ಮುಂಬೈನ ಈ ವ್ಯಕ್ತಿ ಕಡಿಮೆ ವೆಚ್ಚದ ಮುಂಗಾರು ಮಳೆ ನೀರು ಕೊಯ್ಲು ವಿಧಾನ ಪರಿಚಯಿಸಿದ್ದಾರೆ

ಸುಭ್ಜಿತ್ ಮುಖರ್ಜಿಯವರ ಸರಳ ಪರಿಹಾರವು ಮುಂಬೈನ ಮುಂಗಾರು ಮಳೆ ನೀರು ಕೊಯ್ಲಿಗೆ ಭೂಮಿಯಡಿ ಫಿಲ್ಟರ್‌ ಅಳವಡಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಮುಂಬೈನ ಈ ವ್ಯಕ್ತಿ ಕಡಿಮೆ ವೆಚ್ಚದ ಮುಂಗಾರು ಮಳೆ ನೀರು ಕೊಯ್ಲು ವಿಧಾನ ಪರಿಚಯಿಸಿದ್ದಾರೆ

Thursday July 18, 2019,

2 min Read

ದಕ್ಷಿಣದ ನಗರ ಚೆನ್ನೈ ನೀರಿನ ಕೊರತೆಯಲ್ಲಿದ್ದರೆ, ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ


ಇಂತಹ ಹವಾಮಾನ ವೈಪರಿತ್ಯಗಳಿಗೆ ಜಾಗತಿಕ ತಾಪಮಾನದ ಏರಿಕೆ ಕಾರಣವಾಗಿದೆ, ಅಷ್ಟೇ ಅಲ್ಲದೇ ಜನರ ನಿರ್ಲಕ್ಷ್ಯವು ಇನ್ನೊಂದು ಕಾರಣ.


ಆದಾಗ್ಯೂ ಈ ಸಮಯದಲ್ಲಿ ಈ ಎರಡು ನಗರಗಳಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆಯಿದೆ. ಮುಂಬೈನಂತಹ ನಗರಗಳಲ್ಲಿ ಮುಂಗಾರಿನ ಅವಧಿಯಲ್ಲಿ ಮಳೆ ಹೆಚ್ಚಾಗಿ ಸುರಿಯುವುದರಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಶೇಖರಿಸಿಡಬಹುದು, ಆದರೆ ಸರಿಯಾದ ಸೌಲಭ್ಯ ಮತ್ತು ಅಗತ್ಯ ಸಂಪನ್ಮೂಲದ ಕೊರತೆಯಿಂದಾಗಿ ನಗರಕ್ಕೆ ಬಹಳಷ್ಟು ಪ್ರಮಾಣದ ನೀರು ನಷ್ಟವಾಗುತ್ತಿದೆ.


ಅನೇಕ ಸ್ಥಳೀಯರು ಮತ್ತು ಸರ್ಕಾರಿ ಸಂಸ್ಥೆಗಳು ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುವ ಪರಿಹಾರ ಕ್ರಮವನ್ನು ಹುಡುಕುತ್ತಿದ್ದ ಸಮಯಕ್ಕೆ, ಮಿಷನ್‌ ಗ್ರೀನ್‌ನ ಸಂಸ್ಥಾಪಕರಾದ ಸುಭ್ಜಿತ್ ಮುಖರ್ಜಿಯವರು ಕಡಿಮೆ ವೆಚ್ಚದ ಪರಿಹಾರವನ್ನು ಪರಿಚಯಿಸಿದ್ದಾರೆ.


Mumbai

ಮಳೆನೀರು ಕೊಯ್ಲಿಗೆ ಸುಭ್ಜಿತ್ ಮುಖರ್ಜಿಯವರ ಪರಿಹಾರ ಕ್ರಮ (ಚಿತ್ರ:ಸ್ಟೋರಿ ಪಿಕ್)

ಸುಭ್ಜಿತ್‌ರವರು ಮಳೆನೀರು ಕೊಯ್ಲಿಗೆ ಸರಳ ವಿಧಾನವನ್ನು ಕಂಡುಹಿಡಿದಿದ್ದಾರೆ, ಹಾಗೂ ಶಾಲೆಗಳು ಮತ್ತು ಸಾರ್ವಜನಿಕ ವಲಯಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಹೆಚ್ಚಿನ ಪ್ರಮಾಣದ ನೀರನ್ನು ಸಂರಕ್ಷಿಸಲು ಸಹಕಾರಿಯಾಗಿದ್ದಾರೆ


ಮಳೆ ಕೊಯ್ಲು ವಿಧಾನವನ್ನು ವಿವರಿಸುತ್ತಾ ಅವರು ಏಶೀಯನ ಎಜ್ ಗೆ ಹೀಗೆ ಹೇಳುತ್ತಾರೆ,


“ನೀವು ಒಂದು ಡ್ರಮ್‌ ತೆಗೆದುಕೊಳ್ಳಿ, ಅದರ ಸುತ್ತಲೂ ಕೆಲವು ರಂದ್ರಗಳನ್ನು ಮಾಡಿ, ಮೂರು ಅಡಿ ಅಗಲ ಮೂರು ಅಡಿ ಆಳದ ಗುಂಡಿಯನ್ನು ತೆಗೆದು ಅದರಲ್ಲಿ ಡ್ರಮ್‌ನ್ನು ಅಳವಡಿಸಿ ಮತ್ತು ಚಾವಣಿ ಮೇಲಿನ ನೀರು ಆ ಡ್ರಮ್‌ಗೆ ಬೀಳುವಂತೆ ಜೋಡಿಸಿ. ಅಳವಡಿಸಿರುವ ಡ್ರಮ್‌ನ ಸುತ್ತಲೂ ಬೆಣಚುಕಲ್ಲನ್ನು ಹಾಕಿರಿ, ಅದು ಫಿಲ್ಟರ್‌ನಂತೆ ಕೆಲಸ ಮಾಡುತ್ತದೆ, ಮಣ್ಣು ಡ್ರಮ್‌ನೊಳಕ್ಕೆ ಸೇರದಂತೆ ತಡೆಯುತ್ತದೆ”


ಸುಭ್ಜಿತ್‌ರವರ ಪ್ರಕಾರ ಈ ಪ್ರಕ್ರಿಯೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ನಂತರ ಈ ನೀರನ್ನು ಕೊಳವೆ ಬಾವಿ, ಬೋರ್‌ವೆಲ್‌ಗಳ ಮೂಲಕ ಪಡೆಯಬಹುದು, ಹತ್ತಿರದಲ್ಲಿರುವ ಕೆರೆಗಳನ್ನು ತುಂಬಿಸಲೂ ಇದು ಸಹಕಾರಿಯಾಗಲಿದೆ


story

ಚಿತ್ರ: ಸ್ಟೋರಿಪಿಕ್

ತಮ್ಮ ಉಪಕ್ರಮವನ್ನು ಮುಂಬೈನಾದ್ಯಂತ ಪ್ರಸಾರ ಮಾಡಲು, ಸುಭ್ಜಿತ್‌ರವರು ಸಾಮಾಜಿಕ ಮಾಧ್ಯಮದ ಸಹಾಯದ ಮೂಲಕ ಅವರು ಈ ವ್ಯವಸ್ಥೆಯನ್ನು ಉಚಿತವಾಗಿ ಅಳವಡಿಸಿಕೊಡಲಿದ್ದಾರೆ ಎನ್ನುವ ವಿಷಯವನ್ನು ಬಿತ್ತರಿಸಿದ್ದರು. ಅವರಿಗೇ ಆಶ್ಚರ್ಯವೆಂಬಂತೆ ಹಲವಾರು ಜನರಿಂದ ವಿನಂತಿಗಳು ಬಂದವು, ಈ ಕಾರಣಕ್ಕಾಗಿ ಇವರು ಈ ವಿಧಾನವನ್ನು ಅಳವಡಿಸಿಕೊಳ್ಳುವುದು ಹೇಗೆ ಎನ್ನುವ ವಿಡೀಯೋ ಚಿತ್ರೀಕರಿಸಿ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ, ವರದಿಗಾರರು ಸ್ಟೋರಿಪಿಕ್‌


ಮುಂಬೈನ ಮಲಾದ್‌ನ ಹಲವಾರು ನಿವಾಸಿಗಳು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ಕಳೆದ ಹತ್ತು ದಿನಗಳಲ್ಲಿ ಆರು ಶಾಲೆಗಳಿಗೆ ವಿದ್ಯಾರ್ಥಿಗಳ ಸಹಾಯದಿಂದ ಈ ವಿಧಾನವನ್ನು ಅಳವಡಿಸಿದ್ದಾನೆ, ಇದರ ಪ್ರಭಾವವನ್ನು ವಿವರಿಸುತ್ತಾ ಆತ ಹೀಗೆ ಹೇಳುತ್ತಾನೆ


“ಒಂದು ಶಾಲೆಗೆ ಪ್ರತಿ ತಿಂಗಳು ನೆಲ ಸ್ವಚ್ಛಗೊಳಿಸುವುದಕ್ಕಾಗಿಯೇ ಸರಾಸರಿ 5,000 ಲೀಟರ್ ನೀರು ಬೇಕಾಗುತ್ತದೆ. ಆದ್ದರಿಂದ, ಮುಂಗಾರಿನ ವೇಳೆಯಲ್ಲಿ 5,000 ಲೀಟರ್ ನೀರಿನಂತೆ ಕನಿಷ್ಟ ನಾಲ್ಕು ತಿಂಗಳವರೆಗೆ ಸಂಗ್ರಹಿಸಿದರೆ, ನೀವು ಸುಲಭವಾಗಿ 20,000 ಲೀಟರ್‌ ನೀರು ಸಂಗ್ರಹಿಸಬಹುದು”


ಇದಲ್ಲದೆ, ಪ್ಲ್ಯಾಸ್ಟಿಕ್‌ ಡ್ರಮ್‌ನ್ನು ಬಳಸಲು ಇಚ್ಛಿಸದವರು ಇಟ್ಟಿಗೆ ಅಥವಾ ಬೆಣಚುಕಲ್ಲನ್ನು ಬಳಸಬಹುದು. ಬೆಣಚುಕಲ್ಲಿನ ನಡುವಿನ ಅಂತರದ ಮೂಲಕ ನೀರು ಭೂಮಿಯನ್ನು ಸೇರುತ್ತದೆ. ನೀರಿನ ಪ್ರಮಾಣ ಕಡಿಮೆಯಿದ್ದರೂ ಸಹ, ಇದು ಶೇಕಡಾ 50 ರಷ್ಟು ನೀರನ್ನು ಸಂಗ್ರಹಿಸಿಡುತ್ತದೆ.