ಆವೃತ್ತಿಗಳು
Kannada

ನಿರುದ್ಯೋಗದ ಚಿಂತೆ ಬಿಡಿ- ಆಸಾನ್​ಜಾಬ್ಸ್​​.ಕಾಂನಲ್ಲಿ ಕೆಲಸಕ್ಕೆ ಟ್ರೈ ಮಾಡಿ..!

ಟೀಮ್​ ವೈ.ಎಸ್​. ಕನ್ನಡ

YourStory Kannada
17th Oct 2016
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಜಗತ್ತಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ನಿರುದ್ಯೋಗದ ಸಮಸ್ಯೆಯೂ ಹೆಚ್ಚಾಗುತ್ತಾ ಹೋಗುತ್ತಿದೆ. ನಿರೋದ್ಯಗದ ಸಮಸ್ಯೆ ಇಂದಿನದಲ್ಲ, ಸಾಕಷ್ಟು ದಶಕಗಳಿಂದ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ. ಮೊದಲೆಲ್ಲಾ ಓದು ಬರಹ ಬರದೇ ಉದ್ಯೋಗ ಸಿಗುತ್ತಿರಲಿಲ್ಲ. ಆದರೆ ಈಗ ಡಬಲ್ ಡಿಗ್ರಿ ಪಡೆದಿದದ್ದರೂ ಕೆಲಸ ಸಿಗುವುದು ಕಷ್ಟದ ಸಂಗತಿಯಾಗಿದೆ. ಅದಕ್ಕಾಗಿಯೇ ಮೂವರು ತರಣರು 2014ರಲ್ಲಿ ಆರಂಭಿಸಿದ ‘ಆಸಾನ್ ಜಾಬ್ಸ್.ಕಾಂ‘ ಇಂದು ಸಾಕಷ್ಟು ಮಂದಿಗೆ ಆನ್​ಲೈನ್​ನಲ್ಲಿ ಕೆಲಸ ಕೊಡಿಸುವಲ್ಲಿ ಯಶಸ್ವಿಯಾಗಿದೆ.

image


ಹೊಸ ಉದ್ಯಮದ ಆಲೋಚನೆಯಲ್ಲಿದ್ದ ದಿನೇಶ್​ ಗೋಯೆಲ್ ಡೆಶ್​ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಗೆಳೆಯರಾದ ಕುನಾಲ್ ಜಾದವ್ ಮತ್ತು ಗೌರವ್ ತೋಷಿಣಿವಾಲ್ ಎಂಬ ಗೆಳೆಯರು ತಮ್ಮದೇ ಕ್ಷೇತ್ರದಲ್ಲಿ ಉತ್ತಮ ಸಂಬಳ ಪಡೆಯುವ ಕೆಲಸ ಮಾಡುತ್ತಿದ್ದರು. ಈ ಕೆಲಸ ಬಿಟ್ಟು 2014ರ ನವೆಂಬರ್​ನಲ್ಲಿ ಹೊಸ ಉದ್ಯಮ ಆರಂಭ ಮಾಡಬೇಕು ಎಂಬ ಸದಾಶಯದೊಂದಿಗೆ ಮುಂಬೈನಲ್ಲಿ ‘ಆಸಾನ್ ಜಾಬ್ಸ್ ಡಾಟ್ ಕಾಮ್’ ಎಂಬ ಆನ್​ಲೈನ್​ನಲ್ಲಿ ಕೆಲಸ ಕೊಡುವ ಕಂಪನಿ ಆರಂಭಿಸಿದರು.

ಇದನ್ನು ಓದಿ: ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

ತನ್ನ ತರಹದ್ದೇ ಮನಸ್ಸುಳ್ಳ ಸಮಾನ ಮನಸ್ಕರನ್ನು ಜೊತೆಯಲ್ಲಿಟ್ಟುಕೊಂಡು ಅದ್ಭುತ ಯೋಚನೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡತೊಡಗಿದ ಈ ಮೂವರು ಗೆಳೆಯರಿಗೆ ಸಕ್ಸಸ್ ಬೇಗನೆ ಒಲಿಯಿತು. ಅಸಾನ್ ಜಾಬ್ಸ್ ಡಾಟ್ ಕಾಮ್ ಆರಂಭವಾಗಿ ಒಂದೂವರೆ ವರ್ಷದೊಳಗೆ ರಾಜಧಾನಿ ನವದೆಹಲಿಯಲ್ಲಿ ಒಂದು ಬ್ರಾಂಚ್ ತೆರೆದರು. ಇದಾದ ನಂತರ ಪುಣೆಯಲ್ಲಿ ಒಂದು ಶಾಖೆ ತೆರೆದ ಅವರು ಮುಂದುವರೆದ ಭಾಗವಾಗಿ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಶಾಖೆಯನ್ನು ಇತ್ತೀಚಿಗೆ ಆರಂಭಿಸಿದ್ದಾರೆ.

image


ದೇಶದ ನಾಲ್ಕು ಮೆಟ್ರೋಪಾಲಿಟನ್ ನಗರದಲ್ಲಿ ಶಾಖೆ ಹೊಂದಿರುವ ‘ಆಸಾನ್ ಜಾಬ್ಸ್ ಡಾಟ್ ಕಾಮ್’ ಸಂಸ್ಥೆ ಸದ್ಯ ನೂರೈವತ್ತು ಮಂದಿ ಉದ್ಯೋಗಿಗಳನ್ನು ಹೊಂದಿದೆ. ಪದವಿ ಮುಗಿಸಿದ ಯುವಕ ಯುವತಿಯರಿಗೆ ಅವರ ವಿದ್ಯಾರ್ಹತೆಯನ್ನು ಆಧರಿಸಿ ಉದ್ಯೋಗ ಕೊಡಿಸುವಲ್ಲಿ ಆಸಾನ್ ಜಾಬ್ಸ್ ಯಶಸ್ವಿಯಾಗಿದೆ. ಕಾರ್ಪೋರೇಟ್ ವಲಯಗಳಾದ ಬ್ಯಾಂಕಿಂಗ್, ಐಟಿ, ಬಿಟಿ, ಲಾಜಿಸ್ಟಿಕ್, ಪಬ್ಲಿಕ್ ರಿಲೇಷನ್ ಹೀಗೆ ಹತ್ತಾರು ವಿಭಾಗಗಳಲ್ಲಿ ಉದ್ಯೋಗ ಮಾರ್ಗದರ್ಶನ ನೀಡಿ ಸಂದರ್ಶನ ಮಾಡಿ ಉದ್ಯೋಗ ಕೊಡಿಸುತ್ತಿದ್ದಾರೆ. ಈಗಾಗಲೇ ಆನ್​ಲೈನ್​​ನಲ್ಲಿ ಉದ್ಯೋಗ ಕೊಡಿಸುವ ಸಾಕಷ್ಟು ಕಂಪನಿಗಳು ಇದ್ದರೂ ಅವುಗಳಿಂದ ಅಸಾನ್ ಜಾಬ್ಸ್ ಡಾಟ್ ಕಾಂಗೆ ಯಾವುದೇ ತೊಂದರೆಯಾಗಿಲ್ಲ. ಏಕೆಂದರೆ ಇವರು ನೀಡುವ ಮಾರ್ಗದರ್ಶನ, ಸಂದರ್ಶನ ಮಾಡುವ ರೀತಿಯೇ ಬೇರೆ ಅವರದ್ದೇ ಬೇರೆ.ಬೆಂಗಳೂರಿನಲ್ಲಿ ಶಾಖೆ ಆರಂಭವಾಗಿ 3 ತಿಂಗಳಿನಲ್ಲೇ ಸುಮಾರು 2 ಸಾವಿರ ಮಂದಿ ಸಂದರ್ಶನಕ್ಕೆ ಹಾಜರಾಗಿದ್ದಾರೆ.

image


ಉದ್ಯಮವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ದೇಶದ ಬೇರೆ ಬೇರೆ ನಗರಗಳಿಗೆ ವಿಸ್ತರಿಸುವ ಐಡಿಯಾ ಹೊಂದಿರುವ ಇವರು ಉತ್ತಮ ಮತ್ತು ವಿದ್ಯೆಗೆ ತಕ್ಕ ಕೆಲಸ ಕೊಡಿಸಲು ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. ದೇಶಾದ್ಯಂತ ಇದುವರೆಗೂ ಅಸಾನ್ ಜಾಬ್ಸ್ ವತಿಯಿಂದ ಆಯೋಜನೆಗೊಂಡ ಸಂದರ್ಶನಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಅದರಲ್ಲಿ ಸಾಕಷ್ಟು ಮಂದಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ‘ಆಸಾನ್ ಜಾಬ್ಸ್.ಕಾಂ’ ನ ಆ್ಯಪ್​ನ್ನು ಲಕ್ಷಕ್ಕೂ ಅಧಿಕ ಮಂದಿ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಸಂಸ್ಥೆಯಿಂದ ಲಕ್ಷಾಂತರ ಪದವೀಧರರು ಉದ್ಯೋಗ ಪಡೆಯಲು ಅನುಕೂಲವಾಗಿದೆ. ಆಸಕ್ತರು ಉದ್ಯೋಗಕಾಂಕ್ಷಿಗಳು ಈ ಆ್ಯಪ್ ಮತ್ತು ವೆಬ್​ಸೈಟ್​​ಗೆ ಭೇಟಿ ಕೊಟ್ಟು ಅಗತ್ಯ ಕೆಲಸ ಪಡೆಯಬಹುದು.

ಇದನ್ನು ಓದಿ:

1. ಗುಡ್​ಮಾರ್ನಿಂಗ್​​...! ಎದ್ದು ಬಿಡಿ... ಯಶಸ್ಸಿನ ಕಥೆಯನ್ನು ನೀವೇ ಬರೆಯಿರಿ..!

2. ಕನ್ನಡದಲ್ಲೊಂದು ಅಂತರಾಷ್ಟ್ರೀಯ ಮಟ್ಟದ Ramp ಆಲ್ಬಂ

3. ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags