ಕೊರೊನಾವೈರಸ್‌ಗೆ ತುತ್ತಾಗುವ ಸಂಭವ ಹಿರಿಯರಲ್ಲಿ ಹೆಚ್ಚು; ಹಾಗಾದರೆ ಅದಕ್ಕೆ ಏನು ಮಾಡಬೇಕು ಇಲ್ಲಿದೆ ನೋಡಿ

ಹಿರಿಯ ನಾಗರಿಕರ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಕೊರೊನಾ ವೈರಸ್ ಬಹು ಬೇಗನೆ ಅವರಿಗೆ ತೊಂದರೆ ನೀಡಬಹುದು. ಸಾಮಾಜಿಕವಾಗಿ ಜನರಿಂದ ದೂರವಿರುವುದು, ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಈ ಸಮಯದಲ್ಲಿ ಮುಖ್ಯವಾಗುತ್ತದೆ.

ಕೊರೊನಾವೈರಸ್‌ಗೆ ತುತ್ತಾಗುವ ಸಂಭವ ಹಿರಿಯರಲ್ಲಿ ಹೆಚ್ಚು; ಹಾಗಾದರೆ ಅದಕ್ಕೆ ಏನು ಮಾಡಬೇಕು ಇಲ್ಲಿದೆ ನೋಡಿ

Monday March 30, 2020,

3 min Read

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ, ಹಲವಾರು ರಾಷ್ಟ್ರಗಳು ಪ್ರಯಾಣವನ್ನು ಸ್ಥಗಿತಗೊಳಿಸಿ ಗಡಿಗಳನ್ನು ಮುಚ್ಚಿದೆ ಮತ್ತು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಿವೆ.


ಇನ್ನು ಜಾಗತಿಕವಾಗಿ 500,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು ಮತ್ತು 33,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು .


ಜಾಮಾ ನಡೆಸಿದ ಕೋವಿಡ್-19 ಕುರಿತ ಅಧ್ಯಯನದ ಪ್ರಕಾರ, ಹಿರಿಯ ನಾಗರಿಕರ ಮೇಲೆ ಕೊರೊನಾ ಹೆಚ್ಚು ಪರಿಣಾಮ ಬೀರುತ್ತದೆ. ಚೀನಾ, ಇರಾನ್ ಮತ್ತು ಇಟಲಿಯಂತಹ ದೇಶಗಳಲ್ಲಿ ಈ ವರ್ಗದ ಜನರ ಮೇಲೆ ವೈರಸ್ ಸೋಂಕಿನ ಪರಿಣಾಮ ಎರಡು ಪಟ್ಟು ಹೆಚ್ಚು ಎಂದು ವರದಿ ಹೇಳಿದೆ. ಅವರಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಸೋಂಕಿನ ವಿರುದ್ಧ ಹೋರಾಡುವುದನ್ನು ಕಷ್ಟವಾಗಿಸುತ್ತದೆ.




ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯಲ್ಲಿಯೇ ಇರಬೇಕಾದ ಅಗತ್ಯವನ್ನು ಅಧಿಕಾರಿಗಳು ಪದೇ ಪದೇ ಒತ್ತಿಹೇಳಿದ್ದಾರೆ. ಅಲ್ಲದೇ ಹಿರಿಯ ನಾಗರಿಕರು ಕೋವಿಡ್-19 ಸೋಂಕಿಗೆ ಬೇಗನೆ ಬಲಿಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚು ಜಾಗರೂಕರಾಗಿರುವುದು ಅನಿವಾರ್ಯವಾಗಿದೆ.


ಯುವರ್ ಸ್ಟೋರಿ ಹಿರಿಯರ ಆರೈಕೆ ಕ್ಷೇತ್ರದ ಕೆಲವು ತಜ್ಞರೊಂದಿಗೆ ಮಾತನಾಡಿದೆ, ಅವರು ಈ ಕಠಿಣ ಸಮಯದಲ್ಲಿ ಸುರಕ್ಷಿತವಾಗಿರಲು ಕೆಲವು ಸಲಹೆಗಳನ್ನು ನೀಡಿದ್ದಾರೆ.


“ವಿಟಮಿನ್ ಸಿ ಇರುವ ಆಹಾರಗಳಾದ ಆಮ್ಲಾ, ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು,” ಎಂದು ಹಿರಿಯ ಆರೈಕೆ ಸಂಸ್ಥೆಯಾದ ಅನ್ವಾಯಾ ಕಿನ್ ಕೇರ್ ನ ಸ್ಥಾಪಕ ಮತ್ತು ನಿರ್ದೇಶಕ ಪ್ರಶಾಂತ್ ರೆಡ್ಡಿ ಹೇಳಿದ್ದಾರೆ.


ಕಂಪನಿಯು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವೈಯಕ್ತಿಕ ಆರೈಕೆ ವ್ಯವಸ್ಥಾಪಕರ ಮೂಲಕ 1,000 ಕ್ಕೂ ಹೆಚ್ಚು ಕುಟುಂಬಗಳಿಗೆ ಸೇವೆ ಸಲ್ಲಿಸುತ್ತದೆ.


“ವೈವಿಧ್ಯಮಯ ಸಾವಯವ ಉತ್ಪನ್ನಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ,” ಎಂದವರು ಹೇಳುತ್ತಾರೆ.


ವೈರಸ್‌ಗೆ ತುತ್ತಾಗುವ ಅಪಾಯವನ್ನು ತಗ್ಗಿಸಲು ಹಿರಿಯರಿಗೆ ಸಹಾಯ ಮಾಡಲು ಪ್ರಶಾಂತ್ ಮುನ್ನೆಚ್ಚರಿಕೆಗಳ ಪಟ್ಟಿಯನ್ನು ನೀಡಿದ್ದಾರೆ.


  • ದಿನನಿತ್ಯ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ ವಿಟಮಿನ್ ಡಿ ಸಿಗುವಂತೆ ನೋಡಿಕೊಳ್ಳಿ ಮತ್ತು ಅದೇ ಸಮಯದಲ್ಲಿ ಜನರಿಂದ ಅಂತರವನ್ನು ಕಾಪಾಡಿಕೊಳ್ಳಿ
  • ಮಧುಮೇಹವಿದ್ದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸುತ್ತೀರಿ
  • ಸರಿಯಾಗಿ ನಿದ್ದೆಯನ್ನು ಮಾಡಿ
  • ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡಿ ಮತ್ತು ಔಷಧಿಗಳನ್ನು ತೆಗೆದುಕೊಳ್ಳಿ




ಕೋವಿಡ್-19 ಹರಡುತ್ತಿರುವ ಸರಪಳಿಯನ್ನು ಮುರಿಯುವ ಅಗತ್ಯವನ್ನು ರೆಡ್ಡಿ ಒತ್ತಿಹೇಳಿದ್ದಾರೆ, ಏಕೆಂದರೆ ಇದು ಮೂರು ನಾಲ್ಕು ದಿನಗಳವರೆಗೆ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಹಾಗಾಗಿ ಗುರುತಿಸಲು ಕಷ್ಟವಾಗುತ್ತದೆ ಎಂದಿದ್ದಾರೆ.


ಅಂತಹ ಸಂದರ್ಭಗಳನ್ನು ಸರಿಯಾಗಿ ಊಹಿಸಲು ಸಾಧ್ಯವಿಲ್ಲ. ಈ ವೈರಸ್ ಇಟಲಿ, ಇರಾನ್ ಮತ್ತು ಚೀನಾದಲ್ಲಿ ಕಂಡುಬರುವಂತೆ ಇಡೀ ಆರೋಗ್ಯ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಕೆಲ ಸಮಯದವರೆಗೆ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ, ಹಿರಿಯ ನಾಗರಿಕರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಸ್ವಲ್ಪ ದೂರವಿದ್ದರೆ ಉತ್ತಮ,” ಎಂದು ಪ್ರಶಾಂತ್ ಹೇಳಿದರು.

ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು

ರೆಡ್ಡಿಯವರ ಅನ್ವಾಯಾ ತಂಡವು ತನ್ನ ಸಿಬ್ಬಂದಿ ಮತ್ತು ಸದಸ್ಯರನ್ನು ವೈರಸ್ ನಿಂದ ತಪ್ಪಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಹಿರಿಯರೊಂದಿಗೆ ಮಾತನಾಡುವಾಗ, ಸಲಹೆಗಳನ್ನು ನೀಡುವಾಗ ಸಾಮಾಜಿಕ ದೂರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಆರೈಕೆ ವ್ಯವಸ್ಥಾಪಕರಿಗೆ ಸಮಗ್ರವಾಗಿ ತರಬೇತಿ ನೀಡಲಾಗಿದೆ.


ಅನ್ವಾಯಾ ಅವರ ಹಿರಿಯ ಸದಸ್ಯರಿಗೆ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್ ನಂತಹ ಅಗತ್ಯ ವಸ್ತುಗಳನ್ನು ಪೂರೈಸುವ ಯೋಜನೆಯನ್ನು ಕಂಪನಿಯು ಹೊಂದಿದೆ ಎಂದು ಹೇಳಿಕೊಂಡಿದೆ.


ಏತನ್ಮಧ್ಯೆ, ಕೊಲಂಬಿಯಾ ಪೆಸಿಫಿಕ್ ಕಂಪನಿಯು ಅದರ ನಿವಾಸಿಗಳಿಗೆ ಪರಿಸ್ಥಿಯ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೇವೆ ಎಂದು ಹೇಳಿದೆ.


“ಸಾಮಾಜಿಕ ಅಂತರವನ್ನು ಕಾಪಾಡುವ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೊಲಂಬಿಯಾ ಪೆಸಿಫಿಕ್ ಸಮುದಾಯದ ನಿವಾಸಿಗಳಾಗಿ, ಇಡೀ ಸಮುದಾಯವು ಎಚ್ಚರಿಕೆಯಿಂದ ಇರಬೇಕು ಹಾಗೂ ವಿಶ್ವಾಸವನ್ನು ಹೊಂದಿರಬೇಕು,” ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹಿತ್ ನಿರುಲಾ.


ಎಲ್ಲಾ ನಾಗರಿಕರಿಗೆ ಸೂಚಿಸಲಾದ ಅದೇ ಮುನ್ನೆಚ್ಚರಿಕೆಗಳನ್ನು ಹಿರಿಯರು ಸಹ ಅನುಸರಿಸಬೇಕು, ಆದರೆ ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಅಪಾಯವನ್ನು ಕಡಿಮೆ ಮಾಡಲು ನೈರ್ಮಲ್ಯ ಕಾಪಾಡಿಕೊಳ್ಳಬೇಕು ಮತ್ತು ಸಾಮಾಜಿಕವಾಗಿ ದೂರವಿರುವುದು ಮುಖ್ಯ.


“ಸ್ವಾರ್ಥವಾದ ಮತ್ತು ಸಂವೇದನಾಶೀಲವಾದ ಕೆಲವೇ ಕೆಲವು ವಿಷಯಗಳಿವೆ, ಅದರಲ್ಲಿ ಸಾಮಾಜಿಕವಾಗಿ ದೂರವಿರುವುದು ಒಂದು,” ಎಂದು ಮೋಹಿತ್ ಹೇಳುತ್ತಾರೆ.


ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಮೋಹಿತ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ.