ಕೊರೊನಾವೈರಸ್: ಬಯಲು ಪ್ರದೇಶದಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ ಈ ಕಾಶ್ಮೀರಿ ಗಣಿತ ಶಿಕ್ಷಕ

ಸಮರ್ಪಕ ಇಂಟರ್ನೆಟ್‌ ಸಂಪರ್ಕದ ಕೊರತೆ ಮತ್ತು ಕೊರೊನಾದಿಂದಾಗಿ, ಕಾಶ್ಮೀರದ ಗಣಿತ ಶಿಕ್ಷಕ ಮುನೀರ್ ಆಲಂ ಅವರು ತಮ್ಮ ತರಗತಿಗಳನ್ನು ಬಯಲು ಪ್ರದೇಶದಲ್ಲಿ ನಡೆಸಲು ಪ್ರಾರಂಭಿಸಿದ್ದಾರೆ.

ಕೊರೊನಾವೈರಸ್: ಬಯಲು ಪ್ರದೇಶದಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ ಈ ಕಾಶ್ಮೀರಿ ಗಣಿತ ಶಿಕ್ಷಕ

Monday July 13, 2020,

2 min Read

ಭಾರತ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳು ತಮ್ಮ ಅಂತಿಮ ಪರೀಕ್ಷೆಗಳ ತಯಾರಿಯಲ್ಲಿದ್ದಾಗ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಲಾಯಿತು, ಇದು ಅನೇಕ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಇತರ ಪಾಲುದಾರರನ್ನು ಚಿಂತೆಗೀಡು ಮಾಡಿದೆ.


ಚಿತ್ರಕೃಪೆ: ಡಿಎನ್‌ಎ ಇಂಡಿಯಾ




ಕೊರೊನಾವೈರಸ್‌ನಿಂದ ಶಿಕ್ಷಣ ವಲಯ ತತ್ತರಿಸಿದೆ. ಪರಿಷ್ಕ್ರತ ಪಠ್ಯಕ್ರಮದೊಂದಿಗೆ ಶಾಲೆಗಳು ಆನ್‌ಲೈನ್‌ ತರಗತಿಗಳಿಗೆ ಮೊರೆ ಹೋಗಿವೆ.


ಸಮರ್ಪಕವಾದ ಇಂಟರ್ನೆಟ್‌ ವ್ಯವಸ್ಥೆಯಿಲ್ಲದೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಸಹರಿಸಿ ವಿದ್ಯಾರ್ಥಿಗಳಿಗೆ ಸಹಾಯವಾಗಲು ಮುನೀರ್‌ ಆಲಂ ಬಯಲು ಪ್ರದೇಶದಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ.


ಈ ಮೊದಲು ಮುನೀರ್‌ ತಮ್ಮ ತರಬೇತಿ ಸಂಸ್ಥೆಯೊಂದರಲ್ಲಿ ಕಾಶ್ಮೀರದ ವಿವಿಧ ಭಾಗಗಳ 11 ಮತ್ತು 12ನೇ ತರಗತಿಗಳ 80 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಕಾಶ್ಮೀರದಲ್ಲಿ ಸಮರ್ಪಕವಾದ ಇಂಟರ್ನೆಟ್‌ ಸೌಲಭ್ಯವಿಲ್ಲದಿರುವುದರಿಂದ ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುವುದು ಕಷ್ಟವಾಗಿದೆ.


“ನಾನು ಮೊದಲು ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಒಂದು ಗ್ರೂಪ್‌ನಲ್ಲಿ 8 ವಿದ್ಯಾರ್ಥಿಗಳಿರುವಂತೆ ನಾನು ವಾಟ್ಸ್ಯಾಪ್‌ ಗುಂಪುಗಳನ್ನು ರಚಿಸಿ ನೋಟ್ಸ್‌ನ ಆಡಿಯೋ, ವಿಡಿಯೋ ಮತ್ತು ಫೊಟೊಗಳನ್ನು ಹಂಚಿಕೊಳ್ಳತೊಡಗಿದೆ. ಆದರೆ ನನ್ನ 2ಜಿ ಇಂಟರ್ನೆಟ್‌ ಸಂಪರ್ಕದಲ್ಲಿ ಅದು ಸಾಧ್ಯವಾಗದ ಕೆಲಸವಾಗಿತ್ತು. ನಾನು ಅವುಗಳನ್ನು ಕಳುಹಿಸಿದ್ದರು ವಿದ್ಯಾರ್ಥಿಗಳು ವಿಶೇಷವಾಗಿ ಶ್ರೀನಗರದ ಹೊರಗಿನ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಅದಲ್ಲದೇ ಹಲವು ಕುಟುಂಬಗಳು ಒಂದೇ ಒಂದು ಮೊಬೈಲ್‌ ಫೋನ್‌ ಹೊಂದಿರುವುದರಿಂದ ಎಲ್ಲರೂ ಒಂದೇ ಫೋನಿನಲ್ಲಿ ಅಭ್ಯಸಿಸುವುದು ಕಷ್ಟ,” ಎಂದರು ಮುನೀರ್‌, ವರದಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌.


ತಮ್ಮ ‘ಗಾಶ್‌- ದಿ ಲೈಟ್‌ ಆಫ್‌ ನಾಲೆಜ್‌ʼ ತರಬೇತಿ ಕೇಂದ್ರ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಗಣಿತ ಶಿಕ್ಷಕರಾದ ಮುನೀರ್‌ ಬಯಲು ಪ್ರದೇಶದಲ್ಲಿ ತರಗತಿ ತೆಗೆದುಕೊಳ್ಳಲಾರಂಭಿಸಿದರು. ಅಗಸ್ಟ್‌ 2019 ರಿಂದ ಈ ಪ್ರದೇಶಗಳಲ್ಲಿ ಶಾಲೆಗಳು ನಿಯಮಿತವಾಗಿ ಕಾರ್ಯನಿರ್ವಹಿಸದಿರುವುದರಿಂದ ತರಬೇತಿ ಸಂಸ್ಥೆಗಳಿಂದ ಶಿಕ್ಷಣ ಪಡೆಯದೆ ವಿದ್ಯಾರ್ಥಿಗಳಿಗೆ ಬೇರೆ ಮಾರ್ಗವೇ ಇಲ್ಲದಂತಾಗಿದೆ.


"ಮಕ್ಕಳು ಮತ್ತು ಸಮಾಜದ ಭವಿಷ್ಯದ ಬಗ್ಗೆ ಯೋಚಿಸುವಾಗ, ನಿದ್ರೆ ಬರುವುದಿಲ್ಲ. ಈ ಕಾರಣವೇ ನನ್ನಿಂದ ಈ ಕೆಲಸ ಮಾಡಿಸುತ್ತಿದೆ. ಕತ್ತಲಲ್ಲು ಬೆಳಕಿನೆಡೆಗೆ ನಡೆಸುತ್ತಿದೆ," ಎಂದು ಮುನೀರ್‌ ವಿಯಾನ್‌ ನ್ಯೂಸ್‌ಗೆ ತಿಳಿಸಿದರು.


ನಿಜ ಹೇಳಬೇಕೆಂದರೆ ಬಯಲು ಪ್ರದೇಶದ ತರಗತಿಗಳು ವಿದ್ಯಾರ್ಥಿಗಳ ನಡುವೆ ಉತ್ತಮ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅವಕಾಶ ನೀಡುತ್ತದೆ. ಅಲ್ಲದೇ ಹೆಚ್ಚು ವಿದ್ಯಾರ್ಥಿಗಳು ಒಂದು ತರಗತಿಯಲ್ಲಿ ಪಾಠ ಕೇಳುವಂತಾಗಿರುವುದರಿಂದ ಬ್ಯಾಚ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುನೀರ್‌ ಅವರಿಗೆ ಸಾಧ್ಯವಾಗಿದೆ.

“ಎರಡು ಬ್ಯಾಚ್‌ಗಳ ತರಗತಿಗಳಿಗಾಗಿ ಸೂರ್ಯೋದಯಕ್ಕೂ ಮುಂಚೆಯೇ ಇಲ್ಲಿ ಎಲ್ಲರೂ ಸೇರುತ್ತೇವೆ. ವಿದ್ಯಾರ್ಥಿಗಳೆಲ್ಲರೂ ಕೋವಿಡ್‌-19 ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ಬಿಸಿಲೆರುವ ಮುಂಚೆಯೇ ತರಗತಿಗಳನ್ನು ಮುಗಿಸುವುದಕ್ಕಾಗಿ ಆದಷ್ಟು ಬೇಗನೆ ಪಾಠ ಶುರುವಾಗುತ್ತದೆ,” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು 11 ನೇ ತರಗತಿಯ ವಿದ್ಯಾರ್ಥಿ ಆಫಾಜ್‌ ಯೂಸುಫ್‌ ಪುಶೂ.