ಆವೃತ್ತಿಗಳು
Kannada

ಕಬ್ಬನ್ ಪಾರ್ಕ್​ನಲ್ಲಿ ಒಣಗಿದ ಮರಗಳಲ್ಲಿ ಅರಳಿದೆ ಕಲೆ...!

ಕೃತಿಕಾ

11th Nov 2015
Add to
Shares
2
Comments
Share This
Add to
Shares
2
Comments
Share

ಹಲವು ವಿಶೇಷತೆಗಳಿಂದ ಪರಿಸರ ಪ್ರೇಮಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಬ್ಬನ್ ಪಾರ್ಕ್ ಈಗ ಮತ್ತೊಂದು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇನ್ನು ಮುಂದೆ ನೀವು ಕಬ್ಬನ್ ಪಾರ್ಕ್ ನಲ್ಲಿ ಒಣಗಿದ ಮರಗಳಿಂದ ಕೆತ್ತಲಾದ ವಿಶೇಷ ಕಲಾಕೃತಿಗಳನ್ನು ನೋಡಬಹುದು. ಉರುಳಿ ಬಿದ್ದ ಮರಗಳಿಗೆ ಮರು ಹುಟ್ಟು ನೀಡುವ ಯೋಜನೆಯನ್ನು ತೋಟಗಾರಿಕಾ ಇಲಾಖೆ ಆರಂಭಿಸಿದೆ. ಯೋಜನೆಯ ಅಂಗವಾಗಿ ಕಬ್ವನ್ ಪಾರ್ಕ್​ನ ಬ್ಯಾಂಡ್ ಸ್ಟಾಂಡ್ ಬಳಿ ಅನಾವರಣವಾಗಿರುವ ಹದಿನೆಂಟು ಅಡಿ ಉದ್ದದ ಮೂರು ಅಡಿ ಅಗಲದ ಮರದ ಕಲಾಕೃತಿ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಬಿದ್ದು ಹೋಗಿದ್ದ ಮರಕ್ಕೆ ಮರುಹುಟ್ಟು ನೀಡಿ ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ. ಒಣಗಿದ ಮರದಲ್ಲಿ ಕಲೆ ಅರಳಿದ್ದು, ಪಕೃತಿ ಮಾತೆ, ರಾಷ್ಟ್ರ ಲಾಂಚನ ಕೆತ್ತನೆ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅನಾವರಣ ಮಾಡಲಾಗಿದೆ. ಇದು ಈಗ ಪರಿಸರ ಪ್ರೇಮಿಗಳನ್ನ ತನ್ನತ್ತ ಆಕರ್ಷಿಸುತ್ತಿದೆ.

image


ಕಬ್ಬನ್ ಪಾರ್ಕ್ ನಲ್ಲಿ ಗಾಳಿ ಮಳೆಯ ಕಾರಣಗಳಿಗೆ ಬಿದ್ದು ಹೋಗುವ ಮರಗಳನ್ನು ಸಂರಕ್ಷಿಸಿ ಈ ರೀತಿಯಾಗಿ ಕಲಾಕೃತಿಗಳನ್ನಾಗಿ ಮಾಡಿ ಕಬ್ವನ್ ಪಾರ್ಕ್ ಅಂದವನ್ನು ಇಮ್ಮಡಿಗೊಳಿಸುವ ಯೋಜನೆಯನ್ನು ತೋಟಗಾರಿಕಾ ಇಲಾಖೆ ಆರಂಭಿಸಿದೆ. ಅದರ ಮೊದಲ ಪ್ರಯತ್ನವಾಗಿ ಕಲಾಕೃತಿ ಅರಳಿ ನಿಂತಿದೆ. ಈ ಸುಂದರ ಕಲಾಕೃತಿಯನ್ನು ಜಾನ್ ದೇವರಾಜ್ ಕೆತ್ತನೆ ಮಾಡಿಕೊಟ್ಟಿದ್ದಾರೆ. ಉದ್ಯಾನವನದಲ್ಲಿ ಬಿದ್ದುಹೋದ ಮರಗಳಿಗೆ ಕಾಯಕಲ್ಪ ನೀಡಿ ಮರಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಹಲವು ಕಾರಣಗಳಿಗೆ ಉದ್ಯಾನವನದಲ್ಲಿನ ಮರಗಳು ಬೀಳುತ್ತವೆ. ಅವುಗಳ ಹರಾಜಿನಿಂದ ಇಲಾಖೆಗೆ ಹೆಚ್ಚೇನು ಲಾಭವಿಲ್ಲ. ಆ ಹಿನ್ನೆಲೆಯಲ್ಲಿ ಈ ಯೋಜನೆ ಆರಂಭಿಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಈ ರೀತಿಯ 20 ಕ್ಕೂ ಹೆಚ್ಚು ಮರಗಳ ಕಲಾಕೃತಿಗಳು ಕಬ್ವನ್ ಪಾರ್ಕ್ ನಲ್ಲಿ ಕಾಣಸಿಗಲಿವೆ ಎಂದು ಮಾಹಿತಿ ನೀಡಿದರು.

image


ಬೆಂಗಳೂರಿನಲ್ಲಿ ಎಲ್ಲಿಯೂ ಕಾಣದ ಇಂತಹ ಅಪರೂಪದ ಕಲಾಕೃತಿಗಳು ಕಬ್ವನ್ ಪಾರ್ಕ್ ನಲ್ಲಿ ಅನಾವರಣಗೊಂಡಿರುವುದು ನಗರದ ಜನರಲ್ಲೂ ಸಂತಸಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿದಿನವೂ ವಾಕಿಂಗ್ ಗೆಂದು ಕಬ್ಬನ್ ಪಾರ್ಕ್ ಗೆ ಬರುವ ರವಿಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ... ನಾನು ಸಾಪ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತೇನೆ. ಬೆಳಗ್ಗೆ ಕಬ್ಬನ್ ಪಾರ್ಕ್ ಗೆ ಬರೋದು ವಾಕಿಂಗ್ ಮಾಡೋದು ನನಗೆ ಖುಷಿಯ ವಿಚಾರ. ಈಗ ಕಬ್ಬನ್ ಪಾರ್ಕ್ ನಲ್ಲಿ ಮರದಲ್ಲಿ ಮಾಡಲಾಗಿರುವ ಕಲಾಕೃತಿ ಅತ್ಯಂತ ಆಕರ್ಷಕವಾಗಿದೆ. ಇದೇ ರೀತಿಯ ಇನ್ನಷ್ಟು ಯೋಜನೆಗಳು ಕಾರ್ಯಗತವಾಗಬೇಕಿದೆ ಅಂತಾರೆ.

ಒಟ್ಟಿನಲ್ಲಿ ನಗರದ ಕೇಂದ್ರಭಾಗದಲ್ಲಿರುವ ಕಬ್ಬನ್ ಪಾರ್ಕ್ ನಲ್ಲಿ ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗುವ ಯೋಜನೆಗಳು ಒಂದಾದ ಮೇಲೊಂದರಂತೆ ಅನಾವರಣಗೊಳ್ಳುತ್ತಿರುವುದು ಸಂತಸದ ವಿಚಾರ. ನಿಮಗೂ ಈ ಮರದ ಕಲಾಕೃತಿ ನೋಡ್ಬೇಕು ಅಂದ್ರೆ ನೀವೂ ಒಮ್ಮೆ ಕಬ್ವನ್ ಪಾರ್ಕ್ ಗೆ ಬೇಟಿ ಕೊಡಿ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags