ಆವೃತ್ತಿಗಳು
Kannada

ಕೆಎಸ್ಆರ್​ಪಿಗೆ ಮಹಿಳಾ ಪೊಲೀಸರ ಬಲ

ಟೀಮ್​ ವೈ.ಎಸ್​. ಕನ್ನಡ

17th Apr 2017
Add to
Shares
8
Comments
Share This
Add to
Shares
8
Comments
Share

ಕಾವೇರಿ ನೀರಿಗಾಗಿ ನಡೆದ ಗಲಭೆಯನ್ನು ಕರ್ನಾಟಕದ ಜನತೆ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮೈಸೂರು ಮತ್ತು ಬೆಂಗಳೂರಿನಲ್ಲಂತೂ ಕಾವೇರಿ ವಿವಾದಕ್ಕೆ ಅದೆಷ್ಟು ಬಸ್​ಗಳು, ಲಾರಿಗಳು ಮತ್ತು ಇತರೆ ವಾಹನಗಳು ಸುಟ್ಟುಹೋಗಿತ್ತು ಅನ್ನುವುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಈ ಹೋರಾಟಗಳಲ್ಲಿ ಮಹಿಳೆಯರು ಕೂಡ ಭಾಗವಹಿಸಿದ್ದರು. ಹೋರಾಟ ಹಿಂಚಾಚಾರದ ರೂಪ ಪಡೆದಾಗಲೂ ಮಹಿಳೆಯರು ಹಿಂದೆ ಬಿದ್ದಿರಲಿಲ್ಲ. ಖಾಸಗಿ ಬಸ್ ಒಂದರ ಗೋಡೌನ್​ಗೆ ಮಹಿಳೆಯರೇ ಬೆಂಕಿ ಹಚ್ಚಿದ್ದರು ಅನ್ನುವುದು ಮತ್ತಷ್ಟು ವಿಚಿತ್ರ ಅನಿಸಿದ್ರು ಸತ್ಯವೆನಿಸುತ್ತಿದೆ. ಕೇವಲ ಕಾವೇರಿ ಗಲಾಟೆ ಮಾತ್ರವಲ್ಲ, ರಾಜ್ಯದಲ್ಲಿ ಇತ್ತೀಚೆಗೆ ಗಲಭೆಗಳು ನಡೆದಾಗಲೂ ಅಲ್ಲಿ ಮಹಿಳೆಯರಿದ್ರು. . ಆದ್ರೆ ಗಲಾಟೆ ನಡೆಯುವಾಗ ಪುರುಷರನ್ನು ಕಂಟ್ರೋಲ್ ಮಾಡಲು ಸಾಕಷ್ಟು ಪೊಲೀಸರು ಇರುತ್ತಾರೆ. ಆದ್ರೆ ಮಹಿಳೆಯರನ್ನು ಕಂಟ್ರೋಲ್ ಮಾಡಲು ಇಲ್ಲಿ ತನಕ ಒಂದೇ ಒಂದು ಮಹಿಳಾ ಪೊಲೀಸರು ಇರಲಿಲ್ಲ. ಈಗ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ತುಕಡಿಗಳಿಗೆ ಮಹಿಳೆಯರನ್ನು ಸೇರಿಸಿಕೊಳ್ಳಲಾಗಿದೆ. ಸದ್ಯ ಕೆಎಸ್ಆರ್​ಪಿಯಲ್ಲಿ ಒಟ್ಟು 14,000 ಪುರುಷರು ಇದ್ದಾರೆ. ಈಗ ಮಹಿಳೆಯರನ್ನು ಕೂಡ ಕೆಎಸ್ಆರ್​ಪಿ ತುಕಡಿಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ.

image


“ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮುಷ್ಕರ, ಪ್ರತಿಭಟನೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಈ ಸಂದರ್ಭಗಳಲ್ಲಿ ಪೊಲೀಸರು ಕೂಡ ತಮ್ಮ ಯೋಜನೆಗಳನ್ನು ಬದಲಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿರುವ ಪುರುಷ ಪೊಲೀಸರು ಮುಷ್ಕರದಲ್ಲಿ ಭಾಗಿಯಾಗುವ ಮಹಿಳೆಯರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುವಂತಿಲ್ಲ. ”
- ಸುನೀಲ್ ಕುಮಾರ್, ಅಡಿಷನಲ್ ಜನರಲ್ ಆಫ್ ಪೊಲೀಸ್

ಇತ್ತೀಚೆಗೆ ಒಟ್ಟು 64 ಮಹಿಳಾ ಪೊಲೀಸರನ್ನು ನೇಮಿಸಿಕೊಳ್ಳಲಾಗಿದ್ದು ಅವರಿಗೆ ತರಬೇತಿ ನೀಡಲಾಗುತ್ತಿದೆ. ಮೊದಲ ಬ್ಯಾಚ್ ನ ಮಹಿಳಾ ಪೊಲೀಸರಿಗೆ 9 ತಿಂಗಳ ಕಠಿಣ ತರಬೇತಿ ನೀಡಲಾಗುತ್ತದೆ. ಕಳೆದ ಫೆಬ್ರವರಿಯಲ್ಲಿ ಟ್ರೈನಿಂಗ್ ಆರಂಭಗೊಂಡಿದೆ. ಬೆಂಗಳೂರಿನಲ್ಲಷ್ಟೇ ಅಲ್ಲದೆ ಬೆಳಗಾವಿಯಲ್ಲೂ 44 ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿಕೊಂಡಿರುವ ಇವರು ಪದವೀಧರರಾಗಿದ್ದು, ಹೆಚ್ಚಿನವರು ಮಕ್ಕಳ ತಾಯಂದಿರು ಕೂಡ ಆಗಿದ್ದಾರೆ.

“ನನಗೆ ಪೊಲೀಸ್ ಫೋರ್ಸ್ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ನಮಗೆ ಕಠಿಣ ತರಬೇತಿಗಳನ್ನು ನೀಡಲಾಗುತ್ತಿದೆ. ಭಾನುವಾರದ ದಿನ ಮಾತ್ರ ನನಗೆ ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಸಿಗುತ್ತಿದೆ. ”
- ಸೌಮ್ಯ, ತರಬೇತಿ ಪಡೆಯುತ್ತಿರುವ ಮಹಿಳಾ ಪೊಲೀಸ್
“ ನನ್ನ ತಂದೆ ಕೃಷಿಕರು. ಅವರಿಗೆ ನಾನು ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಅನ್ನುವ ಆಸೆ ಇತ್ತು. ಎಂಜಿನಿಯರಿಯರಿಂಗ್​ ಎಕ್ಸಾಂ ತೆಗೆದುಕೊಂಡರೆ , ಯುಪಿಎಸ್​ಸಿ ಪರೀಕ್ಷೆ ಸುಲಭವಾಗಬಹುದು ಅನ್ನುವುದು ಅವರ ಲೆಕ್ಕಾಚಾರದಲ್ಲಿತ್ತು. ಈಗಲೂ ನಾನು ಸಿವಿಲ್ ಸರ್ವೀಸ್ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದೇನೆ. ”
- ಶೋಭಾ, ತರಬೇತಿ ಪಡೆಯುತ್ತಿರುವ ಮಹಿಳಾ ಪೊಲೀಸ್

ಪುರುಷರಿಗೆ ನೀಡುವಂತೆ ಮಹಿಳೆಯರಿಗೂ ಕಠಿಣ ತರಬೇತಿ ನೀಡಲಾಗುತ್ತದೆ. ಶಸ್ತ್ರಾಸ್ತ್ರ ತರಬೇತಿ, ಈಜು ಸೇರಿದಂತೆ ಅನಿವಾರ್ಯತೆಯ ಸಂದರ್ಭದಲ್ಲಿ ಎದುರಿಸಬೇಕಾದ ಮುನ್ನಚ್ಚರಿಕೆಯ ಕ್ರಮಗಳ ಬಗ್ಗೆ ಕೂಡ ತರಬೇತಿ ನೀಡಲಾಗುತ್ತಿದೆ. ಇನ್ನೂ 6 ತಿಂಗಳ ತರಬೇತಿ ಬಾಕಿ ಇದ್ರೂ, ಈ ಮಹಿಳಾ ಪೊಲೀಸರು ಈಗಲೇ ಆತ್ಮವಿಶ್ವಾದಿಂದ ಬೀಗುತ್ತಿದ್ದಾರೆ. 

ಇದನ್ನು ಓದಿ:

1. ಸ್ಟಾರ್ಟ್​ಅಪ್ ಬಗ್ಗೆ ಕನಸು ಏಕೆ..? ಉದ್ಯಮದ ಯಶಸ್ಸಿಗೆ ಇಲ್ಲಿದೆ ಟಿಪ್ಸ್​..!​

2. 1000 ಸಿಸಿ ಹ್ಯಾಂಡ್​​ಮೇಡ್ ಬೈಕ್ ತಯಾರಿಸಿದ ರಿದ್ದೇಶ್ ಕಥೆ

3. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್​ ಶಾಂಘ್ವಿ ಕಥೆ..!

Add to
Shares
8
Comments
Share This
Add to
Shares
8
Comments
Share
Report an issue
Authors

Related Tags