ಅಸ್ಟ್ರಾಜೆನೆಕಾ ಕೋವಿಡ್‌-19 ಲಸಿಕೆ ಪರಿಣಾಮಕಾರಿತ್ವದ ವಿಚಾರದಲ್ಲಿ ಗೊಂದಲ

ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ತಮ್ಮ ಪ್ರಾಯೋಗಿಕ ಕೋವಿಡ್‌-19 ಲಸಿಕೆಯ ಪ್ರಾಥಮಿಕ ಫಲಿತಾಂಶಗಳು ಹುಟ್ಟುಹಾಕುತ್ತಿರುವ ಪ್ರಶ್ನೆಗಳಿಗೆ ಉತ್ಪಾದನಾ ದೋಷ ಕಾರಣ ಎಂದು ಒಪ್ಪಿಕೊಂಡಿದೆ.

ಅಸ್ಟ್ರಾಜೆನೆಕಾ ಕೋವಿಡ್‌-19 ಲಸಿಕೆ ಪರಿಣಾಮಕಾರಿತ್ವದ ವಿಚಾರದಲ್ಲಿ ಗೊಂದಲ

Friday November 27, 2020,

1 min Read

ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ ತಮ್ಮ ಪ್ರಾಯೋಗಿಕ ಕೋವಿಡ್‌-19 ಲಸಿಕೆಯ ಪ್ರಾಥಮಿಕ ಫಲಿತಾಂಶಗಳು ಹುಟ್ಟುಹಾಕುತ್ತಿರುವ ಪ್ರಶ್ನೆಗಳಿಗೆ ಉತ್ಪಾದನಾ ದೋಷ ಕಾರಣ ಎಂದು ಒಪ್ಪಿಕೊಂಡಿದೆ.


ಕಂಪನಿ ತಮ್ಮ ಲಸಿಕೆ ಅತೀ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಘೋಷಿಸಿತ್ತು ಆದರೆ ಏಕೆ ಕೆಲವರಿಗೆ ಮೊದಲ ಎರಡು ಡೊಸ್‌ನಲ್ಲಿ ಕಡಿಮೆ ಲಸಿಕೆ ನೀಡಲಾಗಿದೆ ಎಂಬ ವಿವರಣೆಯನ್ನು ನೀಡಿಲ್ಲ, ಇದು ಉಂಟುಮಾಡಿದ ಗೊಂದಲಗಳಿಂದ ಬುಧವಾರ ಕಂಪನಿ ದೋಷವಿರುವುದನ್ನು ಒಪ್ಪಿಕೊಂಡಿದೆ.


ಕೂತುಹಲಕಾರಿ ವಿಷಯವೆಂದರೆ ಕಡಿಮೆ ಡೋಸ್‌ ಪಡೆದ ಸ್ವಯಂಸೇವಕರು ಪೂರ್ಣ ಡೋಸ್‌ ಪಡೆದವರಿಗಿಂತ ಹೆಚ್ಚು ಸುರಕ್ಷಿತರಾಗಿದ್ದಾರೆನ್ನುವುದು.


ಕಡಿಮೆ ಡೋಸ್‌ ಪಡೆದ ಗುಂಪಿನಲ್ಲಿ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ಎರಡು ಪೂರ್ಣ ಡೋಸ್‌ ಪಡೆದವರಲ್ಲಿ ಲಸಿಕೆ ಶೇ. 62 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ಒಟ್ಟಾರೆ ಲಸಿಕೆಯ ಸರಾಸರಿ ಪರಿಣಾಮ ಶೇ. 70ರಷ್ಟಿದೆ ಎಂದು ಅಸ್ಟ್ರಾಜೆನೆಕಾ ಹೇಳಿತ್ತು.


ಫಲಿತಾಂಶಗಳು ರೂಪಗೊಂಡ ಬಗೆ ಮತ್ತು ಕಂಪನಿ ಅವುಗಳನ್ನು ತಿಳಿಸಿದ ರೀತಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.


ಸೋಮವಾರ ಘೋಷಣೆಯಾದ ಭಾಗಶಃ ಫಲಿತಾಂಶ ಲಸಿಕೆಯ ಸೂಕ್ತ ಪ್ರಮಾಣ ಜತೆಗೆ ಅದರ ಸುರಕ್ಷತೆ ಮತ್ತು ಪರಿಣಾಮವನ್ನು ನಿರ್ಧರಿಸಲು ಯುಕೆ ಮತ್ತು ಬ್ರೇಜಿಲ್‌ನಲ್ಲಿ ಇನ್ನೂ ನಡೆಯುತ್ತಿರುವ ಅಧ್ಯಯನದ ಭಾಗವಾಗಿದೆ. ಸ್ವಯಂಸೇವಕರಿಗೆ ವಿವಿಧ ಪ್ರಮಾಣದಲ್ಲಿ ಡೋಸ್‌ ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ಮೆನಿಂಗಿಟಿಸ್‌ ಲಸಿಕೆ ಅಥವಾ ಸಲೈನ್‌ ಶಾಟ್‌ ನೀಡಿದವರೊಂದಿಗೆ ಇದನ್ನು ಹೋಲಿಸಲಾಗಿದೆ.

ಇನ್ನೊಂದೆಡೆ ಮಾಡರ್ನಾ ಲಸಿಕೆ ಶೇ. 94.5 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿದ ಎರಡು ದಿನಗಳ ನಂತರ ಪಿಫೈಝರ್‌ ಮತ್ತು ಬಯೋಎನ್‌ಟೆಕ್‌ ತಮ್ಮ ಕೋವಿಡ್‌-19 ಲಸಿಕೆ ಶೇ. 95 ರಷ್ಟು ಪರಿಣಾಮಕಾರಿ ಎಂದು ಘೋಷಿಸಿವೆ.


ಕಳೆದ ತಿಂಗಳು ಪಿಫೈಝರ್‌ ಮತ್ತು ಬಯೋಎನ್‌ಟೆಕ್‌ ಎಮ್‌-ಆರ್‌ಎನ್‌ಎ ಆಧರಿಸಿದ ಕೋವಿಡ್‌-19 ಲಸಿಕೆ ಬಿಎನ್‌ಟಿ162ಬಿ೨ ಮೂರನೇ ಹಂತದ ಅಧ್ಯಯನ ನಡೆದಿದೆ ಎಂದು ತಿಳಿಸಿತ್ತು.


ಅಂದಾಜಿನ ಪ್ರಕಾರ ಕಂಪನಿಗಳು 2020ರಲ್ಲಿ ಜಾಗತಿಕವಾಗಿ 50 ಮಿಲಿಯನ್‌ ಲಸಿಕೆಗಳನ್ನು ಮತ್ತು 2021ರ ಕೊನೆಯವರೆಗೆ 1.3 ಬಿಲಿಯನ್‌ ಲಸಿಕೆ ತಯಾರಿಸುವ ನಿರೀಕ್ಷೆ ಹೊಂದಿವೆ.

(ವಿಶೇಷ ಸೂಚನೆ: ಪಿಟಿಐ ಲೇಖನಕ್ಕೆ ಅಗತ್ಯವಾದ ವಿವರಗಳನ್ನು ಸೇರಿಸಲಾಗಿದೆ)