ಒಂದು ದಿನಕ್ಕೆ ಬ್ರಿಟಿಷ್‌ ಹೈ ಕಮಿಷನರ್‌ ಆದ 18 ವರ್ಷದ ಯುವತಿ

By Team YS Kannada|12th Oct 2020
ದೆಹಲಿಯ 18 ವರ್ಷದ ಯುವತಿ ಚೈತನ್ಯ ವೆಂಕಟೇಶ್ವರನ್‌ 200 ಸ್ಪರ್ಧಿಗಳ ನಡುವೆ ವಿಜಯಿಯಾಗಿ ಒಂದು ದಿನದ ಮಟ್ಟಿಗೆ ಬ್ರಿಟಿಷ್‌ ಹೈ ಕಮಿಷನರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

ದೆಹಲಿಯ 18 ವರ್ಷದ ಚೈತನ್ಯ ವೆಂಕಟೇಶ್ವರನ್ ಅವರು ಭಾನುವಾರ ಹೆಣ್ಣು ಮಗುವಿನ ಅಂತರರಾಷ್ಟ್ರೀಯ ದಿನದಂದು ಒಂದು ದಿನ ಬ್ರಿಟಿಷ್ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು.


ವಾಷಿಂಗ್ಟನ್‌ನ ಅಮೇರಿಕನ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿನಿ ಚೈತನ್ಯ, ರಾಜತಾಂತ್ರಿಕರೊಂದಿಗೆ ಹಿರಿಯ ಸಭೆಗಳ ಅಧ್ಯಕ್ಷತೆ ವಹಿಸಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಭಾರತೀಯ ಪೊಲೀಸ್ ಸೇವೆಯ ಸದಸ್ಯರೊಂದಿಗೆ ಸಂವಹನ ನಡೆಸಿದ್ದಾರೆ, ಅವರು ಈ ಅವಕಾಶವನ್ನು ಜೀವಿನದಲ್ಲಿ ಒಮ್ಮೆ ಮಾತ್ರ ಬರುವ ಅವಕಾಶವೆಂದು ಬಣ್ಣಿಸಿದ್ದಾರೆ.


ಯುವತಿಯರಿಗೆ ಏನು ಸಾಧ್ಯ ಎಂದು ತೋರಿಸಲು ಇದು ಒಂದು ಒಳ್ಳೇಯ ವೇದಿಕೆಯಾಗಿದೆ ಎಂದು ಹೇಳಿದ ಭಾರತದ ಕಾರ್ಯಕಾರಿ ಹೈಕಮಿಷನರ್ ಜಾನ್ ಥಾಂಪ್ಸನ್ ಅವರ ಕೆಲಸವನ್ನು ಭಾನುವಾರ ಒಂದು ದಿನಕ್ಕೆ ಚೈತನ್ಯ ವಹಿಸಿಕೊಂಡರು.


“ಇದೆಲ್ಲವೂ ಕಮಿಷನರ್‌ ಅವರ ಜಾವಾಬ್ದಾರಿ ಎಷ್ಟು ಸಂಕೀರ್ಣವಾಗಿದೆ ಎಂದು ಕಲಿಸಿಕೊಟ್ಟಿತು. ಭಾರತ ಮತ್ತು ಯುಕೆಯ ಸಂಬಂಧ, ವ್ಯಾಪಾರ, ಭದ್ರತೆ, ಸೇನೆಯ ಕಾರ್ಯ ಮತ್ತು ಯುವತಿಯರಿಗೆ ಶಿಷ್ಯವೇತನದ ಮೂಲಕ ಅವಕಾಶ ನೀಡುವುದರ ಬಗ್ಗೆ ನನಗೆ ಇಲ್ಲಿ ತಿಳಿಯಿತು,” ಎಂದು ತಮ್ಮೆಲ್ಲ ಅನುಭವವನ್ನು ಒಗ್ಗೂಡಿಸಿ ಚೈತನ್ಯ ಹೇಳಿದರು.


‘ಹೈ ಕಮಿಷನರ್‌ ಫಾರ್‌ ಅ ಡೇʼ ಸ್ಪರ್ಧೆ ಕಳೆದ ನಾಲ್ಕು ವರ್ಷದಿಂದ ನಡೆಯುತ್ತ ಬಂದಿದ್ದು, ಅದು 18 ರಿಂದ 23ರ ವರೆಗಿನ ಭಾರತದ ಮಹಿಳೆಯರಿಗೆ ಜಾಗತಿಕವಾಗಿ ಮಹಿಳೆಯರು ಎದುರಿಸುವ ಸವಾಲುಗಳ ಮೇಲೆ ಬೆಳಕು ಚೆಲ್ಲಲು ಒಂದು ವೇದಿಕೆ ಒದಗಿಸಿ, ಅವರ ಪಾತ್ರದ ಬಗ್ಗೆ ವಿವಿಧ ಆಯಾಮಗಳನ್ನು ಒದಗಸುತ್ತದೆ.


ಈ ವರ್ಷದ ಅಗಸ್ಟ್‌ನಲ್ಲಿ ಘೋಷಿಸಲಾಗಿದ್ದ ಈ ಸ್ಪರ್ಧೆಗೆ “ಕೋವಿಡ್‌-19 ಕಾಲದಲ್ಲಿ ಲಿಂಗ ತಾರತಮ್ಯದಲ್ಲಿ ನಿಮಗೆ ಕಾಣಸಿಗುವ ಸಮಸ್ಯೆಗಳೇನು ಮತ್ತು ಅವಕಾಶಗಳೇನು” ಎಂಬ ವಿಷಯದ ಕುರಿತು ಒಂದು ನಿಮಿಷದ ವಿಡಿಯೋ ಮಾಡಿ, ಟ್ವಿಟ್ಟರ್‌, ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಂ ನಲ್ಲಿ ‘UkinIndia’ ಗೆ ಟ್ಯಾಗ್‌ ಮಾಡಿ #DayoftheGirl ಹ್ಯಾಷ್‌ಟ್ಯಾಗ್‌ ಬಳಿಸಿ ಪೊಸ್ಟ್‌ ಮಾಡಲು ಸ್ಪರ್ಧಿಗಳಿಗೆ ಕೋರಲಾಗಿತ್ತು.


200 ಸ್ಪರ್ಧಿಗಳಲ್ಲಿ ಗೆದ್ದ ಚೈತನ್ಯ ಕೌಟುಂಬಿಕ ಶೋಷನೆ ಮತ್ತು ಹಿಂಸೆ, ಆರ್ಥಿಕ ಅಭದ್ರತೆಯಂತಹ ವಿಷಯಗಳ ಮೇಲೆ ಮಾತನಾಡಿದ್ದರು.

Get access to select LIVE keynotes and exhibits at TechSparks 2020. In the 11th edition of TechSparks, we bring you best from the startup world to help you scale & succeed. Join now! #TechSparksFromHome

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close

Latest

Updates from around the world