ಆವೃತ್ತಿಗಳು
Kannada

ಅನಾಥ ಹೆಣ್ಣುಮಕ್ಕಳಿಗೂ 'ದಂಗಲ್' ನೋಡುವ ಚಾನ್ಸ್ : ಎಲ್ಲರಿಗೂ ಮಾದರಿ ಇಂದೋರ್ ಕಲೆಕ್ಟರ್

ಟೀಮ್ ವೈ.ಎಸ್.ಕನ್ನಡ 

YourStory Kannada
10th Jan 2017
Add to
Shares
4
Comments
Share This
Add to
Shares
4
Comments
Share

ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಸೂಪರ್ ಹಿಟ್ ಆಗಿದೆ. 15 ದಿನಗಳಲ್ಲಿ 350 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ದಂಗಲ್ ಚಿತ್ರದಲ್ಲಿ ಇಡೀ ರಾಷ್ಟ್ರಕ್ಕೂ ಒಂದು ಸಂದೇಶವಿದೆ. ಪೋಷಕರು ಹೆಣ್ಣುಮಕ್ಕಳಿಗೂ ಸೂಕ್ತ ಪ್ರೋತ್ಸಾಹ ನೀಡಬೇಕು ಅನ್ನೋ ಕಿವಿಮಾತಿದೆ. ಸಿನಿಮಾ ಇಷ್ಟೊಂದು ಯಶಸ್ಸು ಗಳಿಸಿದ್ಮೇಲೆ ಎಲ್ರಿಗೂ ಅದನ್ನು ನೋಡುವ ಆಸೆ ಸಹಜ. ಇಂದೋರ್​ನ 250 ಅನಾಥ ಹಾಗೂ ಬಡ ಹೆಣ್ಣುಮಕ್ಕಳಿಗೆ ಅಲ್ಲಿನ ಕಲೆಕ್ಟರ್, ದಂಗಲ್ ಸಿನಿಮಾ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದ್ದಾರೆ. ದೇಶದ ಪ್ರತಿಯೊಬ್ಬ ಹೆಣ್ಣುಮಗುವೂ ತಾನು ಇಷ್ಟಪಟ್ಟಿದ್ದನ್ನು ಸಾಧಿಸಬೇಕು, ಅವರಲ್ಲಿ ಆ ಛಲ ಮತ್ತು ಪ್ರೋತ್ಸಾಹವನ್ನು ತುಂಬಬೇಕು ಅನ್ನೋ ಕಾರಣಕ್ಕೆ ಕಲೆಕ್ಟರ್ ಬಡ ಮಕ್ಕಳಿಗಾಗಿ ದಂಗಲ್ ಚಿತ್ರದ ವಿಶೇಷ ಪ್ರದರ್ಶನವನ್ನೇ ಏರ್ಪಡಿಸಿದ್ದರು.

image


ಇಂದೋರ್ ಕಲೆಕ್ಟರ್ ನರಹರಿ ಕೂಡ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಹಾಗಾಗಿ ಹಿಂದುಳಿದವರ, ಬಡವರ ಕಷ್ಟದ ಅರಿವಿದೆ. ಸದಾ ಅವರ ಅಭಿವೃದ್ಧಿಗಾಗಿ ನರಹರಿ ಅವರ ಮನಸ್ಸು ತುಡಿಯುತ್ತಿರುತ್ತದೆ. ''ನಾನು ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲೇನಲ್ಲ. ಈ ಮೊದಲು ನಾನು ಗ್ವಾಲಿಯರ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಆಗಲೂ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ನನ್ನ ಕೈಲಾದಷ್ಟು ಶ್ರಮಿಸಿದ್ದೇನೆ'' ಅಂತಾ ನರಹರಿ ಹೇಳಿದ್ದಾರೆ. ಕಲೆಕ್ಟರ್ ನರಹರಿ ಒಬ್ಬ ಉತ್ತಮ ವಾಗ್ಮಿ, ಅವರ ಮಾತುಗಳನ್ನು ಕೇಳಿದ್ರೆ ಎಂಥವರೂ ತಲೆದೂಗಲೇಬೇಕು. ಫೋಗಟ್ ಸಹೋದರಿಯರ ಸಾಧನೆ, ಶ್ರಮದ ಬಗ್ಗೆ ಆಗಾಗ ಅವರು ಮಾತನಾಡಿದ್ದಿದೆ. ಶಾಲೆಗಳಲ್ಲಿ, ವಿವಿಧ ಕಾರ್ಯಕ್ರಮಗಳಲ್ಲಿ ಫೋಗಟ್ ಸಹೋದರಿಯರ ಬಗ್ಗೆ ಮಕ್ಕಳಿಗೆ ತಿಳಿಹೇಳಿದ್ದರು. ಈಗ ಅವರ ಬದುಕಿನ ಕುರಿತಾದ ಸಿನಿಮಾ ಬಿಡುಗಡೆಯಾಗಿದೆ ಎಂದಾಕ್ಷಣ ಮೊದಲು ಅದನ್ನು ಹೆಣ್ಣುಮಕ್ಕಳು ವೀಕ್ಷಿಸಬೇಕೆಂದು ಅವರಿಗೆ ಅನಿಸಿತ್ತು. ಯಾಕಂದ್ರೆ ಈ ಚಿತ್ರ ಎಷ್ಟೋ ಹೆಣ್ಣುಮಕ್ಕಳ ಸಾಧನೆಯ ಮೆಟ್ಟಿಲಾಗಬಹುದು, ಸ್ಪೂರ್ತಿಯಾಗಬಹುದು ಎಂಬ ಅಭಿಪ್ರಾಯ ನರಹರಿ ಅವರದ್ದು. ಹಾಗಾಗಿ 250 ಹೆಣ್ಣುಮಕ್ಕಳಿಗಾಗಿ ನರಹರಿ ದಂಗಲ್ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.

ಅವರೆಲ್ಲ ಸರ್ಕಾರದ ಅನಾಥಾಲಯ, ಎನ್ ಜಿಓ ಹಾಗೂ ವಿವಿಧ ಆಶ್ರಮಗಳಲ್ಲಿ ಆಶ್ರಯ ಪಡೆದಿದ್ದಾರೆ. ಎಲ್ಲರೂ ಒಟ್ಟಿಗೆ ಚಿತ್ರವನ್ನು ನೋಡಲು ಸಾಧ್ಯವಾಗುವಂತೆ ದೊಡ್ಡ ಹಾಲ್ ಅನ್ನೇ ನರಹರಿ ಬುಕ್ ಮಾಡಿದ್ದರು. ಆ ಮಕ್ಕಳೆಲ್ಲ ಮಾಲ್ ಒಂದರ ಒಳಹೊಕ್ಕು ಸಿನಿಮಾ ನೋಡಿದ್ದು ಇದೇ ಮೊದಲ ಬಾರಿ. ಹಾಗಾಗಿ ಎಲ್ಲರೂ ತುಂಬಾನೇ ಖುಷಿಯಾಗಿದ್ರು. ಚಿತ್ರ ವೀಕ್ಷಿಸ್ತಾ ಹೆಣ್ಣುಮಕ್ಕಳಿಗೆ ಬಾಯಾಡಿಸಲು ತಿನಿಸುಗಳ ವ್ಯವಸ್ಥೆ ಕೂಡ ಮಾಡಲಾಗಿತ್ತು. ಈ ಹೆಣ್ಣುಮಕ್ಕಳೆಲ್ಲ ಫೋಗಟ್ ಸಹೋದರಿಯರಂತೆ ಏನಾದರೂ ಸಾಧನೆ ಮಾಡಬೇಕು ಅನ್ನೋದೇ ನರಹರಿ ಅವರ ಆಸೆ.

''ನಮ್ಮದು ಐವರು ಸಹೋದರರು ಹಾಗೂ ಓರ್ವ ಸಹೋದರಿಯನ್ನುಳ್ಳ ದೊಡ್ಡ ಕುಟುಂಬ. ನನ್ನ ತಂದೆ ದರ್ಜಿಯಾಗಿದ್ರು, ಹೊಲಿಗೆಯೇ ಅವರ ಜೀವನಕ್ಕೆ ಆಧಾರ. ಆದ್ರೆ ಹೆಣ್ಣು ಹಾಗೂ ಗಂಡು ಮಕ್ಕಳ ಬಗ್ಗೆ ಬೇಧ ಭಾವ ಮಾಡುತ್ತಿರಲಿಲ್ಲ. ಇಷ್ಟಪಟ್ಟು ಅವರು ಹೆಣ್ಣುಮಗುವನ್ನು ಮಾಡಿಕೊಂಡಿದ್ದರು. ವಿಶೇಷ ಅಂದ್ರೆ ನಮ್ಮೆಲ್ಲರಿಗಿಂತ ನನ್ನ ಸಹೋದರಿಯೇ ಹೆಚ್ಚು ಶಿಕ್ಷಣ ಪಡೆದಿದ್ದಾರೆ'' ಅಂತಾ ಕಲೆಕ್ಟರ್ ನರಹರಿ ತಿಳಿಸಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುವಂತೆ ಪ್ರೋತ್ಸಾಹಿಸಿದ ತಂದೆಯ ಬಗ್ಗೆ ಅವರಿಗೆ ಹೆಮ್ಮೆಯಿದೆ. ಅದರಲ್ಲೂ ಸರ್ಕಾರಿ ಸೇವೆಯಲ್ಲಿರುವವರು ಈ ಕೆಲಸವನ್ನು ಮಾಡುವ ಮೂಲಕ ಮಾದರಿಯಾಗಬೇಕರಂದು ನರಹರಿ ಅವರ ತಂದೆ ಬಯಸಿದ್ದರು. ''ನಾವು ಸಮಾಜದ ಬಗ್ಗೆ ಕಾಳಜಿ ಹೊಂದಿದ್ದೇವೆ ಅನ್ನೋದನ್ನು ಎಲ್ಲರಿಗೂ ತೋರಿಸಿಕೊಡಬೇಕು, ಈ ಮೂಲಕ ಇತರರಿಗೆ ಪ್ರೇರಣೆಯಾಗಬೇಕು. ಜನರ ಏಳ್ಗೆಗಾಗಿ, ಹೆಣ್ಣುಮಕ್ಕಳ ಶ್ರೇಯಸ್ಸಿಗಾಗಿ ನನ್ನಿಂದ ಏನು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ'' ಅಂತಾ ನರಹರಿ ಭರವಸೆ ನೀಡಿದ್ದಾರೆ. 

ಇದನ್ನೂ ಓದಿ..

ಹೆಂಗಳೆಯರ ಪಾಲಿನ ಆತ್ಮರಕ್ಷಕ ಗುರು

ನಗದು ಇಲ್ಲದಿದ್ರೂ ನೋ ಟೆನ್ಷನ್ : ಕ್ಯಾಶ್​ಲೆಸ್​ ಆಗ್ತಿದೆ LPG ಪೇಮೆಂಟ್ 

Add to
Shares
4
Comments
Share This
Add to
Shares
4
Comments
Share
Report an issue
Authors

Related Tags