ಆವೃತ್ತಿಗಳು
Kannada

ಎಂಟ್ರಿ ಲೆವೆಲ್ ಸ್ಮಾರ್ಟ್​ಫೋನ್​ಗಳಿಗೆ ಹೊಸ ಟಚ್- ಗೂಗಲ್​ನಿಂದ "ಆ್ಯಂಡ್ರಾಯ್ಡ್ ಗೊ" ಬಿಡುಗಡೆ..!

ಟೀಮ್​ ವೈ.ಎಸ್​. ಕನ್ನಡ

21st May 2017
Add to
Shares
6
Comments
Share This
Add to
Shares
6
Comments
Share

ಗೂಗಲ್ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ ಅಂದರೆ ತಪ್ಪಿಲ್ಲ. ಸ್ಮಾರ್ಟ್ ಫೋನ್ ಯುಗದಲ್ಲಂತೂ ಗೂಗಲ್ ಆಧಾರಿತ ಆ್ಯಂಡ್ರಾಯ್ಡ್​ನದ್ದೇ ದೊಡ್ಡ ಪಾಲು. ವಿಶ್ವದಲ್ಲಿ ಸುಮಾರು 2 ಮಿಲಿಯನ್​ಗೂ ಅಧಿಕ ಸ್ಮಾರ್ಟ್​ಫೋನ್ ಬಳಕೆದಾರರು ಆ್ಯಂಡ್ರಾಯ್ಡ್ ಬಳಸುತ್ತಿದ್ದಾರೆ. ಈಗ ಗೂಗಲ್ ಮತ್ತೊಂದು ಪ್ಲಾಟ್​ಫಾರ್ಮ್ ಅನ್ನು ಪರಿಚಯಿಸಲು ಹೊರಟಿದೆ. "ಆ್ಯಂಡ್ರಾಯ್ಡ್ ಗೋ" ಅನ್ನುವ ಪ್ಲಾರ್ಟ್ ಫಾರ್ಮ್ ಮೂಲಕ, ಸಾಮಾನ್ಯ ಸ್ಮಾರ್ಟ್​ಫೋನ್​ಗಳಿಗೆ ಹೊಸ ಟಚ್ ನೀಡುವ ಪ್ರಯತ್ನದಲ್ಲಿ ತೊಡಗಿದೆ.

image


"ಆ್ಯಂಡ್ರಾಯ್ಡ್ ಗೋ" ಮುಂಬರುವ "ಆ್ಯಂಡ್ರಾಯ್ಡ್ ಓ" ಪ್ಲಾಟ್ ಫಾರ್ಮ್​ನ ಸುಧಾರಿತ ಆವೃತ್ತಿಯಾಗಿದೆ. ಇದು ಲೈಟ್ ವೈಟ್ ವರ್ಷನ್ ಕೂಡ ಆಗಿದೆ. ಕಡಿಮೆ ಸ್ಟೋರೇಜ್ ಸ್ಪೇಸ್ ಮತ್ತು ಹೆಚ್ಚು ಬ್ಯಾಟರಿ ಲೈಫ್ ಅನ್ನು ನೀಡಲು ಇದು ಸಹಕಾರಿಯಾಗಲಿದೆ. ಸಾಮಾನ್ಯ ಸ್ಮಾರ್ಟ್ ಫೋನ್​ಗಳಲ್ಲಿ ಇದು ಹೆಚ್ಚು ಬಳಕೆಯಾಗುವ ನಿರೀಕ್ಷೆ ಇದೆ.

ಇದನ್ನು ಓದಿ: 'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ 

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸ್ಮಾರ್ಟ್ ಫೋನ್​ಗಳ ಬಳಕೆ ಹೆಚ್ಚಿದೆ. ಆದ್ರೆ ಆರ್ಥಿಕವಾಗಿ ಮಧ್ಯಮ ವರ್ಗದಲ್ಲಿರುವವರು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್​ಗಳಿಗೆ ಮೊರೆಹೋಗುತ್ತಾರೆ. ಅಷ್ಟೇ ಅಲ್ಲ ಡಾಟಾ ಪ್ಯಾಕ್​ಗಳಲ್ಲೂ ಲೆಕ್ಕಾಚಾರ ಇಟ್ಟುಕೊಂಡೇ ಮೊಬೈಲ್ ವ್ಯವಹಾರಗಳನ್ನು ನಡೆಸುತ್ತಾರೆ. ಹೀಗಾಗಿ ಸ್ಲೋ ಇಂಟರ್ನೆಟ್ ಮತ್ತು ಸ್ಟೋರೇಜ್ ಸ್ಪೇಸ್ ಗಳ ಕೊರೆತೆಯನ್ನು ಎದುರಿಸುತ್ತಿದ್ದಾರೆ. ಇದು ಸ್ಮಾರ್ಟ್​ಫೋನ್​ಗಳು ಇದ್ರೂ ಅದರ ಉಪಯೋಗವನ್ನು ಕಡಿಮೆ ಆಗುವಂತೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವು ಉಪಯೋಗಕಾರಿ ತಾಂತ್ರಿಕತೆಗಳು ಇದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಅನ್ನುವಂತೆ, "ಆ್ಯಂಡ್ರಾಯ್ಡ್ ಗೋ" ವನ್ನು ಸ್ಮಾರ್ಟ್ ಫೋನ್​​ಗಳಿಗಾಗಿಯೇ ಬಿಡುಗಡೆ ಮಾಡಲಾಗಿದೆ. ಇದು1 GB RAM ಮತ್ತು ಅದಕ್ಕಿಂತ ಕಡಿಮೆ ಲೆಕ್ಕಚಾರದಲ್ಲಿ ಲಭ್ಯವಿದೆ. ಈ ಪ್ಲಾಟ್ ಫಾರ್ಮ್ ಮೂಲಕ ಪ್ಲೇ ಸ್ಟೋರ್ ಬಳಕೆ ಹೆಚ್ಚಾಗುವಂತೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಆ್ಯಪ್ ಆಪ್ಟಿಮೈಸೇಷನ್ ಮೂಲಕ ಕಡಿಮೆ ಮೆಮೊರಿಯ ಬಳಕೆಯಾಗುತ್ತದೆ.

ಆಪ್ಟಿಮೈಸ್ಡ್ ಆ್ಯಂಡ್ರಾಯ್ಡ್ ಆ್ಯಪ್​ಗೆ ಉತ್ತಮ ಉದಾಹರಣೆ ಅಂದರೆ ಇತ್ತೀಚೆಗೆ ಬಿಡುಗಡೆಯಾಗಿರುವ "ಯೂಟ್ಯೂಬ್ ಗೋ". ಇದು ಪ್ರಿವೀವ್ಯೂ ನೀಡುವ ಜೊತೆಗೆ ವಿಡಿಯೋ ಫ್ರೇಮ್ ನೋಡಲು ಕೂಡ ಬಳಕೆಯಾಗುತ್ತಿದೆ. ಇದು ಬಳಕೆದಾರರಿಗೆ ವಿಡೀಯೋ ಕ್ವಾಲಿಟಿ ಮತ್ತು ಡೌನ್ ಲೋಡ್ ಸಮಯದಲ್ಲೂ ಸಾಕಷ್ಟು ನೆರವು ನೀಡುತ್ತದೆ. ಆಫ್ ಲೈನ್ ವೀವ್ಯೂ ಸೇರಿದಂತೆ ಹಲವು ಉಪಯುಕ್ತ ಅಂಶಗಳನ್ನು ಹೊಂದಿದೆ.

"ಆ್ಯಡ್ರಾಯ್ಡ್ ಗೋ" ಮೂರು ವರ್ಷಗಳ ಹಿಂದೆ ಲಾಂಚ್ ಆದ "ಆ್ಯಂಡ್ರಾಯ್ಡ್ ವನ್" ಪ್ಲಾಟ್ ಫಾರ್ಮ್​ಗೆ ಹತ್ತಿರವಾದ ಪ್ಲಾಟ್ ಫಾರ್ಮ್ ಇದಾಗಿದೆ. ಆದ್ರೆ ಆಂಡ್ರಾಯ್ಡ್ ವನ್ ಅಷ್ಟಾಗಿ ಯಶಸ್ಸು ಕಂಡಿಲ್ಲ. ಒಟ್ಟಿನಲ್ಲಿ ಗೂಗಲ್ ಸ್ಮಾರ್ಟ್ ಫೋನ್ ಸ್ಪರ್ಧಾತ್ಮಕ ಜಗತ್ತಿನ ದಿ ಬೆಸ್ಟ್ ಫ್ಲಾಟ್ ಫಾರ್ಮ್ ಅನ್ನುವುದರಲ್ಲಿ ಅನುಮಾನವೇ ಇಲ್ಲ.

ಇದನ್ನು ಓದಿ:

1. ದೊಡ್ಡದಾಗಿ ಬೆಳೆಯುತ್ತಿದೆ ಸಿಲಿಕಾನ್​ ಸಿಟಿ-ಪ್ರಯಾಣಿಕರಿಗೆ ತಪ್ಪಲ್ಲ ಟ್ರಾಫಿಕ್​ ಕಿರಿಕಿರಿ

2. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

3. ಕೋಟಿಗಟ್ಟಲೆ ವ್ಯವಹಾರ ನಡೆಸಲು ಲಕ್ಷಗಟ್ಟಲೆ ಸಂಬಳ ಬರುವ ಕೆಲಸ ಬಿಟ್ಟ ಸಚಿನ್..!

 

 

Add to
Shares
6
Comments
Share This
Add to
Shares
6
Comments
Share
Report an issue
Authors

Related Tags