ಕೋವಿಡ್‌-19 ಸಮಸ್ಯೆಯನ್ನು ನಿಭಾಯಿಸಲು ಐಐಟಿ ಗುವಾಹಟಿಯ ಸಂಶೋಧಕರು ಏನು ಮಾಡುತ್ತಿದ್ದಾರೆ ಎಂಬುದು ಇಲ್ಲಿದೆ

ಲಸಿಕೆಗಳು, ಸುಧಾರಿತ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳ ತಯಾರಿಕೆ ಹೀಗೆ ಕೊರೊನಾ ವೈರಸ್‌ನೊಂದಿಗೆ ಹೋರಾಡಲು ಐಐಟಿ ಗುವಾಹಟಿಯು ಅನೇಕ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೋವಿಡ್‌-19 ಸಮಸ್ಯೆಯನ್ನು ನಿಭಾಯಿಸಲು ಐಐಟಿ ಗುವಾಹಟಿಯ ಸಂಶೋಧಕರು ಏನು ಮಾಡುತ್ತಿದ್ದಾರೆ ಎಂಬುದು ಇಲ್ಲಿದೆ

Saturday March 28, 2020,

2 min Read

ಕೋವಿಡ್-19 ಪ್ರಪಂಚದಾದ್ಯಂತ ಎಲ್ಲಾ ದೇಶಗಳಿಗೆ ಹರಡಿದೆ. ದೊಡ್ಡ ಮಟ್ಟದಲ್ಲಿಯೇ ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಪ್ರಸ್ತುತ, ಭಾರತದ ಒಟ್ಟು ಪ್ರಕರಣಗಳು ೮೦೦ರ ಸಮೀಪ ತಲುಪುತ್ತಿದೆ. ವರ್ಲ್ಡೊಮೇಟರ್ ಪ್ರಕಾರ 20 ಸಾವುಗಳು ಸಂಭವಿಸಿವೆ. ಈ ಸಂದರ್ಭದಲ್ಲಿ ಭಾರತದಾದ್ಯಂತದ ಅನೇಕ ಐಐಟಿಗಳು ಸ್ಯಾನಿಟೈಸರ್‌ಗಳನ್ನು ಅಭಿವೃದ್ಧಿ ಪಡಿಸುವುದರಿಂದ ಹಿಡಿದು ಚಿಕಿತ್ಸೆಯ ಸಂಶೋಧನೆಯವರೆಗು ವೈರಸ್ ಅನ್ನು ತಡೆಗಟ್ಟಲು ವಿಭಿನ್ನ ಮಾರ್ಗಗಳಲ್ಲಿ ಕೆಲಸ ಮಾಡುತ್ತಿವೆ.




ವಿವಿಧ ರೀತಿಯ ವೈರಸ್‌ಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ತ್ವರಿತವಾಗಿ ಪತ್ತೆಹಚ್ಚುವ ಮತ್ತು ಪೋರ್ಟಬಲ್ ಡಯಾಗ್ನೋಸ್ಟಿಕ್ ಕಿಟ್‌ಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ

ಪ್ರೊಫೆಸರ್ ಸಚಿನ್ ಕುಮಾರ್

ನೇತೃತ್ವದ ಐಐಟಿ ಗುವಾಹಟಿಯ ಸಂಶೋಧಕರ ತಂಡ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.


"ನಾವು ಇನ್ನೂ ಲಸಿಕೆ ಹಾಕುವ ಕೆಲಸವನ್ನು ಪ್ರಾರಂಭಿಸಿಲ್ಲ. ಡೇಟಾವನ್ನು ವಿಶ್ಲೇಷಿಸುತ್ತಿದ್ದೇವೆ. ಕೇರಳ ಮತ್ತು ಚೀನಾದ ಮಾದರಿಗಳಿಂದ ಕೊರೊನಾ ವೈರಸ್‌ನ ಅನುಕ್ರಮವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಲಸಿಕೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳುವುದು ಸಹ ಕಷ್ಟ. ಆದರೆ ರೋಗನಿರ್ಣಯವನ್ನು ವೇಗವಾಗಿ ಮಾಡಬಹುದಾಗಿದೆ. ಪ್ರಸ್ತುತ, ನಮ್ಮಲ್ಲಿರುವುದು ಕೋವಿ-2 ಪತ್ತೆಗಾಗಿ ನೈಜ ಸಮಯದ ಪಿಸಿಆರ್ ಆಧಾರಿತ ರೋಗನಿರ್ಣಯದ ಕಿಟ್‌ ಇದೆ," ಎಂದು ಪ್ರೊಫೆಸರ್ ಸಚಿನ್ ಹೇಳಿದ್ದಾರೆ, ವರದಿ

ಎಡೆಕ್ಸ್ ಲೈವ್.


ತಂಡವು ಪಿಎಚ್‌ಡಿ ವಿದ್ಯಾರ್ಥಿಗಳು, ಎಂಟೆಕ್ ವಿದ್ಯಾರ್ಥಿಗಳು, ಜೂನಿಯರ್ ರಿಸರ್ಚ್ ಫೆಲೋಗಳು ಮತ್ತು ಪೋಸ್ಟ್ ಡಾಕ್ಟರಲ್ ಫೆಲೋಗಳನ್ನು ಒಳಗೊಂಡಿದೆ. ಇತ್ತೀಚೆಗೆ, ತಂಡವು ಜಪಾನಿನ ಎನ್ಸೆಫಾಲಿಟಿಸ್ ಮತ್ತು ಕ್ಲಾಸಿಕಲ್ ಹಂದಿ ಜ್ವರ ವೈರಸ್ ವಿರುದ್ಧ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು ಮತ್ತು ಅವರ ಸಂಶೋಧನೆಯನ್ನು ಕ್ರಮವಾಗಿ ವ್ಯಾಕ್ಸಿನ್ ಮತ್ತು ಆರ್ಕೈವ್ಸ್ ಆಫ್ ವೈರಾಲಜಿ ನಿಯತಕಾಲಿಕಗಳಲ್ಲಿ ಪ್ರಕಟಿಸಲಾಯಿತು. ಎನ್ಸೆಫಾಲಿಟಿಸ್‌ಗಾಗಿ ಅವರು ಅಭಿವೃದ್ಧಿಪಡಿಸಿದ ಅದೇ ಸಾಧನವನ್ನು ಅವರು ಕೋವಿಡ್‌-19 ಗೆ ಸಹ ಬಳಸಬಹುದೇ ಎಂದು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.


ಅವರು ಕೇವಲ ಲಸಿಕೆ ಅಭಿವೃದ್ಧಿ ಪಡಿಸಲು ಮಾತ್ರ ಕೆಲಸ ಮಾಡದೆ ಪ್ರಮುಖವಾಗಿ ಪ್ರಥಮ ಹಂತದ ರಕ್ಷಣೆಯನ್ನು ಅಭಿವೃದ್ಧಿಪಡಿಸುವತ್ತ ಕೆಲಸ ಮಾಡುತ್ತಿದ್ದಾರೆ.


ಡಬ್ಲ್ಯುಎಚ್‌ಒ‌ನ ಮಾರ್ಗಸೂಚಿಗಳ ಪ್ರಕಾರ, ಅವರು ಅಭಿವೃದ್ಧಿಪಡಿಸಿದ ಫೇಸ್‌ ಶೀಲ್ಡ್‌ನ ಮೂಲಮಾದರಿಯ ಬಗ್ಗೆ ಸಂಸ್ಥೆ ಟ್ವೀಟ್ ಮಾಡಿದೆ. ವಿನ್ಯಾಸ ವಿಭಾಗದ ಡಾ.ಸುಪ್ರದೀಪ್ ದಾಸ್ ನೇತೃತ್ವದಲ್ಲಿ, ತಂಡವು ಮೊದಲ ತಯಾರಿಯಲ್ಲಿ ಸುಮಾರು 100 ಫೇಸ್‌ ಶೀಲ್ಡ್‌ಗಳನ್ನು ರಚಿಸಲು ಯೋಜಿಸಿದೆ, ವರದಿ ನಾರ್ಥ್‌ ಈಸ್ಟ್‌ ನೌ.

ಇನ್ಸ್ಟಿಟ್ಯೂಟ್ ಇತರರಂತೆ ಈಗಾಗಲೇ ಡಬ್ಲ್ಯುಎಚ್‌ಒ ಸೂಚಿಸಿದಂತೆ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ರಚಿಸಿದೆ. ಈ ಸ್ಯಾನಿಟೈಸರ್‌ಗಳನ್ನು ಸಂದರ್ಶಕರು ಸೇರಿದಂತೆ ಕ್ಯಾಂಪಸ್‌ನಲ್ಲಿರುವ ಎಲ್ಲರಿಗೂ ವಿತರಿಸಲಾಗುತ್ತಿದೆ.


ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತವು ಇನ್ನೂ ಬಹಳ ದೂರ ಸಾಗಬೇಕಿದೆ. ಆದರೆ ಅನೇಕ ಸಂಸ್ಥೆಗಳ ಸತತ ಸಂಶೋಧನಾ ಪ್ರಯತ್ನಗಳಿಂದ ಆಶಾಭಾವನೆಯೊಂದು ಮೂಡುತ್ತಿದೆ.