ಆವೃತ್ತಿಗಳು
Kannada

ಪುರುಷ ಪ್ರಧಾನ ಸಮಾಜಕ್ಕೆ ಸೆಡ್ಡು ಹೊಡೆದ ಮಹಿಳೆ: ಕನ್ಸ್​​​ಟ್ರಕ್ಷನ್ ವಲಯದಲ್ಲಿ ಉಜ್ವಲ"ಹವಾ"ರೆ

ಟೀಮ್​​ ವೈ.ಎಸ್​​. ಕನ್ನಡ

10th Dec 2015
Add to
Shares
0
Comments
Share This
Add to
Shares
0
Comments
Share

ಮುಂಬೈನ ಕನ್ಸ್​​​ಟ್ರಕ್ಷನ್ ಬ್ಯುಸಿನೆಸ್‍ನಲ್ಲಿ ಹವಾರೆ ಗ್ರೂಪ್ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಅದ್ರಲ್ಲೂ ಮುಂಬೈನ ನಾವಿ ಹಾಗೂ ಥಾನೆ ಪ್ರಾಂಥ್ಯದಲ್ಲಿ, ಹವಾರೆ ಗ್ರೂಪ್ಸ್ ಅನ್ನೋದು ಬಹುತೇಕ ಎಲ್ಲರಿಗೂ ಚಿರಪರಿಚಿತ ಹೆಸರು. ಸತೀಶ್ ಹವಾರೆ ಅವರಿಂದ 1995ರಲ್ಲಿ, ಆರಂಭವಾದ ಈ ಸಂಸ್ಥೆ, ಮನೆ ನಿರ್ಮಾಣದಲ್ಲಿ ಪರಿಣಿತಿ ಪಡೆದಿದೆ. 750 ಕೋಟಿ ಮೌಲ್ಯದ ಕಂಪನಿ ಕನ್ಸ್​​ಟ್ರಕ್ಷನ್ ಬ್ಯುಸಿನೆಸ್‍ನಲ್ಲಿ ಟಾಪ್ ಹತ್ತರ ಸ್ಥಾನ ಪಡೆದುಕೊಂಡಿದೆ. ಮುಂಬೈ ಮಾತ್ರವಲ್ಲ, ದೂರದ ಪಲ್ಗರ್ ಹಾಗೂ ಕರ್ಜತ್‍ಗೂ ತಮ್ಮ ಕನ್ಸ್​​ಟ್ರಕ್ಷನ್ ಮುಂದುವರಸಿದ್ದಾರೆ.

2005ರಲ್ಲಿ ಹವಾರೆ ಸಂಸ್ಥೆಯನ್ನ ಕಟ್ಟಿದ್ದ ಸತೀಶ್ ಹವಾರೆ ಅವರ ಹಠಾತ್ ನಿಧನದ ಕ್ಷಣಗಳು ಇಂದಿಗೂ ಈ ವಲಯದವರ ಕಣ್ಣಿಗೆ ಕಟ್ಟಿದಂತಿದೆ. ಅಂದು ಅವರು ಕೇವಲ ಬ್ಯುಸಿನೆಸ್ ಮಾತ್ರವಲ್ಲ, ತಮ್ಮ ಸಂಸ್ಥೆಯನ್ನೇ ಅವಲಂಭಿಸಿದ್ದ ಸಾವಿರಾರು ಮಂದಿಯನ್ನ, ತಮ್ಮ ಕುಟುಂಬವನ್ನ, ಬಿಟ್ಟು ಹೊರಟಿದ್ದರು.

image


ಉಜ್ವಲಾ ಹವಾರೆ ಅವರು ಗೃಹಿಣಿ ಹಾಗೂ ಎರಡು ಮಕ್ಕಳ ತಾಯಿಯಾಗಿದ್ರು, ಆಗಾಗ ಕಛೇರಿಗೆ ಭೇಟಿ ಕೊಡ್ತಿದ್ದರು. ‘ಸತೀಶ್ ನಾನು ಸುಮ್ಮನೆ ಮನೆಯಲ್ಲಿ ಕೂರುವುದನ್ನ ಇಷ್ಟ ಪಡುತ್ತಿರಲಿಲ್ಲ ಅಂತಾರೆ ಉಜ್ಷಲಾ. ಉಜ್ವಲಾ ಕೂಡ ವಾಸ್ತು ಶಿಲ್ಪವನ್ನ ಓದಿಕೊಂಡಿದ್ದಾರೆ. ಉಜ್ವಲಾ ಅವರು ಸತೀಶ್‍ರ ಪ್ರತಿಯೊಂದು ಕೆಲಸಕ್ಕೂ ಸಾಥ್ ನೀಡ್ತಾ ಇದ್ರು, ತಮ್ಮ ಪತಿಯ ವ್ಯಾಪಾರ ಯಶಸ್ಸಿನ ಉತ್ತುಂಗಕ್ಕೇರಲು ಉಜ್ವಲಾ ಅವರೇ ಕಾರಣರಾಗಿದ್ದರು. ಮನೆಯಲ್ಲಿ ಮಾತ್ರವಲ್ಲ ಕೆಲಸದಲ್ಲೂ ಪತಿಯ ಎಲ್ಲಾ ಜವಾಬ್ದಾರಿಗಿಗೆ ಹೆಗಲು ಕೊಡುತ್ತಿದ್ದರು. ಇದೇ ಸಾಂಗತ್ಯ ಪತಿಯ ಅಗಲಿಕೆ ನಂತ್ರ ಅವರ ಕೆಲಸದ ಜವಾಬ್ದಾರಿಯನ್ನು ಉಜ್ವಲಾ ಅವರೇ ನಡೆಸಿಕೊಂಡು ಹೋಗುವಂತೆ ಮಾಡಿದೆ. ಪತಿ ಸಾವನ್ನಪ್ಪಿ ಹನ್ನೆರಡೇ ದಿನಗಳಲ್ಲಿ, ಏಳು ದಿನದ ತನ್ನ ಮಗುವನ್ನೂ ಮನೆಯಲ್ಲೇ ಬಿಟ್ಟು, ಹವಾರೆ ಗ್ರೂಪ್ಸ್ ನ ನೌಕೆಯನ್ನ ನಾಯಕಿಯಾಗಿ ಮುಂದುವರೆಸುವ ಜವಾಬ್ದಾರಿ ಹೊತ್ತುಕೊಂಡರು.

ಅವರು 2005ರಲ್ಲಿ ಸಂಸ್ಥೆಯ ಜವಾಬಾರಿ ಹೊತ್ತುಕೊಂಡ ಬಳಿಕ, ಉಜ್ವಲಾ ತಮ್ಮ ಪತಿಯ ಕನಸನ್ನ ನನಸು ಮಾತ್ರ ಮಾಡ್ತಾ ಇಲ್ಲ, ಬದಲಾಗಿ ಆತ್ಮಸ್ಥೈರ್ಯದಿಂದ ತಮ್ಮ ಬ್ಯಸಿನೆಸ್‍ನ ಮಹಾರಾಷ್ಟ್ರದ ಉದ್ದಗಲಕ್ಕೂ ಮುಂದುವರೆಸುವ ಪಣ ತೊಟ್ಟು ಯಶಸ್ವಿಯಾಗಿದ್ದಾರೆ. ನಾವು ಇತ್ತೀಚೆಗಷ್ಟೆ ಉಜ್ವಲಾ ಸತೀಶ್ ಹವಾರೆ ಅವರ ಸಂದರ್ಶನ ನಡೆಸಿ, ಅವರ ಬದುಕಿನ ಹಲವು ಮಜುಲುಗಳನ್ನ ತಿಳಿದುಕೊಂಡೆವು.

ಕಾಲೇಜು ಮುಗಿಯುವ ಮುನ್ನವೇ ಹಸೆಮಣೆ ಏರಿದ್ದರು

ಪೋಷಕರು ನೋಡಿ ಮಾಡಿದ ಮದುವೆಯಾದ್ರೂ ತಾನು ಬಯಸಿದ್ದ ಪತಿಯೇ ಉಜ್ವಲಾ ಅವರಿಗೆ ಸಿಕ್ಕಿದ್ದರು. ತಮ್ಮ ಕನಸು ನನಸಾದ ಖುಷಿಯಲ್ಲಿ ಜೀವನ ಆರಂಭಿಸಿದ್ದರು ಉಜ್ವಲಾ. ಸತೀಶ್ ಉಜ್ವಲಾ ಅವರಿಗೆ ಕೇವಲ ಸ್ಪೂರ್ತಿಯಾಗಿರಲಿಲ್ಲ, ಬದಲಾಗಿ ತಮ್ಮ ಜೀವನದ ಪ್ರತಿಯೊಂದು ಘಟ್ಟದಲ್ಲೂ, ವೈಯುಕ್ತಿಕ ಹಾಗೂ ವೃತ್ತಿ ಬದುಕಿನಲ್ಲೂ ಪತ್ನಿಯನ್ನ ಅರ್ಧಾಂಗಿ ಎನ್ನುವ ಮಾತಿಗೆ ಸೂಕ್ತವಾಗಿ ನಡೆಸಿಕೊಂಡಿದ್ದರು. ಚಿಕ್ಕವಯಸ್ಸಿನಲ್ಲೇ ಉಜ್ವಲಾ ಪತಿಯೊಂದಿಗೆ ಕಚೇರಿಗೆ ತರಳುತ್ತಿದ್ದರು, ಮೊದಿಲಿಂದಲೂ ಪ್ರಾಜೆಕ್ಟ್​​​ ಗಳ ಬಗ್ಗೆ ಅತೀವ ಆಸಕ್ತಿಯಿಂದ ಕೆಲಸ ಮಾಡ್ತಾ ಇದ್ರು. ಆದ್ರೆ, ಮೊದಲು ಮಗಳು ಹುಟ್ಟಿದ ನಂತ್ರ ಸ್ವಲ್ಪ ದಿನಗಳ ಕಾಲ ಉಜ್ವಲಾ ಕೆಲಸದಿಂದ ದೂರ ಉಳಿಯಬೇಕಾಯ್ತು. ಆದ್ರೆ, ಹವಾರೆ ಗ್ರೂಪ್ಸ್​​ನ ಕೆಲಸದ ಕುರಿತು ಎಂದಿಗೂ ತಮ್ಮ ಮಾತು ನಿಲ್ಲಿಸಿರಲಿಲ್ಲ.

ಪತಿ ಪತ್ನಿನಡುವಿನ ಸಂಭಾಷಣೆಗಳು ‘ ವಸತಿ ರಹಿತರಿಗೆ ವಸತಿ ನಿರ್ಮಾಣ’ ಎನ್ನುವ ಥೀಸೀಸ್‍ ಅನ್ನೇ ತನ್ನ ಕೊನೆ ವರ್ಷದ ಪದವಿಗೆ ಆರಿಸಿಕೊಳ್ಳುವಂತೆ ಮಾಡಿತ್ತು. ಅದೇ ಸಬ್‍ಜೆಕ್ಟ್​​ನ ಸತೀಶ್ ಅವರೂ ತಮ್ಮ ಕೊನೆ ವರ್ಷದ ಪ್ರಾಜೆಕ್ಟ್ ಆಗಿ ಆರಿಸಿಕೊಂಡಿದ್ದರು. ಸತೀಶ್ ಅವರು ಜೀವನ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದರು, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ‘ನಾನು ನಿಜವಾಗಿಯೂ ಸತೀಶ್‍ರಂತಹ ಪತಿಯನ್ನ ಪಡೆಯಲು ಪುಣ್ಯ ಮಾಡಿದ್ದೆ’ ಅಂತಾರೆ ಉಜ್ವಲಾ.

ಸತೀಶ್ ಹಾಗು ಉಜ್ವಲಾ ಕಾಳಜಿಯುಳ್ಳ ಕುಟುಂಬದಿಂದ ಬಂದವರಾಗಿದ್ರು. ಹಾಗಾಗೇ ಹವಾರೆ ಗ್ರೂಪ್ಸ್ ಮಾನವೀಯತೆಗೆ ಹೆಚ್ಚಿನ ಒತ್ತು ನೀಡ್ತಿತ್ತು. ಸತೀಶ್ ಅವರು ಬಿಲ್ಡರ್ ಆಗುವ ಮುನ್ನ ಆರ್ಕಿಟೆಕ್ಟ್ ಆಗಿ ಕೆಸಲ ಮಾಡ್ತಾ ಇದ್ರು. ಈ ಸಮಯದಲ್ಲಿ ಅವರಿಗೆ ಸಿಕ್ಕ ಕೆಲ ಕಾಂಟ್ಯಾಕ್ಟ್​​ಗಳು, ಅವರನ್ನ ಒಳ್ಳೆಯ ಬಿಲ್ಡರ್ ಆಗುವಂತೆ ಮಾಡಿತ್ತು. ‘ನಮ್ಮ ಮೊದಲ ಪ್ರಾಜೆಕ್ಟ್ ಮರಳುಗಾಡಿನಂತಿದ್ದ ಖಾರ್ಗರ್‍ನಲ್ಲಿ. ಮಳೆಗಾಲದಲ್ಲಂತೂ ಈ ಪ್ರದೇಶಕ್ಕೆ ಹೋಗುವುದು ಕಷ್ಟವಾಗಿತ್ತು, ಯಾಕಂದ್ರೆ ಸೂಕ್ತ ರಸ್ತೆಗಳ ವ್ಯವಸ್ಥೆಯೇ ಅಲ್ಲಿ ಇರಲಿಲ್ಲ’.ಆದ್ರೂ ಆ ಪ್ರಾಜೆಕ್ಟ್ ಯಶಸ್ಸು ಕಂಡಿತ್ತು. ‘ ಸತೀಶ್ ಅವರು ಸಾಧು ಸ್ವಭಾವದ, ಹೆಚ್ಚು ಮಾತನಾಡುವ ಹಾಗೂ ಎಲ್ಲರ ಮನಗೆಲ್ಲುವ ವ್ಯಕ್ತಿತ್ವದವರಾಗಿದ್ದರು. ಹಣದ ಹಿಂದೆ ಓಡುವ ಬಿಲ್ಡರ್‍ಗಳ ನಡುವೆ ಸತೀಶ್ ಅವರ ಪ್ರಾಮಾಣಿಕತೆಗೆ ಜನ ಸೋತುಹೋಗಿದ್ದರು.

ಸತೀಶ್ ಅವರ ಪ್ರೋತ್ಸಾಹ

ಸತೀಶ್ ಅವರಿಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವು ಅಂದ್ರೆ ಇಷ್ಟ. ಇದೇ ಸ್ವಭಾವ ಅವರನ್ನ ಒಂದು ಗುಂಪಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡತ್ತೆ. ‘ಸತೀಶ್ ಅವರು ಮುಲಾಜಿಲ್ಲದೆ ಕಠಿನ ಕೆಲಸಗಳನ್ನೂ ಕೈಗೆತ್ತಿಕೊಳ್ಳುತ್ತಿದ್ರು, ಅವರಿಗೆ ಅವರ ಮೇಲೆ ಸಂಪೂರ್ಣ ನಂಬಿಕೆಯಿತ್ತು. ನಾನು ಬಿಲ್ಡರ್ ಆಗಿ ಸೋತರೂ ಪರವಾಗಿಲ್ಲ, ಮತ್ತೆ ಆರ್ಕಿಟೆಕ್ಟ್ ಆಗಿ ಕೆಲಸ ಆರಂಭಿಸುತ್ತೇನೆ ಎನ್ನುವ ಹಂಬಲ ಅವರಿಗಿತ್ತು. ಕಳೆದುಕೊಳ್ಳಲು ನನ್ನಲ್ಲಿ ಏನು ಇಲ್ಲ’ ಅಂತಾ ಅವರು ಹೇಳುತ್ತಿದ್ದರು. ಉಜ್ವಲಾ ಆವರೂ ಕೂಡ ಒಬ್ಬ ಆರ್ಕಿಟೆಕ್ಟ್ ಆಗಿದ್ದರಿಂದ ಯಾವುದೇ ಸಮಸ್ಯೆ ಬಂದ್ರೂ ಒಟ್ಟಿಗೆ ಎದುರಿಸುವ ಛಲ ಇಬ್ಬರಿಗೂ ಇತ್ತು. ‘ಅವರು ನಿರ್ಧಾರಗಳನ್ನ ತೆಗೆದುದುಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದರು, ಅವುಗಳನ್ನ ಜಾರಿಗೂ ತರುತ್ತಿದ್ದರು.’

ಸಮಾಜ ಸೇವೆ

ಸತೀಶ್ ಅವರಿಗೆ ಸಮಾಜ ಸೇವೆ ಮಾಡುವುದರಲ್ಲೂ ಹೆಚ್ಚಿನ ಆಸಕ್ತಿ ಇತ್ತು. ಅವರು 1993ರ ಭೂಕಂಪವಾದಾಗ ಲಾತೂರ್ ನಲ್ಲಿ ಹಾಗೂ 2004ರಲ್ಲಿ ಚೆನ್ನೈನಲ್ಲಿ ಸುನಾಮಿ ಅಪ್ಪಳಿಸಿದಾಗಲೂ ಅವರು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ರು. ಇಂದಿಗೂ ಹವಾರೆ ಸಂಸ್ಥೆ, ಹಲವು ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

’ನಾನು ಸತೀಶ್ ಅವರೊಂದಿಗೆ ಕಳೆದ ಪ್ರತಿಕ್ಷಣವೂ ಮಧುರವಾಗಿತ್ತು. ಅವರ ಆಲೋಚನೆಗಳು ವಿಭಿನ್ನವಾಗಿದ್ದವು. ಅವರು ನನ್ನೊಂದಿಗೆ ಅವರ ಕನಸುಗಳನ್ನ ಹಂಚಿಕೊಳ್ಳುತ್ತಿದ್ದರು. ಅವರ ನಿಧನ ನಂತ್ರ ನಾನು ಅವರ ಕನಸುಗಳನ್ನ ಅರ್ಧಕ್ಕೆ ಬಿಡಲು ಸಾಧ್ಯವಿರಲಿಲ್ಲ. ಅವರ ಪ್ರತಿಯೊಂದು ಕನಸನ್ನು ನನಸಾಗಿಸಬೇಕಿತ್ತು. ನನಗೆ ನನ್ನ ಕಟುಂಬ ಕೂಡ ಸಾಥ್ ಕೊಟ್ಟಿತ್ತು. ನಾನು ಸತೀಶ್ ಅವರ ಕನಸುಗಳಿಗೆ ನೀರೆರೆದಿದ್ದೇನೆ ಅಷ್ಟೆ. ಇಂದು ಹವಾರೆ ಸಂಸ್ಥೆ ಯಶಸ್ಸಿನ ಉತ್ತುಂಗದಲ್ಲಿದೆ.

ಸತೀಶ್ ಅವರ ನಿಧನ ನಂತ್ರ ಹಲವು ಕಷ್ಟ ಸಮಸ್ಯೆಗಳು ಎದುರಾದವು. ಹಲವು ಸವಾಲುಗಳನ್ನ ಎದುರಿಸಬೇಕಾಯ್ತು. ಆಗ ಹಲವಾರು ಮಂದಿ ನನ್ನ ಸಹಾಯಕ್ಕೆ ಬಂದಿದ್ದರು. ಕೋರ್ಟ್ ಕೇಸ್‍ಗಳು ಹಾಗೂ ಕ್ರಿಮಿನಲ್ ಕೇಸ್‍ಗಳನ್ನ ಹೇಗೆ ಎದುರಿಸಬೇಕು ಅನ್ನೋದನ್ನ ಕಲಿಯಬೇಕಾಯ್ತು. ಆದ್ರೆ ಇದೆಲ್ಲಾ ವ್ಯಾಪಾರದ ಒಂದು ಭಾಗವಷ್ಟೆ. ಎಂತಾ ಕ್ಲಿಷ್ಟಕರ ಸಂದರ್ಭದಲ್ಲೂ ಉಜ್ವಲಾ ಹಿಂದೆ ಸರಿಯುವ ಯೋಚನೆಯನ್ನೂ ಮಾಡಲೇ ಇಲ್ಲ. ಅವರು ಸತೀಶ್ ಅವರ ಕನಸನ್ನ ಮಾತ್ರ ನನಸು ಮಾಡ್ತಿರಲಿಲ್ಲ. ಬದಲಾಗಿ, ಒಬ್ಬ ಮಹಿಳೆ ಕೂಡ ಕನ್ಸ್​​ಟ್ರಕ್ಷನ್ ವಲಯದಲ್ಲಿ ಸಾಧನೆ ಮಾಡಬಹುದು ಅನ್ನೋದನ್ನ ಸಾಭೀತುಪಡಿಸಲು ಮುಂದಾಗಿದ್ರು.

ಸತೀಶ್ ಹವಾರೆ ಅವರು ನ್ಯಾನೋ ಹೌಸಿಂಗ್ ಎನ್ನುವ ಯೋಜನೆಯೊಂದನ್ನ ಆರಂಭಿಸಿದ್ದರು. ಒಂದು ಬೆಡ್ ರೂಮ್ ಮನೆಯನ್ನ ಶೇಕಡಾ 25ರಷ್ಟು ಕಡಿಮೆ ಸೈಜ್‍ನಲ್ಲಿ ಕಟ್ಟಿ, 25 ಪರ್ಸೆಟ್‍ನಷ್ಟು ಹಣವ್ನನೂ ಕಡಿಮೆ ಮಾಡಿದ್ರೆ, ಕೊಳ್ಳುವವರಿಗೆ ಸುಲಭವಾಗತ್ತೆ. ಆದ್ರೆ ಮುಂಬೈನ ನಾವಿಯಂತ ಪ್ರದಶೇದಲ್ಲಿ ಇದು ವರ್ಕ್​ಔಟ್ ಆಗ್ಲಿಲ್ಲ. ನಂತ್ರ ಇಟ್ಟಿಗೆ ವ್ಯಾಪಾರವನ್ನೂ ಹವಾರೆ ಕಂಪನಿ ಶುರುಮಾಡಿತ್ತು. ಪಾಡ್ಗಾದಲ್ಲಿ ಆರಂಭಿಸಿದ ನಿಸರ್ಗ ಎನ್ನುವ ಅಪಾರ್ಟ್‍ಮೆಂಟ್ ಹವಾರೆ ಸಂಸ್ಥೆಗೆ ಲಾಭ ತಂದುಕೊಟ್ಟಿತು. ಲಾಂಚ್ ಆದ ಎರಡೇ ದಿನದಲ್ಲಿ 550 ಫ್ಲ್ಯಾಟ್‍ಗಳು ಮಾರಾಟವಾಗಿದ್ದವು.

ಇಂದು ಹವಾರೆ ಸಂಸ್ಥೆ ಮುಂಬೈನ ಥಾನೆ , ಪಲ್ಗರ್, ಹಾಗೂ ಕರ್ಜತ್‍ನಂತ ಪ್ರದೇಶಗಳಲ್ಲಿ ಪ್ರಾಜೆಕ್ಟ್​​ ಗಳನ್ನ ಲಾಂಚ್ ಮಾಡಿದ್ದಾರೆ. ಆದ್ರೂ ಸತೀಶ್ ಅವರ ಕನಸಿನ ಕೂಸಾಗಿದ್ದ ‘ಶ್ರಮಿಕ್’ ಇನ್ನೂ ಕಸನಾಗಿಯೇ ಉಳಿದಿದೆ. ಬ್ಯಾಂಕ್‍ಗಳಲ್ಲಿ ಅಕೌಂಟ್ ಹೊಂದಿರದ, ಸ್ಯಾಲರಿ ಸ್ಲಿಪ್‍ಗಳೇ ಇಲ್ಲದ, ಲೋನ್ ಪಡೆಯಲು ಸಾಧ್ಯವಿಲ್ಲದವರು ಅಂದ್ರೆ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಮನೆಗೆಲಸದಂತ ಬಡವರ್ಗದ ಜನತೆಗೆ ಸಹಾಯವಾಗುವಂತ ಶ್ರಮಿಕ್ ಇನ್ನೂ ಆರಂಭವಾಗಬೇಕಿದೆ. ನಿಜಕ್ಕೂ ಇದೊಂದು ಬಡವರ್ಗದವರಿಗೆ ಸ್ವಂತ ಮನೆಮಾಡಿಕೊಳ್ಳಲು ಸಿಗುವ ಒಂದು ಅವಕಾಶ.

‘ ಆದ್ರೆ, ಇದಿನ ಬೆಲಯಲ್ಲಿ ಅಷ್ಟು ಕಡಿಮೆ ಬೆಲೆಗೆ ಮನೆ ನಿರ್ಮಾಣಮಾಡುವುದು ಸುಲಭವಾಗಿ ಉಳಿದಿಲ್ಲ. ಭವಿಷ್ಯದಲ್ಲಿ ಈ ಯೋಜನೆಜಾರಿಗೆ ತರಲು ಶ್ರಮಿಸುವೆ’ ಅಂತಾರೆ ಉಜ್ವಲಾ. ಮೊದಮೊದಲು ಮಹಿಳೆ ಅನ್ನೋ ಕಾರಣಕ್ಕೆ ಕನ್ಸ್​​​ಟ್ರಕ್ಷನ್ ಕ್ಷೇತ್ರದಲ್ಲಿ ಹಲವು ಬಾರಿ ಉಜ್ವಲಾ ಅವರನ್ನ ತುಳಿಯುವ ಪ್ರಯತ್ನ ನಡೆಸಲಾಗಿತ್ತು. ಆದ್ರೆ, ಇಂದು ತನ್ನ ಸಾಮರ್ಥ್ಯವನ್ನ ಉಜ್ವಲಾ ಹವಾರೆ ತೋರಿಸಿದ್ದಾರೆ. ಹಾಗಾಗೇ, ಒಬ್ಬ ಮಹಿಳಾ ಅಧ್ಯಕ್ಷೆಯನ್ನ ಹೊಂದಿರುವ ಸಂಸ್ಥೆ ಇಂದು ಕನ್ಸ್​​​ಟ್ರಕ್ಷನ್ ವಲಯದಲ್ಲಿ ಮುಂಚೂಣಿಯಲ್ಲಿದೆ.

ಅತ್ತ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದ ಉಜ್ವಲಾ ಇತ್ತ ಮಕ್ಕಳಿಗಾಗಿ ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ. ಅದ್ರಲ್ಲೂ, ಅವರ ಮಗಳು ಯಾವಾಗ್ಲೂ ಉಜ್ವಲಾ ಅವರ ಜೊತೆಗಿರಲು ಬಯಸುತ್ತಿದ್ದಳು. ನೀನು ದೊಡ್ಡವಳಾದ ಮೇಲೆ ಏನಾಗ್ತೀಯ ಅಂತಾ ಕೇಳಿದ್ರೆ ಹೌಸ್ ವೈಫ್ ಆಗ್ತೀನಿ ಅನ್ನೋ ಉತ್ತರ ನೀಡ್ತಾಳೆ. ಯಾಕಂದ್ರೆ, ಆಕೆಯ ಸ್ನೇಹಿತರ ತಾಯಂದಿರು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದನ್ನ ಆಕೆ ನೋಡಿದ್ದಾಳೆ. ಆದ್ರೂ ವರ್ಷದಲ್ಲಿ ಎರಡು ಬಾರಿ ಮನೆಯವರೆಲ್ಲಾ ಒಟ್ಟಿಗೆ ಪ್ರವಾಸ ಕೈಗೊಳ್ಳುತ್ತಾರೆ. ಸಾಧ್ಯವಾದಾಗಲೆಲ್ಲಾ, ಪಿಕ್‍ನಿಕ್ ತೆರಳುತ್ತಾರೆ. ಎರಡೂ ಕಡೆಗಳಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಉಜ್ವಲಾ ಮಹಾರಾಷ್ಟ್ರ ಮಾತ್ರವಲ್ಲದೆ, ದೇಶದ ಇತರೆಡೆಗಳಲ್ಲೂ ತಮ್ಮ ಸಂಸ್ಥೆಯನ್ನ ಪ್ರಸಿದ್ಧಿಗೊಳಿಸುವ ಕನಸು ಹೊತ್ತಿದ್ದಾರೆ ಉಜ್ವಲಾ.

ನಾವು ಉಜ್ವಲಾ ಅವರ ಧೈರ್ಯ ಹಾಗೂ ದೃಢ ಮನಸಿಗೆ ಸಲ್ಯೂಟ್ ಹೇಳಲೇ ಬೇಕು. ಆಲ್ ದಿ ಬೆಸ್ಟ್!

ಅನುವಾದಕರು: ಪಿ.ಅಭಿನಾಷ್​​​

Add to
Shares
0
Comments
Share This
Add to
Shares
0
Comments
Share
Report an issue
Authors

Related Tags