ಆವೃತ್ತಿಗಳು
Kannada

`ಆರೋಗ್ಯ'ಕರ ಪಾಕಿಸ್ತಾನಕ್ಕಾಗಿ `ದವಾಯಿ'- ರೋಗಿಗಳ ಸೇವೆಗೆ ಟೊಂಕಕಟ್ಟಿ ನಿಂತ ಐ-ಬ್ಯಾಂಕರ್

ಟೀಮ್​​ ವೈ.ಎಸ್​​. ಕನ್ನಡ

13th Dec 2015
Add to
Shares
1
Comments
Share This
Add to
Shares
1
Comments
Share

ಇ-ಕಾಮರ್ಸ್‍ನಲ್ಲಿ ದೋಷ ಇನ್ನೂ ಜೀವಂತವಾಗಿದೆ, ಅದನ್ನು ಸರಿಪಡಿಸುವ ಕಾರ್ಯ ಕೇವಲ ಭಾರತದಲ್ಲಿ ಮಾತ್ರವಲ್ಲ, ನೆರೆರಾಷ್ಟ್ರ ಪಾಕಿಸ್ತಾನದಲ್ಲೂ ನಡೆಯುತ್ತಿದೆ. ಇನ್‍ವೆಸ್ಟ್​​​ಮೆಂಟ್ ಬ್ಯಾಂಕರ್ ಫಖ್ರ್ವಾನ್ ಕಿದ್ವೈ ಕೂಡ ಇದೇ ಪ್ರಯತ್ನದಲ್ಲಿದ್ದಾರೆ. `ದವಾಯಿ' ಹೆಸರಿನ ಆನ್‍ಲೈನ್ ಫಾರ್ಮಸಿಯೊಂದನ್ನು ಆರಂಭಿಸಿದ್ದಾರೆ. ಪಾಕಿಸ್ತಾನದಲ್ಲೂ ಇ-ಕಾಮರ್ಸ್ ಚಮತ್ಕಾರ ಮಾಡುತ್ತಿರುವ ಮಳಿಗೆಗಳಲ್ಲಿ `ದವಾಯಿ' ಕೂಡ ಒಂದು.

ಏಷ್ಯಾದ ಬಹುತೇಕ ಎಲ್ಲ ರಾಷ್ಟ್ರಗಳಂತೆ ಪಾಕಿಸ್ತಾನದಲ್ಲೂ ಮಧ್ಯಮವರ್ಗದವರ ಸಂಖ್ಯೆಯೇ ಹೆಚ್ಚು. ಪಾಕಿಸ್ತಾನದಲ್ಲಿ ಆರೋಗ್ಯ ವ್ಯವಸ್ಥೆ ದುಬಾರಿ ಖಾಸಗಿ ವಲಯದ ವೈದ್ಯಕೀಯ ಸಂಘ-ಸಂಸ್ಥೆಗಳು ಮತ್ತು ಕಡಿಮೆ ವೆಚ್ಚದ ಸರ್ಕಾರಿ ಆರೋಗ್ಯ ಕೇಂದ್ರಗಳ ಮಧ್ಯೆ ಹಂಚಿ ಹೋಗಿದೆ. `ವಾಲ್ ಸ್ಟ್ರೀಟ್ ಜರ್ನಲ್'ನ ವರದಿಯೊಂದರ ಪ್ರಕಾರ ಪಾಕಿಸ್ತಾನದ ಆರೋಗ್ಯ ವಲಯದ ಮೂಲಸೌಕರ್ಯಗಳಿಗೆ ಹಣಕಾಸಿನ ಕೊರತೆ ಇದೆ. 2010ರಲ್ಲಿ ಸಾರ್ವಜನಿಕ ಆರೋಗ್ಯ ವಲಯಕ್ಕಾಗಿ ಜಿಡಿಪಿಯಲ್ಲಿ ಶೇ. 0.8ರಷ್ಟನ್ನು ಮಾತ್ರ ಮೀಸಲಾಗಿರಿಸಲಾಗಿತ್ತು. ಭಾರತ ಶೇ. 1.2ರಷ್ಟನ್ನು ಮೀಸಲಾಗಿಟ್ಟಿತ್ತು.

ಮರಳಿ ಬೇರುಗಳತ್ತ...

ಪಾಕಿಸ್ತಾನದ ಆರೋಗ್ಯ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹತ್ತಾರು ಯುವ ಉದ್ಯಮಿಗಳು ಆನ್‍ಲೈನ್ ಫಾರ್ಮಸಿಯನ್ನು, ವೈದ್ಯಕೀಯ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಕರಾಚಿ ಮೂಲದ `ದವಾಯಿ' ಕೂಡ ಇವುಗಳಲ್ಲೊಂದು. `ದವಾಯಿ'ಯ ಸಂಸ್ಥಾಪಕ ಹಾಗೂ ಸಿಇಓ ಫಖ್ರ್ವಾನ್, ಲಂಡನ್ ಹಾಗೂ ನ್ಯೂಯಾರ್ಕ್‍ನಲ್ಲಿ ಸುಮಾರು 7 ವರ್ಷಗಳ ಕಾಲ ಇನ್‍ವೆಸ್ಟ್​​​ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಯಶಸ್ವಿ ಉದ್ಯಮ ನಡೆಸಲು ಜನಸಂಖ್ಯಾ ಅನುಕೂಲ ಇದೆ ಅನ್ನೋದು ಅವರ ಅಭಿಪ್ರಾಯ. ಆದ್ರೆ ಚೌಕಾಸಿ ಮಾಡುವ ಮಧ್ಯಮವರ್ಗದವರನ್ನು ಬಿಟ್ರೆ, ಹಣ ಖರ್ಚು ಮಾಡುವ ಸಿರಿವಂತರ ಸಂಖ್ಯೆ ಕಡಿಮೆಯಿದೆ. ಪಾಕಿಸ್ತಾನದ 200 ಮಿಲಿಯನ್ ಜನರಿಗೆ ಸಭ್ಯ ಜೀವನಶೈಲಿಯ ಅಗತ್ಯವಿದೆ ಅನ್ನೋ ವಿಚಾರಧಾರೆಯ ಮೂಲಕ ಫಖ್ರ್ವಾನ್, ಜನತೆಗೆ ಒಳಿತು ಮಾಡುವ ನಿರ್ಧಾರ ತೆಗೆದುಕೊಂಡ್ರು.

image


ಉದ್ಯಮ ಮತ್ತು ಗುರಿ...

ಔಷಧೀಯ ಉದ್ಯಮ ಯಾವುದಕ್ಕೂ ಒಳಪಟ್ಟಿಲ್ಲ, ಮತ್ತು ಅಡ್ಡಿಪಡಿಸಲು ಸಂಪೂರ್ಣ ಮಾಗಿದೆ. ಬೂಟ್ಸ್ ಅಥವಾ ಸಿವಿಎಸ್‍ನಂಥದ್ದನ್ನು ಪಾಕಿಸ್ತಾನದಲ್ಲಿ ಜಾರಿ ಮಾಡುವುದು ಅವರ ಮೊದಲ ಪರಿಕಲ್ಪನೆಯಾಗಿತ್ತು. ಆದ್ರೆ ಅದರಲ್ಲಿ ಮಾರ್ಜಿನ್ ಕಡಿಮೆ ಇದ್ದಿದ್ರಿಂದ, ಬೆಲೆಯ ಮಿತಿ ಮತ್ತು ಹೆಚ್ಚು ನಿಯಂತ್ರಿತ ಮಾರುಕಟ್ಟೆಯಿಂದಾಗಿ ಆ ಯೋಜನೆ ಕೈಗೂಡಲಿಲ್ಲ. ಗುಣಮಟ್ಟದ ಮತ್ತು ಅನುಕೂಲಕರ ಸಮಗ್ರ ಔಷಧಾಲಯ ಸೇವೆಗಳನ್ನು ಒದಗಿಸುವುದು ಫಖ್ರ್ವಾನ್ ಅವರ ಉದ್ದೇಶವಾಗಿತ್ತು. ರೋಗಿಗಳ ಮನೆಗೆ ಅತಿ ಶೀಘ್ರವಾಗಿ ಔಷಧಗಳನ್ನು ತಲುಪಿಸುವ ಪರಿಕಲ್ಪನೆಗೆ ಇನ್ನಷ್ಟು ಹೊಸತನ ನೀಡಲು `ದವಾಯಿ' ಸಂಸ್ಥೆಯ ತಂಡ ಸಾಕಷ್ಟು ಶ್ರಮಿಸಿದೆ. ಪಾಕಿಸ್ತಾನದಲ್ಲಿ ಫಾರ್ಮಾ ಉದ್ಯಮವನ್ನು ಸರಿಯಾಗಿ ವ್ಯವಸ್ಥೆಗೊಳಿಸಲು `ದವಾಯಿ' ಪ್ರಯತ್ನಿಸ್ತಾ ಇದೆ. ಸದ್ಯ ಅಸ್ಥಿತ್ವದಲ್ಲಿರುವ ಫಾರ್ಮಾ ಕಾನೂನಿಗೆ ಅನುಗುಣವಾಗಿಯೇ ಕಾರ್ಯನಿರ್ವಹಿಸುತ್ತಿದೆ.

ಖರೀದಿ, ಸಂಗ್ರಹ ಮತ್ತು ಹಂಚುವಿಕೆ ಸೇರಿದಂತೆ ಔಷಧೀಯ ಉತ್ಪನ್ನಗಳಿಗೆ ಸಂಬಂಧಿಸಿದ ಕೆಲಸವನ್ನೆಲ್ಲ ಅರ್ಹ ಫಾರ್ಮಾಸಿಸ್ಟ್​​​​​​​​​ಗಳು ಮಾತ್ರ ನಿರ್ವಹಿಸುತ್ತಿದ್ದಾರೆ. ಈ ಸಹವರ್ತಿಗಳು ಬೆಳಗ್ಗೆ 9.30 ರಿಂದ ರಾತ್ರಿ 9.30ರವರೆಗೆ, ಸೋಮವಾರದಿಂದ ಶನಿವಾರದವರೆಗೆ ಲಭ್ಯವಿರುತ್ತಾರೆ. ಕೇವಲ ಒಂದು ಫೋನ್ ಕರೆ ಮಾಡಿದ್ರೆ ಅವರು ರೋಗಿಗಳ ಸೇವೆಗಾಗಿ ಹಾಜರಾಗುತ್ತಾರೆ. ಆನ್‍ಲೈನ್ ಮಳಿಗೆಯಾಗಿರುವುದರಿಂದ ಔಷಧಿ ಚೀಟಿ, ಗ್ರಾಹಕರ ಆರೋಗ್ಯ ಮತ್ತು ಓಟಿಸಿ ಉತ್ಪನ್ನಗಳಿಗಾಗಿ ಪ್ರತ್ಯೇಕ ಪೋರ್ಟಲ್‍ಗಳನ್ನು ಹೊಂದುವುದು `ದವಾಯಿ'ಗೆ ಸವಾಲಾಗಿ ಪರಿಣಮಿಸಿದೆ. ಪ್ರಿಸ್ಕ್ರಿಪ್ಷನ್ ಔಷಧಿಗಳ ಮಾರಾಟಕ್ಕೆ ಆನ್‍ಲೈನ್ ಮಳಿಗಿಗಳಿಗೆ ಮಿತಿ ಹೇರಲಾಗಿದೆ.

ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸದೇ ಇದ್ರೆ ಆನ್‍ಲೈನ್ ಉದ್ಯಮದ ಮೂಲಕ ಯಶಸ್ಸು ಸಾಧಿಸುವುದು ಅಸಾಧ್ಯ ಅನ್ನೋದು ಫಖ್ರ್ವಾನ್ ಅವರ ಅಭಿಪ್ರಾಯ. ಹಾಗಾಗಿ ದವಾಯಿ ತಂಡ ಪ್ರತಿಕ್ಷಣವೂ ವ್ಯವಸ್ಥೆಯನ್ನು ಅಪ್‍ಡೇಟ್ ಮಾಡುವುದರಲ್ಲಿ ನಿರತವಾಗಿದೆ. ಪ್ರತಿ ಬಾರಿಯೂ `ದವಾಯಿ'ಯಲ್ಲಿ ನಯವಾದ ವ್ಯವಹಾರ ಮತ್ತು ಉತ್ತಮ ಸೇವೆ ದೊರೆಯಬೇಕು ಎನ್ನುವುದು ಫಖ್ರ್ವಾನ್ ಅವರ ಉದ್ದೇಶ.

ಮಾರುಕಟ್ಟೆ ಮತ್ತು ತಂಡ...

ಪಾಕಿಸ್ತಾನದ ಬಹುತೇಕ ಇ-ಕಾಮರ್ಸ್ ಉದ್ಯಮಿಗಳು, ಆರ್ಡರ್‍ಗಳನ್ನು ಪಡೆಯಲು ವೆಬ್‍ಸೈಟ್ ಒಂದನ್ನು ಹೊಂದಿರುತ್ತಾರೆ. ಜಾಗತಿಕ ಇ-ಕಾಮರ್ಸ್ ಕ್ಷೇತ್ರದಲ್ಲಿನ ಪ್ರಗತಿಗಾಗಿ ಫಖ್ರ್ವಾನ್ ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಗ್ರಾಹಕರ ಜೊತೆಗಿನ ಸಂವಹನದಲ್ಲಿ ಸುಧಾರಣೆ ತರಲು ಹಾಗೂ ಅತ್ಯುತ್ತಮ ಶಾಪಿಂಗ್ ಅನುಭವ ಮೂಡಿಸುವುದು ಅವರ ಪ್ರಮುಖ ಆದ್ಯತೆ. ಕಳೆದ ಒಂದು ವರ್ಷದಲ್ಲಿ `ದವಾಯಿ'ಯ ಆದಾಯ ಪ್ರತಿ ತಿಂಗಳು ಶೇ.23ರಷ್ಟು ಪ್ರಗತಿ ಕಾಣುತ್ತಿದೆ. ಮಾರುಕಟ್ಟೆ ಗುಪ್ತಚರ ಮಾಹಿತಿ ಪ್ರಕಾರ `ದವಾಯಿ' ಪಾಕಿಸ್ತಾನದಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಆನ್‍ಲೈನ್ ಆರೋಗ್ಯ ಮಳಿಗೆ ಎನಿಸಿಕೊಂಡಿದೆ.

ಅನನುಭವಿ ಪದವೀಧರರಿಗೆ ಫಖ್ರ್ವಾನ್ ಉದ್ಯೋಗ ಕೊಟ್ಟಿದ್ದಾರೆ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ, ಯಾವುದೇ ಶ್ರೇಣಿ ಇಲ್ಲ. ನಿಜವಾಗಲೂ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಯಸುವವರಿಗೆ ಉತ್ತೇಜನ ನೀಡುವಂತಹ ವಾತಾವರಣ ಇಲ್ಲಿದೆ. ಅವರಿಗೆ ಯಾವುದೇ ರೀತಿಯ ನಿರ್ಬಂಧ ಅಥವಾ ಚೌಕಟ್ಟಿಲ್ಲ, ಅದರಾಚೆಗೂ ಅವರು ಯೋಚನೆ ಮಾಡಬಹುದು. ಈ ಉದ್ಯಮದಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ ಅನುಭವವಿರುವವರನ್ನು ನೇಮಕ ಮಾಡಿಕೊಳ್ಳುವ ಬದಲು ಸ್ವಪ್ರೇರಣೆಯಿಂದ ತಂಡವನ್ನು ಮುನ್ನಡೆಸಬಲ್ಲ ಸಾಮರ್ಥ್ಯವುಳ್ಳವರಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಇಲಾಖೆಗಳು ಒಂದೇ ಪ್ರಮಾಣದ ಮೇಲೆ ಕರ್ತವ್ಯ ನಿರ್ವಹಿಸುವುದು ವಿಶೇಷ.

ಕೆಟಗರಿ ಮ್ಯಾನೇಜರ್‍ಗಳಿಂದ ಸಲಹೆ ಸೂಚನೆ ಪಡೆಯಲು ಫಖ್ರ್ವಾನ್ ಹಿಂದೇಟು ಹಾಕುವುದಿಲ್ಲ. ಪ್ರತಿದಿನ ಎದರಾಗುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾರೆ. ಹಾಗಾಗಿಯೇ `ದವಾಯಿ' ನಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ಭಾರತಿ ಭಟ್​​​​

Add to
Shares
1
Comments
Share This
Add to
Shares
1
Comments
Share
Report an issue
Authors

Related Tags