ಕೊರೊನಾವೈರಸ್:‌ ಹಳ್ಳಿಗರಿಗೆ ಸಹಾಯ ಮಾಡಲು 70 ಕಿಮೀ ಪ್ರಯಾಣ ಬೆಳೆಸಿದ ಓಟಗಾರ್ತಿ

ದುತೀ ಚಂದ್‌ ಭುಬನೇಶ್ವರದಿಂದ ಒಡಿಶಾದ ಜೇಯಪುರ್‌ನ ಹಳ್ಳಿಗೆ ಉಪಯುಕ್ತ ವಸ್ತುಗಳು ಮತ್ತು ಆಹಾರ ವಿತರಿಸಲು ಪ್ರಯಾಣಿಸಿದ್ದಾರೆ.

ಕೊರೊನಾವೈರಸ್:‌ ಹಳ್ಳಿಗರಿಗೆ ಸಹಾಯ ಮಾಡಲು 70 ಕಿಮೀ ಪ್ರಯಾಣ ಬೆಳೆಸಿದ ಓಟಗಾರ್ತಿ

Friday May 15, 2020,

1 min Read

ಕೊರೊನಾವೈರಸ್‌ ಮಹಾಮಾರಿಯಿಂದ ಭಾರತದಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ಹಲವು ಜನರ ಜೀವನವನ್ನು ದುರ್ಬರಗೊಳಿಸಿದ್ದು, ಇದರ ಹರಡುವಿಕೆಯನ್ನು ತಡೆಯಲು ವೈದ್ಯಕೀಯ ವಲಯ, ಸರ್ಕಾರ ಕೆಲಸ ಮಾಡುತ್ತಿದೆ.


ಲಾಕ್‌ಡೌನ್‌ನಿಂದ ಹಲವು ದಿನಗೂಲಿ ಕಾರ್ಮಿಕರು ಮತ್ತು ಕೆಲಸಗಾರರಿಗೆ ಕೆಲಸಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರ ಬಿಸಿ ಹಳ್ಳಿಗಳಿಗೂ ತಟ್ಟಿ, ಅವಶ್ಯ ಸಾಮಗ್ರಿಗಳ ಸರಬರಾಜಿಗೆ ತೊಂದರೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಸಂಘ ಸಂಸ್ಥೆಗಳು, ಜನರು ಸಹಾಯಕ್ಕೆ ಮುಂದೆ ಬರುತ್ತಿದ್ದಾರೆ.


ಚಿತ್ರಕೃಪೆ: ಶಿ ದಿ ಪೀಪಲ್


ಅಂಥವರಲ್ಲಿ ಒಬ್ಬರು ಭಾರತೀಯ ಓಟಗಾರ್ತಿಯಾದ ದುತೀ ಚಂದ್‌. ಒಡಿಶಾದ ಜೇಯಪುರ ಜಿಲ್ಲೆಯ ಚಕಾ ಗೋಪಾಲಪುರ್‌ ಹಳ್ಳಿಗೆ ಅವಶ್ಯಕವಾದ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ನೀಡಲು ಪ್ರಯಾಣಿಸಿದ್ದಾರೆ.


“ಲಾಕ್‌ಡೌನ್‌ನಿಂದ ನಮ್ಮ ಹಳ್ಳಿಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ, ನಾನು ಅವರಿಗೆ ಯಾವುದಾದರೂ ವಿಧದಲ್ಲಿ ಸಣ್ಣ ಸಹಾಯ ಮಾಡಲು ಬಯಸುತ್ತೇನೆ. ಹಾಗಾಗಿ ವಿಶೇಷ ಪಾಸ್‌ ಪಡೆದು ಶುಕ್ರವಾರ ನನ್ನ ಹಳ್ಳಿ ತಲುಪಿದೆ. ಆಹಾರದ ಪ್ಯಾಕೆಟ್‌ಗಳನ್ನು ಸುತ್ತಲಿನ 1,000 ಜನರಿಗೆ ಹಂಚಿದ್ದೇನೆ,” ಎಂದರು ದುತೀ, ವರದಿ ಪಿಟಿಐ.


ಹಳ್ಳಿಗರು ದುತೀ ಅವರ ಮನೆಗೆ ಹೋಗಿ ಸರಬರಾಜನ್ನು ಪಡೆದರು. ಅದಲ್ಲದೆ ಸ್ಯಾನಿಡರಿ ಪ್ಯಾಡ್‌ ವಿತರಿಸಲು ದುತೀ ಮನೆ ಮನೆಗೆ ತೆರೆಳಿದ್ದಾರೆ.


ಆನಂದ್‌ ಮಹೀಂದ್ರಾ ಅವರು ಉಡುಗೊರೆಯಾಗಿ ನೀಡಿದ್ದ ಎಸ್‌ಯುವಿನಲ್ಲಿ ದುತೀ ಭುಬನೇಶ್ವರದಿಂದ ತಮ್ಮ ಹಳ್ಳಿಗೆ ಪ್ರಯಾಣಿಸಿದ್ದಾರೆ. ಇದಕ್ಕಿಂತಲೂ ತಮ್ಮ ವಾಹನದ ಒಳ್ಳೇಯ ಉಪಯೋಗ ಇನ್ನೊಂದಿರಲಿಕ್ಕಿಲ್ಲ ಎಂದು ಆನಂದ್‌ ಮಹೀಂದ್ರಾ ರಿಟ್ವೀಟ್‌ ಮಾಡಿದ್ದಾರೆ.



ಈಗ ದುತೀ ಭುಬನೇಶ್ವರಕ್ಕೆ ಮರಳಿದ್ದು ಮತ್ತೆ ಹಳ್ಳಿಗೆ ಮರಳಿ ಸಹಾಯ ಮಾಡಲು ಯೋಚಿಸುತ್ತಿದ್ದಾರೆ.


“ನಾನು ಮತ್ತೆ ಹಳ್ಳಿಗೆ ಹೋಗಿ, ಆಹಾರವನ್ನು ವಿತರಿಸಲು ಯೋಚಿಸಿದ್ದೇನೆ. ನಮ್ಮ ಹಳ್ಳಿಯಲ್ಲಿ ಸುಮಾರು 5,000 ಜನರಿದ್ದಾರೆ ಮತ್ತು ಮುಂದಿನ ಬಾರಿ ಹೋದಾಗ 2,000 ಆಹಾರದ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಹೋಗುತ್ತೇನೆ. ಕೆಐಐಟಿಯ ಸಂಸ್ಥಾಪಕ ಅಚ್ಯುತ್‌ ಸಮಂತಾ (ಹಾಗೂ ಬಿಜೆಡಿಯ ಎಮ್‌ಪಿ) ಅವರನ್ನು ಸಹಾಯಕ್ಕಾಗಿ ಕೇಳಿದ್ದೆ. 50 ಸಾವಿರ ರೂ. ನಾನು ಖರ್ಚು ಮಾಡಿದ್ದೇನೆ, ಉಳಿದದ್ದನ್ನು ಅವರು ನೋಡಿಕೊಂಡಿದ್ದಾರೆ,” ಎಂದರು ಅವರು.


ಕೊರೊನಾವೈರಸ್‌ ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೊ ಒಲಂಪಿಕ್ಸ್‌ನ ಅರ್ಹತಾ ಸುತ್ತುಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿರುವುದರಿಂದ ದುತೀ ಇನ್ನೂ ಅರ್ಹತೆಗಾಗಿ ಕಾಯುತ್ತಿದ್ದಾರೆ.