ಪ್ಲಾಸ್ಟಿಕ್ ಬಾಟಲಿಗಳಿಂದ ಸಂಪೂರ್ಣವಾಗಿ ನಾಲ್ಕು ಕೋಣೆಗಳ ಮನೆಯನ್ನು ನಿರ್ಮಿಸಿದ ದಂಪತಿಗಳು

ದೀಪ್ತಿ ಶರ್ಮಾ ಮತ್ತು ಅಭಿಷೇಕ್ ಶರ್ಮಾ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕೂಡ ನಿರ್ಮಿಸಲು ಯೋಜಿಸಿದ್ದು, ಇದನ್ನು 10,000 ಲೀಟರ್ ಸಾಮರ್ಥ್ಯದ ಶೇಖರಣಾ ತೊಟ್ಟಿಗೆ ಸಾಗಿಸಲಾಗುತ್ತದೆ.

ಪ್ಲಾಸ್ಟಿಕ್ ಬಾಟಲಿಗಳಿಂದ ಸಂಪೂರ್ಣವಾಗಿ ನಾಲ್ಕು ಕೋಣೆಗಳ ಮನೆಯನ್ನು ನಿರ್ಮಿಸಿದ ದಂಪತಿಗಳು

Wednesday October 09, 2019,

2 min Read

ದಶಕಗಳಿಂದ, ಪ್ಲಾಸ್ಟಿಕ್ ದೈನಂದಿನ ಜೀವನದ ಒಂದು ಭಾಗವಾಗಿದೆ - ಹಲ್ಲುಜ್ಜುವ ಬ್ರಷ್‌ಗಳು ಮತ್ತು ವಾಟರ್‌ಬಾಟಲ್‌ಗಳಿಂದ ಹಿಡಿದು ಪ್ಯಾಕೇಜಿಂಗ್‌ವರೆಗಿನ ಪ್ಲಾಸ್ಟಿಕ್‌ ವಸ್ತುಗಳು ನಮ್ಮ ಜೀವನದಲ್ಲಿ ಒಂದಾಗಿದೆ. ಟೈಮ್ ನಿಯತಕಾಲಿಕೆಯ ಪ್ರಕಾರ, ಮೈಕ್ರೋಪ್ಲ್ಯಾಸ್ಟಿಕ್‌ಗಳು ನಮ್ಮ ಆಹಾರದಲ್ಲಿಯೂ ಕೂಡ ಕಂಡುಬರುತ್ತವೆ.


1950 ರ ದಶಕದಿಂದ, ನಾವು 8.5 ಶತಕೋಟಿ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಉತ್ಪಾದಿಸಿದ್ದೇವೆ. ಪ್ರಸ್ತುತ, ಸುಮಾರು 60 ಪ್ರತಿಶತದಷ್ಟು ಪ್ಲಾಸ್ಟಿಕ್ ಭೂ ಒಡಲನ್ನು ಸೇರಿ ಕೊನೆಗೊಳ್ಳುತ್ತದೆ. ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸಲು ಮತ್ತು ಅದನ್ನು ಮರುಬಳಕೆ ಮಾಡಲು, ಉತ್ತರಾಖಂಡ್‌ನ ನೈನಿತಾಲ್ ಜಿಲ್ಲೆಯ ಹರ್ತೋಲಾ ಗ್ರಾಮದ ಈ ದಂಪತಿಗಳು ಪ್ಲಾಸ್ಟಿಕ್ ಬಾಟಲಿಗಳಿಂದ ನಾಲ್ಕು ಕೋಣೆಗಳ ಸಂಪೂರ್ಣ ಹೋಂಸ್ಟೇ ನಿರ್ಮಿಸಿದ್ದಾರೆ.


ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಿದ ಮನೆ (ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್)




ದೀಪ್ತಿ ಶರ್ಮಾ ಮತ್ತು ಅವರ ಪತಿ ಅಭಿಷೇಕ್ ಶರ್ಮಾ ನಿರ್ಮಿಸಿದ ಹೋಂಸ್ಟೇ ಅನ್ನು 26,000 ಬಾಟಲಿಗಳಿಂದ ತಯಾರಿಸಲಾಗಿದೆ. ಈ ಬಾಟಲಿಗಳಲ್ಲಿ ಸಣ್ಣ ರಂದ್ರವನ್ನು ಮಾಡಿ ನಂತರ ಸಂಪೂರ್ಣ ಜೋಡಿಸಿ ಗೋಡೆಯನ್ನಾಗಿ ಮಾಡಿ, ನಂತರ ಸುಮಾರು 100 ಪ್ಲಾಸ್ಟಿಕ್ ಬಾಟಲಿಗಳನ್ನು ಒಟ್ಟಿಗೆ ಕಟ್ಟಿ ಜಾಲರಿಯ ತಂತಿಯಿಂದ ಮುಚ್ಚಿ ಗೋಡೆಯನ್ನು ಗಟ್ಟಿ ಮಾಡಲಾಯಿತು. ಪ್ಲಾಸ್ಟಿಕ್ ಬಾಟಲ್ ಗೋಡೆಯು ಸುಸ್ಥಿರವಾಗುವುದರ ಜೊತೆಗೆ ತಾಪಮಾನ ಇಳಿಯುವುದನ್ನು ತಡೆಯುತ್ತದೆ.


ದಿ ಲಾಜಿಕಲ್ ಇಂಡಿಯನ್ ಪ್ರಕಾರ, ದಂಪತಿಗಳು ಫ್ಲೋರಿಂಗ್‌ಗಾಗಿ ಹಳೆಯ ಟೈರ್‌ಗಳನ್ನು ಬಳಸಿದರು ಮತ್ತು ಮನೆಯನ್ನು ಸುಂದರಗೊಳಿಸಲು, ವಿಸ್ಕಿ ಬಾಟಲಿಗಳಲ್ಲಿ ದೀಪಗಳನ್ನು ತಯಾರಿಸಲಾಯಿತು. ದಂಪತಿಗಳು ನಿರ್ಮಿಸಿದ ಮನೆ ಸಾಕಷ್ಟು ವಿಶಾಲವಾಗಿದ್ದು, ಪ್ರತಿ ಕೋಣೆಯು 10 ಅಡಿಗಳಿಂದ 11 ಅಡಿ ಗಾತ್ರದಲ್ಲಿದೆ ಮತ್ತು ಎಂಟು ಜನರಿಗೆ ಸಾಕಾಗುವಷ್ಟಿದೆ.


ಕಾರ್ಮಿಕ ಮತ್ತು ಕಚ್ಚಾ ಸಾಮಗ್ರಿಗಳು ಸೇರಿದಂತೆ ಇಡೀ ಯೋಜನೆಗೆ 1.5 ಲಕ್ಷ ರೂ ಖರ್ಚಾಗಿದೆ.


ಉತ್ತರ ಪ್ರದೇಶದ ಮೀರತ್‌ನಲ್ಲಿ ಶಾಲಾ ಶಿಕ್ಷಕಿ ದೀಪ್ತಿ ತನ್ನ ಪತಿಯೊಂದಿಗೆ ಪ್ಲಾಸ್ಟಿಕ್ ಬಳಸುವುದನ್ನು ತಪ್ಪಿಸಲು ಈ ಮನೆಯನ್ನು ನಿರ್ಮಿಸಿದ್ದಾರೆ.


ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಿದ ಗೋಡೆ (ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್)




ಹಿಂದೂಸ್ತಾನ್‌ ಟೈಮ್ಸ್ ಜೊತೆ ಮಾತನಾಡಿದ ಅವರು,


"ನಾವು ಪರ್ವತಗಳಿಗೆ ಸಾಕಷ್ಟು ಪ್ರಯಾಣಿಸುತ್ತೇವೆ ಮತ್ತು ಪ್ರತಿ ಬಾರಿ ನಾವು ಒಂದು ಸ್ಥಳಕ್ಕೆ ಹೋದಾಗ, ಯಾವುದೇ ಮರುಬಳಕೆ ಅಥವಾ ಸರಿಯಾದ ವಿಲೇವಾರಿ ಇಲ್ಲದೆ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ನೋಡಿ ನಮಗೆ ಬೇಸರವಾಗುತ್ತಿತ್ತು. ಪರ್ವತಗಳಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಬಳಸಿ ನಾವು ಏನನ್ನಾದರೂ ಮಾಡಲು ಬಯಸಿದೆವು. ಜನರು ಪರ್ವತಗಳಲ್ಲಿ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬೇಕು ಅಥವಾ ಅವುಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಿಂತಿರುಗಿಸಬೇಕು ಎಂದು ನಾವು ನಂಬುತ್ತೇವೆ, ಆದರೆ ಎಲ್ಲಾ ತ್ಯಾಜ್ಯದಿಂದ ಪರ್ವತಗಳಿಗೆ ಹಾನಿಯಾಗಬಾರದು”

ಹೋಂಸ್ಟೇ ಈಗ ಸಿದ್ಧವಾಗಿದೆ ಮತ್ತು ಯೋಜನೆಯ ನೊಂದಣಿ ಪೂರ್ಣಗೊಂಡ ನಂತರ, ಮನೆಗಳು, ಸಣ್ಣ ಅಂಗಡಿಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲು ಪ್ಲಾಸ್ಟಿಕ್ ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಜನರನ್ನು ಸಂವೇದನಾಶೀಲಗೊಳಿಸಲು ದಂಪತಿಗಳು ನಿರ್ಧರಿಸಿದ್ದಾರೆ.


ಇದರ ಬಗ್ಗೆ ಮತ್ತಷ್ಟು ಹೇಳುತ್ತಾ ಅಭಿಷೇಕ್,


“ನಾವು ಫೆಬ್ರವರಿ 2017 ರಲ್ಲಿ ಮನೆ ನಿರ್ಮಿಸಲು ಪ್ರಾರಂಭಿಸಿದ್ದೇವೆ ಮತ್ತು ಇಡೀ ಮನೆಯನ್ನು ನಿರ್ಮಿಸಲು ನಮಗೆ ಸುಮಾರು ಒಂದೂವರೆ ವರ್ಷಗಳು ಬೇಕಾಯಿತು. 2016 ರಲ್ಲಿ ಲ್ಯಾನ್ಸ್‌ಡೌನ್‌ಗೆ ಪ್ರವಾಸ ಹೋದ ಸಮಯದಲ್ಲಿ, ನಾವು ಪರ್ವತಗಳಲ್ಲಿ ಮನೆಯನ್ನು ನಿರ್ಮಿಸಬೇಕೆಂದು ಬಯಸಿದ್ದೆವು ಹೊರತು ನೋಯ್ಡಾ ಅಥವಾ ಗಾಜಿಯಾಬಾದ್‌ನಲ್ಲಿ ಅಲ್ಲ. ನಾವು 2017 ರಲ್ಲಿ ಭೂಮಿಯನ್ನು ಖರೀದಿಸಿ ಕೆಲಸವನ್ನು ಪ್ರಾರಂಭಿಸಿದ್ದೇವೆ” ಹಿಂದೂಸ್ತಾನ್ ಟೈಮ್ಸ್ ವರದಿ.


ದಂಪತಿಗಳು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕೂಡ ನಿರ್ಮಿಸಲು ಯೋಜಿಸಿದ್ದಾರೆ, ಇದನ್ನು 10,000 ಲೀಟರ್ ಸಾಮರ್ಥ್ಯದ ಶೇಖರಣಾ ತೊಟ್ಟಿಗೆ ಸಾಗಿಸಲಾಗುತ್ತದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.