ಆವೃತ್ತಿಗಳು
Kannada

ಕಾರು ತಯಾರಿಸುವ ಕನಸು ನನಸು ಮಾಡಿಕೊಂಡ ಬೆಂಗಳೂರಿನ ಯುವಕ..!

ಟೀಮ್​ ವೈ.ಎಸ್​. ಕನ್ನಡ

YourStory Kannada
23rd Feb 2017
Add to
Shares
12
Comments
Share This
Add to
Shares
12
Comments
Share

“ನಿಮ್ಮ ಗುರಿಗಳಿಗೆ ನಿಮ್ಮ ಯೋಚನೆಗಳು ದಾರಿ ತೋರಿಸುತ್ತವೆ.” ಹೀಗೆ ಹೇಳಿಕೊಂಡೇ ಮಾತು ಆರಂಭಿಸಿದವರು ಮೋಟಾರ್ ಮೈಂಡ್ ಆಟೊಮೇಟಿವ್ ಡಿಸೈನ್ ಕಂಪನಿಯ ಸಿಇಒ ಮತ್ತು ಚೀಫ್ ಡಿಸೈನರ್ ಶಾಹಿದ್ ಹಕ್ .

33 ವರ್ಷದ ಶಾಹಿದ್ ಚಿಕ್ಕವಯಸ್ಸಿನಲ್ಲೇ ಬದುಕಿನ ಗುರಿಯನ್ನು ಸೆಟ್ ಮಾಡಿಕೊಂಡಿದ್ದರು. ತನ್ನ 13ನೇ ವಯಸ್ಸಿನಲ್ಲಿ ದ್ವಿಚಕ್ರ ವಾಹನದ ಎಂಜಿನ್ ಬಳಸಿಕೊಂಡು ಚಿಕ್ಕ ಕಾರು ತಯಾರಿಸುವ ಬಗ್ಗೆ ಕನಸು ಕಂಡಿದ್ದರು. 15ನೇ ವರ್ಷದಲ್ಲಿ ಚಿಕ್ಕ ಕಾರು ತಯಾರಿಸುವ ಪ್ರಯತ್ನ ಪಟ್ರೂ ಅದ್ರಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಆದ್ರೆ ಶಾಹಿದ್ ತನ್ನ ಛಲ ಬಿಡಲಿಲ್ಲ. ಮುಂದೊಂದು ಕಾರು ಡಿಸೈನ್ ಮಾಡಿಯೇ ತಿರುತ್ತೇನೆ ಅನ್ನುವ ಹಠಕ್ಕೆ ಬಿದ್ರು. ಕಷ್ಟ ಎದುರಾದ್ರೂ ಹಠ ಬಿಡಲಿಲ್ಲ. ಅದರ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದ್ರು. ಕನಸು ದೊಡ್ಡದಾಗುತ್ತಿದ್ದ ಹಾಗೇ ಅದನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡ ತೊಡಗಿದ್ರು.

image


ಚಿಕ್ಕ ವಯಸ್ಸಿನಲ್ಲೇ ಶಾಹಿದ್ ಪೇಯಿಂಟಿಂಗ್ ಮತ್ತು ಸ್ಕೆಚ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಇದು ಅವರಿಗೆ ಆಟೋಮೆಟಿವ್ ಡಿಸೈನ್ ಕಡೆಗೆ ಗಮನ ಕೊಡಲು ಹೆಚ್ಚು ಸಹಾಕರ ನೀಡಿತು. ಶಾಹಿದ್ ಕೇರಳದಲ್ಲಿ ಹುಟ್ಟಿದ್ರೂ, ಬೆಳೆದಿದ್ದು ಬೆಂಗಳೂರಿನಲ್ಲಿ. ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್​​ನಲ್ಲಿ ಮೆಕಾನಿಕ್ ಎಂಜಿನಿಯರಿಂಗ್​​ ವಿಭಾಗದಲ್ಲಿ ಬಿ.ಇ. ಹಾಗೂ ಎಮ್​.ಎಸ್ಸಿ. ಇನ್ ಆಟೋಮೇಟಿವ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಆರ್ಟ್ ಅಂಡ್ ಡಿಸೈನ್ನಲ್ಲಿ ಉನ್ನತ ವ್ಯಾಸಂಗ ಮಾಡಿರುವ ಶಾಹಿದ್ ಯುನೈಟೆಡ್ ಕಿಂಗ್​ಡಂನ ಕೊವೆಂಟ್ರಿ ಸ್ಕೂಲ್ ಆಫ್ ಆರ್ಟ್ ಅಂಡ್ ಡಿಸೈನಿಂಗ್​ನಿಂದ ಪದವಿ ಕೂಡ ಪಡೆದುಕೊಂಡಿದ್ದಾರೆ. ಗೇಡನ್ ಮತ್ತು ವಾರ್ವಿಕ್​ಶೈರ್​​ನಲ್ಲಿ ಕೆಲವು ವರ್ಷಗಳ ಕಾಲ ಆಟೊಮೆಟಿವ್ ಬಾಡಿ ಶಾಪ್​​ನಲ್ಲಿ ಕೆಲಸ ಮಾಡಿರುವ ಅನುಭವ ಕೂಡ ಪಡೆದುಕೊಂಡಿದ್ದಾರೆ.

“ ವರ್ಕ್ ಶಾಪ್​​ಗಳಲ್ಲಿ ಅಲಂಕಾರ ಮಾಡಿದ್ದು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಅಷ್ಟೇ ಅಲ್ಲ ನನ್ನದೇ ರೀತಿಯಲ್ಲಿ ಹೊಸ ಕಾರು ತಯಾರಿಸಲು ಸ್ಫೂರ್ತಿ ನೀಡಿತು. ಚಿಕ್ಕ ವಯಸ್ಸಿನಲ್ಲಿ ಬಣ್ಣ ಹಚ್ಚಿ ಬಿಟ್ಟಿದ್ದ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರೇರಣೆ ಆಯಿತು. ”
- ಶಾಹಿದ್, ಸಿಇಒ ಮತ್ತು ಚೀಫ್ ಡಿಸೈನರ್, ಮೋಟಾರ್ ಮೈಂಡ್ ಆಟೊಮೇಟಿವ್ ಡಿಸೈನ್

ಮೊದಲ ಹೆಜ್ಜೆ

ಶಾಹಿದ್ 2010ರಲ್ಲಿ ಮೋಟಾರ್ ಮೈಂಡ್ ಆಟೋಮೆಟಿವ್ ಡಿಸೈನ್ ಅನ್ನು ಆರಂಭಿಸಿದ್ರು. ಬಾಡಿ ಪೈಂಟ್, ಕಾರಿನ ಅಲಂಕಾರ, ಕಸ್ಟಮೈಸೇಷನ್ , 3ಡಿ ಮಾಡೆಲಿಂಗ್ ಸೇರಿದಂತೆ ಹಲವು ಆಟೊಮೇಟಿವ್ ಸ್ಟೈಲಿಂಗ್ ಕಿಟ್ ಸೇವೆಗಳನ್ನು ಆರಂಭಿಸಿದ್ರು.

ಕೆಲವು ವರ್ಷಗಳ ಕಾಲ ಕೆಲಸವನ್ನು ಮಾಡಿದ್ದರು. ಆದ್ರೆ ಶಾಹಿದ್​​ಗೆ ತನ್ನದೇ ಆದ ಕಾರು ಡಿಸೈನ್ ಮಾಡಬೇಕು ಅನ್ನುವ ಕಲ್ಪನೆ ಹೆಚ್ಚಾಗುತ್ತಿತ್ತು. ಮೋಟಾರ್ ಮೈಂಡ್ ವರ್ಕ್ ಶಾಪ್​​ನಲ್ಲಿ "ಹೈಪರಿಯೊನ್ 1" ಅನ್ನುವ ಸೂಪರ್ ಕಾರ್ ಅನ್ನು 6 ಕೆಲಸಗಾರರ ಸಹಾಯದಿಂದ ನಿರ್ಮಿಸಿದ್ರು. 2016ರ ದೆಹಲಿ ಆಟೋ ಎಕ್ಸ್​​ಪೋದಲ್ಲಿ ಶಾಹಿದ್ ತಯಾರು ಮಾಡಿದ್ದ "ಹೈಪರಿಯೊನ್ 1" ಆಕರ್ಷಣೆಯ ಕೇಂದ್ರಬಿಂದುವಾಗಿತ್ತು ಅನ್ನುವುದನ್ನು ಮರೆಯುವ ಹಾಗಿಲ್ಲ.

image


ಶಾಹಿದ್​ಗೆ ಫಾರ್ಮುಲಾ 1 ಕಾರ್​​ಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಫಾರ್ಮುಲಾ 1 ಕಾರು ಮತ್ತು ಇತರೆ ಫೇಮಸ್ ರೇಸ್ ಕಾರ್ಗಳಿಂದ ಸ್ಫೂರ್ತಿ ಪಡೆದು ಹೈಪರಿಯೊನ್ 1 ಕಾರನ್ನು ನಿರ್ಮಾಣ ಮಾಡಿದ್ರು.

“ ಹೈಪರಿಯೊನ್ 1 ಕಾರು 3000 ಸ್ಕ್ವೇರ್ ಫೀಟ್ ಚದರ ಅಡಿ ಅಗಲದ ಮೊಟಾರ್ ಮೈಂಡ್ ಆಟೊಮೇಟಿವ್ ಡಿಸೈನ್ ವರ್ಕ್​ಶಾಪ್​​ನಲ್ಲಿ ತಯಾರಾಗಿದೆ. ಈ ಕಾರು ತಯಾರಿಸಲು ಯಾವುದೇ ವಸ್ತುಗಳನ್ನು ಆಮದು ಮಾಡಿಕೊಂಡಿಲ್ಲ. ಇದನ್ನು ಅಭಿವೃದ್ಧಿ ಪಡಿಸಲು ವಿದೇಶಿ ಕಂಪನಿಗಳ ನೆರವು ಪಡೆದುಕೊಂಡಿಲ್ಲ. ನನಗೆ ಕೆಲವು ಎಂಜಿನಿಯರಿಂಗ್ ವಿದ್ಯಾರ್ಥಿಗಳ ನೆರವು ಸಿಕ್ಕಿತ್ತು. ಕಂಪ್ಯೂಟರ್ ಏಯ್ಡೆಡ್ ಡಿಸೈನ್ (CAD) ಮೂಲಕ ಇದನ್ನು ತಯಾರಿಸಲಾಗಿದೆ. ನನ್ನ ಅಗತ್ಯಕ್ಕೆ ತಕ್ಕಂತೆ ಮಾಡೆಲ್ ಮತ್ತು ಚಾಸಿಸ್​​ಗಳನ್ನು ಡಿಸೈನ್ ಮಾಡಲಾಗಿದೆ. ”
- ಶಾಹಿದ್, ಸಿಇಒ ಮತ್ತು ಚೀಫ್ ಡಿಸೈನರ್, ಮೋಟಾರ್ ಮೈಂಡ್ ಆಟೊಮೇಟಿವ್ ಡಿಸೈನ್

ಶಾಹಿದ್ ಹೈಪರಿಯೊ 1 ಕಾರನ್ನು ತಯಾರಿಸುವ ಮೊದಲು CAD ಮೂಲಕ ಈ ಕಾರಿನ ವಿಶ್ಯೂವಲೈಸೇಷನ್ ಮಾಡಿದ್ದರು. ಕಾರಿನ ಮಾದರಿಯನ್ನು ತಯಾರು ಮಾಡಿಕೊಂಡ ಮೇಲೆ 3ಡಿ CAD ಮೂಲಕ ಬ್ಲೂ ಪ್ರಿಂಟ್ ಮತ್ತು ಕೆಲಸಗಳನ್ನು ಆರಂಭಿಸಲಾಯಿತು. ಇದು ಕಾರನ್ನು ಅಂದುಕೊಂಡಂತೆ ತಯಾರಿಸಲು ಸುಲಭವಾಗುವಂತೆ ಮಾಡಿತ್ತು. 3ಡಿ ಮಾಡೆಲ್​​ಗಳ ಮೂಲಕ ತನ್ನ ಕಾರಿಗೆ ಫೈಬರ್ ರಿ ಇನ್ಫೋರ್ಸ್ಡ್ ಫ್ಯಾಬ್ರಿಕ್ (FRP) ಕೆಲಸಗಳನ್ನು ಮಾಡಲಾಯಿತು.

ಇದನ್ನು ಓದಿ: ಗುಜರಾತ್​​ನಲ್ಲಿದೆ ದೇಶದ ಮೊತ್ತಮೊದಲ ಕ್ಯಾಶ್​​ಲೆಸ್ ಟೌನ್​ಶಿಪ್

ಶಾಹಿದ್ ತಯಾರಿಸಿದ ಕಾರಿಗೆ ಸಿಸರ್ ಡೋರ್​​ಗಳು ಮತ್ತು ತೆರವುಗೊಳಿಸಬಲ್ಲ ಹಾರ್ಡ್ ಟಾಪ್ ಇದೆ. ಫೈಟರ್ ಜೆಟ್​​ನಲ್ಲಿರುವಂತೆ ಕಾಕ್​​ಪಿಟ್ ಇದೆ. ಎಂಜಿನ್​ಗೆ ಗಾಳಿ ಹೋಗಲು ಮತ್ತು ಎಲೆಕ್ಟ್ರಿಕಲ್ ಪವರ್​ಗಳು ಕಾರಿನಲ್ಲಿವೆ.

ತನ್ನದೇ ಹಣದಲ್ಲಿ ತಯಾರಾದ ಕಾರು

ತನ್ನ ಕನಸಿನ ಹೈಪರಿಯೊನ್ ಕಾರು ತಯಾರಿ ಮಾಡುವುದಕ್ಕೆ ಶಾಹಿದ್​ಗೆ ಸುಮಾರು 15 ಲಕ್ಷ ರೂಪಾಯಿ ಖರ್ಚು ಬಿದ್ದಿದೆ. ಅನುಭವಿ ಕೆಲಸಗಾರರಿಂದ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ. ಹೀಗಾಗಿ ಕಾರಿನ ಕ್ವಾಲಿಟಿ ತುಂಬಾ ಚೆನ್ನಾಗಿ ಕಾಣುತ್ತದೆ. ದೇಶೀಯ ಬಿಡಿಭಾಗಗಳನ್ನು ಕಾರಿನಲ್ಲಿ ಉಪಯೋಗ ಮಾಡಿರುವುದರಿಂದ ಖರ್ಚು ಕೊಂಚ ಕಡಿಮೆ ಆಗಿದೆ. ಚಾಸಿಸ್ ಅನ್ನು ಹೊರಗಿನ ಡಿಸೈನ್​ಗೆ ಬೇಕಾದಂತೆ ತಯಾರು ಮಾಡಲಾಗಿದೆ. ಕಾರಿನ ಬಾಡಿಯನ್ನು FRP ಕಾಂಪೊಸಿಷನ್​ನಿಂದ ಮಾಡಲಾಗಿದೆ. ಬೆಂಗಳೂರಿನ ಮಾರ್ಕೆಟ್​​ನಲ್ಲಿ ಸಿಗುವ ವಸ್ತುಗಳಿಂದಲೇ ಕಾರನ್ನು ಬಹುತೇಕ ತಯಾರು ಮಾಡಲಾಗಿದೆ. ಎಂಜಿಯನ್ ಮತ್ತು ಟೈರ್​​ಗಳನ್ನು ಮಾತ್ರ ಮಾರಾಟಗಾರರಿಂದ ಖರೀದಿ ಮಾಡಲಾಗಿದೆ.

image


ಸುಸ್ಥಿತಿಯಲ್ಲಿರುವ ಹೈಪರಿಯೋ 1 ಕಾರನ್ನು 2016ರ ಡೆಲ್ಲಿ ಆಟೋ ಎಕ್ಸ್​​ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿತ್ತು. ಹೈಪರಿಯೋ 1 ಕಾರಿನ ಬೆಲೆ 40 ರಿಂದ 50 ಲಕ್ಷ ರೂಪಾಯಿಗಳು ಇರಲಿದೆ. ಮೊಟಾರ್ ಮೈಂಡ್ ಮುಂದಿನ ದಿನಗಳಲ್ಲಿ ಈ ಪ್ರಾಜೆಕ್ಟ್ ಅನ್ನು ಮತ್ತಷ್ಟು ವಿಭಿನ್ನತೆಗೊಳಿಸುವ ಪ್ರಯತ್ನ ಮಾಡಲಿದೆ. ಮುಂದಿನ 6 ಅಥವಾ 1 ವರ್ಷದಲ್ಲಿ ಈ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಹೈಪಾರಿಯೋ 1 ಕಾರು ಲೋಗೋ ಮತ್ತು ರೋಡ್ ಟೆಸ್ಟ್ ನ್ನು ಕೂಡ ಶೀಘ್ರದಲ್ಲೇ ನಡೆಸಲಿದೆ. ವಿವಿಧ ಕಂಪನಿಗಳಿಂದ ಬಂಡವಾಳದ ನಿರೀಕ್ಷೆ ಕೂಡ ಮಾಡುತ್ತಿದೆ. ಒಟ್ಟಿನಲ್ಲಿ ಬೆಂಗಳೂರಿನ ಈ ಸ್ಟಾರ್ಟ್ ಅಪ್ ಕಂಪನಿ ಭವಿಷ್ಯದಲ್ಲಿ ದೊಡ್ಡ ಸುದ್ದಿ ಮಾಡುವುದು ಸುಳ್ಳಲ್ಲ. 

ಇದನ್ನು ಓದಿ:

1. ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

2. ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ 

3. ದುಬಾರಿ ಗಿಫ್ಟ್​​ಗಳನ್ನು ತಯಾರಿಸಿ ಲಾಭದಾಯಕ ಉದ್ಯಮ ಸ್ಥಾಪಿಸಿದ ಮಹಿಳಾಮಣಿಗಳು..!

Add to
Shares
12
Comments
Share This
Add to
Shares
12
Comments
Share
Report an issue
Authors

Related Tags