ಪಾಸ್‌ ಆಗುತ್ತಿದ್ದಂತೆ ಚಾರಿಟಿಗಳು ಮತ್ತು ಎನ್‌ಜಿಒಗಳು ಇದನ್ನು ಸ್ವಾಗತಿಸಿವೆ. ಅಷ್ಟೇ ಅಲ್ಲ ಇನ್ನುಮುಂದೆ ಹಸಿವಿನಿಂದ ಬಳಲುತ್ತಿರುವವರಿಗೆ ಈ ಹೊಸ ಕಾನೂನು ವರದಾನವಾಗಲಿದೆ ಅಂತ ಹೇಳಿದೆ. ಫುಡ್‌ ಬಜಾರ್‌ಗಳಲ್ಲಿ, ಮಾಲ್‌ಗಳಲ್ಲಿ ಬಳಕೆ ಮಾಡದೆ ಉಳಿದ ಆಹಾರವನ್ನು ಸಂಗ್ರಹಿಸಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಅಗತ್ಯವಿರುವವರಿಗೆ ತಲುಪಿಸಲು ಎನ್‌ಜಿಒಗಳು ಮತ್ತು ಚಾರಿಟೇಬಲ್‌ ಟ್ರಸ್ಟ್‌ಗಳು ಸೂಕ್ತಕ್ರಮಗಳನ್ನು ಕೈಗೊಳ್ಳಲಿವೆ. ಸರಕಾರದ ಈ ಕ್ರಮವನ್ನು ಸೂಪರ್‌ ಮಾರ್ಕೆಟ್‌ಗಳು ಮತ್ತು ದೇಶದ ಫುಡ್‌ ಬ್ಯಾಂಕ್‌ಗಳು ಕೂಡ ಸ್ವಾಗತಿಸಿವೆ.

" ಫುಡ್‌ಬ್ಯಾಂಕ್‌, ಮಾಲ್‌ ಮತ್ತು ಸೂಪರ್‌ ಮಾರ್ಕೆಟ್‌ಗಳಲ್ಲಿ ಉಳಿದ ಆಹಾರವನ್ನು ನಾವು ಸೂಚಿಸಿದ ಸಂಘಸಂಸ್ಥೆಗಳಿಗೆ ದಾನಮಾಡುತ್ತೇವೆ. ಅಷ್ಟೇ ಅಲ್ಲ ಮುಂಬರುವ ದಿನಗಳಲ್ಲಿ ನಾವು ಹೆಚ್ಚು ಪೋಷಕಾಂಶಗಳಿರುವ ಆಹಾರವನ್ನು ಉತ್ಪಾದಿಸುವ ಪ್ರಯತ್ನವನ್ನು ಕೂಡ ಮಾಡುತ್ತೇವೆ. ಸದ್ಯಕ್ಕೆ ನಾವು ಮಾಂಸ, ಹಣ್ಣು ಹಂಪಲು ಮತ್ತು ಪೋಷಕಾಂಶಗಳಿರುವ ತರಕಾರಿಗಳ ಅಭಾವ ಅನುಭವಿಸುತ್ತಿದ್ದೇವೆ. ಸರಕಾರದ ಈ ಹೊಸ ನಿಯಮ ಈ ಕೊರತೆಯನ್ನು ದೂರ ಮಾಡಲಿದೆ."
- ಜೇಕ್ಸ್‌ಬೈಲೆಟ್‌, ಫ್ರೆಂಚ್‌ ಫುಡ್‌ ಬ್ಯಾಂಕ್‌ ಅಧ್ಯಕ್ಷ

ಇತ್ತೀಚೆಗೆ ಫ್ರಾನ್ಸ್‌ನ ಹಲವು ಸೂಪರ್‌ ಮಾರ್ಕೆಟ್‌ಗಳಲ್ಲಿ ಮತ್ತು ಫುಡ್‌ ಬಜಾರ್‌ಗಳಲ್ಲಿ ಪ್ರತಿನಿತ್ಯ ಸಾವಿರಾರು ಟನ್‌ಗಳಷ್ಟು ಆಹಾರ ಉಪಯೋಗಿಸಲಾಗದೆ ತ್ಯಾಜ್ಯವಾಗುವ ಬಗ್ಗೆ ವರದಿ ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಮತ್ತು ಯಾವುದೇ ಕಾರಣಕ್ಕೂ ಪೋಷಕಾಂಶಗಳು ಕಸದ ಬುಟ್ಟಿ ಸೇರಬಾರದು ಅನ್ನೋ ನಿಟ್ಟಿನಲ್ಲಿ ಈ ಕಾನೂನನ್ನು ಜಾರಿಗೆ ತಂದಿದೆ. ಈ ಮೂಲಕ ತ್ಯಾಜ್ಯವನ್ನು ಕಡಿಮೆ ಮಾಡಲು ಸರ್ಕಾರವೇ ಈ ನಿರ್ಧಾರ ಮಾಡಿದೆ.

ಇದನ್ನು ಓದಿ: 145 ಪದವಿ ಸಂಪಾದಿಸಿದ್ದಾರೆ ಚೆನ್ನೈ ಪ್ರೊಫೆಸರ್..

ಯುರೋಪ್‌ನಲ್ಲಿ ಕಳೆದೊಂದು ದಶಕದಿಂದ ಉಪಯೋಗವಿಲ್ಲದೆ ತ್ಯಾಜ್ಯವಾಗುವ ಆಹಾರವನ್ನು ಬಳಕೆ ಮಾಡುವ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಅಷ್ಟೇ ಅಲ್ಲ ಯಾರಿಗೆ ಆಹಾರದ ಅಗತ್ಯವಿದೆಯೋ ಅವರಿಗೆ ಅದನ್ನು ದೊರಕಿಸಿಕೊಡುವ ಬಗ್ಗೆ ಯೋಜನೆಗಳು ರೂಪುಗೊಂಡಿದ್ದವು. ಹಲವು ಸಂಘಸಂಸ್ಥೆಗಳು ಈ ವಿಚಾರದಲ್ಲಿ ಸಾಕಷ್ಟು ಕೆಲವನ್ನು ಕೂಡ ನಿರ್ವಹಿಸುತ್ತಿವೆ. ಆದ್ರೆ ಫ್ರಾನ್ಸ್‌ ಸರ್ಕಾರ ಈ ವಿಚಾರದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಈ ಮಧ್ಯೆ ಡೆನ್ಮಾರ್ಕ್‌ನಲ್ಲಿ ಅತೀ ಹೆಚ್ಚು ಆಹಾರವನ್ನು ತ್ಯಾಜ್ಯವನ್ನಾಗಿಸುವ ಮತ್ತೆರಡು ಸೂಪರ್‌ ಮಾರ್ಕೆಟ್‌ಗಳ ಹೆಸರನ್ನು ಬಹಿರಂಗಗೊಳಿಸಲಾಗಿದೆ. ಯುರೋಪ್‌ನಲ್ಲಿ ಆಹಾರವನ್ನು ತ್ಯಾಜ್ಯವನ್ನಾಗಿ ಬಿಸಾಡುವ ವಿರುದ್ಧ ನಡೆಯುತ್ತಿರುವ ಈ ಹೋರಾಟದ ಫಲವಾಗಿ, ಸೂಪರ್‌ ಮಾರ್ಕೆಟ್‌ಗಳು ಶೆಕಡಾ 20ರಿಂದ 50 ರಷ್ಟು ದರವನ್ನು ಕಡಿಮೆ ಮಾಡಿ ಆಹಾರವನ್ನು ಮಾರುತ್ತಿವೆ. ಒಟ್ಟಿನಲ್ಲಿ ಫ್ರಾನ್ಸ್‌ ಮಾಡಿರುವ ಹೊಸ ಕಾನೂನನ್ನು ಜಗತ್ತಿನ ಉಳಿದ ದೇಶಗಳು ಕೂಡ ಜಾರಿಗೆ ತಂದ್ರೆ, ವಿಶ್ವವೇ ಹಸಿವು ಮುಕ್ತವಾಗಲಿದೆ ಅನ್ನೋದು ಉತ್ಪ್ರೇಕ್ಷೆ ಆಗಲಾರದು.

ಇದನ್ನು ಓದಿ:

1. ಕೊಕೊವಾದಿಂದ ಚಾಕಲೇಟ್ ತನಕದ ಕಥೆ..!

2. ಅಂದು ಕ್ಯಾಶಿಯರ್, ಇಂದು ಜೆಟ್​ ಏರ್​ವೇಸ್​ ಮಾಲೀಕ ..

3. ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ

Add to
Shares
7
Comments
Share This
Add to
Shares
7
Comments
Share
Report an issue
Authors

Related Tags