ಆವೃತ್ತಿಗಳು
Kannada

ವಾಯುಮಾಲಿನ್ಯದಿಂದ ಹೆಚ್ಚಿದೆ ತಲೆಬಿಸಿ- "ಟವರ್ ಆಫ್ ಹೋಪ್"ನಿಂದ ಕಡಿಮೆಯಾಗುತ್ತಾ ಕಸಿವಿಸಿ

ಟೀಮ್​ ವೈ.ಎಸ್​. ಕನ್ನಡ

8th Nov 2016
Add to
Shares
10
Comments
Share This
Add to
Shares
10
Comments
Share

ಸದ್ಯ ಭಾರತ ಮಹಾನಗರಗಳ ಜನ ಅಶುದ್ಧ ಗಾಳಿಯಿಂದ ಪರದಾಡುವಂತಾಗಿದೆ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿಯೇ ರಜೆಯವನ್ನು ನೀಡಲಾಗಿದೆ.ಈ ಹಿನ್ನಲ್ಲೆಯಲ್ಲಿ ಈ ಟವರ್ ಆಫ್ ಹೋಪ್ ಜನರ ಆಶಾಕಿರಣವಾಗಿದೆ. ಅತಿಯಾದ ವಾಯುಮಾಲಿನ್ಯ ತಡೆಯುವಂತಹ ಸಾಧನ ಇನ್ನುಮುಂದೆ ಎಲ್ಲೆಡೆ ಕಾಣಸಿಗಲಿದೆ. ಡಚ್ ಅನ್ವೇಷಕರು ವಿಶ್ವದ ಮೊದಲ ದೈತ್ಯ ಹೊರಾಂಗಣ ಗಾಳಿ ವ್ಯಾಕ್ಯೂಮ್ ಕ್ಲೀನರ್ ನಿರ್ಮಿಸಿದ್ದಾರೆ. ಒಂದು ದೊಡ್ಡ ವಾಯು ಶುದ್ಧೀಕರಣ ವ್ಯವಸ್ಥೆ ಇದಾಗಿದ್ದು ವಾತಾವರಣದಲ್ಲಿರುವ ರಾಸಾಯನಿಕ ಕಣಗಳನ್ನು ವಾತಾವರಣದಿಂದ ಶೋಧಿಸಿ ಶುದ್ಧ ಗಾಳಿ ದೊರೆಯಂತೆ ಈ ಯಂತ್ರ ನೋಡಿಕೊಳ್ಳುತ್ತದೆ.

image


ಈ ಗಾಳಿ ಶುದ್ಧೀಕರಣ ಯಂತ್ರಕ್ಕೆ "ಟವರ್ ಆಫ್​ ಹೋಪ್" ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಈ ವ್ಯವಸ್ಥೆಯು ತನ್ನ 300 ಮೀಟರ್ ವಲಯದಲ್ಲಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಅಂದರೆ ಸುಮಾರು ಏಳು ಕಿಲೋಮೀಟರ್​ ವಲಯದಲ್ಲಿ ವಾತಾವರಣ ಶುದ್ಧವಾಗಿರುತ್ತದೆ. ಈ ವ್ಯವಸ್ಥೆ 8 ಲಕ್ಷ ಕ್ಯುಬಿಕ್ ಮೀಟರ್ ಗಾಳಿಯನ್ನು ಒಂದು ಗಂಟೆಯೊಳಗೆ ಶುದ್ಧೀಕರಿಸಲಿದೆ. ಶೇಕಡಾ 100ರಷ್ಟು ಸೂಕ್ಷ್ಮಾಣುಗಳು ಮತ್ತು ಶೇಕಡಾ 95ರಷ್ಟು ಅತಿ ಸೂಕ್ಷ್ಮ ಕಣಗಳನ್ನು ಇದು ಶುದ್ಧೀಕರಿಸುತ್ತದೆ ಎಂದು ಸಂಸ್ಥೆ ಹೇಳಿದೆ. ನೆದರ್​ಲೆಂಡ್​ನ ಎನರ್ಜಿ ರೀಸರ್ಚ್ ಸೆಂಟರ್ ಈ ಬಗ್ಗೆ ಪರೀಕ್ಷಿಸಿ ಅಂಗೀಕಾರ ನೀಡಿದೆ. ಈಗಾಗಲೇ ಹಲವು ಕಡೆ ಈ ಯಂತ್ರವನ್ನು ಆಳವಡಿಸಿ ಪರೀಕ್ಷಿಸಲಾಗಿದೆ.

image


ಪೇಟೆಂಟ್ ಪಡೆದ ಓಜೋನ್ ಫ್ರೀ ಅಯಾನ್ ತಂತ್ರಜ್ಞಾನವನ್ನು ಬಳಸಿ ಹೊಗೆರಹಿತ ಟವರ್ ತನ್ನ ವಲಯದಲ್ಲಿ ಹಾದು ಹೋಗುವ 30,000 ಕ್ಯುಬಿಕ್ ಮೀಟರ್​ಗಳಷ್ಟು ಗಾಳಿಯನ್ನು ಗಂಟೆಯೊಳಗೆ ಶುದ್ಧೀಕರಿಸಬಲ್ಲದು. ಅಶುದ್ಧ ಗಾಳಿಯಿಂದ ಅದು ಶೇಕಡಾ 75ರಷ್ಟು ವಿನಾಶಕಾರಿ ಕಣಗಳನ್ನು ನಿವಾರಿಸುತ್ತದೆ.

ಇದನ್ನು ಓದಿ: ಸಕಲ ಕಲಾ ವಲ್ಲಭನಿಗಿಲ್ಲ ಸಾಟಿ- ಸೂಪರ್​ ಆರ್ಟಿಸ್ಟ್​, ಖಡಕ್​ ವಿಲನ್​..!

ಡಚ್ ಇಂಜಿನಿಯರ್​ಗಳು ನಿರ್ಮಿಸಿದ ಈ ವಿಶ್ವದ ಅತೀ ದೊಡ್ಡ ಗಾಳಿ ಶುದ್ಧೀಕರಣ ಯಂತ್ರವನ್ನು ಚೀನಾ ಸಾರ್ವಜನಿಕ ಉದ್ಯಾನವನದಲ್ಲಿ ಇಡಲಿದೆ. ಬೀಜಿಂಗ್​ನಲ್ಲಿ ಕಳೆದ ವರ್ಷ ಅತೀ ದಪ್ಪವಾದ ಹೊಗೆ ನಗರವನ್ನು ಆವರಿಸಿ ಜನರನ್ನು ಮನೆ ಒಳಗೇ ಕೂರುವಂತೆ ಮಾಡಿತ್ತು. ಆ ಅವಧಿ ಈಗ ಮರುಕಳಿಸಿರುವ ಹಿನ್ನೆಲೆಯಲ್ಲಿ ಈ ಯಂತ್ರ ಅಳವಡಿಸಲಾಗುತ್ತಿದೆ. ಡಚ್ ವಿನ್ಯಾಸಕಾರ ಡಾನ್ ರೂಸ್​ಗರೇಡ್ ಇದನ್ನು ನಿರ್ಮಿಸಿದ್ದಾರೆ. ಬೀಜಿಂಗ್​ನ 751 ಪಾರ್ಕ್, ಕಲಾ ಪ್ರದೇಶದಲ್ಲಿ ಇದರ ಅಂತಿಮ ಪರೀಕ್ಷೆಗಳು ಈಗ ನಡೆಯುತ್ತಿದೆ.

image


ಟವರ್ ಸುಮಾರು ಶೇಕಡಾ 75ರಷ್ಟು ಸೂಕ್ಷ್ಮ ಕಣಗಳನ್ನು ತಡೆಯಬಲ್ಲದು. ನಂತರ ಶುದ್ಧೀಕರಿಸಿದ ಗಾಳಿಯ ಗುಳ್ಳೆಗಳನ್ನು ಅದು ಬಿಡುತ್ತದೆ. ದಿಲ್ಲಿ ಮತ್ತು ಎನ್​ಸಿಆರ್ ಪ್ರಾಂತ್ಯ ದಿಪಾವಳಿ ಆರಂಭವಾಗುತ್ತಲೇ ಹೊಗೆಯಿಂದ ತುಂಬಿಕೊಂಡಿತ್ತು. ಕೇಂದ್ರದ ವಾಯು ಗುಣಮಟ್ಟ ಮತ್ತು ವಾತಾವರಣ ಸೂಚಕ ಸಂಸ್ಥೆ "ಸಫರ್" ಜನರಿಗೆ ಹೊರಗಿನ ಚಟುವಟಿಕೆ ಕಡಿಮೆ ಮಾಡಲು ಹೇಳಿದೆ. ಶ್ವಾಸಕೋಶ ಸಮಸ್ಯೆ ಇದ್ದವರು, ಹಿರಿಯರು ಮತ್ತು ಮಕ್ಕಳು ಮನೆಯೊಳಗೇ ಕಾಲ ಕಳೆಯುವಂತೆ ಗಂಭೀರ ವಾಯು ಮಾಲಿನ್ಯದ ಎಚ್ಚರಿಕೆ ನೀಡಿದೆ.

image


20 ಮಿಲಿಯ ಜನಸಂಖ್ಯೆ ಇರುವ ದಿಲ್ಲಿ ಅತೀ ವಾಯುಮಾಲಿನ್ಯವಾಗಿರುವ ವಿಶ್ವದ ಟಾಪ್ ನಗರಗಳಲ್ಲಿ ಒಂದು. ಇಲ್ಲಿನ ಗಾಳಿ ಸ್ವಚ್ಛ ಮಾಡಲು ಪರದಾಡಲಾಗುತ್ತಿದೆ. ದಿಲ್ಲಿ ಸರಕಾರವು ಐದು ಗಾಳಿ ಶುದ್ಧೀಕರಣ ವ್ಯವಸ್ಥೆಯನ್ನು ಪ್ರಮುಖ ಸಾರಿಗೆ ಸ್ಥಳಗಳಲ್ಲಿ ಇಟ್ಟು ವಾಯುಗುಣಮಟ್ಟವನ್ನು ತಿಳಿಗೊಳಿಸುವ ಬಗ್ಗೆ ಯೋಚಿಸುತ್ತಿದೆ. ಸರಕಾರದ ಪ್ರಕಾರ ಗಾಳಿ ಶುದ್ಧೀಕರಣ ವ್ಯವಸ್ಥೆಗಳಲ್ಲಿ ಕಾರ್ಬನ್ ಮೊನಾಕ್ಸೈಡ್ ಕಡಿಮೆ ಮಾಡುವ ಶಕ್ತಿಯಿದೆ. ಆದರೆ ಈ ವ್ಯವಸ್ಥೆಗಳು ಕೇವಲ 25 ಮೀಟರ್ ವಲಯದಲ್ಲಿ ಮಾತ್ರ ಗಾಳಿಯನ್ನು ಶುದ್ಧೀಕರಿಸಲಿದೆ. ಒಟ್ಟಿನಲ್ಲಿ ವಾಯುಮಾಲಿನ್ಯದಿಂದ ಬಳಲುತ್ತಿರುವ ದಿಲ್ಲಿ ಜನತೆಗೆ "ಟವರ್ ಆಫ್ ಹೋಪ್" ಹೊಸ ಆಶಾಕಿರಣವಾಗಿದೆ.

ಇದನ್ನು ಓದಿ:

1. ಬಣ್ಣಗಳ ಅರಿವಿಲ್ಲದಿದ್ದರೂ ಪೈಂಟಿಂಗ್​ ಮಾಡ್ತಾರೆ- ದೃಷ್ಟಿ ವಿಕಲ ಚೇತನರಾಗಿದ್ರೂ ಬದುಕಿನ ಆಸೆ ಬಿಟ್ಟಿಲ್ಲ..!

2. ಕನ್ನಡಿಗರನ್ನು ಬಡಿದೆಚ್ಚರಿಸಿದ ಕನ್ನಡ ಡಿಂಡಿಮ ವೀಡಿಯೋ

3. ಕೊನೆಗೂ ಹಸನಾಯ್ತು ಗೋಲ್ಗಪ್ಪಾ ಮಾರುತ್ತಿದ್ದ ಒಲಿಂಪಿಯನ್ ಬದುಕು..!


Add to
Shares
10
Comments
Share This
Add to
Shares
10
Comments
Share
Report an issue
Authors

Related Tags