ಅಂಡಮಾನಿನ ಕಾಲಾ ಪಾನಿ ಜೈಲಿನ ಅಮಾನುಷ ಕೃತ್ಯದ ಕರಾಳ ಅನುಭವಗಳು

14th Aug 2019
  • +0
Share on
close
  • +0
Share on
close
Share on
close

ಕಾಲಾ ಪಾನಿ ಅಥವಾ 'ಕಪ್ಪು ನೀರು' ಎಂದು ಕರೆಯಲ್ಪಡುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಸೆಲ್ಯುಲಾರ್ ಜೈಲು 1896 ರಲ್ಲಿ ನಿರ್ಮಿಸಲ್ಪಟ್ಟಿತು ಮತ್ತು ರಾಜಕೀಯ ಕೈದಿಗಳನ್ನು ಪ್ರತ್ಯೇಕವಾಗಿ ದೂರದ ಜಾಗಗಳಿಗೆ ಗಡಿಪಾರು ಮಾಡಲು 1906 ರಲ್ಲಿ ಬ್ರಿಟಿಷರು ಪ್ರಾರಂಭಿಸಿದರು. ಜೈಲಿನಲ್ಲಿದ್ದ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದ ಸುಶೀಲ್ ಕುಮಾರ್ ದಾಸ್‌ಗುಪ್ತಾ ಅವರ ಪುತ್ರ ಅನುಪ್ ದಾಸ್‌ಗುಪ್ತಾ ಜೈಲಿನಲ್ಲಿರುವ ತನ್ನ ತಂದೆಯ ಅನುಭವಗಳನ್ನು ವಿವರಿಸುತ್ತಾರೆ.


q

7 ವಿಭಾಗದ ಸೆಲ್ಯೂಲರ್ ಜೈಲಿನ 2 ಭಾಗಗಳು. ಚಿತ್ರಕೃಪೆ: ಸ್ವಪನಾ ಚೌಧರಿ


ನಾನು ಮೊದಲ ಬಾರಿ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದಾಗ 12 ವರ್ಷದವನಾಗಿದ್ದೆ. ಆಗ ಅದು ಇಟ್ಟಿಗೆ ಮತ್ತು ಕಬ್ಬಿಣದ ಭವ್ಯವಾದ ರಚನೆಯಾಗಿ ಕಾಣಿಸಿಕೊಂಡಿತು. ಒಂದು ದಶಕಕ್ಕೂ ಹೆಚ್ಚು ಸಮಯದ ನಂತರವು, ಜೈಲು ಇನ್ನೂ ಭವ್ಯವಾಗಿ ಕಾಣುತ್ತದೆ. ಆದರೆ ಈ ಬಾರಿ, ಅದರ ಕಥೆಗಳು ಹೆಚ್ಚು ಅರ್ಥವನ್ನು ಹೊಂದಿವೆ ಮತ್ತು ವಿಸ್ಮಯವನ್ನು ಉಂಟುಮಾಡುತ್ತವೆ ಏಕೆಂದರೆ ಈ ಜೈಲಿನ ಭಯಾನಕ ಕೃತ್ಯಗಳಿಗೆ ಸಾಕ್ಷಿಯಾದ ಒಬ್ಬರ ವಂಶಸ್ಥರು ಇದನ್ನು ವಿವರಿಸಿದ್ದಾರೆ.


ಕ್ರಾಂತಿಕಾರಿ


ಈಗ ಅವರಿಗೆ 70 ದಾಟಿದ್ದು ಮಿನುಗುವ ಮುಖ, ಬಿಳಿ ಕೂದಲು ಮತ್ತು ಮುಖದಲ್ಲಿ ಮಂದಹಾಸದೊಂದಿಗೆ, ಈ ಜೈಲಿನೊಳಗೆ ಒಮ್ಮೆ ಕತ್ತಲೆಯನ್ನು ತಿಳಿದಿದ್ದ ತನ್ನ ತಂದೆಯ ಕಥೆಯನ್ನು ಅವರು ನನಗೆ ತಿಳಿಸಿದ್ದಾರೆ.


ಸುಶೀಲ್ ಕುಮಾರ್ ದಾಸ್‌ಗುಪ್ತಾ (1910-1947) ಅವರು ಈಗಿನ ಬಾಂಗ್ಲಾದೇಶದ ಬರಿಶಾಲ್‌ನಲ್ಲಿ ಜನಿಸಿದ್ದರು. ಅವರು ಬಂಗಾಳದ ಕ್ರಾಂತಿಕಾರಿ ಯುಗಂತರ್ ದಳದ ಸದಸ್ಯರಾಗಿದ್ದರು ಮತ್ತು 1929 ರ ಪುಟಿಯಾ ಮೇಲ್ ದರೋಡೆ ಪ್ರಕರಣವು ಅವರನ್ನು ಮದಿನಿಪುರ ಜೈಲಿಗೆ ಕರೆದೊಯ್ಯಿತು. ಅಲ್ಲಿಂದ ಅವರು ಸಹ ಕ್ರಾಂತಿಕಾರಿಗಳಾದ ಸಚಿನ್ ಕಾರ್ ಗುಪ್ತಾ ಮತ್ತು ದಿನೇಶ್ ಮಜುಂದಾರ್ ಅವರೊಂದಿಗೆ ತಪ್ಪಿಸಿಕೊಂಡರು.


“’ಸ್ವಾತಂತ್ರ್ಯ ಹೋರಾಟಗಾರರಿಗೆ ಅಡುಗೆಯವರು, ಸ್ವೀಪರ್‌ಗಳು ಮತ್ತು ಪೋಸ್ಟ್‌ಮ್ಯಾನ್‌ಗಳು ಯಾವಾಗಲೂ ಹೆಚ್ಚಿನ ಸಹಾಯ ಮಾಡುತ್ತಿದ್ದರು. ಒಬ್ಬ ಅಡುಗೆಯವನು ಅವರಿಗೆ ಒಂದು ದೊಡ್ಡ ಲೋಹದ ಸೌಟು ಕೊಟ್ಟಿದ್ದರು. ಅವರು ಸೌಟ ಅನ್ನು ನೆಗ್ಗಿಸಿ ಇನ್ನೊಬ್ಬರು ಅದನ್ನು ಕೊಕ್ಕೆಯಂತೆ ಮಾಡಿ ಗೋಡೆಯ ಮೇಲೆ ಹಾರಿಸಿದರು. ಅವರು ಬಾಗಿದ ಸೌಟಿಗೆ ಗಂಟು ಹಾಕಿದ ಬಟ್ಟೆಯನ್ನು ಕಟ್ಟಿ, ತಾತ್ಕಾಲಿಕ ಏಣಿಯ ಮೂಲಕ ಗೋಡೆಯ ಮೇಲೆ ಹತ್ತಿದರು.”


ಅವರು ಏಳು ತಿಂಗಳ ಕಾಲ ಪರಾರಿಯಾಗಿದ್ದರು. ಅಂತಿಮವಾಗಿ ದಿನೇಶನನ್ನು ಹಿಡಿದು ಗಲ್ಲಿಗೇರಿಸಲಾಯಿತು, ಸುಶೀಲ್ ಅವರನ್ನು ಸೆಲ್ಯುಲಾರ್ ಜೈಲಿಗೆ, ಮತ್ತು ಸಚಿನ್ ಅವರನ್ನು ಮೊದಲು ಮಾಂಡಲೆ ಜೈಲಿಗೆ ಮತ್ತು ನಂತರ ಸೆಲ್ಯುಲಾರ್ ಜೈಲಿಗೆ ಕಳುಹಿಸಲಾಯಿತು.


ಕ

ಸುಶೀಲ ಕುಮಾರ ದಾಸಗುಪ್ತ ಮತ್ತು ಅನೂಪ ದಾಸಗುಪ್ತ, ಚಿತ್ರಕೃಪೆ:ಅನೂಪ ದಾಸಗುಪ್ತ

ಕಪ್ಪು ಅಂಧಕಾರದ ಭಯ


ಜೈಲು ಮೂಲತಃ ಏಳು ಭಾಗಗಳನ್ನು ಹೊಂದಿದ್ದು ಅದು ಕೇಂದ್ರದ ವಾಚ್ ಟವರ್‌ನಿಂದ ಏಳು ದಿಕ್ಕುಗಳಲ್ಲಿ ಹರಡಿತ್ತು. ವಾಚ್ ಟವರ್ ಅಲಾರಾಂ ಬೆಲ್ ಅನ್ನು ಹೊಂದಿತ್ತಲ್ಲದೆ ಕಾವಲುಗಾರರು ಕೈದಿಗಳ ಮೇಲೆ ಕಣ್ಣಿಟ್ಟಿದ್ದರು. ಈ ಮಾದರಿಯು ಜೆರೆಮಿ ಬೆಂಥಮ್‌ರ ಪ್ಯಾನೊಪ್ಟಿಕಾನ್‌ನ ಪರಿಕಲ್ಪನೆಯ ಶೈಲಿಯಲ್ಲಿದ್ದು, ಇದು ಕೈದಿಗಳಿಗೆ ಅವರು ಇಲ್ಲದಿದ್ದಾಗಲೂ ಸಹ ಅವರನ್ನು ವೀಕ್ಷಿಸಲಾಗುತ್ತಿದೆ ಎಂಬ ಭಾವನೆಯನ್ನು ಬರಿಸುವಂತಿತ್ತು, ಏಕೆಂದರೆ ಅದರ ಕೇಂದ್ರದಿಂದ ಜೈಲಿನ ಎಲ್ಲಾ ಭಾಗಗಳ ಗೋಚರತೆಯ ಕಾರಣದಿಂದಾಗಿ. ಪ್ರಸಿದ್ಧ ಫ್ರೆಂಚ್ ತತ್ವಜ್ಞಾನಿ ಮೈಕೆಲ್ ಫೌಕಾಲ್ಟ್ ನಂತರ ಪ್ಯಾನೊಪ್ಟಿಕಾನ್ ಅನ್ನು ಕಣ್ಗಾವಲಿನ ಸಂಕೇತವೆಂದು ಗುರುತಿಸಿದರು. ಏಳು ಭಾಗಗಳಲ್ಲಿ ಮೂರು ಇನ್ನೂ ಉಳಿದಿವೆ.


ಜೈಲಿನಲ್ಲಿ ಕಣ್ಗಾವಲು ಪ್ರಮುಖ ಅಡಿಪಾಯವಾಗಲು ಉದ್ದೇಶಿಸಲಾಗಿತ್ತು, ಇದಲ್ಲದೇ ಕೈದಿಗಳನ್ನು ಇರಿಸಿದ್ದ ಸಣ್ಣ ಪ್ರತ್ಯೇಕ ಕೋಣೆಗಳಿಂದ ಅವರ ಹೆಸರನ್ನು ಪಡೆದುಕೊಂಡಿದ್ದರು. 693 ಕೋಣೆಗಳಲ್ಲಿ ಪ್ರತಿಯೊಂದೂ ಕೋಣೆಯು 4.5 ಮೀ ಉದ್ದ 2.7 ಮೀ ಅಗಲ ಆಯಾಮವನ್ನು ಹೊಂದಿದ್ದು, ಹಿಂಭಾಗದ ಗೋಡೆಯಲ್ಲಿ 3 ಮೀ ಎತ್ತರದಲ್ಲಿ ವೆಂಟಿಲೇಟರ್ ಇತ್ತು. ಪ್ರತಿ ಭಾಗದ ಮುಂಭಾಗ ಕಾರಿಡಾರ್ ಕೈದಿಗಳಿಗೆ ಯಾವುದೇ ರೀತಿಯಲ್ಲಿ ಸಂವಹನ ನಡೆಸಲು ಸಾಧ್ಯವಾಗದಂತೆ ಅದರ ಪಕ್ಕದ ಭಾಗದ ಹಿಂದಿನ ಗೋಡೆಗಳು ಎದುರಿಗಿದ್ದವು. ಹಸಿವು, ಚಿತ್ರಹಿಂಸೆ ಮತ್ತು ಪ್ರತ್ಯೇಕತೆಯ ಮೂರು-ಹಂತದ ತಂತ್ರಗಳಲ್ಲಿ, ಇದು ಮೂರನೆಯ ಕಠಿಣ ಶಿಕ್ಷೆಯಾಗಿದೆ.


ಸೆಲ್ಯುಲಾರ್ ಜೈಲಿನ ಆಹಾರವು ಹೆಚ್ಚು ಧೂಳು, ಮಳೆ ನೀರು ಮತ್ತು ಕಾಡು ಹುಲ್ಲುಗಳಿಂದ ಕೂಡಿರುತಿತ್ತು. ಸರಿಯಾದ ಹಾಸಿಗೆಗಳು ಇರಲಿಲ್ಲ. ಒಬ್ಬರಿಗೊಬ್ಬರು ಮಾತಾಡಿದರೆ ಕೈದಿಗಳನ್ನು ಕೋಲಿನಿಂದ ಹೊಡೆಯಲಾಗುತ್ತಿತ್ತು.


ನೇಣುಗಂಬ ತೆರೆದೆ ಇರುತ್ತಿದ್ದವು. ಪ್ರತಿ ಕುಣಿಕೆ ಕೆಳಗೆ, ಒಂದು ಸಣ್ಣ ಟ್ರ್ಯಾಪ್ಡೋರ್ ಅನ್ನು ಹಾಕಲಾಗಿತ್ತು. ದುರದೃಷ್ಟಕರ ಸ್ವಾತಂತ್ರ್ಯ ಹೋರಾಟಗಾರನ ಕುತ್ತಿಗೆಗೆ ಕುಣಿಕೆಯನ್ನು ಬಿಗಿಗೊಳಿಸಿದ ತಕ್ಷಣ ಟ್ರ್ಯಾಪ್ಡೋರ್ ಗೆ ದಾರಿ ಮಾಡಿಕೊಡುತ್ತದೆ. ನಂತರ ಅವರು ನೋವಿನಿಂದ ಸಾವನ್ನಪ್ಪುತ್ತಾನೆ. ನಂತರ ಅವರ ದೇಹವನ್ನು ಟ್ರ್ಯಾಪ್ಡೋರ್ ಅಡಿಯಲ್ಲಿ ಹಳ್ಳಕ್ಕೆ ಬಿಡಲಾಗುತ್ತದೆ. ಹಳ್ಳವನ್ನು ಒಂದು ಮಾರ್ಗದಿಂದ ಸಮುದ್ರಕ್ಕೆ ಸಂಪರ್ಕಿಸಲಾಗಿತ್ತು. ಶೀತ, ಅಂಧಕಾರ, ತೇವವಾದ ಹಾದಿಯಲ್ಲಿನ ಪ್ರಯಾಣವು ಹುತಾತ್ಮನು ಪಡೆಯುವ ಕೊನೆಯ ವಿಧಿಗಳಾಗಿವೆ.


1909 ಮತ್ತು 1931 ರ ನಡುವೆ ಜೈಲರ್ ಆಗಿದ್ದ ಸ್ಕಾಟ್ಸ್‌ಮನ್ ಡೇವಿಡ್ ಬ್ಯಾರಿ ಅವನ ಹುಚ್ಚು ಕ್ರೌರ್ಯಕ್ಕೆ ಕುಖ್ಯಾತನಾಗಿದ್ದ. "ನೀವು ಇಲ್ಲಿರುವಾಗ, ನಾನು ನಿಮ್ಮ ದೇವರು" ಎಂದು ಅವನು ಕೈದಿಗಳನ್ನು ಸ್ವಾಗತಿಸುತ್ತಿದ್ದ. ಜೈಲಿನ ಕೇಂದ್ರ ಅಂಗಳದಲ್ಲಿ ಸುದೀರ್ಘ ಕೆಲಸದ ಶೆಡ್ ನಿಂತಿದ್ದು, ಅದರ ಅವಶೇಷಗಳು ಇನ್ನೂ ಅಸ್ತಿತ್ವದಲ್ಲಿವೆ. ಇದು ತೈಲವನ್ನು ಹೊರತೆಗೆಯಲು ಒಂದು ಕುಟ್ಟಾಣಿಯನ್ನು ಹೊಂದಿತ್ತು. ಕೈದಿಗಳನ್ನು ಕುಟ್ಟಾಣಿಯ ಕೆಲಸಕ್ಕೆ ಸಜ್ಜುಗೊಳಿಸಲಾಯಿತು ಕೈದಿಗಳು ವೃತ್ತಾಕಾರವಾಗಿ ಸುತ್ತಿನಲ್ಲಿ ಸುತ್ತಿದಾಗ ಬೀಜಗಳಿಂದ ಎಣ್ಣೆ ಹೊರಬರುತ್ತಿತ್ತು.


ಸೆಲ್ಯುಲಾರ್ ಜೈಲು ವಿವಿಧ ರೀತಿಯ ಬಂಧನಗಳನ್ನು ಬಳಸುತಿತ್ತು. ಬ್ಯಾರಿ ಒಮ್ಮೆ ಉಲ್ಲಾಸ್ಕರ್ ದತ್ತಾಗೆ ಒಂದು ದಿನದಲ್ಲಿ ಮೂರು ಲೀಟರ್ ಎಣ್ಣೆಯನ್ನು ಕೊಯ್ಲು ಮಾಡುವಂತೆ ಕೇಳಿಕೊಂಡನು. ಎತ್ತುಗಳು ಸಹ ದಿನಕ್ಕೆ ಎರಡು ಲೀಟರ್ ಮಾತ್ರ ಕೊಯ್ಲು ಮಾಡಬಲ್ಲವು ಎಂದು ಉಲ್ಲಾಸ್ಕರ್ ನಿರಾಕರಿಸಿದರು. ಅವರು ಉಲ್ಲಾಸ್ಕರ್ ನ ತೋಳುಗಳನ್ನು ಮತ್ತು ಪಾದಗಳನ್ನ ಕಟ್ಟಿ ಬಂಧಿಸಿದರು. ಇದರಿಂದ ಅವರಿಗೆ ಚಲಿಸಲು ಸಾಧ್ಯವಾಗದ ಕಾರಣ ಮೂರು ದಿನಗಳವರೆಗೆ ಚಲನೆಯಿಲ್ಲದೆ ನಿಂತರು. ಅವರು ಅಂತಿಮವಾಗಿ ಉಲ್ಲಾಸ್ಕರ್ ರನ್ನು ಬಿಚ್ಚಿದಾಗ, ಅವರು ಪ್ರಜ್ಞಾಶೂನ್ಯವಾಗಿ ಕುಸಿದು ಎಚ್ಚರವಾದ ನಂತರ ಹುಚ್ಚರಾದರು, ಎಂದು ಅನುಪ್ ವಿವರಿಸುತ್ತಾರೆ.


ಹಸಿವು ಮುಷ್ಕರ


ಕ

ಮುಗಿಯದ ಸಮಯ. ಚಿತ್ರಕೃಪೆ:ಸ್ವಪನಾ ಚೌಧರಿ

1933 ರಲ್ಲಿ ಕೈದಿಗಳು 45 ದಿನಗಳ ನಿರಂತರ ಉಪವಾಸ ಸತ್ಯಾಗ್ರಹ ನಡೆಸಿದರು. ಒಂಬತ್ತನೇ ದಿನದಿಂದ ಕಾವಲುಗಾರರು ಹಾಲನ್ನು ಬಲವಂತವಾಗಿ ಆಹಾರವಾಗಿ ನೀಡಲು ಪ್ರಯತ್ನಿಸಿದರು. ಇದನ್ನು ವಿರೋಧಿಸುವ ಪ್ರಯತ್ನದಲ್ಲಿ ಪಂಜಾಬ್‌ನ ಮಹಾವೀರ್ ಸಿಂಗ್ ಗಡ್ಡರ್ ಮತ್ತು ಮೋಹಿತ್ ಮೈತ್ರಾ ಮತ್ತು ಬಂಗಾಳದ ಮನಕೃಷ್ಣ ನಬದಾಸ್ ಸಾವಿನ ಜೊತೆ ಹೋರಾಡಬೇಕಾಯಿತು. ಇತರರು ತಮ್ಮ ಮಡಕೆ ನೀರನ್ನು ಕಳ್ಳತನದಿಂದ ಹಾಲಿನ ಮಡಕೆಗಳೊಂದಿಗೆ ಬದಲಾಯಿಸಿರುವುದನ್ನು ಕಂಡುಕೊಂಡರು. 'ನಾವು ಏನು ಮಾಡಬೇಕು?' ಎಂದು ಆಕ್ರೋಶಗೊಂಡ ಸುಶೀಲ್ ತನ್ನ ನೆರೆಯ ಕೈದಿ ಡಾ. ನಾರಾಯಣ್ ರೇ ಅವರನ್ನು ಕೇಳಿದ. ಅದಕ್ಕೆ ಅವರು 'ನೀವು ಎಂದು ಫುಟ್ಬಾಲ್ ಆಡಿಲ್ಲವೇ?' 'ಅದನ್ನು ಒದೆಯಿರಿ!' ಎಂದು ಪ್ರತಿಕ್ರಿಯಿಸಿದರು, ಈ ಪದಗಳು ಪ್ರತಿಧ್ವನಿಸಿ ಕೋಣೆ ಕೋಣೆಗು ಕೇಳಿಸಿತು. ಶೀಘ್ರದಲ್ಲೇ, ಸೆಲ್ಯುಲಾರ್ ಜೈಲಿನ ಕ್ಯುಬಿಕಲ್ ತರಹದ ಕೋಣೆಗಳಿಂದ ಹಾಲು ಹರಿಯಿತು.


ಕೊನೆಯಲ್ಲಿ ಬ್ರಿಟಿಷರು ಕೈದಿಗಳ ಬೇಡಿಕೆಗಳನ್ನು ಇಡೆರಿಸಲು ಒಪ್ಪಿಕೊಂಡರು, ಅವು ಈ ಕೆಳಗಿನಂತಿವೆ:

  • ಸ್ವಚ್ಛಗೊಳ್ಳಲು ನಮಗೇ ಸೋಪ್ ಗಳು ಬೇಕು.
  • ಮಲಗಲು ಹಾಸಿಗೆಗಳು ಬೇಕೆಂದು ನಾವು ಬಯಸುತ್ತೇವೆ.
  • ನಮಗೆ ತಿನ್ನಲುಯೋಗ್ಯ ಆಹಾರ ಬೇಕು.
  • ನಾವು ರಾಜಕೀಯ ಕೈದಿಗಳಾಗಿರುವುದರಿಂದ ಅಧ್ಯಯನ ಮಾಡಲು ಬೀಡಬೇಕು.
  • ನಾವು ಪರಸ್ಪರ ಸಂವಹನ ನಡೆಸಲು ನಮಗೆ ಅನುಮತಿಸಬೇಕು.

"ಕ್ರಮೇಣ, ಜೈಲಿನ ಆವರಣದಲ್ಲಿ ಶೈಕ್ಷಣಿಕ ವಾತಾವರಣ ಬೆಳೆಯಿತು. ಕೈದಿಗಳು ಸತೀಶ್ ಪಕ್ರಶಿ, ಶಿವ ವರ್ಮಾ ಮತ್ತು ಭೂಪಾಲ್ ಬೋಸ್ ಅವರ ಅಡಿಯಲ್ಲಿ ರಾಜಕೀಯ ವಿಜ್ಞಾನ ಮತ್ತು ಇತಿಹಾಸವನ್ನು ಅಧ್ಯಯನ ಮಾಡಿದರು. "ಏಕೆ ಎಂದು ನನಗೆ ತಿಳಿದಿಲ್ಲ, ಆದರೆ ಈ ಕೈದಿಗಳಿಗೆ ಕಾರ್ಲ್ ಮ್ಯಾಕ್ಸರವರ 'ದಾಸ್ ಕ್ಯಾಪಿಟಲ್' ಅನ್ನು ಓದಲು ಬ್ರಿಟಿಷರು ನೀಡಿದರು. ಈ ರೀತಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾರ್ಕ್ಸ್‌ವಾದವನ್ನು ಕಲಿತಿದ್ದು” ಎಂದು ಅನುಪ್ ನಗುವಿನೊಂದಿಗೆ ಹೇಳುತ್ತಾರೆ.


1937 ರಲ್ಲಿ 36 ದಿನಗಳವರೆಗೆ ಮತ್ತೊಂದು ಉಪವಾಸ ಸತ್ಯಾಗ್ರಹವಾಯಿತು. ಈ ಬಾರಿ ಮತ್ತೊಮ್ಮೆ, ಬ್ರಿಟಿಷರು ಬಿಟ್ಟು ಕೋಡಬೇಕಾಯಿತು, ಕೈದಿಗಳು ಸ್ವಾತಂತ್ರ್ಯ ಹೋರಾಟದ ಕೊನೆಯ ವರ್ಷಗಳಲ್ಲಿ ಪಾಲ್ಗೊಳ್ಳಲು ತಮ್ಮ ಸ್ವಂತ ಮಣ್ಣಿಗೆ ಮರಳಲು ಬಯಸಿದ್ದರು. ಸೆಪ್ಟೆಂಬರ್ 1937 ಮತ್ತು ಜನವರಿ 1938 ರ ನಡುವೆ ಅವರನ್ನು ಮನೆಗೆ ಕಳುಹಿಸಲಾಯಿತು, ಮತ್ತು ಅಂಡಮಾನ್‌ನ ಸೆಲ್ಯುಲಾರ್ ಜೈಲು ಶಾಶ್ವತವಾಗಿ ಮುಚ್ಚಲ್ಪಟ್ಟಿತ್ತು.

  • +0
Share on
close
  • +0
Share on
close
Share on
close
Report an issue
Authors

Related Tags

Latest

Updates from around the world

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India