ಆವೃತ್ತಿಗಳು
Kannada

ಮೊಬೈಲ್ ಸ್ಕ್ರೀನ್ ಒಡೆದು ಹೋಗುತ್ತೆ ಅನ್ನೋ ಚಿಂತೆಗೆ ಹೇಳಿ ಗುಡ್ ಬೈ...

ನಿನಾದ

15th Dec 2015
Add to
Shares
5
Comments
Share This
Add to
Shares
5
Comments
Share

ಇದು ಸ್ಮಾರ್ಟ್​ಫೋನ್ ಯುಗ. ಯಾರ ಕೈಯಲ್ಲಿ ನೋಡಿದ್ರು ಸ್ಮಾರ್ಟ್ ಫೋನ್. ಸ್ಮಾರ್ಟ್ ಫೋನ್ ಕೈಯಲ್ಲಿ ಇದ್ರೆ ಜಗತ್ತೇ ಕೈಯಲ್ಲಿ ಇದ್ದ ಹಾಗೆ. ಈಗ ಸ್ಮಾರ್ಟ್ ಇಲ್ಲದಿದ್ರೆ ಆತನನ್ನ ಗುಗ್ಗು ಅಂತ ಹೇಳೋ ಸಮಯ. ಹೀಗಾಗಿ ಸ್ಮಾರ್ಟ್ ಇವತ್ತು ಜಗತ್ತನ್ನೇ ಆಳ್ತಿದೆ. ಆಂಡ್ರಾಯ್ಡ್ ವರ್ಷನ್ ಬಂದ ಮೇಲಂತೂ ಸ್ಮಾರ್ಟ್ ಫೋನ್ ಜಗತ್ತನ್ನೇ ಆಳುತ್ತಿದೆ. ಜನರಿಗೆ ತಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೇನೆ ಜೀವನ ಅನ್ನುವಂತಾಗಿದೆ. ಹೀಗಾಗಿ ಇವತ್ತು ಜಗತ್ತಿನ ಬೇರೆ ಬೇರೆ ದೇಶಗಳು ಸ್ಮಾರ್ಟ್ ಫೋನ್ ಆವಿಷ್ಕಾರದಲ್ಲಿ ನಿರತವಾಗಿವೆ. ನೂರಾರು ಕಂಪನಿಗಳು ಇದೇ ಕಾಯಕನ್ನಾಗಿಸಿಕೊಂಡಿವೆ. ಜನರ ಹೃದಯವನ್ನ ಗೆದ್ದು ತಮ್ಮ ಕಂಪನಿಯ ಸುಂದರ ಮೊಬೈಲ್ ಒಂದನ್ನ ಅವರ ಕೈಯಲ್ಲಿ ಇರಿಸೋ ಕನಸು ಕಾಣ್ತಿವೆ. ಅದಕ್ಕೆ ಸ್ಪೆಷಲ್ ಫೀಚರ್ಸ್ ಗಳನ್ನ ಇನೋವೇಶನ್ ಮಾಡಿ ಮಾರುಕಟ್ಟೆಗೆ ಬಿಡ್ತಿವೆ.

image


ಈಗ ಮಾರ್ಕೆಟ್ ನಲ್ಲಿ ಸ್ಮಾರ್ಟ್ ಫೋನ್ ಗಳದ್ದೇ ಹವಾ. ಒಮ್ಮೆ ಔಟ್ ಲೆಟ್ ಗೆ ಹೋದ್ರೆ ಯಾವ ಫೋನ್ ಅನ್ನ ತೆಗೆದುಕೊಳ್ಳೋದು ಅನ್ನೋದೆ ಕನ್ ಫ್ಯೂಷನ್. ಒಂದಕ್ಕಿಂತ ಒಂದು ಫೀಚರ್ಸ್ ನಲ್ಲಿ ಮುಂದಿವೆ. ಕೆಲವರು ಜಾಸ್ತಿ ಬಾಳಿಕೆ ಬರೋ ಫೋನ್ ಅನ್ನ ನೋಡಿದ್ರೆ, ಇನ್ನು ಕೆಲವರು ಹೆಚ್ಚು ಅಪ್ಲಿಕೇಷನ್ ಇರೋ ಫೋನ್ ಅತ್ತ ಮುಖ ಮಾಡ್ತಾರೆ. ಇನ್ನು ಲಾಂಗ್ ಟೈಂಗೊಮ್ಮೆ ಇನ್ವೆಸ್ಟ್ ಮಾಡೋ ಜನ ಫೀಚರ್ಸ್ ಜೊತೆ ಬಾಳಿಕೆಯೂ ಬರಬೇಕಲ್ವಾ ಅಂತ ಅಂಗಡಿಯ ಹುಡುಗರನ್ನ ಪ್ರಶ್ನಿಸ್ತಾರೆ. ಇಲ್ಲಿವರೆಗೆ ಸ್ಮಾರ್ಟ್ ಫೋನ್ ಅಂದ್ರೆ ಗರ್ಭದಲ್ಲಿರೋ ಶಿಶುವನ್ನ ನೋಡಿಕೊಂಡಂತೆ ನೋಡಿಕೊಳ್ಳಬೇಕಿತ್ತು. ಸ್ವಲ್ಪ ಜಾಗ್ರತೆ ತಪ್ಪಿದ್ರೂ ಸಾವಿರಾರು ರೂಪಾಯಿ ಫೆನಾಲ್ಟಿ ಕಟ್ಟಬೇಕಿತ್ತು. ಅದ್ರಲ್ಲೂ ಜನರ ದೊಡ್ಡ ಸಮಸ್ಯೆಯಾಗ್ತಿದ್ದಿದ್ದು ಆಗಾಗ ಒಡೆದು ಹೋಗೋ ಸ್ಕ್ರೀನ್ ನಿಂದಾಗಿ.

ಆದ್ರೀಗ ಮೊಬೈಲ್ ಕೆಳಗೆ ಬಿದ್ರೆ ಸ್ಕ್ರೀನ್ ಒಡೆದು ಹೋಗುತ್ತೆ ಅನ್ನೋ ಫೀಲ್ ಮಾಡಿಕೊಳ್ಳೋ ಹಾಗಿಲ್ಲ. ಮೊಬೈಲ್ ಅನ್ನ ಜೋಪಾನವಾಗಿ ನೋಡಿಕೊಳ್ಳಬೇಕಾಗಿಯೂ ಇಲ್ಲ. ರಫ್ ಆಗಿ ಯೂಸ್ ಮಾಡಿಯೂ ನಿಮ್ಮ ಮೊಬೈಲ್ ಅನ್ನ ಸೇಫಾಗಿ ಇಟ್ಟುಕೊಳ್ಳಬಹುದು. ಯಾಕಂದ್ರೆ ಮೊಟ್ರೋಲಾ ಕಂಪನಿ ಒಡೆದು ಹೋಗದೇ ಇರೋ ಸ್ಕ್ರೀನ್ ಇರೋ ಮೊಬೈಲ್ ಒಂದನ್ನ ಅಭಿವೃದ್ಧಿಪಡಿಸಿದೆ. ಮೊಟ್ರೋಲಾ ಕಂಪನಿಯ ಇಂಜಿನಿಯರ್ ಗಳು ಜನರ ಬಹುದೊಡ್ಡ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ. ಮೊಟ್ರೋಲಾ ಡ್ರಾಯ್ಡ್ ಟಬ್ರೋ ಟು ಸರಣಿಯ ಮೊಬೈಲ್ ಅನ್ ಬ್ರೇಕಬಲ್ ಸ್ಕ್ರೀನ್ ಅನ್ನೋ ಹಿರಿಮೆಯನ್ನ ತನ್ನದಾಗಿಸಿಕೊಂಡಿದೆ. ಬರೋಬ್ಬರಿ 5 ಅಡಿ ಎತ್ತರದಿಂದ ಫೋನ್ ಬಿದ್ರೂ ನೀವು ಚಿಂತಿಸೋ ಅಗತ್ಯವಿರೋದಿಲ್ಲ. ಯಾಕಂದ್ರೆ ಫೋನ್ ಸ್ಕ್ರೀನ್ ಗೆ ಯಾವುದೇ ತೊಂದರೆಯಾಗದೆ ಮತ್ತೆ ನೀವು ಯೂಸ್ ಮಾಡಬಹುದು.

image


ಮೊಟ್ರೋಲಾ ಕಂಪನಿಯ ಈ ಆಂಡ್ರಾಯ್ಡ್ ಟರ್ಬೊ ಟು ಸರಣಿಯ ಫೋನ್ ನ ವಿಶೇಷ ಅಂದ್ರೆ ಇದರ ಸ್ಕ್ರೀನ್ ನಲ್ಲಿ 5ರೀತಿಯ ಲೇಯರ್ ಗಳಿವೆ. ಹಿಂಬದಿಯಲ್ಲಿ ಅಲ್ಯೂಮಿನಿಯಂ ಚಾಸೀಸ್ ಇದ್ದು ಇದು ಸ್ಕ್ರೀನ್ ಸಪೋರ್ಟ್ ಆಗಿ ಕೆಲಸ ಮಾಡಲಿದೆ. ನೆಕ್ಸ್ಟ್ ಲೇಯರ್ ನಲ್ಲಿ ಫ್ಲೆಕ್ಸಿಬಲ್ ಡಿಸ್ ಪ್ಲೇಯಿದ್ದು ಪ್ಲಾಸ್ಟಿಕ್ ಲ್ಯಾಮಿನೇಷನ್ ನ ಅನುಭವ ಕೊಡುತ್ತೆ. ಅದರ ಮುಂದೆ ಫ್ಲೇಕ್ಸಿಬಲ್ ಟಚ್ ಲೇಯರ್ ಇದ್ದು, ಅದರ ನಂತ್ರ ಫ್ಲೆಕ್ಸಿಬಲ್ ಲೆನ್ಸ್ ಲೇಯರ್ ಇದೆ. ಇವೆಲ್ಲಾ ಸ್ಕ್ರೀನ್ ಒಡೆದು ಹೋಗದ ಹಾಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ. ಇಷ್ಟೆಲ್ಲಾ ಲೇಯರ್ ಗಳಿದ್ರೂ ಫೋನ್ ಹೊರನೋಟಕ್ಕೆ ಮಾತ್ರ ಇತರೆ ಸ್ಮಾರ್ಟ್ ಫೋನ್​​ಗಳ ಹಾಗೆ ಆಕರ್ಷಕವಾಗಿ ಕಾಣುತ್ತೆ. ಒಟ್ಟಿನಲ್ಲಿ ಮೊಬೈಲ್​​ ಕ್ಷೇತ್ರದ ಕ್ರಾಂತಿ ಎಲ್ಲರನ್ನೂ ಮತ್ತು ಎಲ್ಲವನ್ನೂ ಬದಲಿಸುತ್ತಿದೆ.

Add to
Shares
5
Comments
Share This
Add to
Shares
5
Comments
Share
Report an issue
Authors

Related Tags