ಕೊರೊನಾವೈರಸ್ ಕುರಿತ ಡಬ್ಲ್ಯುಎಚ್‌ಒ ಸಲಹೆಯನ್ನು 12 ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸಿದ ಐಐಟಿ ಖರಗ್‌ಪುರ ವಿದ್ಯಾರ್ಥಿಗಳು

ಐಐಟಿ ಖರಗ್‌ಪುರದಲ್ಲಿ 20 ಸದಸ್ಯರ ವಿದ್ಯಾರ್ಥಿಗಳ ಗುಂಪು ಡಬ್ಲ್ಯುಎಚ್‌ಒ ಸಲಹೆಯನ್ನು 12 ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸಿ ವಿಡೀಯೊ ಅಪಲೋಡ್‌ ಮಾಡಿದ್ದಾರೆ.

27th Mar 2020
  • +0
Share on
close
  • +0
Share on
close
Share on
close

ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ಹರಡುತ್ತಿದೆ, ಇದು 21,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ, ಜಾಗತಿಕವಾಗಿ ಇಂದು ವರ್ಲ್ಡೋಮೀಟರ್ ಪ್ರಕಾರ 479,000 ಪ್ರಕರಣಗಳು ಪತ್ತೆಯಾಗಿವೆ.


ಸಾಂಕ್ರಾಮಿಕ ರೋಗ ಕೋವಿಡ್-19

ಹಲವು ದೇಶಗಳ ಸರಕಾರವು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಮತ್ತು ಅವುಗಳಲ್ಲಿ ಕೆಲವು ಲಾಕ್‌ಡೌನ್‌ನಲ್ಲಿವೆ.


ಇಲ್ಲಿಯವರೆಗೆ ಭಾರತವು ಕರೊನಾವೈರಸ್ ನ ಹಿನ್ನಲೆಯಲ್ಲಿ 693 ಸಕಾರಾತ್ಮಕ ಪ್ರಕರಣಗಳನ್ನು ಮತ್ತು 13 ಸಾವುಗಳನ್ನು ಕಂಡಿದೆ. ಮತ್ತು ಈ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವದಾದ್ಯಂತ ಆರೋಗ್ಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.


ಕೋವಿಡ್-19 ತಡೆಗಟ್ಟುವಿಕೆಯ ಮುನ್ನೆಚ್ಚರಿಕೆಯ ಕ್ರಮಗಳೆಂದರೆ ವೈಯಕ್ತಿಕ ಶುಚಿತ್ವ, ಸಾಮಾಜಿಕ ಅಂತರ ಮತ್ತು ರೋಗದ ಸಾಮಾನ್ಯ ಲಕ್ಷಣಗಳು - ಇವೆಲ್ಲವನ್ನು ತಿಳಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಸಲಹಾ ವಿಡೀಯೊ ಅಭಿಯಾನವನ್ನು ಇಂಗ್ಲೀಷ್‌ ಭಾಷೆಯಲ್ಲಿ ಪ್ರಾರಂಭಿಸಿದೆ.


ಭಾರತದಲ್ಲಿ, ದೇಶದ ಭಾಷಾ ವೈವಿಧ್ಯತೆಯಿಂದ ಉಂಟಾಗುವ ಭಾಷೆಯ ಅಡೆತಡೆಗಳಿಂದಾಗಿ ಈ ವಿಡೀಯೊ ಹೆಚ್ಚಿನ ಜನರನ್ನು ತಲುಪದಿರಬಹುದು. ಇದು ಭಾರತದಲ್ಲಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಲು, ಐಐಟಿ ಖರಗ್‌ಪುರದ ವಿದ್ಯಾರ್ಥಿಗಳ ಗುಂಪೊಂದು 12 ವಿವಿಧ ಭಾಷೆಗಳಲ್ಲಿ ವಿಡೀಯೊವನ್ನು ಅನುವಾದಿಸಿದೆ. ಜನರು ವಿಶ್ವ ಆರೋಗ್ಯ ಸಂಸ್ಥೆಯ ಸಂದೇಶದ ಬಗ್ಗೆ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ.


ಕ್ಯಾಂಪಸ್‌ನಾದ್ಯಂತ ಪರಿಸರ ಚಟುವಟಿಕೆಗಳಿಗೆ ಜನಪ್ರಿಯವಾಗಿರುವ ವಿಷನ್ ಪ್ರಬಾಹೊ ಎಂಬ 20 ಸದಸ್ಯರ ಈ ಗುಂಪು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಗಸೂಚಿಗಳ ವಿಡೀಯೊವನ್ನು ಅಸ್ಸಾಮೀಸ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಪಂಜಾಬಿ, ತಮಿಳು ಮತ್ತು ತೆಲುಗು, ಕಾಶ್ಮೀರಿ, ಮಲಯಾಳಂ, ಮರಾಠಿ, ಒಡಿಯಾ ಭಾಷೆಗಳಲ್ಲಿ ಅಪ್‌ಲೋಡ್ ಮಾಡಿದೆ.


"ಪ್ರಾದೇಶಿಕ ಭಾಷೆಗಳು ಸಲಹೆಯನ್ನು ದೇಶದ ಮೂಲೆ ಮೂಲೆಗೆ ತಲುಪುವಂತೆ ಮಾಡುತ್ತದೆ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸುತ್ತದೆ," ಎಂದು ಡೆಕ್ಕನ್ ಹೆರಾಲ್ಡ್ ಗೆ ಈ ಗುಂಪಿನ ಸದಸ್ಯ ಬಿಸ್ವರೂಪ್ ಮೊಂಡಾಲ್ ಹೇಳಿದ್ದಾರೆ.
ವಿಡೀಯೊವನ್ನು ಆರಂಭದಲ್ಲಿ ಬಂಗಾಳಿ ಭಾಷೆಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ನಂತರ ಮೂರು ದಿನಗಳಲ್ಲಿ, 12 ಪ್ರಾದೇಶಿಕ ಭಾಷೆಗಳಲ್ಲಿ ವಿಡೀಯೊವನ್ನು ಅಪ್‌ಲೋಡ್ ಮಾಡಲಾಗಿದೆ.


"ನಾವು ಈಗ ಮೈಥಿಲಿ, ಸಂತಾಲಿ, ನಾಗಾಮೀಸ್ ಮತ್ತು ಕೊಕ್ಬೊರೊಕ್ ಭಾಷೆಯಲ್ಲಿ ವಿಡೀಯೊಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ," ಎಂದು ಗುಂಪಿನ ಇನ್ನೊಬ್ಬ ಸದಸ್ಯರು ಎಡೆಕ್ಸ್ ಲೈವ್ ಗೆ ತಿಳಿಸಿದ್ದಾರೆ.


ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ತಡೆಯಲು ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದರು. ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಸಾರಿಗೆಗಳು ಸೋಂಕನ್ನು ಒಳಗೊಂಡಿರಬಹುದೆಂದು ಸ್ಥಗಿತಗೊಳಿಸಲಾಗಿದೆ.

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India