ಮಕ್ಕಳ ಹಕ್ಕುಗಳ ಆಯೋಗ ಹಾಗೂ ಐಐಟಿ-ಕಾನ್ಪುರ, ಲೈಂಗಿಕ ಕಿರುಕುಳದ‌ ಬಗ್ಗೆ ಜಾಗೃತಿ ಮೂಡಿಸಲು ಕಿಟ್ ಅಭಿವೃದ್ಧಿಪಡಿಸುತ್ತಿವೆ

ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಐಐಟಿ ಖಾನ್‌ಪುರ್ ಜೊತೆಗೂಡಿ ಶಿಕ್ಷಕರಿಗೆ ಹಾಗೂ ಎನ್‌ಜಿ‌ಓ‌ಗಳಿಗೆ ಮಕ್ಕಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಸಂವಾದಾತ್ಮಕ ಕಾರ್ಯಾಗಾರಗಳನ್ನು ನಡೆಸಿ ಹಾಗೂ ಶಿಕ್ಷಣ ನೀಡಲು ಸುಲಭವಾಗುವ ಕಿಟ್‌ಗಳನ್ನು ತಯಾರಿಸುತ್ತಿವೆ.

ಮಕ್ಕಳ ಹಕ್ಕುಗಳ ಆಯೋಗ ಹಾಗೂ ಐಐಟಿ-ಕಾನ್ಪುರ, ಲೈಂಗಿಕ ಕಿರುಕುಳದ‌ ಬಗ್ಗೆ ಜಾಗೃತಿ ಮೂಡಿಸಲು ಕಿಟ್ ಅಭಿವೃದ್ಧಿಪಡಿಸುತ್ತಿವೆ

Monday August 19, 2019,

1 min Read

ಐಐಟಿ-ಕಾನ್ಪುರದ ಸಹಯೋಗದೊಂದಿಗೆ ಅತ್ಯುನ್ನತ ಮಕ್ಕಳ ಹಕ್ಕುಗಳ ಆಯೋಗವು ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಲು ಕಿಟ್ ಅನ್ನು ಅಭಿವೃದ್ಧಿಪಡಿಸಿದೆ, ವೈಯಕ್ತಿಕ ಸುರಕ್ಷತೆಯ ಬಗ್ಗೆ ಕಲಿಸಲು ಸಂವಾದಾತ್ಮಕ ವಿಧಾನಗಳನ್ನು ಬಳಸುವುದರ ಮೂಲಕ, ಅವರ ದೇಹವನ್ನು ಗೌರವಿಸುವ ಮತ್ತು ಅಪರಾಧವನ್ನು ನಿವಾರಿಸುವ ಸಲುವಾಗಿ ಶಿಕ್ಷಣ ನೀಡುತ್ತಿದೆ.


q

ವಾಯ್ಕ್ಸ್ ನಂತಹ ಸಂಸ್ಥೆಗಳು, ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲು ವೇದಿಕೆಯನ್ನು ನೀಡುತ್ತಿವೆ. ಕಾರ್ಯಾಗಾರಗಳ ಸಮಯದಲ್ಲಿ ಜಾಗೃತಿ ಮೂಡಿಸಲು ಕಿಟ್ ಅನ್ನು ಸಹ ಬಳಸಲಾಗುತ್ತದೆ.


ಕಿಟ್ ಕಾರ್ಡ್‌ಗಳು, ಪೋಸ್ಟರ್‌ಗಳು, ಸಣ್ಣ ಆನಿಮೇಷನ್ ಕ್ಲಿಪ್‌ಗಳು ಮತ್ತು ಆಟಗಳನ್ನು ಒಳಗೊಂಡಿದ್ದು, ಇದನ್ನು ಮಕ್ಕಳ ಹಕ್ಕುಗಳ ರಕ್ಷಣೆಯ(ಎನ್‌ಸಿಪಿಸಿಆರ್) ರಾಷ್ಟ್ರೀಯ ಆಯೋಗದ 38 ನೇ ಶಾಸನಬದ್ಧ ಸಭೆಯ ಪ್ರಕಾರ, ಲೈಂಗಿಕ ಕಿರುಕುಳದ ಅರಿವಿನ ಬಗ್ಗೆ ಮಕ್ಕಳಿಗಾಗಿ ಸಂವಾದಾತ್ಮಕ ಕಾರ್ಯಾಗಾರವನ್ನು ನಡೆಸಲು ಶಿಕ್ಷಕರು ಅಥವಾ ಎನ್‌ಜಿಒಗಳು ಬಳಸಬಹುದಾಗಿದೆ.


ಅರಿವಿಲ್ಲದೆ ಮಗು ಸುಲಭವಾಗಿ ಲೈಂಗಿಕ ಕಿರುಕುಳಕ್ಕೆ ಬಲಿಯಾಗಬಹುದು ಎಂದು ಗಮನಿಸಿದ ಆಯೋಗವು, ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳವು ಮಗುವನ್ನು ಶಾಶ್ವತವಾಗಿ ಗಾಯಗೊಳಿಸಬಹುದು ಎಂಬ ಕಾರಣದಿಂದ 'ಕಿಟ್' ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.


"ಕಾರ್ಯಾಗಾರದ ಮೂಲಕ, ಮಕ್ಕಳು ವೈಯಕ್ತಿಕ ಸುರಕ್ಷತೆಯ ಬಗ್ಗೆ ಕಲಿಯುತ್ತಾರೆ, ಅವರ ದೇಹವನ್ನು ಗೌರವಿಸುತ್ತಾರೆ ಮತ್ತು ತಪ್ಪನ್ನು ನಿವಾರಿಸುತ್ತಾರೆ ”ಎಂದು ಹೇಳಿದ ಆಯೋಗವು, ಈ ಕಿಟ್ ಮಕ್ಕಳಿಗೆ ತಮ್ಮ ಗೆಳೆಯರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಲು ಸಹಕಾರಿಯಾಗುತ್ತದೆ ಹಾಗೂ ಹಲವು ಮಕ್ಕಳಿಗೆ ಇದರ ಬಗ್ಗೆ ಧ್ವನಿ ಎತ್ತ ಬೇಕು ಎಂದು ತಿಳಿಸುತ್ತದೆ‌."


ಮಕ್ಕಳು ಕಲಿಕೆಯನ್ನು ನಿರ್ಣಯಿಸಲು ಕಿಟ್‌ನಲ್ಲಿ ಗೇಮ್ ಕಾರ್ಡ್‌ಗಳನ್ನು ಸಹ ಕೊಡಲಾಗಿದೆ. 8-12 ವರ್ಷದೊಳಗಿನ ಮಕ್ಕಳಿಗೆ ತರಗತಿ ಕೋಣೆಗಳಲ್ಲಿ ಮತ್ತು ಒಂದು ಅವಧಿಯಲ್ಲಿ 30-35 ವಿದ್ಯಾರ್ಥಿಗಳಿಗೆ ಕಲಿಸಲು ಈ ಕಿಟ್ ಅನ್ನು ಬಳಸಬಹುದಾಗಿದೆ. ಕಾರ್ಯಾಗಾರವನ್ನು ಹೇಗೆ ನಡೆಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಶಿಕ್ಷಕ ಅಥವಾ ಕಾರ್ಯಾಗಾರ ಫೆಸಿಲಿಟೇಟರ್‌ಗಾಗಿ ಕೈಪಿಡಿಗಳು, ಪುಸ್ತಕಗಳು ಮತ್ತು ವೀಡಿಯೊ ವಸ್ತುಗಳು ಈ ಕಿಟ್‌ನಲ್ಲಿ ಅಡಕವಾಗಿವೆ.


ರಾಂಚಿಯ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿಯ ಮನೋವಿಜ್ಞಾನಿಗಳು ಕಾರ್ಯಾಗಾರದ ಕಿಟ್ ಅನ್ನು ಪರಿಶೀಲಿಸಿದ್ದು, ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ಪರಿಷ್ಕೃತ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.