ಹಾಂಟಾ ವೈರಸ್‌: ಕೊರೊನ ವೈರಸ್ ಬಿಕ್ಕಟ್ಟಿನ ನಡುವೆ ಚೀನಾದಲ್ಲಿ ಮತ್ತೊಂದು ವೈರಸ್‌

ವರದಿಯೊಂದರ ಪ್ರಕಾರ, ಚೀನಾದಲ್ಲಿ ಸೋಮವಾರ ಚಾರ್ಟರ್ಡ್ ಬಸ್‌ನಲ್ಲಿ ಕೆಲಸದ ನಿಮಿತ್ತ ಶಾಂಡೊಂಗ್ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮರಣ ಹೊಂದಿದ್ದಾರೆ. ಅವರಿಗೆ ಹಾಂಟಾ ವೈರಸ್‌‌‌ ಇರುವುದು ಧೃಡಪಟ್ಟಿದೆ.

26th Mar 2020
  • +0
Share on
close
  • +0
Share on
close
Share on
close

ವಿಶ್ವದಾದ್ಯಂತ ಕೊರೊನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಚೀನಾದ ಯುನಾನ್ ಪ್ರಾಂತ್ಯದಲ್ಲಿ ಹಾಂಟಾ ವೈರಸ್‌ನಿಂದ ಸಾವನ್ನಪ್ಪಿರುವ ಪ್ರಕರಣವನ್ನು ಮಾಧ್ಯಮಗಳು ವರದಿ ಮಾಡಿವೆ.


ಚೀನಾ ಗ್ಲೋಬಲ್ ಟೈಮ್ಸ್ ಟ್ವಿಟ್ ಪ್ರಕಾರ, ಚಾರ್ಟ್‌ಡ್ ಬಸ್‌ನಲ್ಲಿ ಕೆಲಸದ ಪ್ರಯುಕ್ತ ಶಾಂಡೊಂಗ್ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊರ್ವರು ಹಾಂಟಾ ವೈರಸ್‌ನಿಂದ ಮೃತ ಪಟ್ಟ ನಂತರ, ಬಸ್‌ನಲ್ಲಿದ್ದ ಇತರ 32 ಪ್ರಯಾಣಿಕರನ್ನು ಪರೀಕ್ಷೆ ಮಾಡಲಾಯಿತು.

ಕೋವಿಡ್‌-19 ನ ಬಿಕ್ಕಟ್ಟಿನ ನಡುವೆ, ಈ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿ ಚೀನಾ ಹಾಗೂ ಪ್ರಪಂಚದಾದ್ಯಂತ ಭೀತಿಯನ್ನುಂಟು ಮಾಡಿದೆ. ಅದಾಗ್ಯೂ, ಇದು ಮಾನವನಿಂದ ಮಾನವನಿಗೆ ಹರಡುವುದಿಲ್ಲ, ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ವರದಿಗಳು ತಿಳಿಸಿವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಒದಗಸಿದ ಮಾಹಿತಿಯ ಪ್ರಕಾರ ಹಾಂಟಾ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದಿಲ್ಲ ಎಂದಿದೆ.


ಮಾನವ ಪ್ರಸರಣ ಸಾಧ್ಯವಿಲ್ಲ ಎಂದು ಸಿಡಿಸಿಯು ಉಲ್ಲೇಖಿಸಿದರೆ, ಡಿಎನ್‌ಎ ಇಂಡಿಯಾ ವರದಿಯು ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ ಎಂದಿದೆ.


ಹಾಂಟಾ ವೈರಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಅಂಶಗಳು ಇಲ್ಲಿವೆ:


ಏನಿದು ಹಾಂಟಾ ವೈರಸ್?

ಸಿಡಿಸಿ ಒದಗಿಸಿದ ಮಾಹಿತಿ ಪ್ರಕಾರ, ಹಾಂಟಾ ವೈರಸ್ ಮಾನವರಲ್ಲಿ‌ ಗಂಭೀರ ಉಸಿರಾಟದ ಕಾಯಿಲೆಯಾದ ಹಾಂಟಾ‌ವೈರಸ್ ಪಲ್ಮನರಿ ಸಿಂಡ್ರೋಮ್‌(ಎಚ್‌ಪಿಎಸ್) ಮತ್ತು ಹೆಮರಾಜಿಕ್ ಫೀವರ್ ವಿತ್ ರೆನಾಲ್ ಸಿಂಡ್ರೋಮ್(ಎಚ್‌ಎಫ್‌ಆರ್‌ಎಸ್)ಗೆ ಕಾರಣವಾಗಬಹುದು. ಇದು ವೈರಸ್‌ಗಳ ಕುಟುಂಬಕ್ಕೆ ಸೇರಿದ್ದು, ಮುಖ್ಯವಾಗಿ ಇದು ದಂಶಕಗಳಿಂದ ಹರಡುತ್ತದೆ.


ಈ ರೋಗವು ವಾಯುಗಾಮಿ ಅಲ್ಲ, ದಂಶಕಗಳ ಮೂತ್ರ, ಮಲ ಮತ್ತು ಲಾಲಾರಸದೊಂದಿಗೆ ಜನರು ಸಂಪರ್ಕಕ್ಕೆ ಬಂದರೆ ಮಾತ್ರ ಇದು ಹರಡುತ್ತದೆ ಎಂದು ಸಿಡಿಸಿ ಹೇಳುತ್ತದೆ.


"ಈ ವೈರಸ್‌ನ ಸೋಂಕಿಗೆ ಒಳಗಾದರೆ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ ಗುಣಲಕ್ಷಣವಾಗಿದೆ. ಆದಾಗ್ಯೂ, ನೀವು‌ ಕಲುಷಿತ ವಸ್ತುಗಳನ್ನು ಸ್ಪರ್ಶಿಸಿ ನಂತರ ಬಾಯಿ ಹಾಗೂ ಮೂಗನ್ನು ಸ್ಪರ್ಶಿಸಿದರೆ‌ ಅದರ‌ ಮೂಲಕವು ಸೋಂಕಿಗೆ ಒಳಗಾಗಬಹದು. ದಂಶಕಗಳ ಕಡಿತದಿಂದಲೂ ಸಹ ವೈರಸ್‌ ಹರಡುತ್ತದೆ," ಎಂದು ಸಿಡಿಸಿ ವರದಿ ಹೇಳುತ್ತದೆ.


ನಾಲ್ಕರಿಂದ ಒಂಭತ್ತು ಇಂಚು ಉದ್ದವಿರುವ ಇಲಿಗಳು, ಮಾನವರಲ್ಲಿ ಎಚ್‌ಪಿಎಸ್‌ಗೆ ಕಾರಣವಾಗುವ ವೈರಸ್‌ನ ಪ್ರಾಥಮಿಕ ವಾಹಕವಾಗಿದೆ. ಆಗ್ನೇಯ ಹಾಗೂ ಪೂರ್ವ ಕರಾವಳಿಯನ್ನು ಹೊರತು ಪಡಿಸಿ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಈ ಇಲಿಗಳು ಕಂಡು ಬರುತ್ತವೆ.


ಹಾಂಟಾ ವೈರಸ್‌ನ ಗುಣಲಕ್ಷಣಗಳು

ಸಿಡಿಸಿ ಪ್ರಕಾರ, ಸೋಂಕಿನ ನಂತರ ಮೂರು ದಿನಗಳಿಂದ ಆರು ವಾರಗಳಲ್ಲಿ ಎಚ್‌ಪಿ‌ಎಸ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


ಜ್ವರ, ತಲೆನೋವು, ಕಿಬ್ಬೊಟ್ಟೆ, ಕೀಲು ಹಾಗೂ ಕೆಳ ಬೆನ್ನಿನ ನೋವು ಮತ್ತು ಕೆಲವೊಬ್ಬರಲ್ಲಿ ವಾಕರಿಕೆ ಮತ್ತು ವಾಂತಿ ಆಗುವುದು ಈ ಕಾಯಿಲೆಯ ಆರಂಭಿಕ ಲಕ್ಷಣಗಳಾಗಿವೆ.


ಇವುಗಳ ಹೊರತಾಗಿಯು, ಇದು ಶ್ವಾಸಕೋಶದಲ್ಲಿ ದ್ರವವನ್ನು ನಿರ್ಮಿಸುವುದರಿಂದ ಇದರಿಂದ ಉಸಿರಾಟದ ತೊಂದರೆ ಉಂಟಾಗುವುದು ಎಚ್‌ಪಿ‌ಎಸ್‌ನ ಪ್ರಮುಖ ಲಕ್ಷಣವಾಗಿದೆ. ದೀರ್ಘಕಾಲದ ಸಂದರ್ಭದಲ್ಲಿ ಇದು ಉಸಿರಾಟದ ವೇಗದ ಸಂಪೂರ್ಣ ಅಸಮರ್ಥತೆಗೆ ಕಾರಣವಾಗುತ್ತದೆ.


ಹಾಂಟಾ ವೈರಸ್ : ಇದೇನು ಹೊಸದಲ್ಲ

ಡಬ್ಲ್ಯೂ‌ಎಚ್‌ಒ ಮಾಹಿತಿಯ ಪ್ರಕಾರ, ಇದಕ್ಕೂ ಮುನ್ನ ಅರ್ಜೆಂಟೀನಾದ ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಡಿಸೆಂಬರ್ 19, 2018 ರಂದು ಚುಬುಟ್ ಪ್ರಾಂತ್ಯದ ಎಪ್ಯುಯೆನ್‌ನಲ್ಲಿ ಎಚ್‌ಪಿ‌ಎಸ್ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ನೀಡಿತ್ತು. ಅಕ್ಟೋಬರ್ 28, 2018 ರಿಂದ ಜನವರಿ‌ 20, 2019ರ ನಡುವೆ‌ ಎಪ್ಯು‌ಯೆನ್ ಪ್ರಾಂತ್ಯದಲ್ಲಿ ವರದಿಯಾದ ಒಟ್ಟಾರೆ 29 ಪ್ರಕರಣಗಳಲ್ಲಿ 11 ಸಾವಿನ ಪ್ರಕರಣಗಳು ಸಹ ಸೇರಿದ್ದವು ಎಂದು ವರದಿಯು ಹೇಳುತ್ತದೆ.


ಇದಕ್ಕೂ ಮುನ್ನ, ಪನಾಮ ಗಣರಾಜ್ಯದ ಲಾಸ್ ಸ್ಯಾಂಟೋಸ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಹಾಂಟಾ ವೈರಸ್ ಪ್ರಕರಣಗಳು ಕಂಡು ಬಂದಿದ್ದವು ಎಂದು ಪನಾಮ ಆರೋಗ್ಯ ಸಚಿವಾಲಯವು ವರದಿ ಮಾಡಿದೆ.


ಚಿಕಿತ್ಸೆ

ಸಿಡಿಸಿ ಪ್ರಕಾರ, ‌ಹಾಂಟಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆಯು ಇಲ್ಲ. ಈ ಸೋಂಕು ಪತ್ತೆಯಾದ ಜನರಿಗೆ‌ ಕೊಳವೆಯ ಮೂಲಕ ಉಸಿರಾಟದ ತೊಂದರೆಯನ್ನು ಎದುರಿಸಲು ಆಮ್ಲಜನಕವನ್ನು ಒದಗಿಸಲಾಗುತ್ತದೆ ಎಂದು ವರದಿ ಹೇಳುತ್ತದೆ.

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India