ಲಾಕ್‌ಡೌನ್‌ನಿಂದಾಗಿ ಅಮೇಜಾನ್‌, ಫ್ಲಿಪ್‌ಕಾರ್ಟ್‌ ಕೆಲದಿನಗಳ ಮಟ್ಟಿಗೆ ಸ್ಥಗಿತ

ಕೊರೊನಾ ವೈರಸ್‌ನಿಂದಾಗಿ ಈಡೀ ಭಾರತವೇ ಲಾಕ್‌ಡೌನ್‌ ಆಗಿದ್ದು, ಅದರ ಪರಿಣಾಮ ಈಗ ಪೂರೈಕೆ ವಲಯಕ್ಕೂ ಬಿಸಿ ತಟ್ಟಿಸಿದೆ. ಪೂರೈಕೆ ಸರಪಳಿ ಮೂಲಸೌಕರ್ಯದ ಕೊರತೆಯಿಂದಾಗಿ ಫ್ಲಿಪ್‌ಕಾರ್ಟ್‌ ಈಗ ಡೆಲೆವರಿಗಳನ್ನು ನಿಲ್ಲಿಸಿದೆ. ಆದಾಗ್ಯೂ ಕಂಪನಿ ಈ ಸ್ಥಗಿತ ಕೆಲವೇ ದಿನಗಳವರೆಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ.

25th Mar 2020
  • +0
Share on
close
  • +0
Share on
close
Share on
close

ಕೊರೊನವೈರಸ್ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆ ಫ್ಲಿಪ್ಕಾರ್ಟ್ ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.


ಫ್ಲಿಪ್ಕಾರ್ಟ್ ಅಪ್ಲಿಕೇಶನ್‌ನಲ್ಲಿನ ಸಂದೇಶವು "ನಮಸ್ಕಾರ ಭರತೀಯರೆ, ನಾವು ನಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ನಿಮ್ಮ ಅಗತ್ಯಗಳು ಯಾವಾಗಲೂ ನಮ್ಮ ಆದ್ಯತೆಯಾಗಿವೆ, ಮತ್ತು ಸಾಧ್ಯವಾದಷ್ಟು ಬೇಗ ನಾವು ನಿಮಗೆ ಸೇವೆ ಸಲ್ಲಿಸುತ್ತೇವೆ ಎಂಬುದು ನಮ್ಮ ಭರವಸೆಯಾಗಿದೆ,” ಎಂದು ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ಪೂರೈಕೆ ಸರಪಳಿ ಮೂಲಸೌಕರ್ಯಕ್ಕೆ ದೊಡ್ಡ ಅಡ್ಡಿ ಉಂಟುಮಾಡಿದೆ. ಸ್ಥಳಗಳ ನಡುವೆ ಸರಕುಗಳ ಚಲನೆ ಸ್ಥಗಿತಗೊಂಡಿದೆ. ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಸರ್ಕಾರವು ಘೋಷಿಸಿದ ಲಾಕ್‌ಡೌನ್‌ನ ನೇರ ಪರಿಣಾಮವಾಗಿದೆ.
ಫ್ಲಿಪ್‌ಕಾರ್ಟ್‌ನ ಪ್ರತಿಸ್ಪರ್ಧಿ ಅಮೇಜಾನ್‌ ಕೂಡ ಮಂಗಳವಾರ ಇದೇ ನಿರ್ಧಾರ ತೆಗೆದುಕೊಂಡಿತ್ತು. ಅಲ್ಲದೆ ಅದು, ಜನರಿಗೆ ಅತ್ಯಗತ್ಯವಿರುವ ಸೇವೆಗಳನ್ನು ಹಾಗೂ ಸರಕುಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ.


“ಕಡಿಮೆ ಆದ್ಯತೆಯಿರುವ ಸರಕುಗಳ ಆರ್ಡರ್‌ಗಳನ್ನು ನಾವು ಈಗ ತೆಗೆದುಕೊಳ್ಳುತ್ತಿಲ್ಲ,” ಎಂದು ಅಮೇಜಾನ್‌ ಹೇಳಿದೆ. ಕಡಿಮೆ ಆದ್ಯತೆ ಇರುವ ಉತ್ಪನ್ನಗಳನ್ನು ಈಗಾಗಲೇ ಗ್ರಾಹಕರು ಆರ್ಡರ್‌ ಮಾಡಿದ್ದಲ್ಲಿ, ಅದನ್ನು ಕ್ಯಾನ್ಸಲ್‌ ಮಾಡಿದರೆ, ಹಣವನ್ನು ಮರಳಿ ನೀಡಲಾಗುವುದು ಎಂದು ಹೇಳಿದೆ.


ಅವರ ಪ್ರಕಾರ, “ಅತ್ಯಗತ್ಯ” ಎಂಬ ಪಟ್ಟಿಯಲ್ಲಿ ಹೆಸರಿಲಾದ ಉತ್ಪನ್ನಗಳೆಂದರೆ, ಸ್ಟೇಪಲ್ಸ್, ಪ್ಯಾಕೇಜ್ಡ್ ಆಹಾರ, ಆರೋಗ್ಯ ರಕ್ಷಣೆಗೆ ಅಗತ್ಯ ವಸ್ತುಗಳು, ನೈರ್ಮಲ್ಯ ಮತ್ತು ವೈಯಕ್ತಿಕ ಸುರಕ್ಷತಾ ವಸ್ತುಗಳು.


ಕೊರೊನಾ ವೈರಸ್‌ ಬಂದಾಗಿನಿಂದ ಇಕಾಮರ್ಸ್ ಉದ್ಯಮ, ಆನ್‌ಲೈನ್ ಕಿರಾಣಿ ವಿತರಣಾ ಸಂಸ್ಥೆಗಳು ಮತ್ತು ಆಹಾರ ವಿತರಣಾ ಕಂಪನಿಗಳು ವಿತರಣೆಯನ್ನು ಖಾತ್ರಿಪಡಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಇದಕ್ಕೆ ಕಾರಣ, ಅಕಾಲಿಕವಾಗಿ ಹರಿದು ಬಂದ ಹಠಾತ್ ಬೇಡಿಕೆ ಮತ್ತು ಪೂರೈಕೆಗೆ ಎದುರಾದ ಅಡ್ಡಿ. ಆದಾಗ್ಯೂ, ಸರಕಾರವು ಔಷಧಮಳಿಗೆಗಳು, ಕಿರಾಣಿ ಅಂಗಡಿಗಳು, ಹಾಗೂ ಈಕಾಮರ್ಸನಂತಹ ಅಗತ್ಯ ಸೇವೆಗಳು ಲಭ್ಯವಿರುತ್ತವೆ ಎಂದು ಆದೇಶ ಹೊರಡಿಸಿದೆ.

How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Our Partner Events

Hustle across India