ಕರೋನಾವೈರಸ್: ಕೋವಿಡ್-19‌ ಅನ್ನು ಪತ್ತೆಗೆ ವೆಚ್ಚ ಪರಿಣಾಮಕಾರಿ ಮತ್ತು ಅತ್ಯಂತ ‌ನಿಖರವಾದ ವಿಧಾನವನ್ನು ಅಭಿವೃದ್ಧಿಪಡಡಿಸಿ ಐಐಟಿ

ಐಐಟಿ ದೆಹಲಿಯ‌ ಸಂಶೋಧಕರ ತಂಡವೊಂದು‌ ರಕ್ತದ ಮಾದರಿಗಳನ್ನು ಪರೀಕ್ಷಿಸಲು ಕೋವಿಡ್‌-19 ಸೋಂಕನ್ನು ಪತ್ತೆ ಹಚ್ಚಲು ‘ಪ್ರೋಬ್-ಫ್ರೀ' ವಿಧಾನವನ್ನು ರೂಪಿಸುತ್ತಿದೆ.

24th Mar 2020
  • +0
Share on
close
  • +0
Share on
close
Share on
close

ಇವತ್ತಿಗೆ ದೇಶದಲ್ಲಿ ಕೋವಿಡ್‌-19 ಶಂಕಿತ ಪ್ರಕರಣಗಳು‌ ಸಂಖ್ಯೆ 499+ ಗೆ ಏರಿಕೆಯಾಗಿದೆ. ಆರೋಗ್ಯ ಕಾರ್ಯಕರ್ತರು, ಸಂಶೋಧಕರು‌ ನೊವೆಲ್ ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅದಾಗ್ಯೂ ಪ್ರತಿದಿನ,‌ ಶಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಲೇ‌ ಇದೆ. ಆದ್ದರಿಂದ ಪರೀಕ್ಷಿಸುವ ಕಿಟ್‌ಗಳ‌ ಅಗತ್ಯತೆ ಈ ಸಮಯದಲ್ಲಿ ತುಂಬಾ ಇದೆ.


ಭಾರತ ಸರ್ಕಾರವು ಶನಿವಾರದಂದು, ಖಾಸಗಿ ಪ್ರಯೋಗಾಲಯಗಳಲ್ಲಿ ಕರೋನಾ ವೈರಸ್ ಪರೀಕ್ಷೆ ಮಾಡಿಸುವ ವೆಚ್ಚವನ್ನು 4,500‌ ರೂ ಗೆ ನಿಗದಿ ಪಡಿಸಿದೆ. ಈ ಖಾಸಗಿ ಪ್ರಯೋಗಾಲಯಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್‌‌ ರಿಸರ್ಚ್ (ಐಸಿಎಮ್‌ಆರ್‌) ನಿಗದಿ ಪಡಿಸಿದ ಮಾರ್ಗಸೂಚಿಗಳ ಪ್ರಕಾರವಾಗಿ‌ ಕೋವಿಡ್‌-19 ಪರೀಕ್ಷೆಯನ್ನು ಎನ್ಎಬಿಎಲ್‌ ಮಾನ್ಯತೆ ಹೊಂದಿದ್ದರೆ ಮಾತ್ರ ನಡೆಸಬಹುದಾಗಿದೆ.


ಚಿತ್ರಕೃಪೆ: ಎಡೆಕ್ಸ್ ಲೈವ್
ಇದರ ಪರಿಣಾಮವಾಗಿ, ಐಐಟಿ ದೆಹಲಿಯ ಸಂಶೋಧಕರ ತಂಡವೊಂದು ಈ ವೆಚ್ಚವನ್ನು ಕಡಿತಗೊಳಿಸುವುದಕ್ಕಾಗಿ ಹಾಗೂ ಹೆಚ್ಚುತ್ತಿರುವ ಶಂಕಿತ ಪ್ರಕರಣಗಳನ್ನು ಬೇಗನೆ ಪತ್ತೆ ಹಚ್ಚುವುದಕ್ಕಾಗಿ ಹೊಸ ಮಾರ್ಗವೊಂದನ್ನು ಕಂಡು ಹಿಡಿದಿದೆ. ಇನ್ಸ್ಟಿಟ್ಯೂಟ್‌ನಲ್ಲಿರುವ ಪ್ರಯೋಗಾಲಯಗಳು ‘ಪ್ರೋಬ್ - ಫ್ರೀ - ಡಿಟೆಕ್ಷನ್ - ಅಸ್ಸೆ' (ರೋಗದ ಹೆಚ್ಚಿನ ವಿಶ್ಲೇಷಣೆ) ಯ ಸೂಕ್ಷ್ಮತೆಯನ್ನು ಪರೀಕ್ಷಿಸುತ್ತಿವೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯು ವೈದ್ಯಕೀಯ ಮಾದರಿಗಳನ್ನು ಈ ಪರೀಕ್ಷಾ ವಿಧಾನದ ಮೂಲಕ ಮೌಲ್ಯೀಕರಿಸಲಾಗುತ್ತಿದೆ.


"ನಾವು ತುಲನಾತ್ಮಕ ಅನುಕ್ರಮ ವಿಶ್ಲೇಷಣೆ ಕ್ರಮವನ್ನು‌ ಬಳಸಿಕೊಂಡು ಕೋವಿಡ್‌-19ನಲ್ಲಿ ವಿಶಿಷ್ಟ ಪ್ರಭೇದಗಳನ್ನು ಗುರುತಿಸಿದ್ದೇವೆ. ಇವು ಇತರ ಮಾನವ ಕರೋನಾ ವೈರಸ್‌ನಲ್ಲಿ ಇರುವುದಿಲ್ಲ,‌ಇದರಿಂದ ಕೋವಿಡ್‌-19 ಅನ್ನು ನಿಖರವಾಗಿ ಕಂಡು ಹಿಡಿಯಲು ಸಾಧ್ಯವಾಗುತ್ತದೆ ಮತ್ತು ಇದನ್ನು‌ ನ್ಯಾಷನಲ್‌ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು ಮೌಲ್ಯಮಾಪನ ಮಾಡಿದ ನಂತರ,‌‌ ನಮ್ಮ‌‌ ದೇಶದಲ್ಲಿ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸಲು ಇದರ ಮೂಲಕ ತ್ವರಿತವಾಗಿ ಪರೀಕ್ಷೆ ಮಾಡಬಹುದಾಗಿದೆ," ಎಂದು ತಂಡದ ಪ್ರಮುಖ ಸದಸ್ಯ‌ರಾದ ಪ್ರೊ.ವಿವೇಕಾನಂದ ಪೆರುಮಾಳ್ ಎಡೆಕ್ಸ್ ಲೈವ್‌ಗೆ ತಿಳಿಸಿದರು.


ಪ್ರಸ್ತುತ ರೋಗ ಪತ್ತೆ ಹಚ್ಚುವಿಕೆಗಾಗಿ ಬಳಸುವ ವಿಧಾನವು ‘ನಿಖರತೆಯ ಆಧಾರ'(ಪ್ರೋಬ್-ಬೇಸ್ಡ್) ವಾಗಿದ್ದರೆ, ಪ್ರಶ್ನೆಯಲ್ಲಿ ಕಂಡು ಬರುವ ವಿಧಾನವು‌ 'ಪ್ರೋಬ್-ಫ್ರೀ' ರೀತಿಯದ್ದಾಗಿದೆ. ಎರಡನೆಯದು ನಿಖರತೆಗೆ‌ ಧಕ್ಕೆಯಾಗದಂತೆ ವ್ಯಾಪಕವಾದ ಸಲಕರಣೆಗಳ ಅಗತ್ಯವಿಲ್ಲದೆ ವೆಚ್ಚವನ್ನು ಕಡಿಮೆ ಮಾಡುವಂತಹದಾಗಿದೆ.


"ಕೋವಿಡ್‌-19ರ ಸ್ಪೈಕ್ ಪ್ರೋಟಿನ್‌ನಲ್ಲಿ ವಿಶಿಷ್ಟ ಪ್ರಭೇದಗಳನ್ನು‌ ಗುರಿಯಾಗಿಸಿಕೊಂಡು ಪ್ರೈಮರ್ ಸೆಟ್‌ಗಳನ್ನು ನೈಜ ಸಮಯದ ಪಾಲಿಮರೇಸ್ ಸರಪಳಿ ಪ್ರತಿಕ್ರಿಯೆ ಬಳಸಿ‌, ಪರೀಕ್ಷಿಸಿ ವಿನ್ಯಾಸಗೊಳಿಸಲಾಗಿದೆ. ಈ ಗುಂಪು ವಿನ್ಯಾಸಗೊಳಿಸಿದ ಪ್ರೈಮರ್‌ಗಳು ನಿರ್ದಿಷ್ಟವಾಗಿ‌‌ ಸಂಪೂರ್ಣ ಕೋವಿಡ್‌-19 ಜಿನೋಮ್‌ಗಳಲ್ಲಿ‌‌ ಸಂರಕ್ಷಿಸಲ್ಪಟ್ಟ ಪ್ರದೇಶಗಳಲ್ಲಿ ಬಂಧಿಸುತ್ತವೆ. ಈ ಅಂತರಿಕ ಮೌಲ್ಯಮಾಪನವನ್ನು‌ ವಾಣಿಜ್ಯಿಕವಾಗಿ ಲಭ್ಯವಿರುವ ಕಿಟ್‌ಗಳಿಗೆ ಹೋಲಿಸಬಹುದಾಗಿದೆ," ಎಂದು ತಂಡದ ಸದಸ್ಯರಾದ ಪಾರುಲ್‌ ಗುಪ್ತಾ ಮತ್ತು ಪ್ರಶಾಂತ್ ದಿ ಹಿಂದೂಗೆ ತಿಳಿಸಿದ್ದಾರೆ.


1.3 ಶತಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ‌‌‌ ಒಂದು ವೇಳೆ, ಪರಿಸ್ಥಿತಿ ಕೈ ಮೀರಿದರೆ ಪರೀಕ್ಷಾ ಕಿಟ್‌ಗಳ ಅವಶ್ಯಕತೆ ತುಂಬಾ ಹೆಚ್ಚಾಗಬಹುದು. ಎರಡನೇ‌ಯ‌ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇಲ್ಲಿಯವರೆಗೆ 16,911 ಮಾದರಿಗಳನ್ನು ಪರೀಕ್ಷಿಸಲಾಗಿದೆ.

How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Latest

Updates from around the world

Our Partner Events

Hustle across India