ಆವೃತ್ತಿಗಳು
Kannada

ಕಿರಿಕಿರಿ ರಹಿತ ಅಭಿವ್ಯಕ್ತಿಗಳಿಗಾಗಿ ಒಂದು ಅತ್ಯುತ್ತಮ ವೇದಿಕೆ ರಾಬ್ಲೆರ್ ಆ್ಯಪ್​..!

ಟೀಮ್​​ ವೈ.ಎಸ್​. ಕನ್ನಡ

YourStory Kannada
24th Dec 2015
Add to
Shares
2
Comments
Share This
Add to
Shares
2
Comments
Share

ಸಾಮಾಜಿಕ ಜಾಲಗಳು ಇಂದಿನ ಆಧುನಿಕ ಯುಗದಲ್ಲಿ ಪ್ರಮುಖ ಸಂವಹನ ಮಾಧ್ಯಮಗಳು ನಿಜ. ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸ್ ಆ್ಯಪ್ ನಂತ್ರ ಮೀಡಿಯಾಗಳು ಊಹಿಸಲೂ ಅಸಾಧ್ಯವಾದ ವೇಗದಲ್ಲಿ ಜನರನ್ನ ತಲುಪಿವೆ. ಇಲ್ಲಿ ಜನರು ನ್ಯೂಸ್ ವ್ಯಾಲ್ಯೂಗಳನ್ನೂ ನೋಡ್ತಾರೆ. ತಮಗಿಷ್ಟವಾದ ವೈಯುಕ್ತಿಕ ಅಂಶಗಳನ್ನೂ ಇಲ್ಲಿ ಫಾಲೋ ಮಾಡ್ತಾರೆ. ಆದ್ರೆ ಕೆಲವೊಮ್ಮೆ ಇಲ್ಲಿನ ಅತಿಯಾದ ವೈಯುಕ್ತಿಕ ಸ್ವಾತಂತ್ರ್ಯದಿಂದಾಗಿ ಇತರರಿಂದ ಕಿರಿಕಿರಿಗಳು ಉಂಟಾಗ್ತನೇ ಇರುತ್ತವೆ. ಈ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಹಾಗೂ ನಿಮ್ಮ ಅಭಿವ್ಯಕ್ತಿಗೆ ನೆರವಾಗಲು ಹೊಸ ಆ್ಯಪ್ ನಿಮ್ಮ ನೆರವಿಗಿದೆ. ಅದೇ ರಾಬ್ಲೆರ್ ಸೋಷಿಯಲ್ ಮೀಡಿಯಾ ಪೊಲೀಂಗ್ ಆಪ್. ಇಲ್ಲಿ ನೀವು ಜಾಗತಿಕ ಮಟ್ಟದಲ್ಲಿ ನೋಡಲು ಸಾಧ್ಯವಾಗುವಂತೆ ಬ್ಲಾಗ್ ಕ್ರಿಯೆಟ್ ಮಾಡಬಹುದು. ವಿಶೇಷ ಅಂದ್ರೆ ಇದೊಂದು 255 ಕ್ಯಾರೆಕ್ಟರ್ ಗಳನ್ನ ಒಳಗೊಂಡಿರುವ ಮೈಕ್ರೋ ಬ್ಲಾಗ್. ಈ ರಾಬ್ಲೆಂಗ್ ಆ್ಯಪ್ ನ್ನ ರೂಪಿಸಿರುವ ತಂಡ, ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಇರುವ ಪ್ರಮುಖ ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡು ರೂಪಿಸಿದೆ.

ಮಾರ್ಗದರ್ಶಿ ಸೂತ್ರಗಳನ್ನ ತೋರಿಸುವ ರಾಬ್ಲೆರ್..

ಸದ್ಯ ನಾವು ಬಳಸುತ್ತಿರುವ ಸೋಶಿಯಲ್ ಮೀಡಿಯಾಗಳಲ್ಲಿ ಎರಡು ಪ್ರಮುಖ ಸಮಸ್ಯೆಗಳನ್ನ ರಾಬ್ಲೆರ್ ನ ನಿರ್ಮಾತೃಗಳು ಪತ್ತೆ ಹಚ್ಚಿದ್ದಾರೆ.

A) ವಿಕೃತ ಆನ್ ಲೈನ್ ನಿಂದಕರು

B) ಪಬ್ಲಿಷರ್ಸ್ ಮತ್ತು ಸೋಶಿಯಲ್ ಮೀಡಿಯಾ..

ವಿಕೃತ ಆನ್ ಲೈನ್ ನಿಂದಕರು :

ಟ್ವಿಟರ್ ನ ಬಗ್ಗೆ ಉಮೈರ್ ಹಕ್ ಹೇಳುತ್ತಾರೆ “ ಟ್ವಿಟರ್ ನಲ್ಲಿರುವ ಸಮಸ್ಯೆಗಳು ಗಂಭೀರವಾಗಿದ್ರೂ, ಪರಿಹರಿಸಬಹುದಾದಷ್ಟು ಸರಳವಾಗಿವೆ. ಆದ್ರೆ ಇದ್ರಿಂದ ಯಾರು ಬಲಿಪಶುಗಳಾಗಿರುತ್ತಾರೋ ಅದಕ್ಕೆ ಅವರ ಕುರುಡುತನವೇ ಕಾರಣವಾಗಿರುತ್ತದೆ. ಟ್ವಿಟರ್ ನಲ್ಲಿ ಸಂಭವಿಸುವ ಹಾಗೂ ಪರಸ್ಪರ ಎಕ್ಸ್ ಚೇಂಜ್ ಆಗುವ ಶಬ್ದಗಳನ್ನ ವೈಭವೀಕರಿಸುವುದೇ ಸಮಸ್ಯೆಗಳನ್ನ ಹುಟ್ಟಿಹಾಕುತ್ತವೆ. ಇದಕ್ಕೊಂದು ಪರಿಹಾರ ನೀಡಲು ಎಲ್ಲರೂ ಮನಸ್ಸು ಮಾಡಬೇಕು. ಆದ್ರೆ ನಾನು ಯಾವತ್ತೂ ಪರಸ್ಪರ ಕಾಲೆಳೆಯುವುದಕ್ಕೆ, ಟಾಂಟ್ ನೀಡುವುದಕ್ಕೆ, ಹೆದರಿಸುವುದಕ್ಕೆ, ನಿಂದಿಸುವುದಕ್ಕೆ ಅಥವಾ ಅರಚಾಡುವುದಕ್ಕೆ ಭಯಪಟ್ಟಿಲ್ಲ. ಅಥವಾ ಅದರ ಬಗ್ಗೆ ಯಾವತ್ತೂ ಯೋಚಿಸಿಲ್ಲ. ಅದಲ್ಲಾ ಅವರವರ ವ್ಯಕ್ತಿತ್ವಗಳನ್ನ ಸೂಚಿಸುತ್ತದೆ. ಇದಕ್ಕೆ ಪೊಲೀಸರ ಮೊರೆ ಹೋಗುವುದಕ್ಕೂ ಸಾಧ್ಯವಿಲ್ಲ. ”

image


ಆದ್ರೆ ರಾಬ್ಲೆರ್ ಸಂಸ್ಥಾಪಕರ ಪ್ರಕಾರ ಇದೆಲ್ಲಾ ಸಮಸ್ಯೆಗಳು ಅಡಗಿರುವುದು ಒಂದು ಆ್ಯಪ್​ನ ಆಂತರಿಕ ವಿನ್ಯಾಸದಲ್ಲಿ. ಇದ್ರಲ್ಲಿ ಮುತುವರ್ಜಿ ವಹಿಸಿರುವ ರಾಬ್ಲೆರ್ ಸಂಸ್ಥಾಪಕರು, ಆ್ಯಪ್ ನ್ನು ಲಾಗಿನ್ ಆಧಾರದಲ್ಲಿ ಬಳಕೆ ಮಾಡಲು ಅನುವು ಮಾಡಿದ್ದಾರೆ. ಇಲ್ಲಿ ವೆರಿಫಿಕೇಶನ್ ಗೆ ಮೊಬೈಲ್ ನಂಬರ್ ಗೆ ಮೊದಲ ಆದ್ಯತೆ ನೀಡಲಾಗಿರುವುದರಿಂಗ ವಿಕೃತ ಮನಸ್ಸುಗಳನ್ನ ಸುಲಭವಾಗಿ ಗುರುತಿಸಿ ದೂರವಿಡಬಹುದಾಗಿದೆ. ಒಂದೊಮ್ಮೆ ಇಲ್ಲಿ ದುರ್ಬಳಕೆ ಆದ್ರೆ ನಿಂದರಕರನ್ನ ಸುಲಭವಾಗಿ ಬ್ಯಾನ್ ಮಾಡಬಹುದು. ಅವರೊಮ್ಮೆ ಪುನಃ ಎಂಟ್ರಿಕೊಡಲು ಬಯಸಿದರೆ, ಹೊಸ ನಂಬರ್ ಬಳಕೆ ಮಾಡಲೇಬೇಕು. ಹೀಗಾಗಿ ಇಲ್ಲಿ ಹೊರದೂಡಲ್ಪಟ್ಟವರು ಮತ್ತೆ ಸೇರುವುದಕ್ಕೆ ಸಾಕಷ್ಟು ನಿಯಮಗಳು ಅಡ್ಡಗಾಲಿಕ್ಕುವುದರಿಂದ ಕಿರಿಕಿರಿಗಳನ್ನ ಮಾಡಬಯಸುವವರು ತಣ್ಣಗಾಗಿ ಬಿಡುತ್ತಾರೆ. ಹಾಗಂತ ಯಾವುದು ನಿಂದನೆ, ಯಾವುದು ವಿಕೃತಿ ಅನ್ನೋದನ್ನ ತೀರ್ಮಾನಿಸುವುದಕ್ಕೆ ರಾಬ್ಲೆರ್ ನಲ್ಲಿ ಪ್ರತ್ಯೇಕ ನಿಮಯಗಳಿಲ್ಲ. ಆದ್ರೆ ಯಾವುದನ್ನ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೋ ಅವುಗಳನ್ನ ನೇರವಾಗಿ ಈ ಗುಂಪಿನಲ್ಲಿ ಸೇರಿಸಬಹುದಾಗಿದೆ.

“ ನಿಂದನೆ ಮತ್ತು ವಿಕೃತಿಗಳನ್ನ ಸಹಿಸುವುದಕ್ಕೆ ಸಾಧ್ಯವಿಲ್ಲ. ಅದು ಎಷ್ಟೇ ಚಿಕ್ಕದಾಗಿರಲಿ ಅದಕ್ಕೆ ಅವಕಾಶವಿರುವುದಿಲ್ಲ. ನಿಂದಕರನ್ನ ದೂರವಿಡುವುದು ದೊಡ್ಡ ಕೆಲಸವಲ್ಲ, ಅವರು ಮತ್ಯಾರ ಬಳಿಯೂ ಅದನ್ನ ಪುನರಾವರ್ತಿಸದಂತೆ ನೋಡಿಕೊಳ್ಳವುದೇ ದೊಡ್ಡ ಸವಾಲು ” – ಅಮೋಲ್ ಅಗರ್ವಾಲ್, ರಾಬ್ಲೆರ್ ಸಹಸಂಸ್ಥಾಪಕಿ

ಯುವಕರು ಹಾಗೂ ಬುದ್ದಿವಂತ ಸಾರ್ವಜನಿಕರಲ್ಲಿ ಬಹಳಷ್ಟು ಮಂದಿ ಚೇತನ್ ಭಗತ್ ರನ್ನ ಫಾಲೋ ಮಾಡ್ತಾರೆ. ಹಾಗಂತ ನಾವೆಲ್ಲಾ ಅವರ ಥಿಯರಿಗಳನ್ನ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಅವರು ಅತ್ಯಂತ ಅರ್ಥಗರ್ಭಿತ ವಿಚಾರಗಳನ್ನ ಯಾವಾಗಲೂ ಎತ್ತುತ್ತಿರುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಯಾರೊಬ್ಬರೂ ಸಮರ್ಪಕವಾಗಿ ಆ ವಿಷಯಗಳನ್ನ ಚರ್ಚಿಸುವುದನ್ನ ಕಾಣುತ್ತಿಲ್ಲ ಅಂತ ರಾಬ್ಲೆರ್ ಸಹಸಂಸ್ಥಾಪಕಿ ಅಮೋಲ್ ಅಗರ್ವಾಲ್ ಹೇಳ್ತಾರೆ.

“ ಬಹಳಷ್ಟು ಟ್ವಿಟ್ಟಿಗರು ರಾಜಕೀಯ ವಿಷಯಗಳನ್ನ ಹೊರತು ಪಡಿಸಿ ಕೇವಲ ಸಾಮಾನ್ಯ ವಿಷಗಳನ್ನಷ್ಟೇ ಟ್ವಿಟರ್ ನಲ್ಲಿ ಚರ್ಚಿಸುತ್ತಾರೆ. ಆದ್ರೆ ಬಹಳಷ್ಟು ಜನ ಅದಕ್ಕೆ ರಾಜಕೀಯ ಬಣ್ಣ ಕಟ್ಟೇ ಬಿಡ್ತಾರೆ. ಆದ್ರೆ ಅದನ್ನ ಎದುರಿಸಲೂ ಕೆಲವು ಧೈರ್ಯವಾಗಿ ಎದುರಿಸ್ತಾರೆ. ಈ ವಿಚಾರದಲ್ಲ ನಾನು ಚೇತನ್ ಅವರನ್ನ ಅಭಿನಂದಿಸುತ್ತೇನೆ. ” ಅಮೋಲ್ ಅಗರ್ವಾಲ್,

ಅಲ್ಲದೆ ನಾನೇನಾದ್ರೂ ಚೇತನ್ ಭಗತ್ ರನ್ನ ಮೀಟ್ ಮಾಡಿದ್ರೆ ರಾಬ್ಲೆರ್ ಆಪ್ ನ ಬಗ್ಗೆ ಹೇಳುತ್ತೇನೆ. ನಮ್ಮದು ಚಿಕ್ಕದಾದ ಕಮ್ಯುನಿಟಿ ಆಗಿದ್ರೂ, ಇತರೆ ಸೋಶಿಯಲ್ ಮೀಡಿಯಾಗಳಿಗೆ ಹೋಲಿಸಿದ್ರೆ ಹೆಚ್ಚು ಅರ್ಥಗರ್ಭಿತ ವಿಚಾರಗಳನ್ನ ಮಾತ್ರ ಇಲ್ಲಿ ಚರ್ಚಿಸುವುದನ್ನ ಅವರಿಗೆ ತಿಳಿ ಹೇಳಲು ಬಯಸುತ್ತೇನೆ ಅಂತ ಅಗರ್ವಾಲ್ ತಮ್ಮ ಆಪ್ ಬಗ್ಗೆ ಅತ್ಯಂತ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಹೀಗೆ ಇತರೆ ಸಾಮಾಜಿಕ ನೆಟ್ ವರ್ಕ್ ಗಳಿಗೆ ಸವಾಲೆಂಬ ರೀತಿಯಲ್ಲಿ ಬೆಳೆದಿರುವ ರಾಬ್ಲೆರ್ ನ ಮಹತ್ವ ರಾಜಕೀಯ ನಾಯಕರಿಗೂ ಇತ್ತೀಚೆಗೆ ಅರಿವಿಗೆ ಬರುತ್ತಿದೆ.

ಪಬ್ಲಿಷರ್ಸ್ ಮತ್ತು ಸೋಶಿಯಲ್ ಮೀಡಿಯಾ..

ಸೋಶಿಯಲ್ ಮೀಡಿಯಾಗಳು ಯಾವತ್ತಿಗೂ ಪ್ರಕಾಶಕರ ಹಿಡಿತದಿಂದ ಹೊರಗಿರುತ್ತವೆ. ಅಲ್ಲದೆ ಅತ್ಯುತ್ತಮ ಕಂಟೆಂಟ್ ಗಳನ್ನ ನೀಡುತ್ತಿರುತ್ತವೆ. ಜೊತೆಗೆ ಓದುಗರು ತಮ್ಮ ಪೇಜನ್ನ ಓದಿ ಅವುಗಳನ್ನ ಮೆಚ್ಚಿಕೊಳ್ಳುತ್ತಾರೆ ಅನ್ನುವ ನಂಬಿಕೆ ಇದ್ದೆ ಇರುತ್ತದೆ. ಇದರೊಂದಿಗೆ ಜಾಹೀರಾತುಗಳ ಮೇಲೂ ಸೋಶಿಯಲ್ ಮೀಡಿಯಾಗಳು ಒಂದು ಕಣ್ಣಿಟ್ಟಿರುತ್ತವೆ. ಇನ್ನು ಫೇಸ್ ಬುಕ್ ನಲ್ಲಿ ಆ ಕ್ಷಣಕ್ಕೆ ಬರೆಯುವ ಲೇಖನಗಳು ಹಾಗೂ ಟ್ವಿಟರ್ ನಲ್ಲಿ ಆ ಕ್ಷಣಕ್ಕೆ ಪ್ರತಿಕ್ರಿಯಿಸುವ ಪದ್ಧತಿ ಬೆಳೆಯುತ್ತಲೇ ಇದ್ದು ಅದನ್ನ ವೀಕ್ಷಿಸಲೇ ಬೇಕು ಅನ್ನೋ ಹಠಮಾರಿ ಧೋರಣೆ ಇರುತ್ತದೆ. ಹಾಗಂತ ರಾಬ್ಲರ್ ಯಾವತ್ತೂ ಏಕ ಪ್ರಕಾರದಲ್ಲಿ ಯೋಚಿಸುತ್ತಿಲ್ಲ. 5 ಮಿಲಿಯನ್ ಫಾಲೋವರ್ ಗಳಿದ್ದಾರೆ ಅನ್ನೋದಾದ್ರೆ ಅದಕ್ಕೆ ಓದುಗ ವರ್ಗ ಇದ್ದೇ ಇರುತ್ತದೆ ಅನ್ನುವುದು ರಾಬ್ಲರ್ ಸಂಸ್ಥಾಪಕರ ವಿಶ್ವಾಸ. ಹೀಗೆ ಇತರೆ ಎಲ್ಲಾ ಸೋಶಿಯಲ್ ಮೀಡಿಯಾಗಳಿಗೆ ಸಡ್ಡು ಹೊಡೆಯುತ್ತಿರುವ ರಾಬ್ಲೆರ್ ಆ್ಯಪ್, 2016ರ ಅಂತ್ಯದ ವೇಳೆಗೆ ದೈತ್ಯಾಕಾರವಾಗಿ ಬೆಳೆಯುವ ವಿಶ್ವಾಸವಿದೆ.

ಅನುವಾದಕರು – ಬಿ ಆರ್ ಪಿ, ಉಜಿರೆ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags