ಆವೃತ್ತಿಗಳು
Kannada

ಗ್ಲಾಮರ್ ಬೊಂಬೆಯಾದ್ಲು ಯೋಗ ಟೀಚರ್..!

ಟೀಮ್​ ವೈ.ಎಸ್​. ಕನ್ನಡ

YourStory Kannada
24th Jun 2016
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ನಟಿ ಸಂಜನಾ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ,ಕಾಲಿವುಡ್ ಹಾಗೂ ಮಾಲಿವುಡ್​​ನಲ್ಲೂ ತನ್ನ ನಟನೆಯಿಂದನೇ ಸೈ ಎನ್ನಿಸಿಕೊಂಡಿರೋ ನಟಿ . ಕಲ್ಯಾಣ್​ ಜೊತೆಯಲ್ಲೂ ಆಕ್ಟ್ ಮಾಡಿ ಸೈ ಅನ್ನಿಸಿಕೊಂಡ ನಟಿ ಸಂಜನಾ, ಸಿನಿಮಾ ಲೋಕದಲ್ಲಿ ಗ್ಲಾಮರ್ ಬೊಂಬೆ ಅಂತಾನೆ ಫೇಮಸ್ ಆಗಿರೋ ಸಂಜನಾ ಈಗ ಯೋಗದಲ್ಲಿ ಟೀಚರ್ ಆಗಿದ್ದಾರೆ. ಸಿನಿಮಾರಂಗ ಅಂದ ಮೇಲೆ ಅಲ್ಲಿ ಸದಾ ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು ಹಾಗೂ ಬ್ಯೂಟಿಗೆ ತುಂಬಾನೇ ಪ್ರಾಮುಖ್ಯತೆ ನೀಡಬೇಕು. ಅದಕ್ಕಾಗೆ ಎಲ್ಲಾ ನಟ-ನಟಿಯರು ಯೋಗದ ಮೊರೆ ಹೋಗೊದು ಗೊತ್ತಿರೋ ವಿಚಾರ. ಇನ್ನು ಸಂಜನಾ ಕೂಡ ಎಲ್ಲರಂತೆ ಯೋಗವನ್ನ ಅವ್ರ ಲೈಫ್​​ನಲ್ಲಿ ಅಳವಡಿಸಿಕೊಂಡಿದ್ರು ಕಳೆದ ಎರಡು ವರ್ಷಗಳಿಂದ ಪ್ರತಿ ನಿತ್ಯ ಯೋಗ ಮಾಡೋದು ಸಂಜನಾಗೆ ಡೈಲಿ ರೂಟೀನ್ ಆಗಿತ್ತು. ನನ್ನಂತೆ ಎಲ್ಲರಿಗೂ ಈ ಯೋಗ ಬಗ್ಗೆ ಟ್ರೈನಿಂಗ್ ಅನ್ನ ಯಾಕೆ ನೀಡಬಾರದು ಅಂತ ಯೋಚನೆ ಮಾಡಿದ ಸಂಜನಾ ಯೋಗ ಬಗ್ಗೆ ಟ್ರೀನಿಂಗ್ ಕೋರ್ಸ್ ಅನ್ನು ಮಾಡಿಕೊಂಡು ನಂತ್ರ ಯೋಗ ಶಾಲೆಯನ್ನ ಪ್ರಾರಂಭ ಮಾಡಲು ಮುಂದಾದ್ರು.

image


ಯೋಗ ಶಾಲೆ ಸ್ಟಾರ್ಟ್ ಮಾಡಿದ ಸಂಜನಾ

ಸಂಜನಾ ಯೋಗ ಟ್ರೈನಿಂಗ್ ಕೋರ್ಸ್ ಅನ್ನ ಮುಗಿಸಿದ ನಂತ್ರ ತಮ್ಮದೇ ಆದ ಯೋಗ ಟ್ರೈನಿಂಗ್ ಸೆಂಟರ್ ಅನ್ನ ಓಪನ್ ಮಾಡ್ಬೇಕು ಅಂತ, ತಾವು ಟ್ರೈನಿಂಗ್ ಪಡೆದ ಅಕ್ಷರ ಪವರ್ ಯೋಗ ಅಕಾಡೆಮಿ ಜೊತೆಗೂಡಿ ತಮ್ಮದೇ ಸ್ವಂತ ಯೋಗ ಅಕಾಡೆಮಿ ಶುರು ಮಾಡಿದ್ದಾರೆ. ಕೋರಮಂಗಲದಲ್ಲಿರೋ ಈ ಯೋಗ ಇನ್ಸ್​ಟಿಟ್ಯೂಟ್​​ನಲ್ಲಿ ಪವರ್ ಯೋಗದ ಬಗ್ಗೆ ತರಬೇತಿಯನ್ನ ನೀಡಲಾಗುತ್ತದೆ. ಸದಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿರೋ ಸಂಜನಾ ಚಿತ್ರೀಕರಣದಲ್ಲಿ ಸ್ವಲ್ಪ ಬಿಡುವು ಸಿಕ್ಕರೆ ಸಾಕು ಯೋಗ ಅಕಾಡೆಮಿಗೆ ಬಂದು ಟ್ರೈನಿಂಗ್ ಕೊಡೋದಕ್ಕೆ ಶುರು ಮಾಡ್ತಾರಂತೆ. ಸಂಜನಾ ಇಲ್ಲದಾಗ ನುರಿತ ಯೋಗ ಪಟುಗಳು ಯೋಗ ಟ್ರೈನಿಂಗ್ ಅನ್ನ ನೀಡುತ್ತಾರೆ.

image


ಯೋಗ ಶಾಲೆ ಪ್ಲಾನ್ ಬಂದಿದ್ದು ಹೀಗೆ

ಆಕ್ಟರ್ ಆಗಿದಾಗಿನಿಂದಲೂ ಸಂಜನಾ ಯೋಗವನ್ನ ಮಾಡುತ್ತಾ ಬಂದಿದ್ದಾರೆ. ಯೋಗ ಅನ್ನೋದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಹಾಗೂ ಯೋಗ ಮಾಡೋದ್ರಿಂದ ದಿನಪೂರ್ತಿ ಉತ್ಸಾಹ ಹೊಂದಿರಬಹುದು. ಅದಷ್ಟೆ ಅಲ್ಲದೆ ಎಂತಹ ರೋಗಗಳಿಂದಲೂ ದೂರ ಇರಬಹುದು, ಅನ್ನೋದು ಸಂಜನಾ ಅವ್ರ ಅಭಿಪ್ರಾಯ ಅಷ್ಟೇ ಅಲ್ಲದೆ ಏಳು ವರ್ಷದ ಹಿಂದೆ ಇಂಡಷ್ಟ್ರಿಗೆ ಬಂದ ಸಂಜನಾ ಆಗ ಹೇಗಿದ್ರೋ, ಇಂದು ಕೂಡ ಅವ್ರ ಫಿಟ್ನೆಸ್ ಅನ್ನ ಮೆಂಟೈನ್ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಸಂಜನಾ ಪ್ರತಿನಿತ್ಯ ಯೋಗ ಮಾಡುತ್ತಾರೆ. ಶೂಟಿಂಗ್ ಬ್ಯುಸಿ ಇದ್ರೆ ಯೋಗ ಮಿಸ್ ಮಾಡೋ ಸಂಜನಾ ವಾರದಲ್ಲಿ 4 ದಿನ ಮಾತ್ರ ತಪ್ಪದೆ ಯೋಗ ಮಾಡುತ್ತಾರಂತೆ. ಸದ್ಯ ಟ್ರೈನಿಂಗ್ ಮುಗಿಸಿ ಯೋಗ ಟ್ರೇನಿಂಗ್ ಸೆಂಟರ್ ಸ್ಟಾರ್ಟ್ ಮಾಡಿರೋ ಸಂಜನಾ ಬಿಡುವಿದ್ದಾಗ ಇಲ್ಲಿ ಬರೋ ಯೋಗಪಟುಗಳ ಜೊತೆ ಬಂದು ಯೋಗ ಮಾಡುತ್ತಾರೆ. ಇತ್ತೀಚಿಗಷ್ಟೇ ಶುರುವಾಗಿರೋ ಈ ಯೋಗಶಾಲೆಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆಯಂತೆ. ನೀವು ಸ್ಟಾರ್ ಯೋಗಕ್ಲಾಸ್​ಗೆ ಸೇರಿಕೊಳ್ಳಬೇಕು ಅಂದ್ರೆ ಕೋರಮಂಗಲದಲ್ಲಿರೋ ಅಕ್ಷರ್ ಪವರ್ ಯೋಗ ಕ್ಲಾಸ್ ಗೆ ಸೇರಿಕೊಳ್ಳಬಹುದು.

ಇದನ್ನು ಓದಿ:

1. ಎಟಿಎಂ ಕಾರ್ಡ್​ ಇಲ್ದೇ ಇದ್ರೂ ಹಣ ಡ್ರಾ ಮಾಡಬಹುದು..!

2. "ತಿಥಿ"ಫೇಮಸ್ ಆಗಿದ್ದು ಹೇಗೆ ಗೊತ್ತಾ..? ಸೆಕ್ಯುರಿಟಿ ಗಾರ್ಡ್​ನ ಕಥೆಗೆ ಸಿಕ್ತು ನ್ಯೂ ಲುಕ್​...!

3. ಬಳಸಿಕೊಂಡಿದ್ದು ಸೆಕೆಂಡ್​ಹ್ಯಾಂಡ್​ ವಸ್ತು- ತಯಾರಾಗಿದ್ದು ಪರಿಸರ ಸ್ನೇಹಿ ಕಾರು..!

3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags