ಕೊರೊನಾವೈರಸ್: ಆರ್ಥಿಕತೆಗೆ ಜೀವ ತುಂಬಲು 1.7 ಲಕ್ಷ ಕೋಟಿ ರೂ.ಗಳ ಸಮಗ್ರ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ

ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ವೈದ್ಯರು ಮತ್ತು ದಾದಿಯರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 50 ಲಕ್ಷ ರೂ ವಿಮಾ ರಕ್ಷಣೆಯನ್ನು ಘೋಷಿಸಿದ್ದಾರೆ. ಅಲ್ಲದೆ ಕಟ್ಟಡ ಕಾರ್ಮಿಕರಿಗಾಗಿ 31 ಸಾವಿರ ಕೋಟಿಯ ಅನುದಾನವನ್ನು ಘೋಷಿಸಿದರು.

26th Mar 2020
  • +0
Share on
close
  • +0
Share on
close
Share on
close
ಟ

1.7 ಲಕ್ಷ ಕೋಟಿ ರೂ.ಗಳ ಸಮಗ್ರ ಪ್ಯಾಕೇಜ್ ಅನ್ನು ಹಣಕಾಸು ಸಚಿವರು ಕೊರೊನವೈರಸ್ನಿಂದ ತತ್ತರಿಸಿದ ಆರ್ಥಿಕತೆಗಾಗಿ ಘೋಷಿಸಿದರು.


ಈ ವಾರದ ಆರಂಭದಲ್ಲಿ, ಹಣಕಾಸು ಸಚಿವರು ಪ್ಯಾಕೇಜ್ ಕಾರ್ಯರೂಪದಲ್ಲಿಯೇ ಮತ್ತು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದ್ದರು.


ಈಗಾಗಲೇ 21 ದಿನಗಳ ಕಾಲ ದೇಶದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಲು ಕಾರಣವಾಗಿರುವ ಕೊರೊನವೈರಸ್‌ನಿಂದುಂಟಾದ ಪರಿಣಾಮವನ್ನು ಎದುರಿಸಲು ಮಹಿಳೆಯರು, ಬಡ ಜನರು ಮತ್ತು ನಿರ್ಮಾಣ ಕಾರ್ಮಿಕರಿಗಾಗಿ ಹಲವಾರು ಕ್ರಮಗಳನ್ನು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು.


ಮುಂದಿನ ಮೂರು ತಿಂಗಳವರೆಗೆ ಉದ್ಯೋಗಿ ಮತ್ತು ಉದ್ಯೋಗದಾತರಿಗೆ (24 ಪ್ರತಿಶತ) ತಲಾ 12 ಪ್ರತಿಶತದಷ್ಟು ನೌಕರರ ಭವಿಷ್ಯ ನಿಧಿ (ಇಪಿಎಫ್)ಯನ್ನು ಭಾರತ ಸರ್ಕಾರ ಪಾವತಿಸಲಿದೆ ಎಂದು ನಿರ್ಮಲಾ ಘೋಷಿಸಿದರು. ಇದು 100 ಉದ್ಯೋಗಿಗಳನ್ನು ಹೊಂದಿರುವ, ಸುಮಾರು 90 ಪ್ರತಿಶತದಷ್ಟು ಉದ್ಯೋಗಿಗಳು 15,000 ರೂ.ಗಿಂತ ಕಡಿಮೆ ವೇತನವನ್ನು ಪಡೆಯುತ್ತಿರುವ ಸಂಘಟಿತ ವಲಯದ ಕಂಪೆನಿಗಳಿಗಾಗಿ ಎಂದಿದ್ದಾರೆ.


ಕೊರೊನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನೌಕರರನ್ನು ವಜಾಗೊಳಿಸಬಾರದು ಅಥವಾ ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಮೋದಿ ಸರ್ಕಾರ ಸೋಮವಾರ ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳಿಗೆ ಸಲಹೆ ನೀಡಿದೆ.


ಉದ್ಯೋಗ ಕಡಿತ ಮತ್ತು ವೇತನ ಕಡಿತವು "ಬಿಕ್ಕಟ್ಟುಗಳನ್ನು ಇನ್ನಷ್ಟು ಘಾಡವಾಗಿಸುತ್ತವೆ ಮತ್ತು ನೌಕರನ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುವುದಲ್ಲದೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಅವರ ಸ್ಥೈರ್ಯದಲ್ಲಿ ಹಿನ್ನಡೆಯನ್ನು ಉಂಟು ಮಾಡುತ್ತವೆ," ಎಂಬ ಸಂದೇಶವನ್ನು ಉದ್ಯೋಗದಾತರಿಗೆ ಮನವರಿಕೆ ಮಾಡಿಕೊಡಲಾಯಿತು.


ನಿರ್ಮಲಾ ಅವರು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಗಾಗಿ 31,000 ಕೋಟಿ ರೂ. ನಿರ್ಮಾಣ ಕಾರ್ಮಿಕರನ್ನು ಬೆಂಬಲಿಸಲು ಮತ್ತು ಸಹಾಯ ಮಾಡಲು ಈ ನಿಧಿಯನ್ನು ಬಳಸಿಕೊಳ್ಳುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲಾಗುವುದು, ಇದರಿಂದಾಗಿ ಅವರು "ಮನೆಯಲ್ಲಿಯೇ ಇರುತ್ತಾರೆ ಮತ್ತು ಅಪಾಯಕ್ಕೆ ತಮ್ಮನ್ನು ಒಡ್ಡಿಕೊಳ್ಳಬೇಕಾಗುವುದಿಲ್ಲ," ಎಂದು ಹೇಳಿದರು.


ಈ ಯೋಜನೆಯು 3.5 ಕೋಟಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ.


ಭಾರತದಲ್ಲಿ ಕೊರೊನೊವೈರಸ್ ಪ್ರಕರಣಗಳು ಇಂದು 18 ಸಾವುಗಳೊಂದಿಗೆ 640+ ತಲುಪಿದೆ. ಪ್ರಸ್ತುತ, ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ, ನಂತರ ಕೇರಳ ಮತ್ತು ಕರ್ನಾಟಕದಲ್ಲಿವೆ.

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India